Chanakya Niti: ಈ ವಿಷಯಗಳನ್ನು ಎಂದಿಗೂ ನಿಮ್ಮ ಹೆಂಡತಿಗೆ ಹೇಳಬೇಡಿ
ಗಂಡ ಹೆಂಡತಿಯ ಸಂಬಂಧವು ಕೊನೆವರೆಗೂ ಯಾವುದೇ ಬಿರುಕು ಬಿಡದೇ ಆರೋಗ್ಯವಾಗಿರಬೇಕಾದರೆ ಚಾಣಕ್ಯನ ಕೆಲವು ನೀತಿಯನ್ನು ಪಾಲಿಸಿ. ಅಂದರೆ ಸಂಬಂಧದಲ್ಲಿ ಬಿರುಕು ಉಂಟುಮಾಡುವ ಯಾವುದೇ ವಿಷಯವನ್ನು ಹಂಚಿಕೊಳ್ಳಬಾರದು ಎಂದರ್ಥ.
ಚಾಣಕ್ಯ ಜೀವನಕ್ಕೆ ಅಗತ್ಯವುಳ್ಳ ಸಾಕಷ್ಟು ಪಾಠಗಳನ್ನು ಕಲಿಸಿದ ಗುರು. ಹಿಂದಿನಿಂದಲೂ ಚಾಣಕ್ಯನಿಗೆ ವಿಶೇಷ ಗೌರವ ಮತ್ತು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಕಾಲ ಬದಲಾಗುತ್ತಾ ಹೋದ ಹಾಗೆ ವ್ಯಕ್ತಿ, ವ್ಯಕ್ತಿತ್ವಗಳು ಹೇಗೆ ಬದಲಾಗುತ್ತದೆ ಎಂಬುದನ್ನು ನೀವು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ. ನಿಮ್ಮಲ್ಲಿ ಕೆಲವರಿಗೆ ಜೀವನದಲ್ಲಿ ಯಾವುದೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಚಾಣಕ್ಯ ನೀತಿಯನ್ನು ಓದುವುದು ಅಭ್ಯಾಸವಿರುವುದಂತೂ ನಿಜ. ಗಂಡ ಹೆಂಡತಿಯ ಸಂಬಂಧವು ಕೊನೆವರೆಗೂ ಯಾವುದೇ ಬಿರುಕು ಬಿಡದೇ ಆರೋಗ್ಯವಾಗಿರಬೇಕಾದರೆ ಚಾಣಕ್ಯನ ಕೆಲವು ನೀತಿಯನ್ನು ಪಾಲಿಸಿ. ಅಂದರೆ ಸಂಬಂಧದಲ್ಲಿ ಬಿರುಕು ಉಂಟುಮಾಡುವ ಯಾವುದೇ ವಿಷಯವನ್ನು ಹಂಚಿಕೊಳ್ಳಬಾರದು ಎಂದರ್ಥ.
ನಿಮ್ಮ ಸಂಬಳವನ್ನು ಅತ್ಯಂತ ರಹಸ್ಯವಾಗಿ ಇಡಿ:
ಪ್ರತೀ ಬಾರಿ ನಿಮ್ಮ ಸಂಬಳದ ಬಗ್ಗೆ ಕೇಳಿದಾಗ ಇರುವ ಮೊತ್ತಕ್ಕಿಂತ ಕಡಿಮೆ ಹೇಳಿ. ನಿಮ್ಮ ಸಂಬಳ ಹೆಚ್ಚು ಹೇಳಿದಂತೆ ಅವರ ಖರೀದಿಯೂ ದುಬಾರಿಯಾಗುತ್ತಾ ಹೋಗುತ್ತದೆ. ನೀವು ಆರ್ಥಿಕವಾಗಿ ಸಮತೋಲನವನ್ನು ಸಾಧಿಸಲು ಈ ರೀತಿಯ ಸುಳ್ಳು ಹೇಳುವುದು ಯಾವುದೇ ಕೆಟ್ಟ ಕೆಲಸವಲ್ಲ.
ನಿಮ್ಮ ದಾನ ಕಾರ್ಯಗಳನ್ನು ಮುಚ್ಚಿಡಿ:
ನಿಮ್ಮ ಹೆಂಡತಿಯೊಂದಿಗೆ ನಿಮ್ಮ ದಾನ ಕಾರ್ಯಗಳ ಬಗ್ಗೆ ಚರ್ಚಿಸದಿರುವುದು ಮುಖ್ಯ. ನೀವು ಯಾವುದೇ ಒಳ್ಳೆಯ ಕಾರ್ಯಗಳಿಗೂ ಹಣ ಖರ್ಚು ಮಾಡಿದರೂ ಕೂಡ ಈ ಮಾಹಿತಿಯನ್ನು ಹೆಂಡತಿಯಿಂದ ದೂರವಿಡಿ.
ನಿಮ್ಮ ದೌರ್ಬಲ್ಯಗಳನ್ನು ಬಹಿರಂಗಪಡಿಸಬೇಡಿ:
ಪತಿ ತನ್ನ ದೌರ್ಬಲ್ಯಗಳನ್ನು ತನ್ನ ಹೆಂಡತಿಗೆ ಬಹಿರಂಗಪಡಿಸಬಾರದು. ಆಕೆ ನಿಮ್ಮ ರಹಸ್ಯವನ್ನು ತನ್ನ ತಾಯಿ, ಅವಳ ಸಹೋದರಿ ಅಥವಾ ಅವಳ ಆಪ್ತ ಸ್ನೇಹಿತರಿಗೆ ಹೇಳಿಕೊಳ್ಳಬಹುದು ಎಂದು ಚಾಣಕ್ಯನ ನೀತಿ ತಿಳಿಸುತ್ತದೆ.
ಇದನ್ನೂ ಓದಿ: ಕಠಿಣ ಪರಿಶ್ರಮದ ಹೊರತಾಗಿಯೂ ಸೋಲು ಅನುಭವಿಸುತ್ತಿದ್ದರೆ ಗುರಿ ಸಾಧನೆಗಾಗಿ ಈ ಅಂಶಗಳತ್ತ ಗಮನ ಹರಿಸಿ
ನಿಮ್ಮ ಸಮಸ್ಯೆಗಳನ್ನು ತಿಳಿಸಬೇಡಿ:
ನೀವು ಯಾವುದಾದರೊಂದು ಸಮಸ್ಯೆಯಲ್ಲಿ ಸಿಲುಕಿದ್ದರೆ, ಆ ಸಮಸ್ಯೆಯಿಂದ ಹೊರಬರಲು ನೀವಾಗಿಯೇ ಪ್ರಯತ್ನಿಸಿ. ನಿಮ್ಮ ಜೀವನದಲ್ಲಿ ನೀವು ಯಾವುದೇ ಗಂಭೀರ ಗೊಂದಲಕ್ಕೆ ಸಿಲುಕಿದ್ದರೆ, ಅದನ್ನು ನಿಮ್ಮ ಹೆಂಡತಿಗೆ ಬಹಿರಂಗಪಡಿಸಬಾರದು. ನಿಮ್ಮ ಅಸಮರ್ಥತೆ ನಿಮ್ಮ ಹೆಂಡತಿಯ ದೃಷ್ಟಿಯಲ್ಲಿ ಅಪಹಾಸ್ಯಕ್ಕೆ ಗುರಿಯಾಗಬಹುದು. ನೀವು ಯಾವುದೇ ರೀತಿಯ ತೊಂದರೆಯಲ್ಲಿದ್ದರೆ, ನಿಮ್ಮ ಹೆಂಡತಿಯೊಂದಿಗೆ ಪರಿಹಾರವನ್ನು ಹುಡುಕಬೇಡಿ. ಅದನ್ನು ನೀವೇ ಪರಿಹರಿಸಲು ಪ್ರಯತ್ನಿಸಿ ಅಥವಾ ಏನೂ ಆಗಿಲ್ಲ ಎಂಬಂತೆ ವರ್ತಿಸಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:05 pm, Fri, 10 March 23