Ganesha Chaturthi 2021; ಸಂಕಷ್ಟಹರ ಗಣಪತಿಯ ಶಕ್ತಿಯುತ ಮಂತ್ರಗಳು ಮತ್ತು ಪ್ರಯೋಜನಗಳು ನಿಮಗೆ ಗೊತ್ತೇ?

ಪ್ರಥಮ ಪೂಜಿತ ಗಣೇಶನಿಗೆ ಸಿದ್ಧಿ ವಿನಾಯಕ, ಮಂಗಳಮೂರ್ತಿ, ವಿಘ್ನೇಶ್ವರ, ರೋಗಖಹರ್ತ, ಸುಖಕರ್ತ, ಸೇರಿದಂತೆ ಹಲವು ನಾಮಗಳಿದ್ದು ಗಣೇಶನ ಮಹಿಮೆ ಅಪಾರ. ಹೀಗಾಗಿ ಪ್ರತಿ ಸಮಸ್ಯೆಗಳಿಗೂ ಗಣೇಶನ ಮಂತ್ರಗಳಲ್ಲಿ ಪರಿಹಾರ ಅಡಗಿದೆ. ಇಂತಹ ದೇವರ ದೇವ ಮಹಾದೇವನ ಪುತ್ರನಾದ ಗಣೇಶ ಚತುರ್ದಿಯಂದು ಗಣೇಶನ 15 ಪವರ್ ಫುಲ್ ಮಂತ್ರಗಳು ನಿಮಗಾಗಿ.

Ganesha Chaturthi 2021; ಸಂಕಷ್ಟಹರ ಗಣಪತಿಯ ಶಕ್ತಿಯುತ ಮಂತ್ರಗಳು ಮತ್ತು ಪ್ರಯೋಜನಗಳು ನಿಮಗೆ ಗೊತ್ತೇ?
ಗಣೇಶ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 07, 2021 | 5:00 PM

ಭಗವಾನ್ ಗಣೇಶನ ಮಂತ್ರಗಳು ಶಕ್ತಿಯಿಂದ ತುಂಬಿವೆ. ಇತರ ಮಂತ್ರಗಳಂತೆ ಇವುಗಳನ್ನು ಭಕ್ತಿಯಿಂದ ಪಠಿಸುವುದರಿಂದ ನಿಮಗೆ ಉಂಟಾದ ಅಡೆತಡೆಗಳನ್ನು ತೆಗೆದುಹಾಕಿ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ಶಿವ ಪಾರ್ವತಿ ಪುತ್ರ ಗಣೇಶ ಜ್ಞಾನದ ದೇವರು ಮತ್ತು ಅಡೆತಡೆಗಳನ್ನು ತೆಗೆದುಹಾಕುವವನು. ಅಲ್ಲದೆ ಭಗವಾನ್ ಗಣೇಶನನ್ನು ಗಣಪತಿ ಎಂದೂ ಸಹ ಕರೆಯುತ್ತಾರೆ. ಅಂದರೆ ಗಣ ಎಂದರೆ ಗುಂಪು. ಬ್ರಹ್ಮಾಂಡವು ಪರಮಾಣುಗಳು ಮತ್ತು ವಿಭಿನ್ನ ಶಕ್ತಿಗಳ ಸಮೂಹವಾಗಿದೆ. ಅದೆಲ್ಲದರ ಅಧಿಪತಿ ಗಣೇಶ ಹೀಗಾಗಿ ಗಣಪತಿ ಎಂದು ಕರೆಯುತ್ತಾರೆ.

ಶಿವ ಪುರಾಣದ ಪ್ರಕಾರ, ಶುಭ ಮತ್ತು ಲಾಭ ಗಣೇಶನ ಇಬ್ಬರು ಪುತ್ರರು. ಶುಭ ಮತ್ತು ಲಾಭ ಅನುಕ್ರಮವಾಗಿ ಮಂಗಳಕರ ಮತ್ತು ಲಾಭದ ವ್ಯಕ್ತಿತ್ವಗಳಾಗಿವೆ. ಶುಭ ರಿದ್ಧಿ ದೇವಿಯ ಮಗ, ಮತ್ತು ಲಾಭ ಸಿದ್ಧಿ ದೇವಿಯ ಮಗ.

ಪ್ರಥಮ ಪೂಜಿತ ಗಣೇಶನಿಗೆ ಸಿದ್ಧಿ ವಿನಾಯಕ, ಮಂಗಳಮೂರ್ತಿ, ವಿಘ್ನೇಶ್ವರ, ರೋಗಖಹರ್ತ, ಸುಖಕರ್ತ, ಸೇರಿದಂತೆ ಹಲವು ನಾಮಗಳಿದ್ದು ಗಣೇಶನ ಮಹಿಮೆ ಅಪಾರ. ಹೀಗಾಗಿ ಪ್ರತಿ ಸಮಸ್ಯೆಗಳಿಗೂ ಗಣೇಶನ ಮಂತ್ರಗಳಲ್ಲಿ ಪರಿಹಾರ ಅಡಗಿದೆ. ಇಂತಹ ದೇವರ ದೇವ ಮಹಾದೇವನ ಪುತ್ರನಾದ ಗಣೇಶ ಚತುರ್ದಿಯಂದು ಗಣೇಶನ 15 ಪವರ್ ಫುಲ್ ಮಂತ್ರಗಳು ನಿಮಗಾಗಿ.

ಶಕ್ತಿಯುತ ಗಣೇಶ ಮಂತ್ರಗಳು ಗಣೇಶ ಜ್ಞಾನ, ಯಶಸ್ಸು ಮತ್ತು ಆಸೆಗಳನ್ನು ನೆರವೇರಿಸುವ ಅಧಿಪತಿ. ಗಣಪತಿಯನ್ನು ಆವಾಹಿಸಲು ಹಲವಾರು ಮಂತ್ರಗಳನ್ನು ಪಠಿಸಬಹುದು. ಈ ಮಂತ್ರಗಳನ್ನು ಸಿದ್ಧಿ ಮಂತ್ರ ಎಂದೂ ಕರೆಯುತ್ತಾರೆ. ಗಣೇಶ ಮಂತ್ರಗಳು ಶಕ್ತಿಯಿಂದ ತುಂಬಿವೆ. ನಿಜವಾದ ಭಕ್ತಿಯಿಂದ ಗಣೇಶ ಮಂತ್ರ ಪಠಿಸಿದರೆ ಅದರ ಫಲ ಸಿಗುತ್ತದೆ.

1. ವಕ್ರತುಂಡ ಗಣೇಶ ಮಂತ್ರ ಗಣೇಶನ ಮಂತ್ರಗಳಲ್ಲಿ ಅತ್ಯಂತ ಮುಖ್ಯವಾದ ಹಾಗೂ ಸಾಮಾನ್ಯವಾಗಿ ಗಣಪತಿಯನ್ನು ಪೂಜಿಸುವಾಗ ಪಠಿಸುವ ಮಂತ್ರಗಳಲ್ಲಿ ಈ ಮಂತ್ರವೂ ಒಂದು. ಈ ಮಂತ್ರವೂ ಗಣೇಶ, ದೇವಿ ರಿದ್ಧಿ ಮತ್ತು ಸಿದ್ಧಿ ದೇವಿಗೆ ಸಮರ್ಪಿಸಲಾಗಿದೆ. ಈ ಮಂತ್ರವೂ ಸಂಪತ್ತು ವೃದ್ಧಿಗಾಗಿ ಪಠಿಸಲಾಗುತ್ತೆ.

ವಕ್ರತುಂಡ ಮಹಾಕಾಯ | ಸೂರ್ಯಕೋಟಿ ಸಮಪ್ರಭ || ನಿರ್ವಿಘ್ನಂ ಕುರುಮೇ ದೇವ | ಸರ್ವಕಾರ್ಯೇಷು ಸರ್ವದಾ ||

ಅರ್ಥ: “ಬಾಗಿದ ಸೊಂಡಿಲು ದೊಡ್ಡ ಶರೀರ ಅನೇಕ ಸೂರ್ಯನ ಬೆಳಕಿನಂತಿರುವ ಓ ದೇವರೇ, ದಯವಿಟ್ಟು ನನ್ನ ಸಂಪೂರ್ಣ ಕೆಲಸವನ್ನು ಯಾವುದೆ ಅಡೆತಡೆಯಿಲ್ಲದೆ ಸಫಲವನ್ನಾಗಿ ಮಾಡಿ.”

ಪ್ರಯೋಜನಗಳು: ಈ ಗಣೇಶ ಮಂತ್ರವನ್ನು ಪಠಿಸುವುದರಿಂದ ಆರೋಗ್ಯ ಸಮಸ್ಯೆಗಳು, ಯೋಗಕ್ಷೇಮದ ನಡುವಿನ ಅಡೆತಡೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಸಂಪತ್ತು, ಬುದ್ಧಿವಂತಿಕೆ, ಅದೃಷ್ಟ, ಸಮೃದ್ಧಿಯಾಗಿ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.

2. ಗಣೇಶ ಗಾಯತ್ರಿ ಮಂತ್ರ ಮುರಿದ ದಂತದ ಹಿಂದಿನ ಸಾಂಕೇತಿಕ ಅರ್ಥವೆಂದರೆ ಬುದ್ಧಿ (ಮುರಿದ ದಂತವನ್ನು ಸಂಕೇತಿಸುತ್ತದೆ) ಯಾವಾಗಲೂ ಶ್ರಧ್ದೇ ಅಥವಾ ನಂಬಿಕೆಗಿಂತ ಕಡಿಮೆ ಇರಬೇಕು ಎಂಬುವುದನ್ನು ಸಂಕೇತಿಸುತ್ತದೆ. ಈ ಮಂತ್ರದಿಂದ ಯಶಸ್ಸು ಪಡೆಯಬಹುದು.

ಓಂ ಏಕದಂತಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್

ಅರ್ಥ: ಎಲ್ಲೆಡೆಯೂ ಇರುವ ಏಕ ದಂತನನ್ನು ನಾವು ಪ್ರಾರ್ಥಿಸುತ್ತೇವೆ. ನಾವು ಬಾಗಿದ ಶಿರದಿಂದ ಆನೆಯ ಆಕಾರವಿರುವ ಭಗವಂತನನ್ನು ಹೆಚ್ಚಿನ ಬುದ್ಧಿಶಕ್ತಿ ನೀಡಲೆಂದು ಧ್ಯಾನಿಸುತ್ತೇವೆ. ನಮ್ಮ ಮನಸ್ಸನ್ನು ಬುದ್ಧಿವಂತಿಕೆಯಿಂದ ಬೆಳಗಿಸಿ ಯಶಸ್ಸು ನೀಡಲೆಂದು ನಾವು ಏಕ ದಂತನನ್ನು ನಮಸ್ಕರಿಸುತ್ತೇವೆ.

ಪ್ರಯೋಜನಗಳು: ಈ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ವ್ಯಕ್ತಿಯು ನಮ್ರತೆ, ಉನ್ನತಿ ಹಾಗೂ ಬುದ್ದಿವಂತಿಕೆಯನ್ನು ಪಡೆದುಕೊಳ್ಳುತ್ತಾರೆ.

3. ಮೂಲ ಗಣಪತಿ ಮಂತ್ರ ಓಂ ಗಮ್ ಗಣಪತಿಯೇ ನಮಃ

ಇದರರ್ಥ ನಮ್ಮ ಎಲ್ಲ ಅಸ್ತಿತ್ವದೊಂದಿಗೆ ಗಣಪತಿಗೆ ತಲೆಬಾಗುವುದು ಮತ್ತು ಅವರ ಎಲ್ಲಾ ಉತ್ತಮ ಗುಣಗಳನ್ನು ನಮ್ಮ ಸ್ವ-ಸ್ವಭಾವದಲ್ಲಿ ಸ್ವೀಕರಿಸುವುದು.

ಪ್ರಯೋಜನಗಳು:ಈ ಮಂತ್ರವನ್ನು ನಿತ್ಯ ಜಪಿಸಬೇಕು. ಯಾವುದೇ ಕೆಲಸಗಲನ್ನು ಆರಂಭಿಸುವ ಮುನ್ನ ಈ ಮಂತ್ರವನ್ನು ಜಪಿಸುವುದರಿಂದ ಕೆಲಸದಲ್ಲಿ ಯಾವುದೇ ಅಡೆತಡೆ ಬರುವುದಿಲ್ಲ. ಹೊಸ ಉದ್ಯಮದಲ್ಲಿ ಯಶಸ್ಸು ಕಂಡುಬರುತ್ತದೆ. ಹಾಗೂ ಜೀವನದಲ್ಲಿ ಇರುವ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ.

4. ನಾಮಾವಳಿ ಮಂತ್ರಗಳು ಭಗವಾನ್ ಗಣೇಶನಿಗೆ 108 ಮತ್ತು 1000 ಹೆಸರರುಗಳ ಅಷ್ಟೋತ್ತರಗಳಿವೆ. ನಿತ್ಯವೂ ದೇವರಿಗೆ ದೀಪವನ್ನು ಬೆಳಗಿಸಿ ಗಣೇಶ ಅಷ್ಟೋತ್ತರ, ಸಹಸ್ರನಾಮಗಳನ್ನು ಹೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೂ ಜೀವನದಲ್ಲಿ ಇದ್ದ ಅನೇಕ ಕಷ್ಟಗಳು ನಿವಾರಣೆಯಾಗುತ್ತದೆ. ಅದರಲ್ಲಿ ಕೆಲವು ವಿಶೇಷ ಹೆಸರಿನಿಂದ ಕೂಡಿರುವ ಮಂತ್ರಗಳ ಉಕ್ತಿಯು ವ್ಯಕ್ತಿಯ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತದೆ.

5. ಓಂ ಗಣಪತಿಯೇ ನಮಃ ಓಂ ಗಣಪತಿಯೇ ನಮಃ ಅರ್ಥ: ಗಣಪತಿಯೇ- ಗಣ ಎಂದರೆ ‘ಒಂದು ಗುಂಪು’ ಮತ್ತು ‘ಅಧ್ಯಾಕ್ಷ’ ಎಂದರೆ ‘ಗುಂಪಿನ ನಾಯಕ.’

ಪ್ರಯೋಜನಗಳು: ಒಂದು ನಿರ್ದಿಷ್ಟ ರಾಜ್ಯದ ಅಥವಾ ನಗರದ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಈ ಮಂತ್ರವನ್ನು ಬಳಸಬಹುದು. ಒಬ್ಬರ ವೈಯಕ್ತಿಕ ನಾಯಕತ್ವ ಗುಣಲಕ್ಷಣಗಳನ್ನು ಸುಧಾರಿಸಲು ಅಥವಾ ನಿರ್ಮಿಸಲು ಈ ಮಂತ್ರವನ್ನು ಪಠಿಸಬಹುದು.

6. ಓಂ ಗಜಾನನಾಯ ನಮಃ ಅರ್ಥ: ಇಲ್ಲಿ ಗಜಾನನ ಎಂದರೆ ಆನೆಯ ತಲೆಯನ್ನು ಹೊಂದವನು. ಸಂಸ್ಕೃತದಲ್ಲಿ ಗಜಾ ಎಂದರೆ ಆನೆ. ಈ ಮಂತ್ರವು ವಿನಮ್ರತೆಯನ್ನು ಪ್ರೇರೇಪಿಸುತ್ತದೆ. ನಾವು ನಮ್ಮ ಅಹಂಕಾರವನ್ನು ಬದಿಗಿಟ್ಟು ನಮ್ಮ ಜೀವನವನ್ನು ಕರ್ತವ್ಯದಿಂದ ನಡೆಸಬೇಕು ಎಂಬ ಸಂದೇಶವನ್ನು ಸಾರುತ್ತದೆ.

ಪ್ರಯೋಜನ: ಈ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿ ತನ್ನ ಜೀವನದಲ್ಲಿ ವಿನಯ ಹಾಗೂ ಮೃದು ಮನಸ್ಸನ್ನು ಬೆಳೆಸಿಕೊಳ್ಳುತ್ತಾನೆ. ವಾದ-ವಿವಾದಗಳಿಂದ ದೂರ ಉಳಿದು ಆಂತರಿಕ ಶಾಂತಿ ಸಮಯ ಪ್ರಜ್ಞೆಯ ಜ್ಞಾನ ಬೆಳೆಯುತ್ತೆ.

7. ಓಂ ವಿಘ್ನನಾಶಾಯ ನಮಃ

ಅರ್ಥ: ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಲು ಗಣಪತಿಯನ್ನು ಪೂಜಿಸಲಾಗುತ್ತದೆ. ಇಲ್ಲಿ “ವಿಗ್ನ” ಎಂದರೆ ಅಡೆತಡೆಗಳು, ಮತ್ತು “ವಿನಾಶಾಯ” ಎಂದರೆ ಅಡೆತಡೆಗಳನ್ನು ತೆಗೆದುಹಾಕುವವನು ಎಂದರ್ಥ.

ಪ್ರಯೋಜನ: ವ್ಯಕ್ತಿಯು ತನ್ನ ಸಾಮಾಜಿಕ ಜೀವನದಲ್ಲಿ, ಕೆಲಸದಲ್ಲಿ ಅಥವಾ ಪರಸ್ಪರ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಮಂತ್ರವನ್ನು ಪಠಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಸಮಸ್ಯೆಗಳು ದೂರವಾಗಿ ಅದೃಷ್ಟ, ಯಶಸ್ಸು ನಿಮ್ಮದಾಗುವುದು.

8. ಓಂ ಲಂಬೋದರಾಯ ನಮಃ

ಅರ್ಥ: ‘ಲಂಬೋದರ’ ಎಂದರೆ ದೊಡ್ಡ ಹೊಟ್ಟೆ ಹೊಂದಿರುವ ದೇವರು ಎಂದು ಉಲ್ಲೇಖಿಸುತ್ತದೆ.

ಪ್ರಯೋಜನ: ಈ ಮಂತ್ರವನ್ನು ಪಠಿಸುವುದರಿಂದ ಒಬ್ಬ ವ್ಯಕ್ತಿಯು ಪ್ರಪಂಚದಲ್ಲಿ ಆಕರ್ಷಕ ವ್ಯಕ್ತಿಯಾಗುತ್ತಾನೆ. ಹಾಗೂ ಪ್ರಪಂಚವನ್ನು ಪ್ರೀತಿಸಲು ಬಯಸುವವರು ಈ ಮಂತ್ರ ಪಠಣೆ ಮಾಡಬಹುದು.

9. ಓಂ ಸುಮುಖಾಯ ನಮಃ

ಅರ್ಥ: ಸುಮುಖ ಎಂದರೆ ‘ಆಹ್ಲಾದಕರ ಮುಖವನ್ನು ಹೊಂದಿರುವವನು.’

ಪ್ರಯೋಜನ: ಜೀವನದಲ್ಲಿ ಕೆಲವು ವಿಷಯಗಳಲ್ಲಿ ಪ್ರತಿಯೊಬ್ಬರಿಗೂ ನ್ಯೂನತೆಗಳು ಇರುತ್ತವೆ. ಇದು ಸಹಜ. ಅಂತಹ ನ್ಯೂನತೆಯಿಂದ ಹೊರಬಂದು ಮಾನಸಿಕವಾಗಿ ಚೈತನ್ಯ ಶೀಲರಾಗಲು ಈ ಮಂತ್ರವನ್ನು ಜಪಿಸಬೇಕು.

10. ಓಂ ಗಜಕರ್ಣಿಕಾಯ ನಮಃ

ಅರ್ಥ: ಗಜ ಎಂದರೆ ಆನೆ, ಮತ್ತು ಕಾರ್ಣಿಕಾಯ ಎಂದರೆ ಕಿವಿಗಳು. ಆನೆಯ ಕಿವಿಗಳುಳ್ಳ ಗಜಕರ್ಣಿಕಾಯ ಎಂದು ಅರ್ಥ.

ಪ್ರಯೋಜನ: ಈ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿ ತನ್ನ ಜೀವನದಲ್ಲಿ ನ್ಯೂನತೆಗಳನ್ನು, ಕಷ್ಟ, ಸೋಲು, ನಿರಾಸೆಯನ್ನು ಮೆಟ್ಟಿನಿಲ್ಲುತ್ತಾನೆ. ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿ ವಿನಯತೆ, ಬುದ್ಧಿವಂತಿಕೆ, ಯಶಸ್ಸು ಸೇರಿದಂತೆ ಅನೇಕ ಲಾಭಗಳನ್ನು ಪಡೆದುಕೊಳ್ಳುತ್ತಾನೆ.

11. ಓಂ ವಿಕಟಾಯ ನಮಃ

ಅರ್ಥ: ಇಲ್ಲಿ, ‘ವಿಕಟ’ ಎಂದರೆ ‘ಕಷ್ಟ. ಕಷ್ಟಗಳನ್ನು ದೂರ ಮಾಡುವವನು ಎಂದರ್ಥ

ಪ್ರಯೋಜನ: ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಕಷ್ಟಗಳು ಇದ್ದೇ ಇರುತ್ತವೆ. ಆದ್ರೆ ಯಾರು ನಿರಾಸೆಗೆ ಒಳಗಾಗಬಾರದು. ಕಷ್ಟಗಳಿಂದ ಜೀವನದಲ್ಲಿ ಭರವಸೆ ಕಳೆದುಕೊಂಡಾಗ ಈ ಮಂತ್ರವನ್ನು ಜಪಿಸಿದರೆ ಗಣೇಶನು ಉತ್ತಮ ದೃಷ್ಟಿಕೋನದೆಡೆಗೆ ಪರಿವರ್ತನೆ ಕಾಣಲು ಪ್ರೇರೇಪಿಸುವನು.

12. ಓಂ ವಿನಾಯಕಾಯ ನಮಃ

ಅರ್ಥ: ವಿನಾಯಕ ಎಂದರೆ ‘ಸಮಸ್ಯೆಗಳನ್ನು ಪರಿಹರಿಸುವ ಭಗವಂತ’ ಎಂದರ್ಥ.

ಪ್ರಯೋಜನ: ಒಬ್ಬ ವ್ಯಕ್ತಿ ಈ ಮಂತ್ರವನ್ನು ಜಪಿಸುವುದರಿಂದ ಜೀವನವು ಸುವರ್ಣಮಯ ಸಂಗತಿಗಳೊಂದಿಗೆ ಕೂಡಿರುತ್ತದೆ. ಅಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಬಹುದು.

13. ರಿನ್ನಮ್ ಹರ್ತ ಮಂತ್ರ

ಓಂ ಗಣೇಶ್ ರಿನ್ನಮ್ ಚಿಂದಿ ವರೇನ್ಯಮ್ ಹೂಂಗ್ ನಮಃ ಪುಟ್

ಅರ್ಥ: ರಿನ್ನಮ್ ಎಂಬುದು ಗಣೇಶನ ಇನ್ನೊಂದು ಹೆಸರು, ಇದರ ಅರ್ಥ ‘ಸಂಪತ್ತನ್ನು ಕೊಡುವವನು’. ಪ್ರಯೋಜನಗಳು: ಈ ಮಂತ್ರವನ್ನು ನಿತ್ಯ ಜಪಿಸುವುದರಿಂದ ಸಂಪತ್ತು ಮತ್ತು ಸಮೃದ್ದಿಯು ವೃದ್ದಿಯಾಗುತ್ತದೆ.

14. ಸಿದ್ಧಿವಿನಾಯಕ ಮಂತ್ರ

ಓಂ ನಮೋ ಸಿದ್ಧಿವಿನಾಯಕಾಯ ಸರ್ವ ಕಾರ್ಯ ಕತ್ರೇಯ ಸರ್ವ ವಿಘ್ನ ಪ್ರಶಮ್ನಯ್ ಸರ್ವರ್ಜಯ ವಶ್ಯಾಕರ್ಣಾಯ ಸರ್ವಜನ್ ಸರ್ವಸ್ತ್ರೀ ಪುರುಷ ಆಕಾಶಾಯ ಶ್ರೀಂಗ್ ಓಂ ಸ್ವಾಹಮ್ ”

ಈ ಸಿದ್ಧಿವಿನಾಯಕ ಮಂತ್ರವನ್ನು ನಿತ್ಯವೂ ಪಠಿಸುವುದರಿಂದ ಸಾಮಾಜಿಕವಾಗಿ, ಶಾಂತಿ, ಸಮೃದ್ಧಿ ಮತ್ತು ಸಿದ್ಧಿಯನ್ನು ಪಡೆಯಬಹುದು. ಇದನ್ನು ನಿತ್ಯವೂ 108 ಬಾರಿ ಹೇಳಬೇಕು. ಆಗ ಪುಣ್ಯಪ್ರಾಪ್ತಿಯಾಗುವುದು.

ಇದನ್ನೂ ಓದಿ: Ganesha Chaturthi 2021: ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ; ಮಾರ್ಗಸೂಚಿ ಪ್ರಕಟ

Published On - 6:25 am, Mon, 6 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ