Satyanarayana Vrata: ಸತ್ಯನಾರಾಯಣ ವ್ರತವನ್ನು ಅಮಾವಾಸ್ಯೆಯಂದು ಮಾಡಬಹುದೇ? ಮಾಡಿದರೆ ವಿಶೇಷ ಫಲವಿದೆಯೇ?

ಮನುಷ್ಯನು ಜೀವನದಲ್ಲಿ ತನ್ನ ಧರ್ಮಕ್ಕನುಸಾರ ಸತ್ಕಾರ್ಯಗಳನ್ನು ಮಾಡುವುದು ರೂಢಿ. ಸನಾತನ ಹಿಂದೂ ಧರ್ಮದ ಪ್ರಕಾರ ವ್ರತ ಅರ್ಚನೆ ಆರಾಧನೆ ಹೋಮ ಯಾಗ ದಾನ ಇತ್ಯಾದಿಗಳನ್ನು ಆಸ್ತಿಕನು ತನ್ನ ಶಕ್ತಿಗೆ ಅನುಗುಣವಾಗಿ ಮಾಡುತ್ತಿರುತ್ತಾನೆ.

Satyanarayana Vrata: ಸತ್ಯನಾರಾಯಣ ವ್ರತವನ್ನು ಅಮಾವಾಸ್ಯೆಯಂದು ಮಾಡಬಹುದೇ? ಮಾಡಿದರೆ ವಿಶೇಷ ಫಲವಿದೆಯೇ?
ಸಾಂದರ್ಭಿಕ ಚಿತ್ರ
Follow us
ಡಾ. ಗೌರಿ ಕೇಶವಕಿರಣ
| Updated By: Digi Tech Desk

Updated on:Jun 06, 2023 | 2:03 PM

ಮನುಷ್ಯನು ಜೀವನದಲ್ಲಿ ತನ್ನ ಧರ್ಮಕ್ಕನುಸಾರ ಸತ್ಕಾರ್ಯಗಳನ್ನು ಮಾಡುವುದು ರೂಢಿ. ಸನಾತನ ಹಿಂದೂ ಧರ್ಮದ ಪ್ರಕಾರ ವ್ರತ ಅರ್ಚನೆ ಆರಾಧನೆ ಹೋಮ ಯಾಗ ದಾನ ಇತ್ಯಾದಿಗಳನ್ನು ಆಸ್ತಿಕನು ತನ್ನ ಶಕ್ತಿಗೆ ಅನುಗುಣವಾಗಿ ಮಾಡುತ್ತಿರುತ್ತಾನೆ. ಕೆಲವು ಸಲ ಗ್ರಹಸ್ಥಿತಿಯ ದೋಷಪರಿಹಾರಕ್ಕಾಗಿ ಶಾಂತಿಗಳನ್ನು ಶಕ್ತಿಮೀರಿ ಮಾಡುವುದೂ ಇದೆ. ಇದರಿಂದ ಆ ವ್ಯಕ್ತಿಗೆ ಆಂತರಂಗಿಕ ನೆಮ್ಮದಿ ಮತ್ತು ಮನಸ್ಸಿಗೆ ಧೈರ್ಯ ಬರುತ್ತದೆ ಮತ್ತು ಕಷ್ಟ ಪರಿಹಾರವಾಗುತ್ತದೆ ಎಂಬ ಶ್ರದ್ಧಾ ಪೂರ್ವಕವಾದ ವಿಶ್ವಾಸ. ಅಂತಹ ವಿಶ್ವಾಸ ಫಲವನ್ನೂ ನೀಡುತ್ತದೆ. ವಿಶ್ವಾಸೋ ಫಲದಾಯಕಃ ಎಂಬಂತೆ. ಸಾಮಾನ್ಯವಾಗಿ ವ್ರತಗಳನ್ನು ಏನಾದರು ವಿಶೇಷ ಸಂದರ್ಭಗಳಲ್ಲಿ ಮಾಡುವುದು ಪದ್ಧತಿ. ಅಂತಹ ವ್ರತಗಳಲ್ಲಿ ಒಂದಾದ ಸತ್ಯನಾರಾಯಣ ವ್ರತವನ್ನು ಹೆಚ್ಚಾಗಿ ಆಸ್ತಿಕರು ತಮ್ಮ ಮನೆಗಳಲ್ಲಿ ಮಾಡುತ್ತಿರುತ್ತಾರೆ. ಅದರಲ್ಲೂ ವಿವಾಹದ ನಂತರ ನವದಂಪಗಳನ್ನು ಕೂರಿಸಿ ಹಾಗೆಯೇ ಮನೆಯ ಪ್ರವೇಶದ ಸಂದರ್ಭದಲ್ಲಿ ಪರ್ವಕಾಲಗಳಲ್ಲಿ ಮಕ್ಕಳ ಜನ್ಮದಿನದಂದು ಅಥವಾ ವಾರ್ಷಿಕವಾಗಿ ಒಂದು ದಿನ ಈ ರೀತಿಯಾಗಿ ಅಲ್ಲದೇ ದೇವಾಲಯಗಳಲ್ಲಿ ಹುಣ್ಣಿಮೆಯಂದು ಈ ವ್ರತವನ್ನು ಆಚರಿಸುತ್ತಿರುವುದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ ಅಲ್ಲವೇ.

ಆದರೆ ಈ ವ್ರತವನ್ನು ಅಮಾವಾಸ್ಯೆಯಂದು ಆಚರಿಸುವ ಕ್ರಮವಿದೆಯೇ? ಈ ಕುರಿತಾಗಿ ಶಾಸ್ತ್ರ ಅಥವಾ ಪುರಾಣಗಳು ಏನು ಹೇಳುತ್ತವೆ ಎಮ್ದು ನೋಡೋಣ. ಸ್ವಾಭಾವಿಕವಾಗಿ ಅಮಾವಾಸ್ಯೆ ಎಂದಾಕ್ಷಣ ಧರ್ಮಶ್ರದ್ಧೆಯುಳ್ಳವರಿಗೆ ಏನೋ ಭಯ ಮನದಲ್ಲಿ ಮೂಡುತ್ತದೆ. ಏಕೆಂದರೆ ಈ ದಿನದಲ್ಲಿ ಪಿತೃಕಾರ್ಯವನ್ನು ಮಾಡುತ್ತಾರೆ ಮತ್ತು ದುಷ್ಟ ಶಕ್ತಿಗಳ ಪ್ರಕ್ರಿಯೆ ಈ ದಿನದಲ್ಲಿ ಹೆಚ್ಚು ಎಂಬ ಕಲ್ಪನೆ ನಮ್ಮಲ್ಲಿದೆ ಅದಕ್ಕೆ. ಈ ವಿಚಾರಗಳು ಸುಳ್ಳಲ್ಲ. ಈ ಅಮಾವಾಸ್ಯೆಯಂದು ತಾರಾನುಕೂಲ ಇರುವುದಿಲ್ಲ. ನಾವು ಮಾಡುವ ಕಾರ್ಯಕ್ಕೆ ಚಂದ್ರಾನುಕೂಲ ಬೇಕೇಬೇಕು ಅಂತಹ ಅನುಕೂಲ ನೋಡುವ ವ್ಯವಸ್ಥೆಗೆ ತಾರಾನುಕೂಲ ನೋಡುವುದು ಎನ್ನುವರು. ಅಮಾವಾಸ್ಯೆಯಂದು ಚಂದ್ರೋದಯ ಮತ್ತು ಸೂರ್ಯೋದಯ ಒಂದೇ ಸಮಯಕ್ಕೆ ಆಗುವುದರಿಂದ ಆ ದಿನ ಚಂದ್ರಾನುಕೂಲ ಅಥವಾ ತಾರಾನುಕೂಲ ಇರುವುದಿಲ್ಲ ಆದ್ದರಿಂದ ಈ ದಿನ ಶುಭಕರ್ಮಗಳನ್ನು ಮಾಡುವುದಿಲ್ಲ ಮತ್ತು ಆರಂಭಿಸುವುದಿಲ್ಲ.

ಆದರೆ ಸತ್ಯನಾರಾಯಣ ವ್ರತವೇನಿದೆ ಇದನ್ನು ಅಮಾವಾಸ್ಯೆಯಂದು ಆಚರಿಸಬಹುದು. ಮತ್ತು ಇದಕ್ಕೆ ವಿಶೇಷವಾದ ಫಲವೂ ಇದೆ ಈ ದಿನ ಆಚರಿಸುವುದರಿಂದ. ಹೌದಾ ಎಂದು ನೀವು ಕೇಳಬಹುದು ಅದಕ್ಕುತ್ತರ ಹೌದು ಎಂಬುದಾಗಿಯೇ ಇದೆ. ಸತ್ಯನಾರಾಯಣ ವ್ರತವನ್ನುಯಾವಾಗ ಆಚರಿಸಬೇಕು ಎಂಬುದಕ್ಕೆ ವ್ರತದ ಕಥೆಯಲ್ಲಿ ಹೀಗೆ ಹೇಳಲ್ಪಟ್ಟಿದೆ.

ಇದನ್ನೂ ಓದಿ: Spiritual: ಗ್ರಹಣದಿಂದ ಈ ರಾಶಿಯವರಿಗೆ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು? ಇಲ್ಲಿದೆ ಮಾಹಿತಿ

ಯಸ್ಮಿನ್ ಕಸ್ಮಿನ್ ದಿನೇ ಮರ್ತ್ಯೋ ಭಕ್ತಿ ಶ್ರದ್ಧಾ ಸಮನ್ವಿತ: ಎಂಬುದಾಗಿ. ಭಕ್ತಿ ಶ್ರದ್ಧಾ ಪೂರ್ವಕವಾಗಿ ಯಾವ ದಿನ ಬೇಕಾದರೂ ಈ ವ್ರತವನ್ನು ಮಾಡಬಹುದು. ಅದರಲ್ಲೂ ಪರ್ವಕಾಲಗಳಲ್ಲಿ ಆಚರಿಸಿದರೆ ವಿಶೇಷ ಫಲವಿದೆ. ಅಮಾವಾಸ್ಯೆಯಂದು ಈ ವ್ರತವನ್ನು ಆಚರಿಸುವುದರಿಂದ ಅಸಾಧ್ಯವಾದ ಕಾರ್ಯಗಳು ಕೈಗೂಡುವ ಸಂಭವ ಹೆಚ್ಚಿದೆ ಮತ್ತು ನಮ್ಮ ಇಚ್ಛೆ ಉತ್ತಮವಾಗಿದ್ದಲ್ಲಿ ಫಲವೂ ಉತ್ತಮವಾಗಿಯೇ ಲಭಿಸುವುದು. ನಮ್ಮಿಂದ ತಿಳಿಯದೇ ಆದ ಅಪರಾಧಗಳಿಗೆ ಪ್ರಾಯಶ್ಚಿತ್ತ ಪೂರ್ವಕವಾಗಿ ಈದಿನ ವ್ರತಕಥೆಯನ್ನು ಮಾಡಿಕೊಳ್ಳುವ ಪದ್ಧತಿ ಕೆಲವು ಕಡೆ ಇದೆ.

ಅಮಾವಾಸ್ಯೆಯೂ ಒಂದು ಪರ್ವಕಾಲವೇ ಆಗಿರುವುದರಿಂದ ಈ ದಿನ ಸತ್ಯನಾರಾಯಣ ವ್ರತಕ್ಕೆ ನಿಷೇಧವಿಲ್ಲ. ಹಾಗೆಯೇ ನಮ್ಮಿಂದ ಯಾವುದಾದರೂ ವಸ್ತು ಕಳೆದು ಹೋಗಿದ್ದಲ್ಲಿ ಈ ದಿನ ಹಗಲು ಉಪವಾಸವಿದ್ದು ರಾತ್ರೆ ಸತ್ಯನಾರಾಯಣ ವ್ರತ ಮಾಡಿ ಪ್ರಸಾದ ಸ್ವೀಕಾರ ಮಾಡಿಕೊಂಡರೆ ಕಳೆದು ಹೋದ ವಸ್ತು ಪ್ರಾಪ್ತವಾಗುತ್ತದೆ. ಎಲ್ಲದಕ್ಕೂ ಶುದ್ಧಾಂತಃಕರಣವೆನ್ನುವುದು ಅತೀಮುಖ್ಯ. ಶುದ್ಧಭಾವದಿಂದ ಮಾಡಿರಿ ಪರಿಪೂರ್ಣ ಫಲವನ್ನು ಹೊಂದಿರಿ.

ಡಾ.ಗೌರಿ ಕೇಶವಕಿರಣ.ಬಿ

ಧಾರ್ಮಿಕ ಚಿಂತಕರು

Published On - 7:07 am, Tue, 6 June 23

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ