ಧನು ರಾಶಿಯ ಜೊತೆ ಈ 3 ರಾಶಿಯ ಜನ ಆಪ್ತವಾಗಿರುತ್ತಾರೆ, ಹಾಗಾದರೆ ನಿಮ್ಮ ರಾಶಿ ಯಾವುದು?
ನವೆಂಬರ್ 22 ರಿಂದ ಡಿಸೆಂಬರ್ 21ರ ಮಧ್ಯೆ ಜನಿಸಿದ ಧನಸ್ಸು ರಾಶಿಯ (Sagittarius) ಜನರ ಜಾತಕದಲ್ಲಿ ಸ್ವತಂತ್ರ, ಸಹಜ ಮತ್ತು ಸಾಹಸಿಗಳು ಎಂದು ಗುರುತಿಸಲ್ಪಡುತ್ತಾರೆ. ಅವರಿಗೆ ಪ್ರಯಾಣ ಬೆಳೆಸುವುದು ಮತ್ತು ಪ್ರಪಂಚ ಪರ್ಯಟನೆಯ ಹುಚ್ಚು ಇರುತ್ತದೆ.
ಜಾತಕದಲ್ಲಿ ಇರುವುದು 12 ರಾಶಿಗಳೇ ಆದರೂ ಪ್ರತಿ ರಾಶಿಯೂ ವಿಶೇಷವಾಗಿರುತ್ತದೆ. ಇನ್ನು ಆಯಾ ರಾಶಿಯ ಜನ ಪ್ರತ್ಯೇಕವಾಗಿ, ಖಾಸಗಿಯಾಗಿ ವಿಭಿನ್ನ ಗುಣ ವಿಶೇಷಗಳನ್ನು ಹೊಂದಿರುತ್ತಾರೆ. ಆ ಗುಣಗಳೇ ಆಯಾ ರಾಶಿಯ ಜನರನ್ನು ವಿಶೇಷವಾಗಿ ಗುರುತಿಸುತ್ತವೆ. ಮತ್ತು ಅವುಗಳ ಬಲದಿಂದ ಹಿಡಿದ ಕಾರ್ಯ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಇಂದು ನಿರ್ದಿಷ್ಟವಾಗಿ ಕೆಲ ರಾಶಿಗಳ ವಿಶೇಷತೆ ಬಗ್ಗೆ ತಿಳಿಯೋಣ.
ನವೆಂಬರ್ 22 ರಿಂದ ಡಿಸೆಂಬರ್ 21ರ ಮಧ್ಯೆ ಜನಿಸಿದ ಧನಸ್ಸು ರಾಶಿಯ (Sagittarius) ಜನರ ಜಾತಕದಲ್ಲಿ ಸ್ವತಂತ್ರ, ಸಹಜ ಮತ್ತು ಸಾಹಸಿಗಳು ಎಂದು ಗುರುತಿಸಲ್ಪಡುತ್ತಾರೆ. ಅವರಿಗೆ ಪ್ರಯಾಣ ಬೆಳೆಸುವುದು ಮತ್ತು ಪ್ರಪಂಚ ಪರ್ಯಟನೆಯ ಹುಚ್ಚು ಇರುತ್ತದೆ. ಅವರು ಸಾದಾ ಸೀದಾ ಆಗಿರುತ್ತಾರೆ. ಸಕ್ಕರೆಯಿಂದ ಲೇಪಿಸಿದ ಸಿಹಿ ಸಿಹಿ ಮಾತುಗಳು ಅವರಿಗೆ ಇಷ್ಟವಾಗುವುದಿಲ್ಲ. ಅವರು ಕಠೋರ ಪ್ರಾಮಾಣಿಕರಾಗಿರುತ್ತಾರೆ. ಯಾರ ಬಗ್ಗೆಯೂ ದುರ್ಭಾವನೆ ಅಥವಾ ದ್ವೇಷ ಹೊಂದಿರುವುದಿಲ್ಲ. ವಿನಮ್ರತೆ ಅವರಲ್ಲಿ ತುಳುಕುತ್ತಿರುತ್ತದೆ.
ಪ್ರತಿ ದಿನವೂ ಅಂತಿಮ ದಿನ ಎಂದೇ ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಾರೆ. ಅನೇಕ ಬಾರಿ ತಮ್ಮ ನೇರವಂತಿಕೆಯಿಂದ ಅಹಂಕಾರದ ವ್ಯಕ್ತಿಯಂತೆ ಭಾಸವಾಗುತ್ತಾರೆ. ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಜೀವಿಸುತ್ತಾರೆ. ಹೀಗಿರುವ ಧನು ರಾಶಿಯವರು ಇನ್ನೂ ಮೂರು ರಾಶಿಯವರ ಜೊತೆ ತುಂಬಾ ಚೆನ್ನಾಗಿ, ಅನುಕೂಲಕರವಾಗಿ ಹೊಂದಿಕೊಂಡು ಹೋಗುತ್ತಾರೆ. ಆ ಮೂರು ರಾಶಿಗಳು ಯಾವುವು ಅಂದರೆ:
1. ಮೇಷ ರಾಶಿ Aries: ಮೇಷ ರಾಶಿಯವರ ಜಾತಕವು ಧನು ರಾಶಿಯವರ ಹಾಗೆಯೇ ಉಗ್ರವಾಗಿ, ಮೊಂಡುಮೊಂಡಾಗಿ ಮತ್ತು ಪ್ರಾಮಾಣಿಕವಾಗಿ ಇರುತ್ತದೆ. ಸುಳ್ಳು ಹೇಳುವವರ ಬಗ್ಗೆ ಮತ್ತು ಹೆಚ್ಚು ಜಟಿಲವಾದ ವ್ಯಕ್ತಿಗಳ ಬಗ್ಗೆ ವಿಶ್ವಾಸ ಹೊಂದುವುದಿಲ್ಲ. ಕೆಲಸದಲ್ಲಿ ಹೆಚ್ಚಿನ ಶ್ರಮ ಹಾಕಲು ಹಿಂಜರಿಯುವುದಿಲ್ಲ. ಮಹತ್ವಾಕಾಂಕ್ಷಿ ಆಗಿರುತ್ತಾರೆ. ಹೀಗಾಗಿ ಧನು ರಾಶಿಯವರ ಜೊತೆ ಹೆಚ್ಚು ಹೊಂದಾಣಿಕೆಯಿಂದ ಅನುಕೂಲಕರವಾಗಿ ಬೆರೆಯುತ್ತಾರೆ.
2. ಸಿಂಹ ರಾಶಿ Leo: ಸಿಂಹ ರಾಶಿಯವರು ತಮ್ಮ ಮನಸ್ಸಿನಲ್ಲಿ ಏನಿದೆಯೋ ಅದನ್ನು ಹೇಳಿಬಿಡುತ್ತಾರೆ. ಅವರು ಮಾನಸಿಕವಾಗಿ, ಬುದ್ಧಿಮತ್ತೆಯಿಂದ ಯಾವುದೇ ಕೃತ್ರಿಮ ಆಟ ಆಡುವುದಿಲ್ಲ. ಇವರು ಧನು ರಾಆಶಿಯವರ ಜೊತೆ ಹೆಚ್ಚು ಹೊಂದಾಣಿಕೆ ಹೊಂದಿರುತ್ತಾರೆ. ಅವರೊಂದಿಗೆ ಸಮಾನ ಮನಸ್ಕರಾಗಿರುತ್ತಾರೆ. ಬೇರೆಯವರನ್ನು ಕಷ್ಟಕ್ಕೆ ದೂಡಿ, ತಾವು ಜೀವನ ಅನುಭವಿಸಲು ಇಷ್ಟಪಡುವುದಿಲ್ಲ.
3. ಕುಂಭ ರಾಶಿ Aquarius: ಕುಂಭ ರಾಶಿಯವರು ಜೀವನದಲ್ಲಿ ಲಾಲಸೆ ಹೊಂದಿರುತ್ತಾರೆ. ದಿನಾ ಒಂದೇ ರೀತಿಯಾಗಿರುವುದು ಅಥವಾ ಏಕತಾನತೆಯಿಂದ ಬಳಲುವುದಿಲ್ಲ. ಜೀವನದಲ್ಲಿ ಸಾಹಸಿಗಳಾಗಿರಲು ಬಯಸುತ್ತಾರೆ. ದೃಢ ವಿಶ್ವಾಸದೊಂದಿಗೆ ಅದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಧನು ರಾಶಿಯವರ ಹಾಗೆಯೇ ಹೊಸ ಹೊಸ ಸಂಗತಿಗಳು, ಪ್ರಪಂಚದಲ್ಲಿ ಹೊಸತನ್ನು ಕಾಣಲು ತಹತಹಿಸುತ್ತಾರೆ.
(these three zodiac signs are compatible with sagittarius know how)