Graphology: ನೀವು ಸಹಿ ಮಾಡುವ ಶೈಲಿ ನಿಮ್ಮ ವಕ್ತಿತ್ವದ ಬಗ್ಗೆ ತಿಳಿಸುತ್ತೆ

ಒಬ್ಬರ ಮುಖವನ್ನು ನೋಡಿ ಅವರ ಮನಸ್ಸು ಎಂತಹುದೆಂದು ಸುಲಭವಾಗಿ ತಿಳಿದುಕೊಳ್ಳಬಹುದಂತೆ. ಅದೇ ರೀತಿ ನೀವು ಮಾಡುವ ಸಹಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತಹುದೆಂದು ಹೇಳಬಹುದಂತೆ. ಅದೇ ಗ್ರಾಫಾಲಜಿ.

Graphology: ನೀವು ಸಹಿ ಮಾಡುವ ಶೈಲಿ ನಿಮ್ಮ ವಕ್ತಿತ್ವದ ಬಗ್ಗೆ ತಿಳಿಸುತ್ತೆ
ನೀವು ಸಹಿ ಮಾಡುವ ಶೈಲಿ ನಿಮ್ಮ ವಕ್ತಿತ್ವದ ಬಗ್ಗೆ ತಿಳಿಸುತ್ತೆ
Follow us
TV9 Web
| Updated By: shruti hegde

Updated on: Nov 24, 2021 | 8:09 AM

ಫೇಸ್ ಇಸ್ ದ ಇಂಡೆಕ್ಸ್ ಆಫ್ ಮೈಂಡ್ ಅಂದರೆ ಮುಖ ಮನಸ್ಸಿನ ಸೂಚಕ. ಒಬ್ಬರ ಮುಖವನ್ನು ನೋಡಿ ಅವರ ಮನಸ್ಸು ಎಂತಹುದೆಂದು ಸುಲಭವಾಗಿ ತಿಳಿದುಕೊಳ್ಳಬಹುದಂತೆ. ಅದೇ ರೀತಿ ನೀವು ಮಾಡುವ ಸಹಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತಹುದೆಂದು ಹೇಳಬಹುದಂತೆ. ಅದೇ ಗ್ರಾಫಾಲಜಿ. ನಿಮ್ಮ ಸಹಿಯ ಶೈಲಿಯಿಂದ ನಿಮ್ಮ ಮನಸ್ತತ್ವ, ನೀವು ಮಾಡುವ ಕೆಲಸಗಳು, ನಿಮ್ಮ ಮನೋವೃತ್ತಿ ಹೇಗಿರುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಂತೆ. ಇದರ ಕುರಿತಾಗಿ ಎಲ್ಲರಿಗೂ ಅಲ್ಪ ಸ್ವಲ್ಪ ತಿಳಿದೇ ಇರುತ್ತದೆ. ಆದರೆ, ನಾವು ಸಾಮಾನ್ಯವಾಗಿ ಹಲವು ರೀತಿಯಾಗಿ ಸಹಿ ಮಾಡುತ್ತಿರುತ್ತೇವೆ. ಅವುಗಳನ್ನೇ ಆಧಾರವನ್ನಾಗಿರಿಸಿಕೊಂಡು ನಮ್ಮ ವ್ಯಕ್ತಿತ್ವ ಹೇಗಿರುತ್ತದೆಂದು ಪರಿಶೀಲಿಸಬಹುದು.

ಸಹಿ ಮಾಡಿ ಕೆಳಗೆ ಗೆರೆ ಎಳೆಯುವವರು ಇಂತಹವರಿಗೆ ವಿಶ್ವಾಸ ಹೆಚ್ಚಾಗಿರುತ್ತದೆ. ಆದರೂ ಸಹ ಇವರು ಕೆಲವು ವಿಷಯಗಳನ್ನು ಕುರುಡಾಗಿ ನಂಬುತ್ತಿರುತ್ತಾರೆ. ನನಗೆ ತಿಳಿದಿರುವುದೇ ಸರಿ ಎನ್ನುವ ವಿಧದವರು. ಮನುಷ್ಯರನ್ನು ಅಷ್ಟು ಬೇಗನೆ ನಂಬಲಾರರು. ನಂಬಿದರೆ ಮಾತ್ರ ಪ್ರಾಣ ಕೊಡಲೂ ತಯಾರಿರುತ್ತಾರೆ.

ಸಹಿಯು ಕೈ ಬರವಣಿಗೆಗಿಂತಾ ದೊಡ್ಡದಾಗಿದ್ದರೆ ಇವರು ಸಮಾಜದಲ್ಲಿ ಗೌರವ, ಮರ್ಯಾದೆಗಳನ್ನು ಗಳಿಸುತ್ತಾರೆ. ಶೇಕಡಾವರು ವಿಶ್ವಾಸ ಅಧಿಕವಿರುತ್ತದೆ. ಎಲ್ಲ ವಿಷಯಗಳಿಗೂ ಮುಂದಿರುತ್ತಾರೆ. ದೈರ್ಯವಂತರು.

ಸಹಿ ಕೆಳಮುಖವಾಗಿದ್ದರೆ ಇಂತಹ ವ್ಯಕ್ತಿಗಳಲ್ಲಿ ಸ್ವಾರ್ಥ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತೆ.

ಸಹಿ ಮೇಲ್ಮುಖವಾಗಿದ್ದರೆ ಈ ರೀತಿ ಸಹಿ ಮಾಡುವವರಿಗೆ ತೀಕ್ಷ್ಣ ಬುದ್ಧಿಯಿರುತ್ತದೆ. ಧನಾತಕ ವ್ಯಕ್ತಿತ್ವ, ಯಾವುದೆ ವಿಷಯವನ್ನಾಗಲಿ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಅಭಿವೃದ್ಧಿ ಪಥದಕಡೆ ಅವರ ಪಯಣ ಇರುತ್ತೆ.

ಸಹಿಯ ಮೊದಲ ಅಕ್ಷರ ದೊಡ್ಡದಿದ್ದರೆ ಹೆಚ್ಚಾಗಿ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತಾರೆ(ಮಹಾತ್ಮ ಗಾಂಧಿ ಸಹಿಯಲ್ಲಿ ಮೊದಲ ಅಕ್ಷರದ ಗಾತ್ರ ದೊಡ್ಡದಾಗಿತ್ತು)

ಸಹಿಯ ಮೊದಲ ಅಕ್ಷರಕ್ಕೆ ಸುತ್ತಿಹಾಕಿದ್ದರೆ ಈ ರೀತಿಯ ಸಹಿ ಮಾಡುವ ಜನರಿಗೆ ಎಂದೆಂದಿಗೂ ಜಯ ಲಭಿಸುತ್ತದೆ.

ಸಹಿಯ ಕೊನೆ ಅಕ್ಷರದಿಂದ ಗೆರೆಯನ್ನು ಹಿಂದೆ ಎಳೆದಿದ್ದರೆ ಇವರು ಗತಕಾಲವನ್ನು ಕುರಿತು ಹೆಚ್ಚಾಗಿ ಆಲೋಚಿಸುತ್ತಿರುತ್ತಾರೆ. ವರ್ತಮಾನದ ಬಗ್ಗೆ ಗಮನ ಹರಿಸುವುದಿಲ್ಲ.

ಸಹಿಯಲ್ಲಿ ಚುಕ್ಕೆಗಳಿದ್ದರೆ ಇವರು ನಾನು ಯಾವಾಗಲೂ ಕಾರ್ಯನಿರತನಾಗಿರುತ್ತೇನೆ ಎನ್ನುವ ಸ್ವಭಾವದವರಾಗಿರುತ್ತಾರೆ.

ಸಹಿಯಲ್ಲಿ ಅಂತರ ಹೆಚ್ಚಾಗಿದ್ದರೆ ಆರಂಭ ಶೂರತ್ವ ಹೆಚ್ಚಾಗಿರುತ್ತದೆ. ಒಳ್ಳೆಯ ಐಡಿಯಾ ಗಳಿರುತ್ತವೆ. ಆದರೆ ಆಚರಣೆಗೆ ತರುವುದರಲ್ಲಿ ಮಾತ್ರ ವಿಫಲರಾಗುತ್ತಾರೆ.

ನಿಮ್ಮ ಸಹಿ ಮಹತ್ವ ತಿಳಿಯಲು ಸಂಪರ್ಕಿಸಿ ಸಂಖ್ಯಾ ಜ್ಯೋತಿಷಿ, ಶ್ರೀ ದೀಪ ಆರಾಧ್ಯಾ (8197319164)

ಇದನ್ನೂ ಓದಿ: ನಿಮ್ಮ ಮುಖದ ಮೇಲೆ ಇರುವ ಮಚ್ಚೆಯಿಂದ ತಿಳಿಯಿರಿ ನಿಮ್ಮ ಅದೃಷ್ಟವನ್ನು!

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ