ಮಾರ್ಗಶಿರ ಮಾಸದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸುವುದೇಕೆ? ಇಲ್ಲಿದೆ ಒಲಿಸಿಕೊಳ್ಳುವ ಸೂತ್ರ

ಹಿಂದೂ ಪಂಚಾಂಗದ ಪ್ರಕಾರ ಮಾರ್ಗಶಿರ ಮಾಸವು 9 ನೇ ಮಾಸವಾಗಿದೆ. ಇದನ್ನು ಧನುರ್ಮಾಸವೆಂದೂ ಕರೆಯುತ್ತಾರೆ. ಇದೇ ಮಾಸದಲ್ಲೇ ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿದ್ದು. ಹೀಗಾಗಿ ಈ ತಿಂಗಳನ್ನು ಪವಿತ್ರವೆಂದು ಆಚರಿಸಲಾಗುತ್ತೆ.

ಮಾರ್ಗಶಿರ ಮಾಸದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸುವುದೇಕೆ? ಇಲ್ಲಿದೆ ಒಲಿಸಿಕೊಳ್ಳುವ ಸೂತ್ರ
ಮಾರ್ಗಶಿರ ಮಾಸದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸುವುದೇಕೆ?

ಹಿಂದೂ ಪಂಚಾಂಗದ ಪ್ರಕಾರ ಮಾರ್ಗಶಿರ ಮಾಸವನ್ನು ಶ್ರೇಷ್ಟ ಮಾಸವೆಂದು ಪರಿಗಣಿಸಲಾಗಿದೆ. ಈ ತಿಂಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸಲಾಗಿದೆ. ಶ್ರಾವಣದಲ್ಲಿ ಶಿವ, ಕಾರ್ತಿಕದಲ್ಲಿ ವಿಷ್ಣುವನ್ನು ಆರಾಧಿಸುವಂತೆ ಮಾರ್ಗಶಿರ ಮಾಸದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸಲಾಗುತ್ತೆ. ಈ ತಿಂಗಳಲ್ಲಿ ಭಗವಾನ್ ಕೃಷ್ಣನನ್ನು ಶ್ರದ್ಧೆಯಿಂದ ಆರಾಧಿಸಿದರೆ ಅದೃಷ್ಟ ಬಲಿದು ಬರುತ್ತೆ ಎಂಬ ನಂಬಿಕೆ ಇದೆ. ಹಾಘೂ ಕೃಷ್ಣನ ಕೃಪೆಗೆ ಪಾತ್ರರಾಗುತ್ತೀರಿ. ಹಾಗಾದ್ರೆ ಕೃಷ್ಣನನ್ನು ಪೂಜಿಸುವಾಗ ನೆನಪಿಡಬೇಕಾದ ಕ್ರಮಗಳನ್ನು ಇಲ್ಲಿ ತಿಳಿಯಿರಿ.

ಹಿಂದೂ ಪಂಚಾಂಗದ ಪ್ರಕಾರ ಮಾರ್ಗಶಿರ ಮಾಸವು 9 ನೇ ಮಾಸವಾಗಿದೆ. ಇದನ್ನು ಧನುರ್ಮಾಸವೆಂದೂ ಕರೆಯುತ್ತಾರೆ. ಇದೇ ಮಾಸದಲ್ಲೇ ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿದ್ದು. ಹೀಗಾಗಿ ಈ ತಿಂಗಳನ್ನು ಪವಿತ್ರವೆಂದು ಆಚರಿಸಲಾಗುತ್ತೆ. ಇನ್ನು ಈ ಮಾಸದಲ್ಲಿ ನದಿ ಸ್ನಾನಕ್ಕೂ ವಿಶೇಷ ಮಹತ್ವವಿದೆ. ಮಾರ್ಗಶಿರ ಮಾಸದಲ್ಲಿ ನಿತ್ಯವೂ ನದಿಯಲ್ಲಿ ಸ್ನಾನ ಮಾಡುವ ಭಕ್ತರು ಪುಣ್ಯವನ್ನು ಪಡೆಯುತ್ತಾರೆ ಮತ್ತು ಮಹಿಳೆಯರ ವೈವಾಹಿಕ ಜೀವನವು ಸಂತೋಷದಿಂದ ಇರುತ್ತದೆ ಎಂದು ಹೇಳಲಾಗುತ್ತದೆ.

1. ನಿತ್ಯವೂ ಇರಲಿ ಗೀತಾಪಠಣ
ಭಗವಾನ್ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕಾದ್ರೆ ಈ ಮಾಸದ ಪ್ರತಿ ನಿತ್ಯವೂ ಶ್ರೀಮದ್ಭಗವದ್ಗೀತೆಯನ್ನು ಪಠಣೆ ಮಾಡಲೇ ಬೇಕು. ಹೀಗೆ ಗೀತಾ ಪಠಣದಿಂದ ಕೃಷ್ಣನ ಕೃಪೆಗೆ ಪಾತ್ರರಾಗುವಿರಿ.

2. ಕೃಷ್ಣನಿಗೆ ಇಷ್ಟವಾಗುವ ತುಳಸಿ ಅರ್ಪಿಸಿ
ಕೃಷ್ಣನಿಗೆ ಬೆಣ್ಣೆ, ಸಿಹಿ ಅಂದ್ರೆ ಇಷ್ಟ. ಆದ್ದರಿಂದ ಪ್ರತಿದಿನ ಕೃಷ್ಣನಿಗೆ ಬೆಣ್ಣೆ ಸಿಹಿ ಅರ್ಪಿಸಿ. ಜೊತೆಗೆ ಕೃಷ್ಣನಿಗೆ ತುಳಸಿ ಎಲೆಗಳೆಂದರೆ ಪ್ರಾಣ. ಸಾಧ್ಯವಾದರೆ, ತುಳಸಿ ದಳ ಅರ್ಪಿಸಿ ಹಾಗೂ ತುಪ್ಪದ ದೀಪವನ್ನು ಬೆಳಗಿಸಿ. ಇದರಿಂದ ಜೀವನದಲ್ಲಿ ಶುಭಾಶುಭ ಫಲಗಳನ್ನು ಪಡೆಯಬಹುದು.

3. ನದಿ ಸ್ನಾನದ ಪ್ರಾಮುಖ್ಯತೆ
ಈ ಮಾಸದಲ್ಲಿ ನದಿ ಸ್ನಾನಕ್ಕೂ ವಿಶೇಷ ಮಹತ್ವವಿದೆ. ಆದರೆ ಇಂದಿನ ಕಾಲದಲ್ಲಿ ನದಿ ಸ್ನಾನ ಮಾಡುವುದು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀರಿಗೆ ಸ್ವಲ್ಪ ಗಂಗಾಜಲವನ್ನು ಸೇರಿಸಿ ಸ್ನಾನ ಮಾಡಬಹುದು.

4. ಮಂತ್ರಗಳ ಪಠಣ
ಪೂಜೆಯ ಸಮಯದಲ್ಲಿ ಬೆಳಿಗ್ಗೆ ಮತ್ತು ಸಂಜೆ, ಓಂ ಕ್ರೀಂ ಕೃಷ್ಣಾಯ ನಮಃ ಮತ್ತು ಓಂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರಗಳನ್ನು ಪಠಿಸಿ.

5. ಹಸುವಿನ ಸೇವೆ
ಈ ಮಾಸದಲ್ಲಿ ಹಸುವಿಗೆ ವಿಶೇಷವಾಗಿ ಸೇವೆ ಸಲ್ಲಿಸಬೇಕು. ಶ್ರೀ ಕೃಷ್ಣನು ಸ್ವತಃ ಗೋಪಾಲಕನಾಗಿದ್ದನು ಮತ್ತು ಗೋವಿನ ಸೇವೆ ಮಾಡುತ್ತಿದ್ದನು. ಹೀಗಾಗಿ ಹಸುವನ್ನು ಪ್ರೀತಿಸುವ ಮತ್ತು ಸೇವೆ ಮಾಡುವ ಜನರಿಗೆ ಅವನು ತುಂಬಾ ಪ್ರಿಯ.

ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
-ಸೋಮಾರಿ, ಕೋಪ ಇತ್ಯಾದಿ ಬೇಡ. ಯಾರನ್ನೂ ನಿಂದಿಸಬೇಡಿ ಅಥವಾ ಅವಮಾನಿಸಬೇಡಿ.
-ಮದ್ಯ, ಮಾಂಸ ಇತ್ಯಾದಿಗಳನ್ನು ಸಂಪೂರ್ಣವಾಗಿ ತ್ಯಜಿಸಿ.
-ಈ ತಿಂಗಳಲ್ಲಿ ಮೊಸರು ಮತ್ತು ಜೀರಿಗೆ ಸೇವನೆಯನ್ನು ಸಹ ನಿಷೇಧಿಸಲಾಗಿದೆ.
-ಅಗತ್ಯವಿರುವವರಿಗೆ ಸಾಧ್ಯವಾದಷ್ಟು ದಾನ ಮಾಡಿ. ದಾನ ಮಾಡುವುದರಿಂದ ನಿಮ್ಮ ಎಲ್ಲಾ ಪಾಪಗಳು ದೂರವಾಗುತ್ತವೆ.

ಇದನ್ನೂ ಓದಿ: Lord Shiva: ಶಿವನ ಕೃಪೆಗೆ ಸಹಕಾರಿಯಾಗುವ ಶಿವನ ಪ್ರಭಾವಶಾಲಿ ಮಂತ್ರಗಳು ಹಾಗೂ ಅದರ ಪ್ರಯೋಜನಗಳು

Click on your DTH Provider to Add TV9 Kannada