AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಯಾವುದೇ ವ್ಯಕ್ತಿಯನ್ನು ನೀವು ಜಯಿಸಬೇಕು ಎಂದರೆ ಚಾಣಕ್ಯನ ಈ ಮಾತುಗಳನ್ನು ಅನುಸರಿಸಿ

ಎದುರಿಗಿನ ವ್ಯಕ್ತಿಯ ಕೋಪವನ್ನು ಸಹಿಸಿಕೊಂಡುಬಿಟ್ಟರೆ ವಾಸ್ತವವಾಗಿ ಆ ವ್ಯಕ್ತಿ ನಿಧಾನಕ್ಕೆ ನಿಮ್ಮೆಡೆ ಆಕರ್ಷಿತನಾಗಿ ನಿಮ್ಮ ವಶವಾಗುತ್ತಾರೆ. ಏಕೆಂದರೆ ಕೋಪವೇ ಅವರ ದೌರ್ಬಲ್ಯವಾಗಿರುತ್ತದೆ. ಅಂತಹ ಕೋಪವನ್ನೇ ಸಹಿಸಿಕೊಂಡುಬಿಟ್ಟರೆ ಎದುರಿಗಿನ ವ್ಯಕ್ತಿ ಮಗುವಂತಾಗಿ ಬಿಡುತ್ತಾರೆ. ಇನ್ನೇನು ಉಳಿದಿದೆ.. ಜಯವಷ್ಟೇ ನಿಮ್ಮದು. ತಡವೇಕೆ.. ಚಾಣಕ್ಯನ ಈ ನಿಯಮಗಳನ್ನು ಅನುಸರಿಸಿ ಸಾಕು.

Chanakya Niti: ಯಾವುದೇ ವ್ಯಕ್ತಿಯನ್ನು ನೀವು ಜಯಿಸಬೇಕು ಎಂದರೆ ಚಾಣಕ್ಯನ ಈ ಮಾತುಗಳನ್ನು ಅನುಸರಿಸಿ
ನಿಮ್ಮ ಮಕ್ಕಳನ್ನು ಯೋಗ್ಯರನ್ನಾಗಿಸಲು ಬಯಸುವುದಾದರೆ ಆಚಾರ್ಯ ಚಾಣಕ್ಯ ಹೇಳುವ ಈ ಮಾತುಗಳನ್ನು ಕೇಳಿ
TV9 Web
| Updated By: ಸಾಧು ಶ್ರೀನಾಥ್​|

Updated on: Sep 24, 2021 | 7:44 AM

Share

ಯಾವುದೇ ವ್ಯಕ್ತಿಯನ್ನು ನೀವು ಜಯಿಸಬೇಕು, ಯಾವುದೇ ವ್ಯಕ್ತಿಯನ್ನು ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು ಅಂದರೆ ಆಚಾರ್ಯ ಚಾಣಕ್ಯನ ಪ್ರಕಾರ ಈ ಮಾತುಗಳನ್ನು ಪರಿಪಾಲಿಸಿ. ಅಂತಹ ವ್ಯಕ್ತಿ ಮಂತ್ರಮುಗ್ಧನಾಗಿ ನಿಮ್ಮನ್ನು ಅನುಸರಿಸಿಕೊಂಡು ಬರುತ್ತಾರೆ. ಆಚಾರ್ಯ ಚಾಣಕ್ಯರಿಗೆ ಜೀವನ ಮತ್ತು ಮನುಷ್ಯನ ವ್ಯವಹಾರದ ಬಗ್ಗೆ ಆಳವಾದ ವಿಶ್ಲೇಷಣೆ, ಜ್ಞಾನವಿತ್ತು. ಚಾಣಕ್ಯ ತಮ್ಮ ಆಳವಾದ ಅನುಭವ ಜ್ಞಾನದೊಂದಿಗೆ ಏನು ಉಪಾಯ ಮಾಡಿ ವ್ಯತಿರಿಕ್ತ ಪರಿಸ್ಥಿತಿಯನ್ನು ಜಯಿಸಬೇಕು ಎಂಬುದನ್ನು ತಿಳಿಯಹೇಳಿದ್ದಾರೆ. ಆಚಾರ್ಯ ಚಾಣಕ್ಯ ತಮ್ಮ ಅನುಭವ ನೀತಿಗಳನ್ನು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಹಂಚಿಕೊಂಡಿದ್ದಾರೆ.

ಆಚಾರ್ಯ ಚಾಣಕ್ಯರ ರಾಜನೀತಿಯು ಕೂಟನೀತಿ, ರಣನೀತಿಗಳಿಗೆ ಪ್ರಸಿದ್ಧವಾಗಿದೆ. ಎದುರಿಗಿನ ವ್ಯಕ್ತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕೆ ಚಾಣಕ್ಯ ರೂಪಿಸಿರುವ ನೀತಿಯು ಕೂಟ ನೀತಿಯಡಿ ಬರುತ್ತದೆ. ಹಾಗಂತ ಎದುರಾಳಿಯನ್ನು ಗೆದ್ದು ಅವರನ್ನು ನಮ್ಮ ಅಧೀನದಲ್ಲಿಟ್ಟುಕೊಳ್ಳಬೇಕು, ಆತನನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳಬೇಕು ಎಂಬಂತಲ್ಲ.

ಆದರೆ ಕೆಲವು ವ್ಯಕ್ತಗಳನ್ನು ನಾವು ಜಯಿಸಲೇಬೇಕು, ಅವರನ್ನು ಮಣಿಸಲೇಬೇಕು… ಆಗಲೇ ನಮ್ಮ ಬದುಕು ಸುಸೂತ್ರವಾಗಿ ನಡೆಯುತ್ತದೆ. ಇಲ್ಲವಾದಲ್ಲಿ ನಮ್ಮ ಬದುಕೇ ದುರ್ಭರವಾಗಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ವ್ಯಕ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ಜಯಿಸುವ ಬಗ್ಗೆ ಆಚಾರ್ಯ ಚಾಣಕ್ಯ ಹೀಗೆ ಹೇಳಿದ್ದಾರೆ. ಇದರ ಬಗ್ಗೆ ಒಂದು ಸುಂದರ ಶ್ಲೋಕವೂ ಇದೆ:

ಲುಬ್ಧಬರ್ಥೇನ ಗೃಹ್ಣೀಯಾತ್ ಸ್ತಬ್ಧಬಂಜಲಿಕರ್ಮಣಾ, ಮೂರ್ಖಃ ಛನ್ದಾನುವೃತ್ತ್ಯಾ ಚ ಯೈಆರ್ಥತ್ವೇನ ಪಂಡಿತಮಃ

ಬುದ್ಧಿವಂತನನ್ನು ಹೇಗೆ ಜಯಿಸಬೇಕು?

ಚಾಣಕ್ಯ ನೀತಿಯ ಪ್ರಕಾರ ಬುದ್ಧಿವಂತ ಮನುಷ್ಯನನ್ನು ವಶಪಡಿಸಿಕೊಳ್ಳಬೇಕು, ಜಯಿಸಬೇಕು ಎಂದಾದರೆ ಅದು ಎಲ್ಲಕ್ಕಿಂತ ದೊಡ್ಡ ಕಷ್ಟದ ಕೆಲಸವಾಗಿಬಿಡುತ್ತದೆ. ಆದ್ದರಿಂದ ಯಾವುದೇ ಬುದ್ಧಿವಂತ ವ್ಯಕ್ತಿಯನ್ನು ಜಯಿಸಬೇಕು ಅಂದರೆ ಒಂದೇ ಒಂದು ರೀತಿ ಎಂದರೆ ಅಂತಹ ವ್ಯಕ್ತಿಯ ಎದುರು ಸತ್ಯವನ್ನು ಹೇಳಿಬಿಡಬೇಕು. ಸತ್ಯ ಹೇಳಿ ಅವರನ್ನು ಪ್ರಭಾವಿತರಾಗಿಸಬೇಕು. ಅವರನ್ನು ಸಮ್ಮಾನಿಸುತ್ತಾ ಅವರು ಹೇಳಿದಂತೆ ಕೇಳಿದರೆ ಜಯ ನಿಮ್ಮದಾಗುತ್ತದೆ.

ಮೂರ್ಖನನ್ನು ಹೇಗೆ ಜಯಿಸುವುದು? ಚಾಣಕ್ಯ ಹೇಳುವಂತೆ ಯಾವುದೇ ಮೂರ್ಖನನ್ನು, ಮತಿಹೀನನನ್ನು ವಶಪಡಿಸಿಕೊಳ್ಳಬೇಕು ಅಂದರೆ ಆ ವ್ಯಕ್ತಿಯನ್ನೇ ಪ್ರಶಂಸೆ ಮಾಡಬೇಕು. ಏಕೆಂದರೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬುದನ್ನು ಅರ್ಥೈಸಿಕೊಳ್ಳುವ, ಆ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ ಆ ವ್ಯಕ್ತಿಯಲ್ಲಿ ಇರುವುದಿಲ್ಲ. ತನ್ನನ್ನು ಹೊಗಳುತ್ತಿದ್ದಾರೆ ಎಂದು ಉಬ್ಬಿಹೋಗುತ್ತಾರೆ. ಆವಾಗ ತನ್ನನ್ನು ಯಾರು ಹೊಗಳಿದ್ದಾರೋ ಅವರು ಹೇಳಿದ ಮಾತಿನಂತೆಯೇ ಕೆಲಸ ಮಾಡುತ್ತಾರೆ. ಅಲ್ಲಿಗೆ ಅವರು ನಮ್ಮ ವಶವಾದರು ಎಂದೇ ಅರ್ಥ.

ದುರಾಸೆಯ ವ್ಯಕ್ತಿಯನ್ನು ಜಯಿಸುವುದು ಹೇಗೆ? ದುರಾಸೆಯ ವ್ಯಕ್ತಿಯನ್ನು ಜಯಿಸುವುದು ಹೇಗೆ ಎಂಬುದರ ಬಗ್ಗೆಯೂ ಚಾಣಕ್ಯ ಸೂಕ್ಷ್ಮವಾಗಿ ಹೇಳಿದ್ದಾರೆ. ವಾಸ್ತವವಾಗಿ ದುರಾಸೆಯ ವ್ಯಕ್ತಿಯನ್ನು ಸುಲಭವಾಗಿ ಜಯಿಸಬಹುದಂತೆ. ದುಡ್ಡು ಕೊಟ್ಟುಬಿಟ್ಟರೆ ಆ ವ್ಯಕ್ತಿ ಸುಲಭವಾಗಿ ನಿಮ್ಮ ವಶವಾಗಿಬಿಡುತ್ತಾರೆ. ನೀವು ಹೇಳಿದ ಕೆಲಸವನ್ನು ಅವರು ಮಾಡಿಕೊಡುತ್ತಾರೆ. ಹಾಗಂತ ಕೇವನ ದುಡ್ಡನ್ನಷ್ಟೇ ಕೊಟ್ಟು ವಶ ಮಾಡಿಕೊಳ್ಳಬೇಕು ಅಂತೇನೂ ಇಲ್ಲ. ಹಣದ ಬದಲಿಗೆ ಅಮೂಲ್ಯ ವಸ್ತುಗಳನ್ನು ನೀಡಿದರೂ ಸಾಕಾದೀತು. ಆದರೆ ಅಂತಹ ದುರಾಸೆಯ ಮನುಷ್ಯನಿಗೆ ಯಾವ ವಸ್ತುವಿನ ಮೇಲೆ ಆಸೆಯಿದೆ ಎಂಬುದು ತಿಳಿದಿರಬೇಕು. ಇದರ ಬಳಕೆ ಪ್ರಸ್ತುತ ಹೆಚ್ಚಾಗಿ ಆಗುತ್ತಿದೆ.

ಕೋಪಿಷ್ಠರನ್ನುಜಯಿಸುವುದು ಹೇಗೆ? ಚಾಣಕ್ಯ ಹೇಳಿದಂತೆ ಕೋಪ ಸ್ವಭಾವದ ವ್ಯಕ್ತಿಗಳನ್ನು ಜಯಿಸಬೇಕು ಅಂದರೆ ಅವರ ಕೋಪವನ್ನು ಸಹಿಸಿಕೊಳ್ಳಬೇಕು. ಇಂತಹವರನ್ನೂ ಸುಲಭವಾಗಿ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಹುದು. ಏಕೆಂದರೆ ಈಗ ಯಾರೂ ಯಾರೊಬ್ಬರ ಕೋಪವನ್ನು ಸಹಿಸಿಕೊಳ್ಳಲಾರರು. ಪರಿಸ್ಥಿತಿ ಹೀಗಿರುವಾಗ ಯಾರಾದರೊಬ್ಬರು ಎದುರಿಗಿನ ವ್ಯಕ್ತಿಯ ಕೋಪವನ್ನು ಸಹಿಸಿಕೊಂಡುಬಿಟ್ಟರೆ ವಾಸ್ತವವಾಗಿ ಆ ವ್ಯಕ್ತಿ ನಿಧಾನಕ್ಕೆ ನಿಮ್ಮೆಡೆ ಆಕರ್ಷಿತನಾಗಿ ನಿಮ್ಮ ವಶವಾಗುತ್ತಾರೆ. ಏಕೆಂದರೆ ಕೋಪವೇ ಅವರ ದೌರ್ಬಲ್ಯವಾಗಿರುತ್ತದೆ. ಅಂತಹ ಕೋಪವನ್ನೇ ಸಹಿಸಿಕೊಂಡುಬಿಟ್ಟರೆ ಎದುರಿಗಿನ ವ್ಯಕ್ತಿ ಮಗುವಂತಾಗಿ ಬಿಡುತ್ತಾರೆ. ಇನ್ನೇನು ಉಳಿದಿದೆ.. ಜಯವಷ್ಟೇ ನಿಮ್ಮದು. ತಡವೇಕೆ.. ಚಾಣಕ್ಯನ ಈ ನಿಯಮಗಳನ್ನು ಅನುಸರಿಸಿ ಸಾಕು.

(chanakya niti secrets of how to control people your own way)

ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ