Sign In

By signing in or creating an account, you agree with Associated Broadcasting Company's Terms & Conditions and Privacy Policy.

Allu Arjun: ಪುತ್ರಿ ಜತೆ ಬಂದು ಗಣೇಶ ವಿಸರ್ಜನೆಯಲ್ಲಿ ಡ್ಯಾನ್ಸ್​ ಮಾಡಿದ ಅಲ್ಲು ಅರ್ಜುನ್​; ವಿಡಿಯೋ ನೋಡಿ

Allu Arjun Allu Arha Viral Video: ಅಲ್ಲು ಅರ್ಜುನ್​ ಮಗಳ ಈ ವಿಡಿಯೋ ವೈರಲ್​ ಆಗುತ್ತಿದೆ. ಕ್ಯೂಟ್​ ಆಗಿ ಕಾಣಿಸಿಕೊಂಡ ಅಲ್ಲು ಅರ್ಹಾಗೆ ಎಲ್ಲರೂ ಹಬ್ಬದ ಶುಭಾಶಯ ಕೋರುತ್ತಿದ್ದಾರೆ.

Allu Arjun: ಪುತ್ರಿ ಜತೆ ಬಂದು ಗಣೇಶ ವಿಸರ್ಜನೆಯಲ್ಲಿ ಡ್ಯಾನ್ಸ್​ ಮಾಡಿದ ಅಲ್ಲು ಅರ್ಜುನ್​; ವಿಡಿಯೋ ನೋಡಿ
ಅಲ್ಲು ಅರ್ಜುನ್, ಅಲ್ಲು ಅರ್ಹಾ
Follow us
TV9 Web
| Updated By: ಮದನ್​ ಕುಮಾರ್​

Updated on:Sep 06, 2022 | 12:03 PM

ಗಣೇಶ ಚತುರ್ಥಿ ಹಬ್ಬವನ್ನು (Ganesh Chaturthi 2022) ಸಡಗರದಿಂದ ಆಚರಿಸಲಾಗಿದೆ. ಪ್ರತಿ ಗಲ್ಲಿಯಲ್ಲೂ ಗಣಪತಿ ಮೂರ್ತಿ ಕೂರಿಸಿ ಹಬ್ಬ ಮಾಡಲಾಗಿದೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಏನೋ ಒಂಥರಾ ಜೋಶ್​ ಇರುತ್ತದೆ. ಎಲ್ಲರೂ ಜೊತೆಯಾಗಿ ಸೇರಿ ಇದರಲ್ಲಿ ಭಾಗಿ ಆಗುತ್ತಾರೆ. ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ವರ್ಷದ ಹಬ್ಬವನ್ನು ಸಂಭ್ರಮಿಸಿದ್ದಾರೆ. ಟಾಲಿವುಡ್​ ಸ್ಟಾರ್​ ನಟ ಅಲ್ಲು ಅರ್ಜುನ್​ (Allu Arjun) ಕೂಡ ಈ ಸಡಗರದಲ್ಲಿ ಭಾಗಿ ಆಗಿದ್ದಾರೆ. ಗಣೇಶ ವಿಸರ್ಜನೆ ವೇಳೆ ಅವರು ಮಗಳು ಅಲ್ಲು ಅರ್ಹಾ (Allu Arha) ಜೊತೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಅಭಿಮಾನಿಗಳು ಇದನ್ನು ನೋಡಿ ಖುಷಿಪಟ್ಟಿದ್ದಾರೆ. ನಾನಾ ಬಗೆಯ ಕಮೆಂಟ್​ಗಳ ಮೂಲಕ ಜನರ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಪುತ್ರಿ ಅರ್ಹಾಳ ಫೋಟೋ ಮತ್ತು ವಿಡಿಯೋಗಳನ್ನು ಅಲ್ಲು ಅರ್ಜುನ್ ಅವರು ಆಗಾಗ ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಗಣೇಶ ವಿಸರ್ಜನೆಯ ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಜೊತೆ ಸೇರಿ ಅವರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದಾರೆ. ತೆಂಗಿನ ಕಾಯಿ ಒಡೆದು, ಗಣಪತಿ ಬಪ್ಪ ಮೋರ್ಯ ಎಂದು ಜೈಕಾರ ಕೂಗಿ ಇಡೀ ವಾತಾವರಣಕ್ಕೆ ಅವರು ಹೊಸ ರಂಗು ತುಂಬಿದ್ದಾರೆ. ಮಗಳನ್ನು ಎತ್ತಿಕೊಂಡು ಡ್ಯಾನ್ಸ್​ ಮಾಡಿದ್ದಾರೆ. ಡೋಲು, ತಮಟೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್​ ಮಾಡುವಂತೆ ಮಗಳಿಗೂ ಪ್ರೋತ್ಸಾಹ ನೀಡಿದ್ದಾರೆ.

ಇದನ್ನೂ ಓದಿ
Image
Ganesh Chaturthi: ‘ಕನ್ನಡದ ಕೋಟ್ಯಧಿಪತಿ’ ಗೆಟಪ್​ನಲ್ಲಿ ಅಪ್ಪು ಪ್ರತಿಮೆ; ಹಾಟ್​ ಸೀಟ್​ನಲ್ಲಿ ಕುಳಿತ ಗಣಪ
Image
Ganesh Chaturthi: ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್​ ಕುಂದ್ರಾ; ಕುಂಟುತ್ತಿರುವ ಶಿಲ್ಪಾ ಶೆಟ್ಟಿ
Image
Puneeth Rajkumar: ಪುನೀತ್ ರಾಜ್​ಕುಮಾರ್ ಹೆಗಲಮೇಲೆ ಕೈ ಹಾಕಿ ನಿಂತ ಗಣಪ; ಮಣ್ಣಿನಲ್ಲಿ ಅರಳಿದ ಅಪ್ಪುಗೆ ಭಾರೀ ಬೇಡಿಕೆ
Image
Puneeth Rajkumar: ಕಲಾವಿದನ ಕಲ್ಪನೆಯಲ್ಲಿ ಪುನೀತ್​-ಗಣಪ; ‘ನಮ್ಮ ಪಾಲಿಗೆ ದೇವರು ಇಲ್ಲ’ ಎಂದ ಫ್ಯಾನ್ಸ್​

ಹಬ್ಬದಲ್ಲಿ ಭಾಗಿ ಆಗಬೇಕು ಎಂಬುದನ್ನು ಪುತ್ರಿಗೆ ಕಲಿಸಿಕೊಟ್ಟ ಅವರ ಗುಣವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಅರ್ಹಾ ಸೆಲೆಬ್ರಿಟಿ ಕಿಡ್​ ಆಗಿದ್ದರೂ ಕೂಡ ಆಕೆ ಜನರ ಜೊತೆ ಬೆರೆಯುವಂತೆ ಅಲ್ಲು ಅರ್ಜುನ್​ ವಾತಾವರಣ ಕಲ್ಪಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಈ ವಿಡಿಯೋ ವೈರಲ್​ ಆಗುತ್ತಿದೆ. ಕ್ಯೂಟ್​ ಆಗಿ ಕಾಣಿಸಿಕೊಂಡ ಅಲ್ಲು ಅರ್ಹಾಗೆ ಎಲ್ಲರೂ ಹಬ್ಬದ ಶುಭಾಶಯ ಕೋರುತ್ತಿದ್ದಾರೆ.

ಮಗಳನ್ನು ಬಣ್ಣದ ಲೋಕಕ್ಕೆ ಪರಿಚಯಿಸಲು ಅಲ್ಲು ಅರ್ಜುನ್​ ಅವರಿಗೆ ಹೆಚ್ಚು ಆಸಕ್ತಿ ಇದೆ. ಈಗಾಗಲೇ ಆಕೆ ಕ್ಯಾಮೆರಾ ಎದುರಿಸಿದ್ದಾಳೆ. ಸಮಂತಾ ರುತ್​ ಪ್ರಭು ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ತೆಲುಗಿನ ‘ಶಾಕುಂತಲಂ’ ಸಿನಿಮಾದಲ್ಲಿ ಅರ್ಹಾ ಕೂಡ ಒಂದು ಪಾತ್ರ ಮಾಡಿದ್ದಾಳೆ. ಆ ಚಿತ್ರದ ಶೂಟಿಂಗ್​ ಸಂದರ್ಭದಲ್ಲಿ ಅಲ್ಲು ಅರ್ಜುನ್​ ಅವರು ಚಿತ್ರೀಕರಣದ ಸೆಟ್​ಗೆ ಭೇಟಿ ನೀಡಿದ್ದರು. ಮಗಳು ನಟಿಸುವುದನ್ನು ನೋಡಿ ಅವರು ಖುಷಿಪಟ್ಟಿದ್ದರು. ಅಲ್ಲದೇ ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:03 pm, Tue, 6 September 22

ನಮ್ಮ ಹಿರಿಯ ನಾಯಕರಿಗಿರುವಷ್ಟು ತಾಳ್ಮೆ ನಮಗಿಲ್ಲ: ಪ್ರದೀಪ್ ಈಶ್ವರ್
ನಮ್ಮ ಹಿರಿಯ ನಾಯಕರಿಗಿರುವಷ್ಟು ತಾಳ್ಮೆ ನಮಗಿಲ್ಲ: ಪ್ರದೀಪ್ ಈಶ್ವರ್
ಹಲ್ಲೆಗೆ ಮೊದಲು ಭಾಷೆಗೆ ಸಂಬಂಧಿಸಿದ ತಗಾದೆ ಶುರುವಾಗಿದ್ದು ಸತ್ಯ: ಪೊಲೀಸ್
ಹಲ್ಲೆಗೆ ಮೊದಲು ಭಾಷೆಗೆ ಸಂಬಂಧಿಸಿದ ತಗಾದೆ ಶುರುವಾಗಿದ್ದು ಸತ್ಯ: ಪೊಲೀಸ್
ತಮ್ಮ ಸಕ್ಕರೆ ಕಾರ್ಖಾನೆ ಫೈಲನ್ನು ಯತ್ನಾಳ್ ಪೂಜೆ ಮಾಡಿಸಿದ್ದು: ಬಂಗಾರಪ್ಪ
ತಮ್ಮ ಸಕ್ಕರೆ ಕಾರ್ಖಾನೆ ಫೈಲನ್ನು ಯತ್ನಾಳ್ ಪೂಜೆ ಮಾಡಿಸಿದ್ದು: ಬಂಗಾರಪ್ಪ
"ಬ್ಯಾನ್​ ಡ್ರೀಮ್​ 11" ಇಳಕಲ್​ ಸೀರೆ ಮೇಲೆ ನೇಯ್ದು ಮೋದಿಗೆ ಮನವಿ
ವಿರಾಟ್ ಕೊಹ್ಲಿ ಮ್ಯಾಜಿಕಲ್ ಸ್ಪರ್ಶದ ಪ್ರದರ್ಶನಕ್ಕೆ ವೇದಿಕೆ ಸಜ್ಜು
ವಿರಾಟ್ ಕೊಹ್ಲಿ ಮ್ಯಾಜಿಕಲ್ ಸ್ಪರ್ಶದ ಪ್ರದರ್ಶನಕ್ಕೆ ವೇದಿಕೆ ಸಜ್ಜು
ಯತ್ನಾಳ್​ಗೆ ನೀಡಿದ ನೋಟೀಸ್ ಮತ್ತು ಉತ್ತರ ಪಕ್ಷದ ಆಂತರಿಕ ವಿಷಯ: ಶ್ರೀರಾಮುಲು
ಯತ್ನಾಳ್​ಗೆ ನೀಡಿದ ನೋಟೀಸ್ ಮತ್ತು ಉತ್ತರ ಪಕ್ಷದ ಆಂತರಿಕ ವಿಷಯ: ಶ್ರೀರಾಮುಲು
IND vs PAK: ರಾಯಚೂರಿನಲ್ಲಿ ಭಾರತ ತಂಡಕ್ಕೆ ಮಕ್ಕಳ ಶುಭ ಹಾರೈಕೆ
IND vs PAK: ರಾಯಚೂರಿನಲ್ಲಿ ಭಾರತ ತಂಡಕ್ಕೆ ಮಕ್ಕಳ ಶುಭ ಹಾರೈಕೆ
ಕೇರಳ ತಂಡದ ಗೆಲುವಿನ ಹಿಂದಿದೆ ಒಂದು ಕರಾಳ ಕಥೆ..!
ಕೇರಳ ತಂಡದ ಗೆಲುವಿನ ಹಿಂದಿದೆ ಒಂದು ಕರಾಳ ಕಥೆ..!
ಹಣ, ಖ್ಯಾತಿ ಮತ್ತು ಜನಪ್ರಿಯತೆ ಹನುಮಂತನನ್ನು ಬದಲಿಸಿಲ್ಲ
ಹಣ, ಖ್ಯಾತಿ ಮತ್ತು ಜನಪ್ರಿಯತೆ ಹನುಮಂತನನ್ನು ಬದಲಿಸಿಲ್ಲ
ಮುಂಬೈ ಇಂಡಿಯನ್ಸ್ ತಂಡದ ನಾಯಕಿಯ ಕಿವಿ ಮುಚ್ಚಿಸಿದ RCB ಫ್ಯಾನ್ಸ್​..!
ಮುಂಬೈ ಇಂಡಿಯನ್ಸ್ ತಂಡದ ನಾಯಕಿಯ ಕಿವಿ ಮುಚ್ಚಿಸಿದ RCB ಫ್ಯಾನ್ಸ್​..!