AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sankashti Chaturthi 2021: ಇಂದು ಅಂಗಾರಕ ಸಂಕಷ್ಟ ಚತುರ್ಥಿ; ಪೂಜಾ ವಿಧಿ-ವಿಧಾನ ಹೀಗಿರಲಿ

Angaraki sankashti Chaturthi 2021: ಇಂದು ಅಂಗಾರಕ ಸಂಕಷ್ಟಿ ಚತುರ್ಥಿ. ಇಂದು ವಿಘ್ನನಿವಾರಕನಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳೆಲ್ಲ ಈಡೇರುತ್ತದೆ ಎಂಬ ನಂಬಿಕೆ ಇದೆ.

Sankashti Chaturthi 2021: ಇಂದು ಅಂಗಾರಕ ಸಂಕಷ್ಟ ಚತುರ್ಥಿ; ಪೂಜಾ ವಿಧಿ-ವಿಧಾನ ಹೀಗಿರಲಿ
ವಿಘ್ನನಿವಾರಕ ವಿನಾಯಕ
TV9 Web
| Updated By: shruti hegde|

Updated on:Nov 23, 2021 | 10:24 AM

Share

ಸಂಕಷ್ಟ ಚತುರ್ಥಿಯನ್ನು ಕೃಷ್ಣ ಪಕ್ಷದ ಚತುರ್ಥಿಯಂದು ಆಚರಿಸಲಾಗುತ್ತದೆ. ಈ ದಿನವನ್ನು ವಿಘ್ನನಿವಾರಕ ಗಣೇಶನಿಕೆ ಸಮರ್ಪಿಸಿ ಪೂಜೆಯನ್ನು ವಿಶೇಷವಾಗಿ ಕೈಗೊಳ್ಳಲಾಗುತ್ತದೆ. ತಮ್ಮೆಲ್ಲಾ ಇಷ್ಟಾರ್ಥಗಳನ್ನು ನೆರವೇರಿಸು ಎಂದು ಗಣೇಶನಲ್ಲಿ ಭಕ್ತಿಯಿಂದ ಪೂಜಿಸುತ್ತಾ ಉಪವಾಸ ಕೈಗೊಳ್ಳುವ ಮೂಲಕ ಭಕ್ತರು ವಿನಾಯಕನ ಮೊರೆ ಹೋಗುತ್ತಾರೆ. ಅದರಲ್ಲಿಯೂ ಅಂಗಾರಕ ಸಂಕಷ್ಟಿಯಾದ ಇಂದು ಗಣೇಶನನ್ನು ಭಕ್ತಿಯಿಂದ ಬೇಡಿಕೊಂಡರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನದಂದು ವಿಶೇಷವಾಗಿ ಪೂಜೆ ಕೈಗೊಂಡು ನಿಮ್ಮ ಸಂಕಷ್ಟಗಳನ್ನು ವಿನಾಯಕನಲ್ಲಿ ಹೇಳಿಕೊಂಡು ಸಮಸ್ಯೆಯ ಪರಿಹಾರಕ್ಕಾಗಿ ಭಕ್ತಿಯಿಂದ ಬೇಡಿಕೊಳ್ಳಿ.

ಈ ಬಾರಿ ಸಂಕಷ್ಟ ಚತುರ್ಥಿ ಮಂಗಳವಾರ ಬಂದಿರುವುದರಿಂದ ಇದನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ. ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದ ನೀವು ಸ್ನಾನ ಮಾಡಿ ಶುದ್ಧ ಬಟ್ಟೆಗಳನ್ನು ತೊಟ್ಟು ವಿಘ್ನ ನಿವಾರಕ ವಿನಾಯಕನ ಪೂಜೆ ಕೈಗೊಳ್ಳಬಹುದು. ಇಂದು ಉಪವಾಸ ಕೈಗೊಳ್ಳುವ ಮೂಲಕ ಭಕ್ತರು ವಿನಾಯಕನ ಮೊರೆ ಹೋಗುತ್ತಾರೆ. ವಿನಾಯಕನಿಗೆ ಇಷ್ಟವಾದ ಪಂಚಕಜ್ಜಾಯ, ಮೋದಕವನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಕೈಗೊಳ್ಳುತ್ತಾರೆ. ಗಣೇಶನ ಭಜನೆ, ಸ್ತುತಿ, ಹಾಡುಗಳನ್ನು ಹೇಳುತ್ತಾ, ಮಂತ್ರವನ್ನು ಪಠಿಸುತ್ತಾ ಗಣೇಶನನ್ನು ಮನಃಪೂರ್ವಕವಾಗಿ ನೆನೆಯುತ್ತಾರೆ.

ಉಪವಾಸದ ಸಮಯದಲ್ಲಿ ಓಂ ಗಣೇಶಾಯ ನಮಃ ಮಂತ್ರವನ್ನು ಪಠಿಸಬಹುದು. ಮಾಂಸ, ಮದ್ಯದಿಂದ ಇಂದು ಸಂಪೂರ್ಣವಾಗಿ ದೂರವಿರಬೇಕು. ತಾಳ್ಮೆಯಿಂದ ನಡೆದುಕೊಳ್ಳಬೇಕು ಜೊತೆಗೆ ಆಡುವ ಮಾತು ನಿಯಂತ್ರಣದಲ್ಲಿರಬೇಕು. ಗಣೇಶನದಲ್ಲಿ ಭಕ್ತಿಯಿಂದ ಬೇಡಿಕೊಳ್ಳುವಾಗ ನೀವು ಈ ಕೆಲವು ಅಂಶಗಳನ್ನು ನೆನಪಿನಲ್ಲಿಡಬೇಕಾದುದು ಒಳ್ಳೆಯದು.

ಆಚರಣೆಯ ಸಮಯ ಸಂಕಷ್ಟ ಚತುರ್ಥಿ ಚಂದ್ರೋದಯ: ಇಂದು ಮಂಗಳವಾರ ನವೆಂಬರ್ 23 ರಾತ್ರಿ 8:29ಕ್ಕೆ ಚತುರ್ಥಿ ತಿಥಿ ಆರಂಭ: ನವೆಂಬರ್ 22 ನಿನ್ನೆ ರಾತ್ರಿ 10:27ರಿಂದ ಆರಂಭ ಚತುರ್ಥಿ ತಿಥಿ ಸಮಾಪ್ತಿ: ನವೆಂಬರ್ 23 ಮಂಗಳವಾರ ಇಂದು ಮಧ್ಯರಾತ್ರಿ 12:55ವರೆಗೆ

ಗಮನಿಸಬೇಕಾದ ಕೆಲವು ವಿಷಯಗಳು ಸಂಕಷ್ಟ ಚತುರ್ಥಿಯಂದು ಬೇಗ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಬೇಕು. ಗಣೇಶನ ವಿಗ್ರಹಕ್ಕೆ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಹಲವರು ಪೂರ್ತಿ ದಿನ ಉಪವಾಸ ಕೈಗೊಳ್ಳಲಾಗುತ್ತಾರೆ. ಮದ್ಯಪಾನ, ಧೂಮಪಾನದಿಂದ ಸಂಪೂರ್ಣವಾಗಿ ದೂರವಿರಬೇಕು. ಗಣೇಶನ ಸ್ತುತಿ, ಭಜನೆ, ಹಾಡುಗಳನ್ನು ಹೇಳುತ್ತಾ ವಿನಾಯಕನನ್ನು ನೆನೆಯಬೇಕು. ಕಟ್ಟುನಿಟ್ಟಾದ ವ್ರತ ಕೈಗೊಳ್ಳಬಹುದು. ವ್ರತದ ಆಚರಣೆಯಲ್ಲಿ ಯಾವುದೇ ಭಂಗ ಬಾರದಂತೆ ಎಚ್ಚರಿಕೆಯಲ್ಲಿ ಪೂಜೆ ನೆರವೇರಿಸಬೇಕು. ದೇವರನ್ನು ನಿಷ್ಠೆಯಿಂದ ಪೂಜಿಸುತ್ತಾ, ಭಕ್ತಿಯಿಂದ ಬೇಡಿಕೊಳ್ಳುತ್ತಾ ಗಣೇಶನ ಆಶೀರ್ವಾದ ಪಡೆಯಬಹುದು.

ಇದನ್ನೂ ಓದಿ:

ಇಂದು ಅಂಗಾರಕ ಸಂಕಷ್ಟ ಚತುರ್ಥಿ; ಈ ಪವಿತ್ರ ದಿನದ ಮಹತ್ವ ನೀವು ತಿಳಿಯಲೇ ಬೇಕು

ಇಂದು ಅಂಗಾರಕ ಸಂಕಷ್ಟ ಚತುರ್ಥಿ; ವಿಘ್ನ ನಿವಾರಕನಲ್ಲಿ ಸಂಕಷ್ಟವನ್ನೆಲ್ಲ ದೂರ ಮಾಡು ಎಂದು ಬೇಡಿಕೊಳ್ಳುವ ದಿನವಿದು

Published On - 10:11 am, Tue, 23 November 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ