AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lord Krishna; ನಿಷ್ಕಲ್ಮಶ ಭಕ್ತಿಯುಳ್ಳ ಭಕ್ತನಿಗೆ ದಾಸನಾಗುತ್ತಾನೆ ಆ ಮಾಧವ

ಶ್ರೀಕೃಷ್ಣ ಅರ್ಜುನನ ಮೇಲೆ ತೋರಿಸುತ್ತಿರುವ ಪ್ರೀತಿಯನ್ನು ನಾರದರಿಂದ ಸಹಿಸಲು ಆಗುವುದಿಲ್ಲ. ನಾರದನ ಮನಸ್ಥಿತಿಯನ್ನು ಅರಿತ ಶ್ರೀಕೃಷ್ಣ ಯಾವುದೇ ಶಬ್ದ ಮಾಡದಂತೆ ತನ್ನ ಬಳಿ ಬರುವಂತೆ ಸೂಚಿಸುತ್ತಾನೆ. ಕೃಷ್ಣನ ಬಳಿ ಬಂದ ನಾರಾದರಿಗೆ ಕೆಳಗೆ ಬಿದ್ದ ಅರ್ಜುನನ ಒಂದು ಕೂದಲನ್ನು ತೆಗೆದುಕೊಳ್ಳುವಂತೆ ಶ್ರೀಕೃಷ್ಣ ಸೂಚಿಸುತ್ತಾನೆ.

Lord Krishna; ನಿಷ್ಕಲ್ಮಶ ಭಕ್ತಿಯುಳ್ಳ ಭಕ್ತನಿಗೆ ದಾಸನಾಗುತ್ತಾನೆ ಆ ಮಾಧವ
ಶ್ರೀ ಕೃಷ್ಣ
TV9 Web
| Updated By: ಆಯೇಷಾ ಬಾನು|

Updated on: Jan 25, 2022 | 7:15 AM

Share

ಒಮ್ಮೆ ಅರ್ಜುನನು ಕೃಷ್ಣನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡುತ್ತಿರುತ್ತಾನೆ. ಮಲಗಿದ ಅರ್ಜುನನಿಗೆ ಶ್ರೀಕೃಷ್ಣ ಮೃದುವಾಗಿ ತಟ್ಟುತ್ತಾ ಹಾಡನ್ನು ಹೇಳುತ್ತಿರುತ್ತಾನೆ. ಅಷ್ಟೇ ಅಲ್ಲ ಅರ್ಜುನನ ಕಾಲನ್ನು ನವಿರಾಗಿ ಮೆತ್ತಗೆ ಒತ್ತುತ್ತಿರುತ್ತಾನೆ. ಅದೇ ಸಂದರ್ಭದಲ್ಲಿ ನಾರದ ಮಹರ್ಷಿ ಅತ್ತ ಸಾಗುತ್ತಿರುತ್ತಾನೆ. ಈ ದೃಶ್ಯವನ್ನು ಕಂಡು ಆಶ್ಚರ್ಯವಾಗುವುದರ ಜೊತೆಗೆ ಅವರಿಗೆ ಕೋಪವೂ ಬರುತ್ತದೆ. ಶ್ರೀಮನ್ನಾರಾಯಣನ ಅಪರಿಮಿತ ಅಂತರಂಗದ ಭಕ್ತ ನಾನಲ್ಲದೇ ಮತ್ಯಾರು ಆಗಲು ಸಾಧ್ಯ? ಎಂದುಕೊಳ್ಳುತ್ತಾನೆ.

ಅರ್ಜುನನ ರೋಮ ರೋಮದಲ್ಲೂ ಕೃಷ್ಣ ಜಪ ಶ್ರೀಕೃಷ್ಣ ಅರ್ಜುನನ ಮೇಲೆ ತೋರಿಸುತ್ತಿರುವ ಪ್ರೀತಿಯನ್ನು ನಾರದರಿಂದ ಸಹಿಸಲು ಆಗುವುದಿಲ್ಲ. ನಾರದನ ಮನಸ್ಥಿತಿಯನ್ನು ಅರಿತ ಶ್ರೀಕೃಷ್ಣ ಯಾವುದೇ ಶಬ್ದ ಮಾಡದಂತೆ ತನ್ನ ಬಳಿ ಬರುವಂತೆ ಸೂಚಿಸುತ್ತಾನೆ. ಕೃಷ್ಣನ ಬಳಿ ಬಂದ ನಾರಾದರಿಗೆ ಕೆಳಗೆ ಬಿದ್ದ ಅರ್ಜುನನ ಒಂದು ಕೂದಲನ್ನು ತೆಗೆದುಕೊಳ್ಳುವಂತೆ ಶ್ರೀಕೃಷ್ಣ ಸೂಚಿಸುತ್ತಾನೆ. ನಾರದನಿಗೆ ಮತ್ತೂ ಕೋಪ ಬರುತ್ತದೆ. ಇದೇನು ಶ್ರೀಕೃಷ್ಣ ಪದೇ ಪದೇ ನನ್ನನ್ನು ಅವಮಾನಿಸುತ್ತಿದ್ದಾನಲ್ಲಾ? ದೇವರ್ಷಿಯಾದ ನಾನೆಲ್ಲಿ? ಯಃಕಶ್ಚಿತ್‌ ಮನುಷ್ಯನಾದ ಅರ್ಜುನನಲ್ಲಿ? ದೇವ ಮಾನವನಾದ ನಾನು ಹುಲು ಮಾನವನ ಕೂದಲನ್ನು ಮುಟ್ಟುವುದೇ? ಥೂ ಅಸಹ್ಯ ಎಂದುಕೊಳ್ಳುತ್ತಾನೆ.

ಆದರೆ ಕೃಷ್ಣ ಮತ್ತೆ ನಾರದನಿಗೆ ಸನ್ನೆಯ ಮೂಲಕ ಆ ಕೂದಲನ್ನು ತೆಗೆದುಕೊಂಡು ನಿನ್ನ ಕಿವಿಯಲ್ಲಿ ಇಟ್ಟುಕೋ ಎನ್ನುತ್ತಾನೆ. ತುಂಬಾ ಅಸಹ್ಯದಿಂದಲೇ ನಾರದ ಕೆಳಗೆ ಬಿದ್ದ ಅರ್ಜುನನ ಕೂದಲನ್ನು ಕೈಗೆತ್ತಿಕೊಂಡು ತನ್ನ ಕಿವಿಯ ಮೇಲೆ ಇಟ್ಟುಕೊಳ್ಳುತ್ತಾನೆ. ರೋಮವು ಕೃಷ್ಣ ಕೃಷ್ಣ, ಕೃಷ್ಣ: ಎಂದು ಹೇಳುತ್ತಿರುವುದನ್ನು ಕೇಳಿದ ನಾರದ ತಬ್ಬಿಬ್ಬಾಗುತ್ತಾನೆ. ನಂತರ ನಾರದನಿಗೆ ಈ ರೀತಿಯಾಗಿ ಹೇಳುತ್ತಾನೆ, ‘ಅರ್ಜುನನ ಮನಸ್ಸು ಹಾಗೂ ದೇಹದ ಪ್ರತಿ ಕಣ ಕಣವು ಕೃಷ್ಣ ಧ್ಯಾನವ ಮಾಡುತಿದೆ. ಅಂದ ಮೇಲೆ ಆತನ ಭಕ್ತಿಗೆ ನಾನು ದಾಸನಾಗಿ ಅವನ ಸೇವೆ ಮಾಡುವುದರಲ್ಲಿ ಅಶ್ಚರ್ಯವೆನಿದೆ?’ ಎಂದಾಗ ನಾರದನಿಗೆ ಎಲ್ಲವೂ ಅರ್ಥವಾಗುತ್ತದೆ.

ಬಿದುರಿನ ಕೂಲಿಗೆ ಉಸಿರುಕೊಟ್ಟ ಮಾಧವ ಭಕ್ತಿ ಯಾರಲ್ಲಿ ಅಲ್ಲಿ ನಾನಿರುವೆ ಎಂಬ ಸಂದೇಶದ ಇನ್ನೊಂದು ಪ್ರಸಂಗ. ಶ್ರೀ ಕೃಷ್ಣನಿಗೆ ರಾಧೆಯನ್ನು ಕಂಡರೆ ಅಪಾರ ಪ್ರೀತಿ. ಇದು ಎಲ್ಲರಿಗೂ ತಿಳಿದ ವಿಷಯವೇ. ರಾಧೆಗೂ ಶ್ರೀಕೃಷ್ಣನನ್ನು ಕಂಡರೆ ಅಷ್ಟೇ ಪ್ರೀತಿಯಿದ್ದರೂ, ಅವನ ಕೈಯಲ್ಲಿರೋ ಕೊಳಲನ್ನು ನೋಡಿ ಆ ಕೊಳಲಿಗಿರುವ ಭಾಗ್ಯ ತನಗಿಲ್ಲವಲ್ಲ ಎಂದು ಕೊರಗುತ್ತಿದ್ದಳು. ಕಾರಣ ಕೃಷ್ಣ ಎಚ್ಚರವಿರುವಾಗ ಕೊಳಲು ಅವನ ಕೈಯಲ್ಲಿದ್ದರೆ ಮಲಗಿರುವಾಗ ಅವನ ಸೊಂಟದಲ್ಲಿ ರಾರಾಜಿಸುತ್ತಿರುತ್ತಿತ್ತು.

ಹೀಗೆ ಶ್ರೀಕೃಷ್ಣ ಮತ್ತು ಕೊಳಲಿನ ಅವಿನಾಭಾವ ಸಂಬಂಧವ ನೋಡಿ ರಾಧೆ ನನಗಿಂತ ಹೆಚ್ಚು ಪುಣ್ಯವಂತನಾದ ಕೊಳಲನ್ನು ಇದರ ಬಗ್ಗೆ ಕೇಳಬೇಕು ಎಂದು ಕಾತುರದಿಂದ ಕಾಯುತಿದ್ದಳು. ಆದರೆ ಆ ಕೊಳಲು ಆ ಮಾಧವನ ಕೈಯಿಂದ ಕೆಳಗಿಳಿದರೆ ತಾನೇ? ಇಲ್ಲ ಅವಕಾಶವೇ ಸಿಗುತ್ತಿಲ್ಲ. ರಾಧೆಯ ಅಭಿಲಾಷೆಯನ್ನು ಅರಿತ ಕೃಷ್ಣನು ಒಮ್ಮೆ ಕೊಳಲನ್ನು ಪಕ್ಕಕ್ಕಿಟ್ಟು ನಿದ್ರೆ ಬಂದವನಂತೆ ಮಲಗಿದ.

ಇದೇ ಸಮಯ ಕಾಯುತ್ತಿದ್ದ ರಾಧೆ ಕೊಳಲನ್ನು ಕೈಗೆತ್ತಿಕೊಂಡು ‘ಕೊಳಲೇ, ನೀನೆಷ್ಟು ಪುಣ್ಯವಂತ ಮಾಧವನು ನಿನ್ನನ್ನು ಒಂದು ಗಳಿಗೆಯೂ ಅಗಲಿರಲಾರ. ಆದರೆ ನಿನ್ನ ಭಾಗ್ಯ ನನಗಿಲ್ಲ’ ಎಂದು ಕೊರಗುತ್ತಾ ಹೇಳಿದಳು. ಆಗ ಕೊಳಲು, ‘ಮಹಾತಾಯಿ ಏನಿದು ನಿನ್ನ ಕೊರಗು? ನೀನೇ ನೋಡು ಏನಿದೆ ನನ್ನಲ್ಲಿ? ನಾನೊಂದು ಬಿದಿರಿನ ಕೋಲು. ಈ ಕೋಲಿನಲ್ಲಿ ಹತ್ತಾರು ರಂಧ್ರಗಳು. ನನ್ನ ದೇಹವೆಲ್ಲ ಖಾಲಿ ಖಾಲಿ. ಶ್ರೀಕೃಷ್ಣನು ನನ್ನನ್ನು ಕೈಗೆತ್ತಿಕೊಂಡು ನುಡಿಸುವಾಗ ಅವನ ಉಸಿರು ನನ್ನಲ್ಲಿ ಬೆರೆತು ಅವನ ಉಸಿರಲ್ಲಿ ಉಸಿರಾಗುವೆ.

ಅವನ ಉಸಿರು ಬೆರೆತ ನನ್ನ ದೇಹ ಅದ್ಭುತ ರಾಗವನ್ನು ಹೊರಸೂಸುತ್ತದೆ. ಇದೆಲ್ಲವೂ ಅವನ ಕೃಪೆಯೇ ಹೊರತು ನನ್ನದೇನಲ್ಲ. ಆ ಮುರುಳೀಧರನು ಎಲ್ಲರ ಸಮೀಪದಲ್ಲೇ ಇದ್ದಾನೆ. ಆದರೆ ಯಾರ ಹೃದಯದಲ್ಲಿ ಸೇಡು, ಕಪಟ, ಸಿಟ್ಟು ಇರುತ್ತದೆಯೋ ಅವರ ಹೃದಯದಲ್ಲಿ ಅವನು ನೆಲೆಸಲಾರ’ ಎಂದಿತು. ಹೌದಲ್ಲವೇ? ದೇವರು ಭಕ್ತನಲ್ಲಿರುವ ಸಮರ್ಪಣಾ ಭಕ್ತಿಗೆ ದಾಸನಾಗುತ್ತಾನೆಯೇ ಹೊರತು ಅವನಲ್ಲಿರುವ ಪಾಂಡಿತ್ಯ, ಸ್ಥಾನಮಾನಗಳಿಗಲ್ಲ.

ಇದನ್ನೂ ಓದಿ: ಮಾರ್ಗಶಿರ ಮಾಸದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸುವುದೇಕೆ? ಇಲ್ಲಿದೆ ಒಲಿಸಿಕೊಳ್ಳುವ ಸೂತ್ರ

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು