Management Mythos: ಕಂಪನಿಯ ಆದರ್ಶ ವ್ಯವಸ್ಥಾಪಕನಾಗಲು ತ್ರಿಮೂರ್ತಿಗಳನ್ನು ಅರ್ಥ ಮಾಡಿಕೊಳ್ಳಲೇ ಬೇಕು

ಹಿಂದೂ ಪುರಾಣಗಳಲ್ಲಿ ಸೃಷ್ಟಿಕರ್ತ ಬ್ರಹ್ಮ, ಸೃಷ್ಟಿಯ ಪಾಲಕ ವಿಷ್ಣು ಮತ್ತು ಸೃಷ್ಟಿಯ ಲಯಕಾರಕ ಶಿವ ಎಂದು ಪರಿಗಣಿಸಲಾಗಿದೆ. ಅದೇ ರೀತಿ ವ್ಯಾಪಾರ ಅಥವಾ ಸಂಸ್ಥೆಯನ್ನು ರಚಿಸುವ, ಅದನ್ನು ಸಂರಕ್ಷಿಸುವ ಮತ್ತು ಅದನ್ನು ನಾಶಪಡಿಸುವ ವ್ಯಕ್ತಿಗಳನ್ನು ತ್ರಿ ಮೂರ್ತಿಗಳಾಗಿ ತಿಳಿಯಬಹುದು.

Management Mythos: ಕಂಪನಿಯ ಆದರ್ಶ ವ್ಯವಸ್ಥಾಪಕನಾಗಲು ತ್ರಿಮೂರ್ತಿಗಳನ್ನು ಅರ್ಥ ಮಾಡಿಕೊಳ್ಳಲೇ ಬೇಕು
ಬ್ರಹ್ಮ, ವಿಷ್ಣು, ಶಿವ
Follow us
TV9 Web
| Updated By: ಆಯೇಷಾ ಬಾನು

Updated on: Jul 18, 2022 | 6:45 AM

ಬಿಸಿನೆಸ್ ಸೂತ್ರ ಎ ವೆರಿ ಇಂಡಿಯನ್ ಅಪ್ರೋಚ್ ಟು ಮ್ಯಾನೇಜ್ಮೆಂಟ್(Business Sutra: A Very Indian Approach to Management) ಪುಸ್ತಕದ ಲೇಖಕ ದೇವದತ್ತ್ ಪಟ್ನಾಯಕ್(Devdutt Pattanaik) ಅವರು ನವ ಯುವಕರಿಗೆ, ಭಾರತೀಯರಿಗೆ ಬಿಸಿನೆಸ್​ನ ಸೂತ್ರಗಳು, ನಿರ್ವಹಣಾ ತತ್ವಗಳನ್ನು ಧರ್ಮಗ್ರಂಥ, ಹಿಂದೂ ಪುರಾಣದ ಜ್ಞಾನ, (Hindu Mythology) ನೀಡುವ ಮೂಲಕ ವಿವರಿಸಿದ್ದಾರೆ. ದೇವದತ್ತ್ ಬರೆದ ತಮ್ಮ ಪುಸ್ತಕದಲ್ಲಿ ಬ್ರಹ್ಮ, ವಿಷ್ಣು, ಶಿವನ ಉದಾಹರಣೆ ನೀಡಿ ಒಬ್ಬ ಆದರ್ಶ ಮ್ಯಾನೇಜರ್ ಆಗಲು ಯಾವೆಲ್ಲ ಗುಣಗಳು ಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆದ್ರೆ ಬಿಸಿನೆಸ್​ಗೂ ಆಧ್ಯಾತ್ಮಕ್ಕೂ ಹೇಗೆ ಸಂಬಂಧ ಬೆಸೆಯುತ್ತದೆ ಎಂಬ ಅನೇಕ ಅನುಮಾನಗಳು ನಿಮ್ಮನ್ನು ಕಾಡಿದರೆ ಈ ಆರ್ಟಿಕಲ್ ಓದಿ.

ಹಿಂದೂ ಪುರಾಣಗಳಲ್ಲಿ ಸೃಷ್ಟಿಕರ್ತ ಬ್ರಹ್ಮ, ಸೃಷ್ಟಿಯ ಪಾಲಕ ವಿಷ್ಣು ಮತ್ತು ಸೃಷ್ಟಿಯ ಲಯಕಾರಕ ಶಿವ ಎಂದು ಪರಿಗಣಿಸಲಾಗಿದೆ. ಅದೇ ರೀತಿ ವ್ಯಾಪಾರ ಅಥವಾ ಸಂಸ್ಥೆಯನ್ನು ರಚಿಸುವ, ಅದನ್ನು ಸಂರಕ್ಷಿಸುವ ಮತ್ತು ಅದನ್ನು ನಾಶಪಡಿಸುವ ವ್ಯಕ್ತಿಗಳನ್ನು ತ್ರಿ ಮೂರ್ತಿಗಳಾಗಿ ತಿಳಿಯಬಹುದು. ಬ್ರಹ್ಮನನ್ನು ಸಂಸ್ಥೆಯನ್ನು ಕಟ್ಟಿದವ(ಉದ್ಯಮಿ) ಎಂದು ಪರಿಗಣಿಸೋಣ. ಹಿಂದೂ ಪುರಾಣಗಳಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವನ ಮಾನಸಿಕ ಸ್ಥಿತಿಗಳನ್ನು ಉಲ್ಲೇಖಿಸಿರುತ್ತಾರೆ. ಮತ್ತು ಸಾಂಪ್ರದಾಯಿಕವಾಗಿ ಹಿಂದೂ ಧರ್ಮದಲ್ಲಿ ಬ್ರಹ್ಮನ ಮನಸ್ಥಿತಿಯು ಶಿವ ಮತ್ತು ವಿಷ್ಣುವನ್ನು ಪೂಜಿಸುತ್ತದೆ. ವಾಸ್ತವವಾಗಿ, ಈ ಮನಸ್ಥಿತಿಯ ತಿಳುವಳಿಕೆಯು ಇಂದು ನಮ್ಮ ಕಾರ್ಪೊರೇಟ್ ಸಂಸ್ಥೆಗಳಲ್ಲಿಲ್ಲ. ಇದು ಈಗ ಏನಾಗಿದೆ ಎಂಬುದನ್ನು ತಿಳಿಯಲು ಇದು ನಮಗೆ ಅನುವು ಮಾಡಿಕೊಡುತ್ತದೆ.

ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಅರ್ಥಮಾಡಿಕೊಳ್ಳಲು, ನಮಗೆ ಹಿರಿಯರ, ಪುರಾತನ ಚೌಕಟ್ಟು ಬೇಕು. ವೇದಗಳು ಈ ಚೌಕಟ್ಟನ್ನು ಒದಗಿಸುತ್ತವೆ. ಇದು ಒಂದು ರೀತಿಯ ಯಜ್ಞದ ಆಚರಣೆಯಾಗಿದೆ, ಅಲ್ಲಿ ಪ್ರಕ್ರಿಯೆ-ಮಾಲೀಕನು (ಯಜಮಾನ್)ನಿಂದ ಆಗುತ್ತದೆ. ಹಾಘೂ ಫಲಾನುಭವಿಯನ್ನು (ದೇವತೆ) ಆಹ್ವಾನಿಸುತ್ತಾನೆ ಮತ್ತು (ತಥಾಸ್ತು) ಸ್ವೀಕರಿಸಲು (ಸ್ವಾಹಾ) ನೀಡುತ್ತಾನೆ. ಈ ಸೂತ್ರದ ಪ್ರಕಾರ ಇಲ್ಲಿ ಯಜಮಾನ ಹೂಡಿಕೆದಾರ, ದೇವತೆ ಸ್ವೀಕರಿಸುವವನು. ಸ್ವಾಹಾ ಹೂಡಿಕೆ ಮತ್ತು ತಥಾಸ್ತು ಹೂಡಿಕೆಯ ಲಾಭ ಎಂದು ತಿಳಿಯೋಣ. ಹೀಗೆ ಯಜ್ಞವು ಒಂದು ವಿನಿಮಯವಾಗಿದೆ. ಯಜ್ಞದ ಆಚರಣೆಯಂತೆ ನಮ್ಮ ಕಾರ್ಪೊರೇಟ್​ ಸಂಸ್ಥೆಗಳ ವ್ಯವಹಾರ ಇರುತ್ತೆ.

ಬಿಸಿನೆಸ್ ಮಂತ್ರಗಳು

  1. ಬ್ರಹ್ಮನು ಯಜ್ಞವನ್ನು ಮಾಡುವ ಯಜಮಾನ. ಇಲ್ಲಿ ಹೂಡಿಕೆಗಿಂತ ಲಾಭದ ಮೇಲೆ ಮಾತ್ರ ತಥಾಸ್ತುವಿನತ್ತ ಗಮನ ಹರಿಸುತ್ತಾನೆ.
  2. ವಿಷ್ಣು ಸಂಪತ್ತನ್ನು ಆಕರ್ಷಿಸುತ್ತಾನೆ, ಮತ್ತು ಬ್ರಹ್ಮ ಅದನ್ನು ಸೃಷ್ಟಿಸುತ್ತಾನೆ, ಶಿವ ಅದನ್ನು ತಿರಸ್ಕರಿಸುತ್ತಾನೆ.
  3. ವಿಷ್ಣುವು ತಥಾಸ್ತುವಿನ ಬಗ್ಗೆ ಎಷ್ಟು ಕಾಳಜಿಯನ್ನು ಹೊಂದಿದ್ದಾನೋ ಅಷ್ಟೇ ಕಾಳಜಿಯುಳ್ಳ ಯಜಮಾನನಾಗಿರುತ್ತಾನೆ.
  4. ಶಿವನು ಯಜ್ಞದಲ್ಲಿ ಆಸಕ್ತಿಯೇ ಇಲ್ಲದ ಯಜಮಾನ. ಇವನಿಗೆ ಹಸಿವು ಮೊದಲಿಂದಲೂ ಬೆಳೆದುಬಂದಿರುವುದರಿಂದ ತಥಾಸ್ತುವಿನ ಅಗತ್ಯವಿಲ್ಲ.
  5. ಇಂದಿರಾ ಉದ್ಯಮಿಗಳು ತಮಗಾಗಿ, ತಮ್ಮ ಲಾಭಕ್ಕಾಗಿ ಸಂಸ್ಥೆಯನ್ನು ಸೃಷ್ಟಿಸಿಕೊಳ್ಳುತ್ತಾರೆ. ಹಾಗೂ ಶಿವ ಉದ್ಯಮಿಗಳು ಇತರರಿಗಾಗಿ, ಇತರರ ಬಳಿತನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಸ್ಥೆ ಸೃಷ್ಟಿಸುತ್ತಾರೆ.

ಯಜ್ಞವು ಹಸಿವನ್ನು ಸೂಚಿಸುತ್ತದೆ. ನಾವು ನಮ್ಮ ಆಸೆಗಳನ್ನು ಪೂರೈಸಬೇಕು. ಹೀಗಾಗಿ ವ್ಯವಹಾರವನ್ನು ಪ್ರಾರಂಭಿಸಬೇಕು ಅಥವಾ ಉದ್ಯೋಗವನ್ನು ಪಡೆಯಬೇಕು. ನಾವು ನಮ್ಮ ಆಸೆಗಳನ್ನು (ಯಜಮಾನಕ್ಕೆ ತಥಾಸ್ತು) ಪೂರೈಸಿಕೊಳ್ಳುವ ಮೊದಲು ಇನ್ನೊಬ್ಬರ ಆಸೆಯನ್ನು ಪೂರೈಸುತ್ತೇವೆ. (ದೇವತೆಗೆ ಸ್ವಾಹಾ)

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು