ಆಚಾರ್ಯ ಚಾಣಕ್ಯ ತನ್ನ ಅನುಭವದ ಮೂಲಕ ಅನೇಕ ಸಂಗತಿಗಳನ್ನು ತಿಳಿಸಿಕೊಟ್ಟಿದ್ದಾರೆ. ಪ್ರಸ್ತುತದಲ್ಲಿಯೂ ಸಹ ಆಚಾರ್ಯ ಚಾಣಕ್ಯರ ನೀತಿಗಳನ್ನು ಪಾಲಿಸುವ ಮೂಲಕ ಒಳ್ಳೆಯ ಭವಿಷ್ಯವನ್ನು ಕಾಣಬಹುದು. ಮನುಷ್ಯ ಒಳ್ಳೆಯ ವ್ಯಕ್ತಿಯಾಗಲು ಆತನಲ್ಲಿ ಯಾವೆಲ್ಲಾ ಗುಣಗಳಿರಬೇಕು ಎಂದು ತಿಳಿಸಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ ವ್ಯಕ್ತಿ ಕಷ್ಟದಲ್ಲಿದ್ದಾಗ ಆ ಬಿಕ್ಕಟ್ಟಿನಿಂದ ಹೊರಬರಲು ತಂತ್ರವನ್ನು ಮಾಡಬೇಕು. ಇದರಿಂದ ಹಂತ ಹಂತವಾಗಿ ಆತ ಪರಿಸ್ಥಿತಿಯ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯ ಎಂದು ಹೇಳಿದ್ದಾರೆ.
ಕುಟುಂಬದ ಜವಾಬ್ದಾರಿ
ಚಾಣಕ್ಯ ನೀತಿಯ ಪ್ರಕಾರ ಕುಟುಂಬದ ಜವಾಬ್ದಾರಿಯನ್ನು ಪೂರೈಸುವುದು ಆದ್ಯ ಕರ್ತವ್ಯ. ಕುಟುಂಬ ಸದಸ್ಯರನ್ನು ನೋಡಿಕೊಳ್ಳುವುದು, ಕಷ್ಟ ಸಮಯದಲ್ಲಿ ಸಹಾಯ ಮಾಡುವುದು, ಕುಟುಂಬವನ್ನು ಬೆಂಬಲಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮ ಕುಟುಂಬ ಸಿಲುಕಿದ್ದರೆ ಅದರಿಂದ ಹೊರಬರುವಂತೆ ಮಾಡುವುದು ನಿಮ್ಮ ಕರ್ತವ್ಯವೂ ಆಗಿರುತ್ತದೆ. ಈ ರೀತಿಯಾಗಿ ಒಗ್ಗಟ್ಟಿನಿಂದ ಇರುವುದರಿಂದ ಜೀವನದಲ್ಲಿ ಕುಟುಂಬದ ಸದಸ್ಯರೆಲ್ಲರೂ ಸಂತೋಷವಾಗಿರಬಹುದು.
ಆರೋಗ್ಯದ ಬಗ್ಗೆ ಕಾಳಜಿ
ಚಾಣಕ್ಯರ ಪ್ರಕಾರ ಆರೋಗ್ಯದ ಬಗ್ಗೆ ಕಾಳಜಿ ಇರುವುದು ಮುಖ್ಯ. ಆರೋಗ್ಯವೇ ಅತಿ ದೊಡ್ಡ ಆಸ್ತಿ. ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ ನೀವು ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಜತೆಗೆ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಬಹುದಾಗಿದೆ. ಜತೆಗೆ ನಿಮ್ಮ ಆರೋಗ್ಯ ನಿಮ್ಮನ್ನು ಯಾವಾಗಲೂ ಖುಷಿಯಿಂದಿರುಸುತ್ತದೆ.
ಹಣದ ಸರಿಯಾದ ನಿರ್ವಹಣೆ
ಕಷ್ಟದ ಸಮಯದಲ್ಲಿ ಹಣವು ಒಳ್ಳೆಯ ಸ್ನೇಹಿತ. ನಿಮ್ಮ ಬಳಿ ಹಣವಿದ್ದರೆ, ಬಿಕ್ಕಟ್ಟಿನಿಂದ ಹೊರಬರಲು ಸಹಾಯವಾಗುತ್ತದೆ. ಹಾಗಾಗಿ ಹಣವನ್ನು ಉಳಿತಾಯ ಮಾಡುವುದು ಜತೆಗೆ ಶ್ರಮವಹಿಸಿ ದುಡಿಯುವುದು ಮುಖ್ಯವಾಗಿದೆ. ಜೀವನದಲ್ಲಿ ಖುಷಿಯಾಗಿರಲು ಕಷ್ಟಪಟ್ಟು ಸಮಪಾದಿಸಿದ ಹಣ ಮುಖ್ಯ.
ಇದನ್ನೂ ಓದಿ:
Chanakya Niti: ಸಂಗಾತಿ ಆಯ್ಕೆಯಲ್ಲಿ ಗೊಂದಲ ಬೇಡ; ಈ ಅಂಶಗಳ ಬಗ್ಗೆ ಗಮನವಿರಲಿ
Chanakya Niti: ಇಂತಹ ಜೀವನ ಸಿಕ್ಕವರು ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ; ಚಾಣಕ್ಯ ನೀತಿ ಇಲ್ಲಿದೆ