Horoscope: ಮಿತ್ರರಿಂದ ಆರ್ಥಿಕ ಹೊರೆಯಾಗಬಹುದು,ಗೊಂದಲಕ್ಕೊಳಗಾಗುವಿರಿ

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಡಿಸೆಂಬರ್​ 15: ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಇರುವ ಸಂಪತ್ತನ್ನು ಗ್ರಹಿಸಿಕೊಂಡು ಯೋಜನೆಯನ್ನು ರೂಪಿಸಿ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಮಾತನಾಡದೇ ಸುಮ್ಮನಿರುವುದ ಲೇಸು ಎಂದೆನಿಸಬಹುದು. ಹಾಗಾದರೆ ಡಿಸೆಂಬರ್​ 15ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಮಿತ್ರರಿಂದ ಆರ್ಥಿಕ ಹೊರೆಯಾಗಬಹುದು,ಗೊಂದಲಕ್ಕೊಳಗಾಗುವಿರಿ
ಮಿತ್ರರಿಂದ ಆರ್ಥಿಕ ಹೊರೆಯಾಗಬಹುದು,ಗೊಂದಲಕ್ಕೊಳಗಾಗುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2024 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶುಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಸಂಜೆ 04:41 ರಿಂದ 08:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:28 ರಿಂದ 01:52 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:17 ರಿಂದ 04:41 ರವರೆಗೆ.

ತುಲಾ ರಾಶಿ: ನೀವು ಹೆಚ್ಚು ಚಲಾವಣೆಯಲ್ಲಿ ಇರಲು ಬಯಸುವಿರಿ. ಮನೆಯ ಖರೀದಿ ವ್ಯವಹಾರದಲ್ಲಿ ಗೊಂದಲವಾಗುವುದು.‌ ಹತ್ತಿರದವರನ್ನು ನೀವು ಕಳೆದುಕೊಳ್ಳಬೇಕಾದೀತು. ನಿಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲವನ್ನೂ ಹೇಳುವಿರಿ. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಕಪಟವನ್ನು ನೀವು ಪರೋಕ್ಷವಾಗಿ ನಿಮ್ಮವರ ಮೇಲೇ ಮಾಡುವಿರಿ. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಇಂದು ಹೆಚ್ಚಿನ ಜನರ ಜೊತೆ ಒಡನಾಟ ಮಾಡುವಿರಿ. ಆಸ್ತಿಯ ಕಲಹವನ್ನು ಸರಿ ಮಾಡಿಕೊಳ್ಳಲು ಹಣವನ್ನು ಖರ್ಚು ಮಾಡುವುದು ಅನಿವಾರ್ಯವಾಗಬಹುದು. ನಿಮ್ಮ ಮಾತನ್ನು ಯಾರೂ ಕಿವಿಗೆ ಹಾಕಿಕೊಳ್ಳದೇ ಇರುವುದು ನಿಮಗೆ ಸಿಟ್ಟನ್ನು ತರಿಸುವುದು. ಅಸೂಯಯಿಂದ ನಿಮ್ಮ ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ. ಇಂದು ನಿಮಗೆ ಇಷ್ಟವಿಲ್ಲದವರ ಜೊತೆ ಇಡನಾಡುವಿರಿ. ನಿಮಗೆ ಜವಾಬ್ದಾರಿಗಳು ಸಾಕೆನಿಸುವುದು.

ವೃಶ್ಚಿಕ ರಾಶಿ: ಶ್ರಮದ‌ ಕತ್ತಿಯನ್ನು ಎಲ್ಲರ ಮೇಲೆ ಪ್ರಹಾರ ಮಾಡುವಿರಿ. ನಿಮ್ಮ ವಿವಾಹಕ್ಕೆ‌ ಮನೆಯವರಿಂದ ಒತ್ತಡ ಹೆಚ್ಚಾಗುವುದು. ಮಕ್ಕಳ ವಿಚಾರದಲ್ಲಿ ನೀವು ಅನಾದರ ತೋರುವುದು ಸರಿಯಲ್ಲ. ಇಂದು ಸಹೋದರರ ನಡುವೆ ವಾಗ್ವಾದವು ಅಗಲಿದ್ದು ಹಿರಿಯ ಮಧ್ಯಸ್ತಿಕೆಯಿಂದ ಶಾಂತವಾಗುವುದು. ‌ಶಿಸ್ತಿನಿಂದ‌ ಇಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅನಾದರ ತೋರುವುದು ಬೇಡ. ನಿಮ್ಮ ಬಗ್ಗೆ ನಿಮಗೇ ಪೂರ್ಣ ಪ್ರಮಾಣದ ನಂಬಿಕೆ ಸಾಲದು. ನೌಕರರಿಂದ ಕೆಟ್ಟ ಹೆಸರು ಬರಬಹುದು. ನೇರ ಮಾತು ಎಲ್ಲ ಸಂದರ್ಭಗಳಲ್ಲಿಯೂ ಪ್ರಯೋಜನಕ್ಕೆ ಬಾರದು. ಪ್ರೀತಿಯಿಂದ ಹೇಳಿ ಕೆಲಸವನ್ನು ಮಾಡಿಸಿಕೊಳ್ಳಿ. ಕೈ ತುಂಬ ಕೆಲಸಗಳಿದ್ದರೂ ಯಾವುದನ್ನೂ ಮಾಡುವ ಮನಸ್ಸು ಇರದು. ನೀವು ಇಂದು ಸಣ್ಣ ಅಪಮಾನವನ್ನು ಸಲಿಸಲಾರಿರಿ. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳುವಿರಿ.

ಧನು ರಾಶಿ: ಯಾವುದೇ ಮುಜುಗರವಿಲ್ಲದೇ ನಿಮ್ಮನ್ನು ತಡರೆದಿಡುವಿರಿ. ಆಳ ನೋಡಲು ಯಾರಾದರೂ ನಿಮ್ಮನ್ನೇ ಬಿಡಬಹುದು. ಬಂಧುಗಳ ಒರಟುತನ ನಿಮಗೆ ಇಷ್ಟವಾಗದು. ಉನ್ನತವಾದ ವಿದ್ಯಾಭ್ಯಾಸದ ಕನಸನ್ನು ನೀವು ನನಸು ಮಾಡಿಕೊಳ್ಳುವಿರಿ. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ.‌ ಬಂಧುಗಳಿಂದ ಮನೆಯು ತುಂಬಿರುವುದು. ಸಾಮಾಜಿಕ ಗೌರವವನ್ನು ಪಡೆಯುವ ನಿರೀಕ್ಷೆಯು ಹುಸಿಯಾಗುವುದು. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಕಾಣಿಸುವುದು. ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿಕೊಳ್ಳಿ. ನಿಮಗೆ ಬೇಕಾದ ಹಣವು ಸರಿಯಾದ ಸಮಯಕ್ಕೆ ಸಿಗದೆ ಆಂತಕವಾಗುವುದು. ಸಂಗಾತಿಯನ್ನು ಸಂತೋಷವಾಗಿ ಇಡಲು ಏನಾದರೂ ಉಡುಗೊರೆಯನ್ನು ನೀಡುವಿರಿ. ವ್ಯಾಪಾರದಲ್ಲಿ ನಿಮ್ಮ ಆಲೋಚನೆಯು ತಲೆಕೆಳಗಾಗುವುದು. ಯಾವುದನ್ನೂ ಪ್ರತ್ಯಕ್ಷವಾಗಿ ಕಾಣದೇ ವ್ಯವಹಾರ ಮಾಡುವುದು ಬೇಡ.

ಮಕರ ರಾಶಿ: ಇಂದು ನಿಮ್ಮ ಸನ್ನಿವೇಶಗಳು ಹೊಸ ಆಯಾಮವನ್ನು ಸೃಷ್ಟಿಸಬಹುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಉತ್ಸಾಹವನ್ನು ಪಡೆಯುವಿರಿ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಕಷ್ಟವಾಗುವುದು. ಸಾಲವನ್ನು ಹಿಂದಿರುಗಿಸಲು ನಿಮ್ಮ ಹೂಡಿಕೆಯನ್ನು ತೆಗೆಯಬೇಕಾಗುವುದು. ಕೆಲವು ವ್ಯವಹಾರದಲ್ಲಿ ನೀವು ಹಿಂದುಳಿದಂತೆ ನಿಮಗೆ ಅರಿವಾಗುವುದು. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಒಂದೇರೀತಿಯ ಕೆಲಸವು ನಿಮಗೆ ಬೇಸರ ತರಿಸಬಹುದು. ಪ್ರೀತಿಯು ಸಪ್ಪೆಯಂತೆ ನಿಮಗೆ ಕಾಣಿಸುವುದು. ಹೊಸ ವಸ್ತುಗಳನ್ನು ಖರೀದಿಸುವಿರಿ. ಧಾರ್ಮಿಕ ಶ್ರದ್ಧೆಯಿಂದ ಉತ್ತಮವಾದುದನ್ನು ಸಾಧಿಸುವಿರಿ. ಪ್ರೀತಿಯಿಂದ ಹೇಳಿದರೂ ಯಾರೂ ಮಾತು ಕೇಳುವರು. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ. ಕೃಷಿಯಲ್ಲಿ ನಿಮ್ಮ ಪ್ರಯೋಗ ಯಶಸ್ವಿಯಾಗುವುದು.

ಕುಂಭ ರಾಶಿ: ಮಾರ್ಗ ದೊಂಕಾಗಿದ್ದರೂ ನಡೆಯಲ್ಲಿ ವ್ಯತ್ಯಾಸಬಾರದಂತೆ ನೋಡಿಕೊಳ್ಳಬೇಕು. ಶಸ್ತ್ರಗಳಿಂದ ದೇಹಕ್ಕೆ ಘಾಸಿಯಾಗಬಹುದು. ಒಳ್ಳೆಯದನ್ನು ಬಿಟ್ಟು ಇರುವುದು ನಿಮಗೆ ಸರಿ ಕಾಣಿಸದು. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ.‌ ಯಾರ ಮೇಲೂ ಹಗುರಾದ ಮನೋಭಾವ ಬೇಡ. ಕೆಟ್ಟ ಸನ್ನಿವೇಶವನ್ನು ನೀವು ಅನಿವಾರ್ಯವಾಗಿ ಎದುರಿಸಬೇಕಾಗಬಹುದು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಹೂಡಿಕೆಯ ಬಗ್ಗೆ ನಿಮ್ಮ ಗಮನವು ಹೆಚ್ಚಾಗಿರಲಿದೆ. ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡುವುದು ಕಷ್ಟ. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು. ಯಾರದೋ ಮಾತು ನಿಮಗೆ ಮನಸ್ಸನ್ನು ಮುಟ್ಟಿ ಪರಿವರ್ತನೆ ಆಗಬಹುದು. ಸಹೋದರರು ನಿಮ್ಮ ಕಾರಣಕ್ಕೆ ಪಶ್ಚಾತ್ತಾಪ ಪಡುವರು. ಆರೋಗ್ಯದ ಸ್ಥಿತಿಯು ದೃಢವಾಗಿರಲು ಬೇಕಾದ ಕ್ರಮವನ್ನು ಮಾಡುವಿರಿ. ಪ್ರಾಣಿಗಳ ಜೊತೆ ಸಖ್ಯಮಾಡುವುದು ಇಷ್ಟವಾದೀತು.

ಮೀನ ರಾಶಿ: ಮಕ್ಕಳ ಸ್ವಾತಂತ್ರ್ಯಕ್ಕೆ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ನಿಮಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬಂದಿರುವುದು ಕುಟುಂಬದಲ್ಲಿ ಅಚ್ಚರಿ ತರಿಸುವುದು. ಇಂದು ನಿಮಗೆ ಭೂಮಿಯ ಉತ್ಪನ್ನದಿಂದ ಆದಾಯ ಕಡಿಮೆ ಆಗುವುದು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಇರುವ ಸಂಪತ್ತನ್ನು ಗ್ರಹಿಸಿಕೊಂಡು ಯೋಜನೆಯನ್ನು ರೂಪಿಸಿ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಮಾತನಾಡದೇ ಸುಮ್ಮನಿರುವುದ ಲೇಸು ಎಂದೆನಿಸಬಹುದು. ನಿಮ್ಮ ಬಂಧುಗಳು ಭೇಟಿ ಮಾಡಿ ಸಮಯವನ್ನು ಹಾಳುಮಾಡುವರು. ಹಿರಿಯರ ಮೇಲಿದ್ದ ನಿಮ್ಮ ಪೂರ್ವಾಗ್ರಹ ಬೇಡ. ಮನಸ್ಸು ಬಹಳ ಗೊಂದಲದಲ್ಲಿ ಸಿಕ್ಕಿಕೊಳ್ಳಲಿದೆ. ಮನಸ್ಸನ್ನು ಸ್ವಲ್ಪ ಕಾಲ ಬೇರೆ ಕಾರ್ಯಕ್ಕೆ ಜೋಡಿಸಬೇಕಾಗುವುದು. ಮಿತ್ರರಿಂದ ಆರ್ಥಿಕ ಹೊರೆಯಾಗಬಹುದು.

45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್
45 ವರ್ಷಗಳ ನಂತರ ತೆರೆದ ಸಂಭಾಲ್‌ನ ದೇವಾಲಯ; ವಿಡಿಯೋ ವೈರಲ್
ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್