AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಸಂತೋಷದ ಜೀವನಕ್ಕೆ ಚಾಣಕ್ಯ ನೀತಿಯ ಈ ಅಂಶಗಳನ್ನು ನೆನಪಿನಲ್ಲಿಡಿ

ಆಚಾರ್ಯ ಚಾಣಕ್ಯರ ಪ್ರಕಾರ ವ್ಯಕ್ತಿ ಕಷ್ಟದಲ್ಲಿದ್ದಾಗ ಆ ಬಿಕ್ಕಟ್ಟಿನಿಂದ ಹೊರಬರಲು ತಂತ್ರವನ್ನು ಮಾಡಬೇಕು. ಇದರಿಂದ ಹಂತ ಹಂತವಾಗಿ ಆತ ಪರಿಸ್ಥಿತಿಯ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯ ಎಂದು ಹೇಳಿದ್ದಾರೆ.

Chanakya Niti: ಸಂತೋಷದ ಜೀವನಕ್ಕೆ ಚಾಣಕ್ಯ ನೀತಿಯ ಈ ಅಂಶಗಳನ್ನು ನೆನಪಿನಲ್ಲಿಡಿ
ಚಾಣಕ್ಯ
TV9 Web
| Updated By: shruti hegde|

Updated on: Sep 05, 2021 | 2:07 PM

Share

ಆಚಾರ್ಯ ಚಾಣಕ್ಯ ತನ್ನ ಅನುಭವದ ಮೂಲಕ ಅನೇಕ ಸಂಗತಿಗಳನ್ನು ತಿಳಿಸಿಕೊಟ್ಟಿದ್ದಾರೆ. ಪ್ರಸ್ತುತದಲ್ಲಿಯೂ ಸಹ ಆಚಾರ್ಯ ಚಾಣಕ್ಯರ ನೀತಿಗಳನ್ನು ಪಾಲಿಸುವ ಮೂಲಕ ಒಳ್ಳೆಯ ಭವಿಷ್ಯವನ್ನು ಕಾಣಬಹುದು. ಮನುಷ್ಯ ಒಳ್ಳೆಯ ವ್ಯಕ್ತಿಯಾಗಲು ಆತನಲ್ಲಿ ಯಾವೆಲ್ಲಾ ಗುಣಗಳಿರಬೇಕು ಎಂದು ತಿಳಿಸಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ ವ್ಯಕ್ತಿ ಕಷ್ಟದಲ್ಲಿದ್ದಾಗ ಆ ಬಿಕ್ಕಟ್ಟಿನಿಂದ ಹೊರಬರಲು ತಂತ್ರವನ್ನು ಮಾಡಬೇಕು. ಇದರಿಂದ ಹಂತ ಹಂತವಾಗಿ ಆತ ಪರಿಸ್ಥಿತಿಯ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯ ಎಂದು ಹೇಳಿದ್ದಾರೆ.

ಕುಟುಂಬದ ಜವಾಬ್ದಾರಿ ಚಾಣಕ್ಯ ನೀತಿಯ ಪ್ರಕಾರ ಕುಟುಂಬದ ಜವಾಬ್ದಾರಿಯನ್ನು ಪೂರೈಸುವುದು ಆದ್ಯ ಕರ್ತವ್ಯ. ಕುಟುಂಬ ಸದಸ್ಯರನ್ನು ನೋಡಿಕೊಳ್ಳುವುದು, ಕಷ್ಟ ಸಮಯದಲ್ಲಿ ಸಹಾಯ ಮಾಡುವುದು, ಕುಟುಂಬವನ್ನು ಬೆಂಬಲಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮ ಕುಟುಂಬ ಸಿಲುಕಿದ್ದರೆ ಅದರಿಂದ ಹೊರಬರುವಂತೆ ಮಾಡುವುದು ನಿಮ್ಮ ಕರ್ತವ್ಯವೂ ಆಗಿರುತ್ತದೆ. ಈ ರೀತಿಯಾಗಿ ಒಗ್ಗಟ್ಟಿನಿಂದ ಇರುವುದರಿಂದ ಜೀವನದಲ್ಲಿ ಕುಟುಂಬದ ಸದಸ್ಯರೆಲ್ಲರೂ ಸಂತೋಷವಾಗಿರಬಹುದು.

ಆರೋಗ್ಯದ ಬಗ್ಗೆ ಕಾಳಜಿ ಚಾಣಕ್ಯರ ಪ್ರಕಾರ ಆರೋಗ್ಯದ ಬಗ್ಗೆ ಕಾಳಜಿ ಇರುವುದು ಮುಖ್ಯ. ಆರೋಗ್ಯವೇ ಅತಿ ದೊಡ್ಡ ಆಸ್ತಿ. ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ ನೀವು ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಜತೆಗೆ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಬಹುದಾಗಿದೆ. ಜತೆಗೆ ನಿಮ್ಮ ಆರೋಗ್ಯ ನಿಮ್ಮನ್ನು ಯಾವಾಗಲೂ ಖುಷಿಯಿಂದಿರುಸುತ್ತದೆ.

ಹಣದ ಸರಿಯಾದ ನಿರ್ವಹಣೆ ಕಷ್ಟದ ಸಮಯದಲ್ಲಿ ಹಣವು ಒಳ್ಳೆಯ ಸ್ನೇಹಿತ. ನಿಮ್ಮ ಬಳಿ ಹಣವಿದ್ದರೆ, ಬಿಕ್ಕಟ್ಟಿನಿಂದ ಹೊರಬರಲು ಸಹಾಯವಾಗುತ್ತದೆ. ಹಾಗಾಗಿ ಹಣವನ್ನು ಉಳಿತಾಯ ಮಾಡುವುದು ಜತೆಗೆ ಶ್ರಮವಹಿಸಿ ದುಡಿಯುವುದು ಮುಖ್ಯವಾಗಿದೆ. ಜೀವನದಲ್ಲಿ ಖುಷಿಯಾಗಿರಲು ಕಷ್ಟಪಟ್ಟು ಸಮಪಾದಿಸಿದ ಹಣ ಮುಖ್ಯ.

ಇದನ್ನೂ ಓದಿ:

Chanakya Niti: ಸಂಗಾತಿ ಆಯ್ಕೆಯಲ್ಲಿ ಗೊಂದಲ ಬೇಡ; ಈ ಅಂಶಗಳ ಬಗ್ಗೆ ಗಮನವಿರಲಿ

Chanakya Niti: ಇಂತಹ ಜೀವನ ಸಿಕ್ಕವರು ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ; ಚಾಣಕ್ಯ ನೀತಿ ಇಲ್ಲಿದೆ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್