Chanakya Niti: ಸಂಗಾತಿ ಆಯ್ಕೆಯಲ್ಲಿ ಗೊಂದಲ ಬೇಡ; ಈ ಅಂಶಗಳ ಬಗ್ಗೆ ಗಮನವಿರಲಿ

| Updated By: Skanda

Updated on: Sep 01, 2021 | 6:55 AM

ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ತಾಳ್ಮೆ ಎಂಬ ವಿಚಾರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಒಬ್ಬರ ಕೈ ಹಿಡಿಯುವ ಮುನ್ನ ಬಾಕಿ ವಿಚಾರಗಳ ಜತೆ ತಾಳ್ಮೆ ಎಂಬ ಗುಣ ಹೇಗಿದೆ ಎಂದು ಪರೀಕ್ಷಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ತನ್ನ ಸಂಗಾತಿಯೊಂದಿಗೆ ನಿಲ್ಲುವವರಿಂದ ಮಾತ್ರ ವೈವಾಹಿಕ ಜೀವನವು ಸಂತೋಷವಾಗಿ ಉಳಿಯುತ್ತದೆ.

Chanakya Niti: ಸಂಗಾತಿ ಆಯ್ಕೆಯಲ್ಲಿ ಗೊಂದಲ ಬೇಡ; ಈ ಅಂಶಗಳ ಬಗ್ಗೆ ಗಮನವಿರಲಿ
ಚಾಣಕ್ಯ ನೀತಿ
Follow us on

ಭಾರತೀಯ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯರನ್ನು ಪೂಜನೀಯ ಸ್ಥಾನದಲ್ಲಿ ನೋಡಲಾಗುತ್ತದೆ. ನೈತಿಕ ವಿಚಾರಗಳಿಂದ ಹಿಡಿದು ಬದುಕಿನ ಹಲವು ತತ್ವಗಳಿಗೆ ದಾರಿಯಾಗುವ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಚಾಣಕ್ಯರ ತಂತ್ರದಿಂದಾಗಿಯೇ ಚಂದ್ರಗುಪ್ತ ಮೌರ್ಯರನ್ನು ಭಾರತದ ಚಕ್ರವರ್ತಿಯನ್ನಾಗಿಸಲಾಯಿತು ಎನ್ನುವುದು ಗುಪ್ತ ಸಂಗತಿಯೇನಲ್ಲ. ಬದುಕಿನಲ್ಲಿ ಹೇಗೆ ಯಶಸ್ವಿಯಾಗಬೇಕೆಂಬ ಒಳಗುಟ್ಟುಗಳನ್ನು ತಿಳಿಸುವ ಚಾಣಕ್ಯ ನೀತಿ ಇದೇ ಕಾರಣಕ್ಕಾಗಿ ಜನಪ್ರಿಯವಾಗಿದೆ. ಕೌಟಿಲ್ಯ ಹಾಗೂ ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧರಾದ ಚಾಣಕ್ಯರ ಕೃತಿಗಳನ್ನು 21ನೇ ಶತಮಾನದಲ್ಲೂ ಇಷ್ಟಪಡಲು ಕಾರಣ ಅವುಗಳಲ್ಲಿರುವ ಜ್ಞಾನ ಸಂಪತ್ತು. ಚಾಣಕ್ಯರನ್ನು ಓರ್ವ ಮಹಾನ್ ಇತಿಹಾಸಕಾರ, ಶ್ರೇಷ್ಠ ರಾಜಕಾರಣಿ ಮತ್ತು ಮಹಾನ್ ರಾಜತಾಂತ್ರಿಕ ಎಂದು ಪರಿಗಣಿಸಲಾಗಿದ್ದು, ಆರ್ಥಿಕತೆ, ಸಾಮಾಜಿಕ ನೀತಿ, ರಾಜತಾಂತ್ರಿಕತೆಯಂತಹ ಗಂಭೀರ ವಿಚಾರಗಳ ಜತೆಗೆ, ಜೀವನ ನೀತಿಗೆ ಸಂಬಂಧಿಸಿದ ಕೆಲ ಮಾತುಗಳನ್ನೂ ಅವರು ಹೇಳಿದ್ದಾರೆ.

ಆಚಾರ್ಯ ಚಾಣಕ್ಯರ ನೀತಿಗಳು ಯಾವಾಗಲೂ ತರ್ಕಬದ್ಧವಾಗಿರುತ್ತವೆ ಎನ್ನುವುದೂ ಜನಪ್ರಿಯತೆಗೆ ಒಂದು ಕಾರಣ. ಆಚಾರ್ಯರು ತಮ್ಮ ನೀತಿಗಳ ಮೂಲಕ ಜೀವನಕ್ಕೆ ಬೇಕಾದ ಅನೇಕ ನೀತಿಗಳನ್ನು ಹೇಳಿದ್ದಾರೆ. ಇಂದಿನ ತರಾತುರಿ ಜೀವನದಲ್ಲಿ ಅದನ್ನೆಲ್ಲಾ ತಿಳಿಯುವುದಕ್ಕೆ ಸಂಯಮ ಇಲ್ಲದಂತಾಗಿರುವುದರಿಂದ ಎಷ್ಟೋ ಅಮೂಲ್ಯ ವಿಚಾರಗಳಿಂದ ಸಮಾಜ ವಂಚಿತವಾಗುತ್ತಿದೆ. ಆದರೆ, ಕೊಂಚ ಬಿಡುವು ನೀಡಿ ಅವರ ನೀತಿಗಳನ್ನು ತಿಳಿದು ಅಳವಡಿಸಿಕೊಂಡರೆ ಅವು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತವೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.

ಇಂದು ಈ ಲೇಖನದಲ್ಲಿ ಆಚಾರ್ಯ ಚಾಣಕ್ಯರ ನೀತಿಯ ಬಗ್ಗೆ ಒಂದಷ್ಟು ಅಂಶಗಳನ್ನು ತಿಳಿಸಲಾಗಿದೆ. ಬದುಕಿನ ಮುಖ್ಯ ಭಾಗವೆಂದು ಪರಿಗಣಿಸಲ್ಪಟ್ಟ ವೈವಾಹಿಕ ಜೀವನದ ಬಗ್ಗೆ ಇಲ್ಲಿ ಹೇಳಲಾಗಿದೆ. ನೀವು ಯಾರನ್ನು ಮದುವೆಯಾಗುತ್ತೀರೋ, ಅವರೊಳಗೆ ಕೆಲವು ವಿಶೇಷ ಗುಣಗಳನ್ನು ಪರೀಕ್ಷಿಸಬೇಕು. ಇದರಿಂದ ನಿಮ್ಮ ಜೀವನವು ಸಂತೋಷವಾಗಿರಲಿದೆ ಎಂದು ಚಾಣಕ್ಯ ಹೇಳಿದ್ದಾರೆ.

ಆಚಾರ್ಯ ಚಾಣಕ್ಯ ತನ್ನ ನೀತಿಯ ಮೂಲಕ ಕೆಲವು ಮುಖ್ಯ ಅಂಶಗಳನ್ನು ಹೇಳಿದ್ದಾರೆ:

ಮುಖದ ಸೌಂದರ್ಯ ಮಾತ್ರ ಎಲ್ಲವೂ ಅಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಮುಖವನ್ನು ನೋಡಿ ಒಬ್ಬರನ್ನು ಪ್ರೀತಿ ಮಾಡಿದರೆ ಅಥವಾ ಮದುವೆಯಾದರೆ, ಅದು ನಿಮ್ಮ ಜೀವನದ ದೊಡ್ಡ ತಪ್ಪು ಹೆಜ್ಜೆ ಆಗುತ್ತದೆ. ನೀವು ಮದುವೆಯಾಗುವುದಾದರೆ ಸಂಗಾತಿಯ ಮನಸ್ಸಿನ ಸೌಂದರ್ಯ ಮತ್ತು ಗುಣಗಳನ್ನು ನೋಡಬೇಕೇ ಹೊರತು ಬಾಹ್ಯ ಸೌಂದರ್ಯವನ್ನಲ್ಲ.

ಗುಣ, ಸಂಸ್ಕಾರ ರೂಪಕ್ಕಿಂತ ಮುಖ್ಯವಾಗಿದೆ. ಏಕೆಂದರೆ ಸೌಂದರ್ಯವು ಸ್ವಲ್ಪ ಸಮಯದ ನಂತರ ಹೋಗುತ್ತದೆ. ಆದರೆ ಆಚರಣೆಗಳ ಮೂಲಕ, ಒಬ್ಬ ವ್ಯಕ್ತಿ ಗಳಿಸಿಕೊಂಡ ಸಂಸ್ಕಾರ ಕೊನೆಯ ಉಸಿರಿನ ತನಕವೂ ನೆಲೆಸಿರುತ್ತದೆ. ಸುಸಂಸ್ಕೃತರೊಂದಿಗೆ ಬಾಳ್ವೆ ನಡೆಸಿದಾಗ ಮನೆ ಸ್ವರ್ಗವಾಗುತ್ತದೆ.

ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ತಾಳ್ಮೆ ಎಂಬ ವಿಚಾರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಒಬ್ಬರ ಕೈ ಹಿಡಿಯುವ ಮುನ್ನ ಬಾಕಿ ವಿಚಾರಗಳ ಜತೆ ತಾಳ್ಮೆ ಎಂಬ ಗುಣ ಹೇಗಿದೆ ಎಂದು ಪರೀಕ್ಷಿಸಬೇಕು. ಏಕೆಂದರೆ ತುರ್ತು ಪರಿಸ್ಥಿತಿಯಲ್ಲಿ ತನ್ನ ಸಂಗಾತಿಯೊಂದಿಗೆ ನಿಲ್ಲುವವರಿಂದ ಮಾತ್ರ ವೈವಾಹಿಕ ಜೀವನವು ಸಂತೋಷವಾಗಿ ಉಳಿಯುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ವ್ಯಕ್ತಿಯ ದೊಡ್ಡ ಶತ್ರುವೇ ಅವರ ಕೋಪ ಎಂದು ಹೇಳಲಾಗುತ್ತದೆ. ಕೋಪವನ್ನು ನಿಯಂತ್ರಿಸಲಾಗದವರು ತಮ್ಮ ವೈವಾಹಿಕ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಮೂಗಿನ ತುದಿಯಲ್ಲೇ ಕೋಪ ಹೊಂದಿದವರು ಕುಟುಂಬವನ್ನು ನಿಭಾಯಿಸಲಾರರು. ಶಿವ ಪುರಾಣದಲ್ಲಿ ಪಾರ್ವತಿಯು ಕೋಪಗೊಂಡಾಗ ಅವಳು ಶಿವನನ್ನು ಕೊಂದಳು ಎಂಬ ಕೋಪವೊಂದಿದೆ. ಅಂತೆಯೇ ಮಹಾಭಾರತದಲ್ಲಿ, ಅಂಬಾಳ ಕೋಪವು ದೊಡ್ಡ ಯುದ್ಧವನ್ನು ಉಂಟುಮಾಡಿತು ಎಂದು ಹೇಳಲಾಗುತ್ತದೆ. ಇವು ಪುರಾಣ ಕತೆಗಳಾದರೂ ಅವುಗಳು ಹೇಳುವ ವಿಚಾರ ಇಂದಿಗೂ ಅನ್ವಯ ಎಂದು ಚಾಣಕ್ಯ ತಿಳಿಸಿದ್ದಾರೆ.

(Chanakya Niti Things need to be followed while selecting Life Partner)

ಇದನ್ನೂ ಓದಿ:
Chanakya Niti: ಇಂತಹ ಜೀವನ ಸಿಕ್ಕವರು ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ; ಚಾಣಕ್ಯ ನೀತಿ ಇಲ್ಲಿದೆ 

Chanakya Niti: ಹಣ ನಿರ್ವಹಣೆಯ 5 ವಿಷಯಗಳನ್ನು ತಿಳಿದವರು ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಿಸುವುದಿಲ್ಲ – ಚಾಣಕ್ಯ ನೀತಿ