Puneeth Rajkumar: ಪುನೀತ್ ರಾಜ್​ಕುಮಾರ್ ಹೆಗಲಮೇಲೆ ಕೈ ಹಾಕಿ ನಿಂತ ಗಣಪ; ಮಣ್ಣಿನಲ್ಲಿ ಅರಳಿದ ಅಪ್ಪುಗೆ ಭಾರೀ ಬೇಡಿಕೆ

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದಿ 10 ತಿಂಗಳು ಕಳೆದಿದೆ. ಅವರಿಲ್ಲ ಎನ್ನುವ ನೋವು ಈಗಲೂ ಎಲ್ಲರನ್ನು ಕಾಡುತ್ತಿದೆ. ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ.

Puneeth Rajkumar: ಪುನೀತ್ ರಾಜ್​ಕುಮಾರ್ ಹೆಗಲಮೇಲೆ ಕೈ ಹಾಕಿ ನಿಂತ ಗಣಪ; ಮಣ್ಣಿನಲ್ಲಿ ಅರಳಿದ ಅಪ್ಪುಗೆ ಭಾರೀ ಬೇಡಿಕೆ
ಪುನೀತ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 30, 2022 | 7:38 AM

ಪ್ರತಿ ವರ್ಷ ಗಣೇಶ ಚತುರ್ಥಿ (Ganesh Chaturthi) ಹಬ್ಬ ಬಂತು ಎಂದರೆ ನಾನಾ ರೀತಿಯ ಗಣಪನ ಮೂರ್ತಿ ಅನಾವರಣಗೊಳ್ಳುತ್ತದೆ. ಗಣಪನ ಮೂರ್ತಿಗೂ ಚಿತ್ರರಂಗಕ್ಕೂ ಒಂದು ನಂಟು ಇದೆ. ಕೆಲವರು ಗಣೇಶನಿಗೆ ಚಿತ್ರರಂಗದ ಟಚ್ ನೀಡುತ್ತಾರೆ. ಸಿನಿಮಾದ ಥೀಮ್ ಇಟ್ಟುಕೊಂಡು ಗಣೇಶನ ವಿಗ್ರಹ ರೆಡಿ ಆದ ಉದಾಹರಣೆ ಸಾಕಷ್ಟಿದೆ. ಈ ಬಾರಿ ಮತ್ತೆ ಗಣೇಶ ಚತುರ್ಥಿ ಬಂದಿದೆ. ಆ ಪ್ರಯುಕ್ತ ಎಲ್ಲ ಕಡೆಗಳಲ್ಲಿ ವಿಘ್ನ ವಿನಾಶಕನ ಮೂರ್ತಿ ರೆಡಿ ಆಗುತ್ತಿದೆ. ಈ ಬಾರಿ ಪುನೀತ್ ರಾಜ್​ಕುಮಾರ್ (Puneeth Rajkumar) ಅವರನ್ನು ನೆನಪಿಸಿಕೊಳ್ಳುತ್ತಾ ಗಣಪತಿ ರೆಡಿ ಮಾಡಲಾಗುತ್ತಿದೆ.

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದಿ 10 ತಿಂಗಳು ಕಳೆದಿದೆ. ಅವರಿಲ್ಲ ಎನ್ನುವ ನೋವು ಈಗಲೂ ಎಲ್ಲರನ್ನು ಕಾಡುತ್ತಿದೆ. ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಅದೇ ರೀತಿ ಕೆಲ ಕಲಾವಿದರು ಪುನೀತ್ ನೆನಪಲ್ಲಿ ಮಣ್ಣಿನಿಂದ ಗಣಪತಿ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ.

ಪವರ್​​ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹೆಗಲ ಮೇಲೆ ಗಣೇಶ ಕೈಹಾಕಿ ನಿಂತಿರುವ ಗಣೇಶನ ಮೂರ್ತಿಯನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಮಾಡಲಾಗಿದ್ದು, ಇದಕ್ಕೆ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ತರೀಕೆರೆ ಪಟ್ಟಣದ ಕುಂಬಾರ ಬೀದಿಯಲ್ಲಿ ಹತ್ತಾರು ವರ್ಷಗಳಿಂದ ನಾನಾ ರೀತಿಯ ಗಣಪತಿ ಮೂರ್ತಿಯನ್ನ ಸಿದ್ಧಪಡಿಸುತ್ತಾ ಬರಲಾಗುತ್ತಿದೆ. ಈ ವರ್ಷ ಕಲಾವಿದರಾದ ಚಂದ್ರು ಹಾಗೂ ಪ್ರಸನ್ನ ಎಂಬುವವರು ಈ ಅದ್ಭುತ ಮೂರ್ತಿಯನ್ನು ಮಾಡಿದ್ದಾರೆ. ಇವರು ಕೂಡ ಪುನೀತ್ ರಾಜ್​ಕುಮಾರ್ ಫ್ಯಾನ್ಸ್ ಅನ್ನೋದು ವಿಶೇಷ.

ಇದನ್ನೂ ಓದಿ
Image
ಅಕ್ಷಯ್​ ಕುಮಾರ್​ಗೆ 3ನೇ ಸೋಲು; ಭಾರತ ಬಿಟ್ಟು ಕೆನಡಾಗೆ ಪಲಾಯನ ಮಾಡುವ ಪ್ಲ್ಯಾನ್​ ನೆನಪಿಸಿದ ನೆಟ್ಟಿಗರು
Image
Akshay Kumar: ಸೋದರಿಯನ್ನು ನೆನೆದು ಎಲ್ಲರ ಎದುರು ಕಣ್ಣೀರು ಹಾಕಿದ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​
Image
Akshay Kumar: ಅತಿ ಹೆಚ್ಚು ಟ್ಯಾಕ್ಸ್​ ಪಾವತಿಸಿದ ಅಕ್ಷಯ್​ ಕುಮಾರ್​; ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ
Image
Akshay Kumar: ರಾಜಕೀಯಕ್ಕೆ ಬರುತ್ತಾರಾ ಅಕ್ಷಯ್​ ಕುಮಾರ್​? ನೇರ ಪ್ರಶ್ನೆಗೆ ಉತ್ತರಿಸಿದ ‘ಕಿಲಾಡಿ’ ನಟ

ತರೀಕೆರೆ ಪಟ್ಟಣದ ಮೋಹಿತ್ ಕುಮಾರ್ ಎಂಬುವವರು ಈ ಮೂರ್ತಿಯನ್ನು ಹೇಳಿ ಮಾಡಿಸಿದ್ದಾರೆ. ಗಣೇಶನ ಜೊತೆ ಪುನೀತ್ ರಾಜ್​ಕುಮಾರ್ ನಿಂತಿದ್ದು, ಅಪ್ಪುವಿನ ಹೆಗಲ ಮೇಲೆ ಗಣೇಶ ಕೈ ಹಾಕಿದ್ದಾನೆ. ಸದ್ಯ ಈ ಮೂರ್ತಿಗೆ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಗಣಪತಿ ಸಿದ್ಧಪಡಿಸುವ ಸ್ಥಳಕ್ಕೆ ಬಂದು ಇದನ್ನು ನೋಡಿದವರು ಈ ಮೂರ್ತಿ ತಮಗೆ ಕೊಡಿ ಎಂದು ಕೇಳುತ್ತಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ಮಾಯ; ಕಾರಣ ಏನು?

ತರೀಕೆರೆ ಪಟ್ಟಣದ ಕುಂಬಾರಬೀದಿಯ ಪುಟ್ಟಣ್ಣ ಎಂಬ ಕಲಾವಿದ ಗಣಪತಿ ಜೊತೆ ಅಪ್ಪು ಇರುವ ಮೂರ್ತಿಯನ್ನು ಮಾಡಿದ್ದು ಇದು ಅದ್ಭುತವಾಗಿ ಮೂಡಿ ಬಂದಿದೆ. ಗಣಪತಿಯ ಎಡಭಾಗದಲ್ಲಿ ಗೌರಿ ಇರುವಂತೆ ಸ್ಥಳ ಬಿಟ್ಟಿದ್ದು ಬಲಭಾಗದಲ್ಲಿ ಪುನೀತ್ ರಾಜ್​ಕುಮಾರ್ ಇರುವಂತೆ ಮೂರ್ತಿಯನ್ನು ರಚಿಸಿದ್ದಾರೆ. ಹತ್ತಾರು ವರ್ಷಗಳಿಂದ ಗಣಪತಿ ಮೂರ್ತಿ ಮಾಡಿಕೊಂಡು ಬರುತ್ತಿರುವ ಈ ಕಲಾವಿದರ ಈ ವರ್ಷದ ಅಪ್ಪು ಮೂರ್ತಿಗೆ ಭಾರೀ ಬೇಡಿಕೆ ಬಂದಿದೆ.

Published On - 6:30 am, Tue, 30 August 22