Kannada News Spiritual Certain homas are meant for fullfill of your desires says astrology and hindu rituals know them in kannada
ಈ 16 ಮನೋಕಾಮನೆಗಳ ಈಡೇರಿಕೆಗಾಗಿ ಯಾವ ಹೋಮ ಮಾಡಿದರೆ ಒಳಿತು ಮತ್ತು ಹೆಚ್ಚು ಫಲದಾಯಕ? ಇಲ್ಲಿದೆ ಮಾಹಿತಿ
ಇಲ್ಲಿ ಸುಮಾರು 16 ಮನೋಕಾಮನೆಗಳ ಈಡೇರಿಕೆಗಾಗಿ ಹೋಮ (homa) ಮಾಡಿದರೆ ಒಳಿತು ಎಂದು ತಜ್ಞ ಜ್ಯೋತಿಷಿಗಳು ವಿಚಾರ ಮಾಡಿ ತಿಳಿಸಿದ್ದಾರೆ. ಈ 16 ಮನೋಕಾಮನೆಗಳ ಈಡೇರಿಕೆಗಾಗಿ ನಿರ್ದಿಷ್ಟ ಹೋಮಗಳನ್ನು ಮಾಡಿಸುವಾಗ ನಾವು ನಂಬಿದ, ನಾವು ತಿಳಿದ ಜ್ಯೋತಿಷಿಗಳಿಂದ ನಮ್ಮ ಜಾತಕವನ್ನು ಪರಿಶೀಲನೆ ಮಾಡಿಸಿ, ಯೋಗ್ಯ ಸಲಹೆ ಪಡೆದು ಅದನ್ನು ಆಚರಿಸಬೇಕು.
ಈ 16 ಮನೋಕಾಮನೆಗಳ ಈಡೇರಿಕೆಗಾಗಿ ಯಾವ ಹೋಮ ಮಾಡಿದರೆ ಒಳಿತು, ಹೆಚ್ಚು ಫಲಪ್ರದ? ಇಲ್ಲಿದೆ ಮಾಹಿತಿ
Follow us on
ಇಷ್ಟಾರ್ಥಗಳು ಸಿದ್ಧಿಸದಿದ್ದಾಗ ಮನುಜ ತೀವ್ರ ಚಿಂತನೆಗೆ ಬೀಳುವುದು ಸಹಜ. ಆದರೆ ಅದಕ್ಕೆ ಗ್ರಹಗತಿಗಳೂ ಕಾರಣವಾಗಬಲ್ಲದು. ಜೊತೆಗೆ ನಮ್ಮದೇ ವೈಯಕ್ತಿಕ ಕಾರಣಗಳೂ ಎಡತಾಕಬಲ್ಲದು. ಇಲ್ಲಿ ಸುಮಾರು 16 ಮನೋಕಾಮನೆಗಳ ಈಡೇರಿಕೆಗಾಗಿ ಹೋಮ (homa) ಮಾಡಿದರೆ ಒಳಿತು ಎಂದು ತಜ್ಞ ಜ್ಯೋತಿಷಿಗಳು ವಿಚಾರ ಮಾಡಿ ತಿಳಿಸಿದ್ದಾರೆ. ಈ 16 ಮನೋಕಾಮನೆಗಳ ಈಡೇರಿಕೆಗಾಗಿ ನಿರ್ದಿಷ್ಟ ಹೋಮಗಳನ್ನು ಮಾಡಿಸುವಾಗ (spiritual) ನಾವು ನಂಬಿದ, ನಾವು ತಿಳಿದ ಜ್ಯೋತಿಷಿಗಳಿಂದ ನಮ್ಮ ಜಾತಕವನ್ನು ಪರಿಶೀಲನೆ ಮಾಡಿಸಿ, ಯೋಗ್ಯ ಸಲಹೆ ಪಡೆದು ಅದನ್ನು ಆಚರಿಸಬೇಕು. ಅದರಿಂದ ಒಳಿತಾಗುತ್ತದೆ. ಉದಾಹರಣೆಗೆ ಮಕ್ಕಳು ಆಗದೆ ಇದ್ದಾಗ -ಸಂತಾನ ಗೋಪಾಲಕೃಷ್ಣ ಹೋಮ, ನಾಗರಾಜ ಮಂತ್ರ ಹೋಮ, ಪುರುಷ ಸೂಕ್ತ ಹೋಮ, ಶ್ರೀ ವಿದ್ಯಾ ಹೋಮ, ಶ್ರೀ ರುದ್ರ ಹೋಮ ಆಚರಿಸಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ (astrology).
ಹೀಗೆ ಇನ್ನೂ ಹಲವಾರು ಮನೋಕಾಮನೆಗಳ ಈಡೇರಿಕೆಗಾಗಿ ಯಾವ ಹೋಮ ಮಾಡಿದರೆ ಒಳಿತು ಎಂಬ ಮಾಹಿತಿ ಇಲ್ಲಿದೆ:
ಗಣಹೋಮ -ಎಲ್ಲಾ ಕಷ್ಟಗಳು ಮತ್ತು ಯಾವುದೇ ಕಾರ್ಯದಲ್ಲಿ ಬರುವ ವಿಘ್ನಗಳ ನಿವಾರಣೆಗೊಳಿಸಲು.
ವಲ್ಲಭ ಗಣಪತಿ ಹೋಮ -ಗಣಪತಿ ಅನುಗ್ರಹ ಪ್ರಾಪ್ತಿಗಾಗಿ.
ಶೀಘ್ರ ವಿವಾಹ ಪ್ರಾಪ್ತಿಗಾಗಿ -ಹರಿದ್ರಾ ಗಣಪತಿ ಹೋಮ, ಬಾಲ ಗಣಪತಿ ಹೋಮ, ತ್ರೈಲೋಕ್ಯ ಮೋಹನ ಗಣಪತಿ ಹೋಮ.
ಲಕ್ಷ್ಮೀಗಣಪತಿ ಹೋಮ -ಲಕ್ಷ್ಮಿ ಪ್ರಾಪ್ತಿಗಾಗಿ.
ಚಿಂತಾಮಣಿ ಗಣಪತಿ ಹೋಮ -ಮನಸ್ಸಿನ ಎಲ್ಲಾ ಕಾಮನೆಗಳನ್ನು ಪಡೆಯಲು.
ಮಹಾಲಕ್ಷ್ಮಿ ಅನುಗ್ರಹ ಪ್ರಾಪ್ತಿ ಮತ್ತು ಉದ್ಯೋಗ, ವ್ಯವಹಾರ ಜಯ ಪ್ರಾಪ್ತಿಗಾಗಿ -ಶ್ರೀಸೂಕ್ತ ಹೋಮ, ಲಕ್ಷ್ಮೀ ಹೋಮ (ಕಮಲದ ಹೂವಿನಿಂದ), ಲಕ್ಷ್ಮಿ ನೃಸಿಂಹ ಹೋಮ, ಲಕ್ಷ್ಮಿ ನಾರಾಯಣ ಹೃದಯ ಹೋಮ, ಕುಬೇರ ಲಕ್ಷ್ಮೀ ಹೋಮ, ಚಂಡಿಕಾ ಹೋಮ (ನವ, ಶತ, ಸಹಸ್ರ).
ರೋಗ ನಿವಾರಣೆಗಾಗಿ -ಧನ್ವಂತರಿ ಹೋಮ, ಅಪಸ್ಮಾರ ದಕ್ಷಿಣಾಮೂರ್ತಿ ಹೋಮ, ನವಗ್ರಹ ಹೋಮ (ಪ್ರತ್ಯೇಕ ಗ್ರಹ ಶಾಂತಿ), ಸುಬ್ರಹ್ಮಣ್ಯ ಹೋಮ, ಜಾತಕದಲ್ಲಿ ಸೂಚಿಸಿದಂತೆ ರೋಗಕ್ಕೆ ಅನುಸಾರವಾಗಿ.
ಸ್ತ್ರೀ ಮತ್ತು ಪುರುಷರ ವಿವಾಹಕ್ಕೆ ಬರುತ್ತಿರುವ ಅಡ್ಡಿ, ಆತಂಕಗಳ ನಿವಾರಣೆಯಾಗಿ ಶೀಘ್ರ ವಿವಾಹ ಪ್ರಾಪ್ತಿಯಾಗಲು -ಉಗ್ರ ನರಸಿಂಹ ಹೋಮ (25 ಸಾವಿರ ಜಪ ಮಾಡಬೇಕು), ಸ್ವಯಂವರ ಪಾರ್ವತಿ ಹೋಮ(10 ಸಾವಿರ ಜಪ ಮಾಡಬೇಕು), ಬಾಣೇಶಿ ಹೋಮ(10 ಸಾವಿರ ಜಪ ಮಾಡಬೇಕು), ಅಶ್ವಾರೂಢ ಪಾರ್ವತಿ ಹೋಮ (10 ಸಾವಿರ ಜಪ ಮತ್ತು ಹೋಮ).
ಜನ್ಮಾಂತರದಲ್ಲಿ ಮಾಡಿದ ಪಾಪಕರ್ಮದ ಫಲವಾಗಿ ಮಕ್ಕಳು ಆಗದೆ ಇದ್ದಾಗ -ಸಂತಾನ ಗೋಪಾಲಕೃಷ್ಣ ಹೋಮ, ನಾಗರಾಜ ಮಂತ್ರ ಹೋಮ, ಪುರುಷ ಸೂಕ್ತ ಹೋಮ, ಶ್ರೀ ವಿದ್ಯಾ ಹೋಮ, ಶ್ರೀ ರುದ್ರ ಹೋಮ (ಲಘು ರುದ್ರ, ಶತ ರುದ್ರ, ಮಹಾ ರುದ್ರ, ಅತಿ ರುದ್ರ).
ಕಳೆದು ಹೋದ ವಸ್ತು ಪ್ರಾಪ್ತಿಗಾಗಿ -ಕಾರ್ತವೀರ್ಯಾರ್ಜುನ ಜಪ ಹೋಮ.
ನಮ್ಮ ಕ್ಷೇತ್ರಗಳನ್ನು, ಬೆಳೆಗಳನ್ನು ರಕ್ಷಿಸಲು, ದುಷ್ಟ ಪ್ರಾಣಿಗಳು ಮತ್ತು ದುರ್ಜನರಿಂದ ರಕ್ಷಣೆ ಪಡೆಯಲು -ವನ ದುರ್ಗಾ ಹೋಮ, ಭೂ ವರಾಹ ಹೋಮ, ರಾಮತರಕ ಹೋಮ, ಹನುಮಾನ್ ಹೋಮ. (ವಾಟ್ಸಪ್ ಸಂದೇಶ)