Crow -ಕಾಗೆ: ಎಲ್ಲರಿಗೂ ಗೊತ್ತು, ಆದರೆ ಬಹುತೇಕ ಯಾರಿಗೂ ತಿಳಿಯದ ಸ್ವಾರಸ್ಯಕರ ವಿಷಯಗಳು ಇಲ್ಲಿವೆ!

ಪಾಶ್ಚಾತ್ಯ ದೇಶಗಳಲ್ಲಿ ಮನೆಯಲ್ಲಿ ಸಾವಿನ ನಂತರ 12 ದಿನದೊಳಗೆ ಕಾಗೆ ಮನೆಯ ಎದುರು, ಕಿಟಕಿ ಮೇಲೆ, ಬಾಗಿಲಲ್ಲಿ, ಉಯ್ಯಾಲೆ ಮೇಲೆ ಬಂದು ಕೂತರೆ/ಕೂಗಿದರೆ... ಆ ಮನೆಯಲ್ಲಿ ಸತ್ತ ವ್ಯಕ್ತಿ ಪುನರ್ಜನ್ಮ ಹೊಂದಿದ್ದಾನೆ ಎಂಬ ನಂಬಿಕೆಯೂ ಇದೆ.

Crow -ಕಾಗೆ: ಎಲ್ಲರಿಗೂ ಗೊತ್ತು, ಆದರೆ ಬಹುತೇಕ ಯಾರಿಗೂ ತಿಳಿಯದ ಸ್ವಾರಸ್ಯಕರ ವಿಷಯಗಳು ಇಲ್ಲಿವೆ!
ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಬಿಟ್ಟರೆ ಪಕ್ಷಿಗಳಲ್ಲಿ ಕಾಗೆಯೇ ಶ್ರೇಷ್ಠ.Image Credit source: animalia.bio
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 05, 2022 | 3:54 PM

ಕಾಗೆ ಯಾರಿಗೆ ಗೊತ್ತಿಲ್ಲ ಹೇಳಿ. ಪುರಾಣಗಳ ಕಾಲದಿಂದ ಇಂದಿನವರೆಗೂ ಕಾಗೆಗೆ ಮಹತ್ವದ ಸ್ಥಾನಮಾನ ನೀಡಲಾಗಿದೆ. ಆದರೂ ಜನರಲ್ಲಿ ಅದರ ಬಗ್ಗೆ ಅಸಡ್ಡೆ. ಕಾಗೆ ಅಂದ್ರೆ ಅಸಹ್ಯ. ಆದರೆ ಸುವಿಖ್ಯಾತ ಬರಹಗಾರ, ಮೈಸೂರಿನ ಆರ್ ಕೆ​ ಲಕ್ಷಣ್ (R K Laxman) ಅವರಿಗೆ ಕಾಗೆ ಅಂದರೆ ಅಚ್ಚುಮೆಚ್ಚು. ಅವರಿಗೆ ಈ common crow ​ಬಗ್ಗೆ ಎಲ್ಲಿಲ್ಲದ ಪ್ರೀತಿ. ಪರಿಸ್ಥಿತಿ ಹೀಗಿರುವಾಗ ಬಹುತೇಕ ಯಾರಿಗೂ ಅಷ್ಟಾಗಿ ತಿಳಿಯದ ಕಾಗೆ ಕುರಿತಾದ ಸ್ವಾರಸ್ಯಕರ ವಿಷಯಗಳು ಇಲ್ಲಿವೆ!

  1. * ಕಾಗೆಗಳು ಸಾಮಾನ್ಯವಾಗಿ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಸುಮಾರು 3-7 ಮೊಟ್ಟೆಗಳನ್ನು ಒಮ್ಮೆಗೆ ಇಡುತ್ತದೆ.
  2. * ಮರಿ ಕಾಗೆಗಳು ಹಾರಲು ಶುರು ಮಾಡಿದ ಮೇಲೆ, ತಂದೆ ತಾಯಿಗೆ ಗೂಡನ್ನು ಕಾಯುವುದು ಮತ್ತು ಹೊಸ ಮರಿಗಳನ್ನು (ಸ್ವಂತ ತಮ್ಮ, ತಂಗಿಯರನ್ನು) ನೋಡಿಕೊಳ್ಳಲು ಬಹಳ ಸಹಾಯ ಮಾಡುತ್ತವೆ. ತಂದೆ ತಾಯಿ ಆಹಾರ ಒದಗಿಸಿದರೆ ಕೆಲವು ಬಾರಿ ತಮ್ಮ ತಂಗಿಯರಿಗೆ ತಾವೇ ತಿನಿಸುವುದನ್ನು ಗಮನಿಸಲಾಗಿದೆ. ಈ ಮಾದರಿ ಸುಮಾರು 5 ವರುಷದವರೆಗೂ ಮುಂದುವರಿಸುತ್ತವೆ.
  3. * ಒಂದು ಕಾಗೆ ಸತ್ತರೆ ಅದರ ಸುತ್ತಲೂ ಹಲವು ಕಾಗೆಗಳು ಕೂಗುತ್ತವೆ. ಇದು ಸತ್ತ ಕಾಗೆ ಕೊಡುವ ಗೌರವವೂ ಹೌದು ಮತ್ತು ಬೇರೆ ಕಾಗೆಗಳಿಗೆ ಸಾವಿನ ಹಿಂದಿರುವ ಪರಿಸ್ಥಿತಿಯ ಬಗ್ಗೆ ಕೊಡುವ ಎಚ್ಚರವೂ ಹೌದು. ಸತ್ತ ಕಾಗೆಯ ಸುತ್ತಲಿನ ಪರಿಸರವನ್ನು ತುಂಬಾ ಆಳವಾಗಿ ತನಿಖೆ ಮಾಡುತ್ತವೆ ಮತ್ತು ಸಾಮಾನ್ಯವಾಗಿ ಆ ಪರಿಸರವನ್ನು ಭವಿಷ್ಯದಲ್ಲಿ ಪ್ರವೇಶಿಸಲು ಹಿಂಜರಿಯುತ್ತವೆ.
  4. * ಕಾಗೆಗಳು ಎಷ್ಟು ಬುದ್ಧಿಶಾಲಿಗಳೆಂದರೆ ಅವುಗಳನ್ನು feathered apes (ಆಕಾಶದ ಮಂಗಗಳು) ಎಂದು ಕರೆಯುತ್ತಾರೆ.
  5. * ಕಾಗೆಗಳಿಗೆ ಪಕ್ಷಿ ಸಂಕುಲದಲ್ಲೇ ದೊಡ್ಡ ಗಾತ್ರದ ಮೆದುಳಿ ಇದೆ (ದೇಹದ ಅನುಪಾತಕ್ಕೆ ಅನುಗುಣವಾಗಿ). ಅವುಗಳಿಗೆ ಮುಂಭಾಗದ ಮೆದುಳಿನಲ್ಲಿ ನ್ಯೂರೋನ್ಗಳು ಹೇರಳವಾಗಿವೆ. ಆದ್ದರಿಂದ ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಬಿಟ್ಟರೆ ಪಕ್ಷಿಗಳಲ್ಲಿ ಕಾಗೆಯೇ ಶ್ರೇಷ್ಠ.
  6. * ಕಾಗೆಗಳು ಸುಮಾರು 20 ತರಹದ ಧ್ವನಿಯನ್ನು ಹೊರಡಿಸಬಲ್ಲದು. ಒಂದು ಪ್ರದೇಶದ ಕಾಗೆಗಳ accent ಮತ್ತೊಂದು ಪ್ರದೇಶದ ಕಾಗೆಗಳ accent ಬೇರೆ ಬೇರೆ ಇರುತ್ತದೆ. ಕೇಳಲು ಒಂದೇ ಮಾದರಿಯಲ್ಲಿದ್ದರೂ ಅವುಗಳ ಶಬ್ಧ ತರಂಗಗಳಲ್ಲಿ ವ್ಯತ್ಯಾಸವಿರುತ್ತದೆ. ಮನುಷ್ಯರಲ್ಲಿಯೂ ಹಾಗೆಯೇ ಅಲ್ಲವೇ!?
  7. * ಕಾಗೆಗಳು ಮನುಷ್ಯರ ಮುಖ ಮತ್ತು ಧ್ವನಿಯನ್ನು ತುಂಬಾ ಚೆನ್ನಾಗಿ ಗುರುತು ಹಿಡಿಯಬಲ್ಲವು. ಕಾಗೆಗಳ ಜೊತೆ ವೈರತ್ವ ಒಳ್ಳೆಯದಲ್ಲ, ಒಂದು ಅಧ್ಯಯನದ ಪ್ರಕಾರ ಯಾವ ವ್ಯಕ್ತಿಯನ್ನು ಕಾಗೆಗಳು ಅಪಾಯಕಾರಿ ಎಂದು ಗುರುತಿಸುತ್ತವೋ ಆ ವ್ಯಕ್ತಿಯನ್ನು 5 ವರುಷದ ನಂತರವೂ ಗುರುತುಹಿಡಿಯಬಲ್ಲವು ಮತ್ತು ಅವುಗಳು ತಮ್ಮ ಮುಂದಿನ ತಲೆಮಾರಿಗೂ ಈ ವಿಷಯವನ್ನು ಹಂಚಿಕೊಳ್ಳಬಲ್ಲವು.
  8. * New Caledonian crow (Corvus moneduloides) ಎಂಬ ಕಾಗೆಯು ಹುಳ ಹಪ್ಪಟೆಗಳನ್ನು ಸಣ್ಣ ರಂಧ್ರಗಳಿಂದ ಹೊರತೆಗೆಯಲು ಒಂದು J ಹುಕ್ಕನ್ನು (tool) ಕಡ್ಡಿಗಳಿಂದ ಮಾಡಿಕೊಳ್ಳುತ್ತದೆ. ಹೊಸ ಉಪಕರಣವನ್ನು ಮಾಡಿಕೊಂಡು ಅದನ್ನು ಬಳಸುವ ಮನೋಶಕ್ತಿ ಇರುವ ಪ್ರಪಂಚದ ಏಕೈಕ ಪಕ್ಷಿ ಈ ಕಾಗೆ. ಅದನ್ನು ಬಿಟ್ಟರೆ ಮೊದಲನೆಯದು (Homo sapiens) ಅಂದರೆ ನಾವು ಮನುಷ್ಯರು, ಜೊತೆಗೆ ಕೆಲವು ಮಂಗಗಳು.
  9. * ಯೂರೋಪಿನಲ್ಲಿ ಕಾಗೆಯನ್ನು spirit animal ಎಂದು ಕರೆಯುತ್ತಾರೆ. ಮನುಷ್ಯ ಸತ್ತನಂತರ ಅವನ ಆತ್ಮವನ್ನು ಪುನರ್ಜನ್ಮದ ಕಡೆಗೆ ಕರೆದೊಯ್ಯುವ ಪಕ್ಷಿ ಎಂದು ನಂಬುತ್ತಾರೆ.
  10. * ಪಾಶ್ಚಾತ್ಯ ದೇಶಗಳಲ್ಲಿ ಮನೆಯಲ್ಲಿ ಸಾವಿನ ನಂತರ 12 ದಿನದೊಳಗೆ ಕಾಗೆ ಮನೆಯ ಎದುರು, ಕಿಟಕಿ ಮೇಲೆ, ಬಾಗಿಲಲ್ಲಿ, ಉಯ್ಯಾಲೆ ಮೇಲೆ ಬಂದು ಕೂತರೆ/ಕೂಗಿದರೆ… ಆ ಮನೆಯಲ್ಲಿ ಸತ್ತ ವ್ಯಕ್ತಿ ಪುನರ್ಜನ್ಮ ಹೊಂದಿದ್ದಾನೆ ಎಂಬ ನಂಬಿಕೆಯೂ ಇದೆ. (ಸಂಗ್ರಹ-ನಿತ್ಯಸತ್ಯ)
  11. * ಓದುಗರಾದ Sildanfernandes Fernandes ಅವರು ತಿಳಿಸಿದಂತೆ… ಆಹಾರವನ್ನು ಹಂಚಿಕೊಂಡು ತಿನ್ನುವ ಗುಣದಲ್ಲಿ ಕಾಗೆಗಳು ಮುನುಷ್ಯರಿಗಿಂತಾ ಸಾವಿರಪಾಲು ವಿಶಾಲ ಮನೋಭಾವ ಹೊಂದಿವೆ. ಕಾಗೆ ಬಳಗ ಅನ್ನುವ ಹಾಗೆ… ಅದು ತನ್ನ ಇಡೀ ಬಳಗವನ್ನು ಕೂಗಿ ಕೂಗಿ ಹಂಚಿ ತಿನ್ನುತ್ತದೆ.

Published On - 3:29 pm, Mon, 5 September 22

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ