AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತಮಿಳುನಾಡಿನ ರಂಗನಾಥಸ್ವಾಮಿ ದೇವಾಲಯದ ಈ ವಿಶಿಷ್ಟ ಆಚರಣೆಯ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

ಶ್ರೀ ರಂಗನಾಥಸ್ವಾಮಿ ದೇವಾಲಯ, ಭಾರತದ ಅತಿ ದೊಡ್ಡ ವೈಷ್ಣವ ದೇವಾಲಯ, ತಮಿಳುನಾಡಿನ ತಿರುಚಿಯಲ್ಲಿದೆ. 14ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯದ ವಿಶಿಷ್ಟ ಆಚರಣೆ ಮತ್ತು ಇತ್ತೀಚೆಗೆ ವೈರಲ್ ಆದ ವಿಡಿಯೋ ಬಗ್ಗೆ ಈ ಲೇಖನ ತಿಳಿಸುತ್ತದೆ. ದೇವಾಲಯದ ಐತಿಹಾಸಿಕ ಪ್ರಾಮುಖ್ಯತೆ, ವಿಷ್ಣುವಿನ ವಿವಿಧ ರೂಪಗಳು ಮತ್ತು ದೇವಾಲಯದಲ್ಲಿನ ಐದು ರಂಧ್ರಗಳಲ್ಲಿ ಬೆರಳುಗಳನ್ನು ಇಡುವ ವಿಶಿಷ್ಟ ಪದ್ಧತಿಯ ಬಗ್ಗೆ ವಿವರಿಸಲಾಗಿದೆ. ಈ ಆಚರಣೆಯ ಪ್ರಾಮುಖ್ಯತೆ ಮತ್ತು ಅದರ ಹಿಂದಿನ ಕಥೆಯನ್ನು ಲೇಖನ ವಿವರಿಸುತ್ತದೆ.

Video: ತಮಿಳುನಾಡಿನ ರಂಗನಾಥಸ್ವಾಮಿ ದೇವಾಲಯದ ಈ ವಿಶಿಷ್ಟ ಆಚರಣೆಯ ಬಗ್ಗೆ ಇಲ್ಲಿ ತಿಳಿದುಕೊಳ್ಳಿ
Discover Sri Ranganathaswamy Temple
ಅಕ್ಷತಾ ವರ್ಕಾಡಿ
|

Updated on: Jan 14, 2025 | 10:57 AM

Share

ರಂಗನಾಥಸ್ವಾಮಿ ದೇವಾಲಯ ಭಾರತದ ಪ್ರಸಿದ್ಧ ವೈಷ್ಣವ ದೇವಾಲಯಗಳಲ್ಲಿ ಒಂದಾಗಿದೆ. ತಮಿಳುನಾಡಿನ ತಿರುಚಿಯಲ್ಲಿರುವ ಈ ರಂಗನಾಥಸ್ವಾಮಿ ದೇವಾಲಯ ಪುರಾತನ ದೇವಾಲಯಗಳ ಪೈಕಿ ವಿಶ್ವದ ಅತಿ ದೊಡ್ಡ ದೇವಾಲಯ ಎಂಬ ಖ್ಯಾತಿಯನ್ನು ಗಳಿಸಿದೆ. 155 ಎಕರೆ ಪ್ರದೇಶದಲ್ಲಿ ಪ್ರಸ್ತುತ ದೇವಾಲಯದ ಸಂಕೀರ್ಣದ ನಿರ್ಮಾಣವು 14 ನೇ ಶತಮಾನದಲ್ಲಿ ಪ್ರಾರಂಭವಾಯಿತು ಎಂದು ಐತಿಹಾಸಿಕ ದಾಖಲೆಗಳು ತೋರಿಸುತ್ತವೆ. ವಿಷ್ಣುವಿನ ವಿವಿಧ ರೂಪಗಳನ್ನು ಪ್ರದರ್ಶಿಸುವ 108 ದೇವತೆಗಳನ್ನು ಇಲ್ಲಿ ಕಾಣಬಹುದು. ಶ್ರೀ ರಂಗಂ ತಿರುಚ್ಚಿಯಿಂದ ಸುಮಾರು 7 ಕಿಮೀ ಮತ್ತು ಚೆನ್ನೈನಿಂದ 325 ಕಿಮೀ ದೂರದಲ್ಲಿದೆ. ತಿರುಚ್ಚಿ ವಿಮಾನ ನಿಲ್ದಾಣವು ಸುಮಾರು 13 ಕಿ.ಮೀ. ದೂರದಲ್ಲಿದೆ. ರಂಗನಾಥಸ್ವಾಮಿ ದೇವಾಲಯದ ಸುತ್ತಲಿನ ಏಳು ಪ್ರಾಕಾರಗಳನ್ನು ಏಳು ಲೋಕಗಳೆಂದು ಪರಿಗಣಿಸಲಾಗಿದೆ.

ರಂಗನಾಥಸ್ವಾಮಿ ದೇವಾಲಯದಲ್ಲಿ, ಭಕ್ತರು ತಮ್ಮ ಬೆರಳುಗಳನ್ನು ನೆಲದ ಮೇಲೆ ಕೆತ್ತಿದ ಐದು ಸಣ್ಣ ರಂಧ್ರಗಳಲ್ಲಿ ಇರಿಸುವ ವಿಶಿಷ್ಟ ಆಚರಣೆಯಿದೆ. ಆದರೆ ಅದರ ಹಿಂದಿನ ಕಥೆ ಏನು ಎಂಬುದನ್ನು @thetemplegirl ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ದಂತಕಥೆಯ ಪ್ರಕಾರ, ರಂಗನಾಥನ ಪತ್ನಿಯಾದ ರಂಗನಾಯಕಿ ದೇವಿಯು ಒಮ್ಮೆ ತನ್ನ ಬೆರಳನ್ನು ಈ ಜಾಗದಲ್ಲಿ ಇಟ್ಟು ತನ್ನ ಪ್ರೀತಿಯ ಭಗವಾನ್ ರಂಗನಾಥನ ನೋಟವನ್ನು ಹಿಡಿಯಲು ದೇವಾಲಯದ ಸ್ವರ್ಗದ ದ್ವಾರ ಮೂಲಕ ಇಣುಕಿ ನೋಡಿದಳು. ಈ ಪವಿತ್ರ ಸೂಚಕವು ಭಕ್ತಿ, ಶರಣಾಗತಿ ಮತ್ತು ಪಂಚಭೂತಗಳ ಅಂದರೆ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಮಾನವ ಆತ್ಮದ ನಡುವಿನ ಸಂಪರ್ಕವನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಮಹಾಕುಂಭ ಮೊದಲ ಬಾರಿ ನಡೆದಿದ್ದು ಎಲ್ಲಿ ಮತ್ತು ಯಾವಾಗ?

ಈ ರಂಧ್ರಗಳಲ್ಲಿ ನಿಮ್ಮ ಬೆರಳುಗಳನ್ನು ಇಟ್ಟು ದೇವರ ದರ್ಶನ ಪಡೆಯುವುದು ಕೇವಲ ಸಂಪ್ರದಾಯವಲ್ಲ, ಬದಲಾಗಿ ಇದು ನಿಮ್ಮ ಆತ್ಮವನ್ನು ದೇವಾಲಯದ ದೈವಿಕ ಶಕ್ತಿಯೊಂದಿಗೆ ಜೋಡಿಸುವ ಒಂದು ಮಾರ್ಗವಾಗಿದೆ, ನಿಮ್ಮ ಐದು ಇಂದ್ರಿಯಗಳನ್ನು ಭಗವಂತನಿಗೆ ಅರ್ಪಿಸುವುದು ಎಂಬ ನಂಬಿಕೆಯಿದೆ.

thetemplegirl ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಕೇವಲ ಎರಡೇ ದಿನದಲ್ಲಿ 4 ಮಿಲಿಯನ್​ ಅಂದರೆ 40ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!