ಶ್ರೀ ರಾಮ ಅಥವಾ ರಾಮಚಂದ್ರ ಹೀಗೆ ನಾನಾ ಹೆಸರುಗಳಿಂದ ಕರೆಯುವ ಭಗವಾನ್ ರಾಮನು, ಹಿಂದೂ ಧರ್ಮದ ಅಗ್ರಗಣ್ಯ ದೇವರಲ್ಲಿ ಮೊದಲಪಂಥಿಯನು. ಅವನು ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಏಳನೇ ಅವತಾರವಾಗಿದ್ದು, ಎಲ್ಲಾ ದುಷ್ಟ ಶಕ್ತಿಗಳನ್ನು ನಾಶಪಡಿಸಲು ಜನಿಸಿದನೆಂದು ಪುರಾಣಗಳು ಹೇಳುತ್ತವೆ. ಭಗವಾನ್ ರಾಮನ ಜೀವನ ಮತ್ತು ಬೋಧನೆಗಳು ಪ್ರಾಚೀನ ಮಹಾಕಾವ್ಯವಾದ ರಾಮಾಯಣದ ವಿಷಯಗಳಾಗಿದ್ದು, ರಾಮನ ಜೀವನವು ಹಿಂದೂಗಳಿಗೆ ತಮ್ಮ ಜೀವನವನ್ನು ಹೇಗೆ ನಡೆಸಬೇಕೆಂದು ಮಾರ್ಗದರ್ಶನ ನೀಡುತ್ತದೆ.
ತ್ರೇತಾಯುಗದಲ್ಲಿ ಶ್ರೀ ರಾಮನು ಭಾರತದ ಅಯೋಧ್ಯೆಯಲ್ಲಿ ಜನಿಸಿದನೆಂದು ಪುರಾಣಗಳು ಹೇಳುತ್ತವೆ. ಎಲ್ಲರ ಒಳಿತಿಗಾಗಿ ತನ್ನ ಸ್ವಂತ ಸಂತೋಷವನ್ನು ತ್ಯಾಗ ಮಾಡುವ ಗುಣ, ಧರ್ಮವನ್ನು ಪರಿಪೂರ್ಣವಾಗಿ ಅನುಸರಣೆ ಮಾಡಿ ಜೀವನ ನಡೆಸಿದನೆಂದು ಆತನನ್ನು ಬಣ್ಣಿಸಲಾಗುತ್ತದೆ. ಹಾಗಾಗಿ ರಾಮನನ್ನು ಪುರುಷೋತ್ತಮ ಎಂದು ಸಂಬೋಧಿಸಲಾಗುತ್ತದೆ. ಇದರ ಅರ್ಥ “ಮನುಷ್ಯರಲ್ಲಿ ಅತ್ಯುತ್ತಮ” ಅಥವಾ “ಸರ್ವೋಚ್ಚ ವ್ಯಕ್ತಿತ್ವ” ವನ್ನು ಹೊಂದಿರುವವನು ಎಂಬುದಾಗಿದೆ. ಇದೆಲ್ಲಾ ಕಾರಣದಿಂದಾಗಿ ಭಗವಾನ್ ರಾಮನನ್ನು ವಿಶ್ವದಾದ್ಯಂತ ಲಕ್ಷಾಂತರ ಜನರು ಪೂಜಿಸುತ್ತಾರೆ. ಅಲ್ಲದೆ ಅವರ ಹೆಸರನ್ನು ಮಂತ್ರವಾಗಿ ಜಪಿಸಲಾಗುತ್ತದೆ ಮತ್ತು ಅವನ ಬೋಧನೆಗಳು, ಕಥೆಗಳು ನೀತಿಯುತ ಹಾಗೂ ಸದ್ಗುಣಶೀಲ ಜೀವನವನ್ನು ನಡೆಸಲು ಜನರನ್ನು ಪ್ರೇರೇಪಿಸುತ್ತವೆ.
ಅವನಿಗೆ ರಾಘವ, ರಾಮಚಂದ್ರ, ಕೋಶೇಂದ್ರ ಮತ್ತು ರಾಮಭದ್ರ ಸೇರಿದಂತೆ ಹಲವಾರು ಹೆಸರುಗಳಿವೆ. ಆದರೆ ಇತರ ಹೆಸರುಗಳಲ್ಲಿ ರಾಮ ಅತ್ಯಂತ ಪವಿತ್ರವಾದ ಹೆಸರಾಗಿದ್ದು ಇದನ್ನು ಪಠಿಸುವ ಮೂಲಕ, ಜನರು ತಮ್ಮ ಎಲ್ಲಾ ದುಃಖಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಇಲ್ಲಿ ನಾವು ಅಷ್ಟೋತ್ತರ ಶತನಾಮಾವಳಿ ಅಥವಾ ಭಗವಾನ್ ಶ್ರೀ ರಾಮನ 108 ಹೆಸರು ಮತ್ತು ಅವುಗಳ ಅರ್ಥವನ್ನು ನೀಡುವ ಪ್ರಯತ್ನ ಮಾಡಿದ್ದೇವೆ, ಇದನ್ನು ನೀವು ಭಕ್ತಿಯಿಂದ ಪಠಿಸುವ ಮೂಲಕ ರಾಮನ ಅನುಗ್ರಹ ಪಡೆದುಕೊಳ್ಳಬಹುದು ಮತ್ತು ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಸಂಭ್ರಮವನ್ನು ಮನೆಯಲ್ಲಿ ಆಚರಣೆ ಮಾಡುವುದು ಹೇಗೆ?
ಓಂ ಶ್ರೀರಾಮಾಯ ನಮಃ – ಸಂತೋಷವನ್ನು ನೀಡುವವನು
ಓಂ ರಾಮಭದ್ರಾಯ ನಮಃ – ವಾತ್ಸಲ್ಯಭರಿತವಾದ ಒಂದು ಸಂಬೋಧನೆ
ಓಂ ರಾಮಚಂದ್ರಾಯ ನಮಃ – ಚಂದ್ರನಂತಹ ಸೌಮ್ಯ ಗುಣದವನು
ಓಂ ಶಾಶ್ವತಾಯ ನಮಃ – ಶಾಶ್ವತವಾದದ್ದು ಅಥವಾ ಎಂದಿಗೂ ನಶಿಸಿ ಹೋಗದ್ದು
ಓಂ ರಾಜೀವಲೋಚನಾಯ ನಮಃ – ಕಮಲದ ಕಣ್ಣುಗಳನ್ನು ಹೊಂದಿರುವವನು
ಓಂ ಶ್ರೀಮತೆ ನಮಃ – ಎಲ್ಲರಿಂದಲೂ ಪೂಜನೀಯವಾದವನು
ಓಂ ರಾಜೇಂದ್ರಾಯ ನಮಃ – ರಾಜರ ರಾಜ
ಓಂ ರಘುಪುಂಗವಾಯ ನಮಃ – ರಘು ರಾಜವಂಶದ ವಂಶಸ್ಥ
ಓಂ ಜಾನಕಿ ವಲ್ಲಭಾಯ ನಮಃ – ಜಾನಕಿಯ ಪತಿ
ಓಂ ಜೈತ್ರಯ ನಮಃ – ವಿಜಯಶಾಲಿ
ಓಂ ಜಿತಾಮಿತ್ರಾಯ ನಮಃ – ತನ್ನ ಶತ್ರುಗಳನ್ನು ಜಯಿಸಿದವನು
ಓಂ ಜನಾರ್ದನಾಯ ನಮಃ – ಜನರಿಗೆ ಆಶ್ರಯ ನೀಡಿದವನು
ಓಂ ವಿಶ್ವಾಮಿತ್ರ ಪ್ರಿಯಾಯ ನಮಃ – ಋಷಿ ವಿಶ್ವಾಮಿತ್ರರ ಪ್ರಿಯನು
ಓಂ ದಾಂಡೇಯ ನಮಃ – ಯಾರಿಗೂ ತೊಂದರೆ ಮಾಡದವನು
ಓಂ ಶರಣತ್ರಣ ತತ್ಪರಾಯ ನಮಃ – ತನ್ನ ಭಕ್ತರನ್ನು ರಕ್ಷಿಸಲು ದೃಢನಿಶ್ಚಯ ಹೊಂದಿರುವವನು
ಓಂ ಬಲಿಪ್ರಮಾತಾಯ ನಮಃ – ಬಲಿಯನ್ನು ಕೊಂದವನು
ಓಂ ವಾಗ್ಮಿನೇ ನಮಃ – ವಕ್ತಾರ
ಓಂ ಸತ್ಯವಚೇ ನಮಃ – ಸತ್ಯವನ್ನೇ ನುಡಿವವನು
ಓಂ ಸತ್ಯವಿಕ್ರಮಾಯ ನಮಃ – ಶಕ್ತಿಶಾಲಿಯಾದವನು
ಓಂ ಸತ್ಯವ್ರತಾಯ ನಮಃ – ಸತ್ಯವಾದ ವ್ರತ ಪರಿಪಾಲಕನು
ಓಂ ವ್ರತದಾಯಾಯ ನಮಃ – ತಪಸ್ಸು ಮಾಡುವವನು
ಓಂ ಸದಾ ಹನುಮದಾಶ್ಮೃತಾಯ ನಮಃ – ಯಾವಾಗಲೂ ಹನುಮಂತನ ಮೇಲೆ ಅವಲಂಬಿತನಾಗಿರುವವ
ಓಂ ಕೌಸಲ್ಯೈ ನಮಃ – ಕೌಸಲ್ಯಳ ಮಗ
ಓಂ ಖರಧ್ವಂಶಿನೇ ನಮಃ – ಖಾರ ಎಂಬ ರಾಕ್ಷಸನನ್ನು ಕೊಂದವನು
ಓಂ ವೀರಧವಪಂಡಿತಾಯ ನಮಃ – ವೀರಧ ಎಂಬ ರಾಕ್ಷಸನನ್ನು ಕೊಂದವನು
ಓಂ ವಿಭೀಷಣ ಪರಿತ್ರತ್ರೆ ನಮಃ – ವಿಭೀಷಣನ ರಕ್ಷಕ
ಓಂ ಕೋದಂಡ ಖಂಡಾಯ ನಮಃ – ಪ್ರಬಲ ಬಿಲ್ಲು ಮುರಿದವನು
ಓಂ ಸಪ್ತತಾಳ ಪ್ರಭೇಂದ್ರೇ ನಮಃ – ಏಳು ಮರಗಳ ಶಾಪ ವಿಮೋಚನೆ ಮಾಡಿದವ
ಓಂ ದಶಗ್ರೀವ ಶಿರೋಹರಾಯ ನಮಃ – ಹತ್ತು ತಲೆಯ ರಾವಣನನ್ನು ಕೊಂದವನು
ಓಂ ಜಮದಗ್ನ್ಯಾ ಮಹಾದರ್ಪಾಯ ನಮಃ – ಜಮದಗ್ನಿಯ ಮಗನ ಅಹಂಕಾರವನ್ನು ನಾಶ ಮಾಡಿದವನು
ಓಂ ತಾತಕಂಠಾಯ ನಮಃ – ತಾತಕನನ್ನು ಕೊಂದವನು
ಓಂ ವೇದಾಂತ ಸಾರಾಯ ನಮಃ – ತತ್ವಶಾಸ್ತ್ರದ ಸಾರವನ್ನು ಅರಿತವನು
ಓಂ ವೇದಾತ್ಮನೇ ನಮಃ – ವೇದಗಳ ಆತ್ಮವೇ ರಾಮ
ಓಂ ಭವರೋಗಸ್ಯ ಭೇಶಜಯ ನಮಃ – ಪ್ರಾಪಂಚಿಕ ಕಾಯಿಲೆಗಳಿಗೆ ಇವನ ನಾಮ ಪಠಣೆಯೇ ಪರಿಹಾರ
ಓಂ ದುಶನತ್ರಿ ಶಿರೋಹಂತೇ ನಮಃ – ದುಷನತ್ರಿಷಿತ್ರನನ್ನು ಕೊಲ್ಲುವವನು
ಓಂ ತ್ರಿಮೂರ್ತಿಯೈ ನಮಃ – ಮೂರು ದೇವರುಗಳ ಸಾಕಾರರೂಪ
ಓಂ ತ್ರಿಗುಣಾತ್ಮಕಾಯ ನಮಃ – ಮೂರು ಗುಣಗಳನ್ನು ಹೊಂದಿರುವವನು
ಓಂ ತ್ರಿವಿಕ್ರಮಾಯ ನಮಃ – ಮೂರು ಲೋಕಗಳನ್ನು ಜಯಿಸಿದವ
ಓಂ ತ್ರಿಲೋಕಾತ್ಮನೇ ನಮಃ – ಮೂರು ಲೋಕದ ಅಧಿಪತಿ
ಓಂ ಪುಣ್ಯಚರಿತ್ರ ಕೀರ್ತನಾಯ ನಮಃ – ಉದಾತ್ತ ಸದ್ಗುಣಗಳನ್ನು ಒಳಗೊಂಡವನು
ಓಂ ತ್ರಿಲೋಕರಕ್ಷಕಾಯ ನಮಃ – ಮೂರು ಲೋಕಗಳ ರಕ್ಷಕ
ಓಂ ಧನ್ವಿನ್ ನಮಃ – ಬಿಲ್ಲು ಹಿಡಿಯುವವನು
ಓಂ ದಂಡಕಾರಣ್ಯ ಕರ್ತನಾಯ ನಮಃ – ದಂಡಕ ಕಾಡಿನ ನಿವಾಸಿ
ಓಂ ಅಹಲ್ಯ ಶಪ ಶಮನಯ ನಮಃ – ಅಹಲ್ಯನ ಶಾಪದಿಂದ ಪರಿಹಾರ ನೀಡಿದವನು
ಓಂ ಪಿತೃ ಭಕ್ತಾಯ ನಮಃ – ತಂದೆ ದಶರಥನ ಆರಾಧಕ
ಓಂ ವರ ಪ್ರದಾಯ ನಮಃ – ವರಗಳನ್ನು ನೀಡುವವನು
ಓಂ ಜಿತೇಂದ್ರಾಯ ನಮಃ – ಇಂದ್ರಿಯಗಳನ್ನು ಜಯಿಸಿದವನು
ಓಂ ಜಿತಕ್ರೋದಾಯ ನಮಃ – ಕೋಪವನ್ನು ಜಯಿಸಿದವನು
ಓಂ ಜಿತಾಮಿತ್ರಾಯ ನಮಃ – ಶತ್ರುಗಳನ್ನು ಜಯಿಸಿದವನು
ಓಂ ಜಗದ್ ಗುರವೇ ನಮಃ – ಪ್ರಪಂಚದ ಗುರು
ಓಂ ರಿಕ್ಷಾ ವಾನರ ಸಂಘಟಿನೆ ನಮಃ – ಹಂದಿ ಮತ್ತು ಕೋತಿಗಳ ರಕ್ಷಕ
ಓಂ ಚಿತ್ರಕೂಟ ಸಮಶ್ರಯ ನಮಃ – ಚಿತ್ರಕೂಟ ಬೆಟ್ಟದಲ್ಲಿ ಆಶ್ರಯ ಪಡೆದವನು
ಓಂ ಜಯಂತ ತ್ರಾಣ ವರದಯ ನಮಃ – ಜಯಂತನನ್ನು ಆಶೀರ್ವದಿಸಿದ ದೇವರು
ಓಂ ಸುಮಿತ್ರಾ ಪುತ್ರ ಸೇವಿತಾಯ ನಮಃ – ಸುಮಿತ್ರಾಳ ಮಗನಿಂದ ಪೂಜಿಸಲ್ಪಡುವವನು
ಓಂ ಸರ್ವ ದೇವಾಧಿ ದೇವಾಯ ನಮಃ – ಎಲ್ಲಾ ದೇವತೆಗಳ ಅಧಿಪತಿ
ಓಂ ಮೃತವನಾರ ಜೀವನಾಯ ನಮಃ – ಸತ್ತ ಕೋತಿಗಳ ಪುನರುಜ್ಜೀವನ ಮಾಡಿದವನು
ಓಂ ಮಾಯಾಮರಿಚಾ ಹಂತ್ರೆ ನಮಃ – ಮಾರಿಚಾ ಎಂಬ ರಾಕ್ಷಸನ ವಿನಾಶ ಮಾಡಿದವನು
ಓಂ ಮಹಾದೇವಾಯ ನಮಃ – ಮಹಾನ್ ಪ್ರಭು
ಓಂ ಮಹಾಭುಜಯ ನಮಃ – ಪ್ರಬಲ ಶಸ್ತ್ರಾಸ್ತ್ರಗಳ ಅಧಿಪತಿ
ಓಂ ಸರ್ವದೇವ ಸ್ತೂತಾಯ ನಮಃ – ಎಲ್ಲಾ ದೇವತೆಗಳಿಂದ ಸ್ತುತಿಸಲ್ಪಟ್ಟ ಭಗವಂತ
ಓಂ ಸೌಮ್ಯಾಯ ನಮಃ – ಶಾಂತ ಸ್ವಭಾವದವನು
ಓಂ ಬ್ರಹ್ಮಾಯ ನಮಃ – ಪರಮಾತ್ಮ
ಓಂ ಮುನಿ ಸಂಸ್ಥಾನಾಯ ನಮಃ – ಋಷಿಮುನಿಗಳಿಂದ ಸ್ತುತಿಸಲ್ಪಟ್ಟ ಭಗವಂತ
ಓಂ ಮಹಾಯೋಗಿನೇ ನಮಃ – ಮಹಾನ್ ಯೋಗಿ
ಓಂ ಮಹಾದರಾಯ ನಮಃ – ಶ್ರೇಷ್ಠ ವ್ಯಕ್ತಿ
ಓಂ ಸುಗ್ರೀವೇಶ ರಾಜ್ಯದೈ ನಮಃ – ರಾಜ್ಯವನ್ನು ಸುಗ್ರೀವನಿಗೆ ಹಿಂದಿರುಗಿಸಿದ ಭಗವಂತ
ಓಂ ಸರ್ವ ಪುಣ್ಯಾಧಿ ಕಫಲಯ ನಮಃ – ಪವಿತ್ರ ಕರ್ಮ, ಸತ್ಕರ್ಮಗಳ ಫಲವನ್ನು ಕೊಡುವವನು
ಓಂ ಸ್ಮೃತಾ ಸರ್ವಘ ನಶನಾಯ ನಮಃ – ಎಲ್ಲಾ ದುಃಖಗಳನ್ನು ನಿವಾರಿಸುವವನು
ಓಂ ಆದಿಪುರುಷಾಯ ನಮಃ – ಮೂಲ ಜೀವಿ
ಓಂ ಪರಮಪುರುಷಾಯ ನಮಃ – ಪರಮಾತ್ಮ
ಓಂ ಮಹಾಪುರುಷಾಯ ನಮಃ – ಮಹಾನ್ ಜೀವಿ
ಓಂ ಪುಣ್ಯೋದಯ ನಮಃ – ಅಮರತ್ವವನ್ನು ನೀಡುವವನು
ಓಂ ದಯಾಸರಾಯ ನಮಃ – ಸಹಾನುಭೂತಿಯ ಸಾಕಾರರೂಪ
ಓಂ ಪುರಾಣ ಪುರುಷೋತ್ತಮಯ ನಮಃ – ಪುರಾಣಗಳ ಸರ್ವೋಚ್ಚ ಅಸ್ತಿತ್ವವನ್ನು ಹೊಂದಿರುವವನು
ಓಂ ಸ್ಮಿತಾ ವಕ್ರಾಯ ನಮಃ – ನಗುಮುಖದ ಮಾತುಗಾರ
ಓಂ ಮಿತಾ ಭಾಶಿನೇ ನಮಃ – ಮಿತವಾದ ಮಾತು
ಓಂ ಪೂರ್ವ ಭಾಶಿನೇ ನಮಃ – ಸಂಭವಿಸಲಿರುವ ಘಟನೆಗಳ ಬಗ್ಗೆ ಮುಂಚಿತವಾಗಿ ಮಾತನಾಡುವ
ಓಂ ರಾಘವಾಯ ನಮಃ – ರಘು ರಾಜವಂಶದ ವಂಶಸ್ಥ
ಓಂ ಅನಂತ ಗುಣಗಂಭಿರಾಯ ನಮಃ – ಅನಂತ ಭವ್ಯ ಗುಣಗಳ ಅಧಿಪತಿ
ಓಂ ಧೀರದತ್ತ ಗುನೋತ್ತಮಾಯ ನಮಃ – ಶೌರ್ಯ ಗುಣಗಳ ಅಧಿಪತಿ
ಓಂ ಮಾಯಾ ಮನುಷ ಚರಿತ್ರಯ ನಮಃ – ತನ್ನ ಮಾಯೆಯ ಮೂಲಕ ಮನುಷ್ಯನಾಗಿ ಅವತಾರ ತಾಳಿದ ಭಗವಂತ
ಓಂ ಮಹಾದೇವಾದಿ ಪೂಜಿತಾಯ ನಮಃ – ಶಿವನಿಂದ ಪೂಜಿಸಲ್ಪಡುವ ದೇವರು
ಓಂ ಸೇತುಕ್ರಿತೆ ನಮಃ – ಸೇತುವೆಯ ನಿರ್ಮಾತೃ
ಓಂ ಜೀತ ವರಶಾಯ ನಮಃ – ಆಸೆಗಳನ್ನು ಜಯಿಸಿದವನು
ಓಂ ಸರ್ವ ತೀರ್ಥಾಯ ನಮಃ – ಎಲ್ಲಾ ಪವಿತ್ರ ಸ್ಥಳಗಳಲ್ಲಿಯೂ ನೆಲೆಸಿರುವವನು
ಓಂ ಹರಯೇ ನಮಃ – ವಿನಾಶಕ
ಓಂ ಶ್ಯಾಮಾಯ ನಮಃ – ಕಪ್ಪು ಮೈಬಣ್ಣದವನು
ಓಂ ಸುಂದರಾಯ ನಮಃ – ಸುಂದರವಾಗಿರುವವನು
ಓಂ ಸುರಯ ನಮಃ – ಧೈರ್ಯಶಾಲಿ
ಓಂ ಪಿತವಾಸೇ ನಮಃ – ಹಳದಿ ಬಟ್ಟೆ ಧರಿಸಿರುವವನು
ಓಂ ಧನುರ್ಧರಾಯ ನಮಃ – ಬಿಲ್ಲು ಹೊತ್ತವನು
ಓಂ ಸರ್ವ ಯಜ್ಞಾಧಿಪಯ ನಮಃ – ಯಜ್ಞದ ಅಧಿಪತಿ
ಓಂ ಯಜ್ಞೈನಿ ನಮಃ – ಯಜ್ಞಗಳನ್ನು ಮಾಡುವವನು
ಓಂ ಜರಾರಾನಾ ವರ್ಜಿತಾಯ ನಮಃ – ಜನನ ಮತ್ತು ಮರಣದ ವಿಜಯಿ
ಓಂ ವಿಭೀಷಣ ಪ್ರತಿಷ್ಠಾತ್ರೇ ನಮಃ – ಸಿಂಹಾಸನದ ಮೇಲೆ ವಿಭೀಷಣನಿಗೆ ಕಿರೀಟಧಾರಣೆ ಮಾಡಿದ ಭಗವಂತ
ಓಂ ಸರ್ವಾಭರಣ ವರ್ಜಿತಾಯ ನಮಃ – ಎಲ್ಲಾ ಅಲಂಕಾರಗಳನ್ನು ತ್ಯಜಿಸಿದವನು
ಓಂ ಪರಮಾತ್ಮನೇ ನಮಃ – ಪರಮಾತ್ಮನಿಗೆ ನಮಸ್ಕಾರ
ಓಂ ಪರಬ್ರಹ್ಮಣೇ ನಮಃ – ಸರ್ವೋಚ್ಚ ಪರಮಾತ್ಮ
ಓಂ ಸಚ್ಚಿದಾನಂದ ವಿಗ್ರಹಾಯ ನಮಃ – ಶಾಶ್ವತ ಆನಂದದ ರೂಪ
ಓಂ ಪರಸ್ಮಾಯ ಜ್ಯೋತಿಶೆ ನಮಃ – ಅತ್ಯಂತ ಅದ್ಭುತ ತೇಜಸ್ಸು
ಓಂ ಪರಮಧಾಮ್ನೆ ನಮಃ – ವೈಕುಂಠದಲ್ಲಿ ನೆಲೆಸಿರುವವನು
ಓಂ ಪರಾಕಾಶಯ ನಮಃ – ಪ್ರಕಾಶಮಾನವಾದ ಬೆಳಕು
ಓಂ ಪರಾತ್ಪಾರಾಯ ನಮಃ – ಅತ್ಯುನ್ನತವಾದುದನ್ನು ಮೀರಿದ ಅಥವಾ ಶ್ರೇಷ್ಠರಲ್ಲಿ ಶ್ರೇಷ್ಠ
ಓಂ ಪರೇಶಾಯ ನಮಃ – ಪ್ರಭುಗಳ ಪ್ರಭು
ಸೂಚನೆ: ಈ ಹೆಸರಿನ ಅರ್ಥಗಳು ಕಾಲಕ್ಕೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬದಲಾಗಬಹುದು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 am, Mon, 22 January 24