February 2022 Festival Calendar: ಮಾಘ ನವರಾತ್ರಿಯಿಂದ ಹಿಡಿದು ವಸಂತ ಪಂಚಮಿಯಂತಹ ಫೆಬ್ರವರಿ ತಿಂಗಳಲ್ಲಿ ಬರುವ ಪ್ರಮುಖ ದಿನಗಳು

| Updated By: ಆಯೇಷಾ ಬಾನು

Updated on: Feb 01, 2022 | 6:59 AM

ಮಾಘ ಮಾಸದಲ್ಲಿ ಮಾಘ ನವರಾತ್ರಿಯಿಂದ ಹಿಡಿದು ವಸಂತ ಪಂಚಮಿಯಂತಹ ವಾರ್ಷಿಕ ಹಬ್ಬಗಳಿವೆ. ಹಾಗೆಯೇ ಫಾಲ್ಗುಣದಲ್ಲೂ ಕೆಲವು ಪ್ರಮುಖ ದಿನಗಳಿವೆ. ಈ ಎರಡೂ ಮಾಸಗಳು ಇಂಗ್ಲಿಷ್ ಕ್ಯಾಲೆಂಡರ್ನ ಫೆಬ್ರವರಿ ತಿಂಗಳಲ್ಲಿ ಹಂಚಿಕೊಂಡಿವೆ.

February 2022 Festival Calendar: ಮಾಘ ನವರಾತ್ರಿಯಿಂದ ಹಿಡಿದು ವಸಂತ ಪಂಚಮಿಯಂತಹ ಫೆಬ್ರವರಿ ತಿಂಗಳಲ್ಲಿ ಬರುವ ಪ್ರಮುಖ ದಿನಗಳು
ಸಾಂದರ್ಭಿಕ ಚಿತ್ರ
Follow us on

ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸವನ್ನು ಅತ್ಯಂತ ಪವಿತ್ರ ತಿಂಗಳುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಜನರು ಗಂಗಾ, ಯಮುನಾ, ಗೋದಾವರಿ, ನರ್ಮದಾ, ಕಾವೇರಿ, ಕೃಷ್ಣ ಮುಂತಾದ ನದಿಗಳ ಪವಿತ್ರ ನೀರಿನಲ್ಲಿ ಸ್ನಾನ ಮಾಡುವ ಸಂಪ್ರದಾಯವನ್ನು ಅನುಸರಿಸುತ್ತಾರೆ. ಇದಲ್ಲದೆ, ಮಾಘ ಮಾಸದಲ್ಲಿ ಮಾಘ ನವರಾತ್ರಿಯಿಂದ ಹಿಡಿದು ವಸಂತ ಪಂಚಮಿಯಂತಹ ವಾರ್ಷಿಕ ಹಬ್ಬಗಳಿವೆ. ಹಾಗೆಯೇ ಫಾಲ್ಗುಣದಲ್ಲೂ ಕೆಲವು ಪ್ರಮುಖ ದಿನಗಳಿವೆ. ಈ ಎರಡೂ ಮಾಸಗಳು ಇಂಗ್ಲಿಷ್ ಕ್ಯಾಲೆಂಡರ್ನ ಫೆಬ್ರವರಿ ತಿಂಗಳಲ್ಲಿ ಹಂಚಿಕೊಂಡಿವೆ.

ಮಾಘ ನವರಾತ್ರಿ -ಫೆಬ್ರವರಿ 2
ದುರ್ಗಾ ಮಾತೆಯ ಭಕ್ತರು ವರ್ಷದಲ್ಲಿ ನಾಲ್ಕು ಬಾರಿ ನವರಾತ್ರಿಯನ್ನು ಆಚರಿಸುತ್ತಾರೆ. ನವರಾತ್ರಿಗಳಲ್ಲಿ ಒಂದು ಮಾಘ ಮಾಸದ ಸಮಯದಲ್ಲಿ ಬರುತ್ತದೆ. ಇದನ್ನು ಗುಪ್ತ ನವರಾತ್ರಿ ಎಂದೂ ಕರೆಯುತ್ತಾರೆ. ಮಾಘ ನವರಾತ್ರಿಯು ಮಾಘ, ಶುಕ್ಲ ಪಕ್ಷ ಪ್ರತಿಪದ ತಿಥಿಯಂದು ಪ್ರಾರಂಭವಾಗುತ್ತದೆ. ಈ ವರ್ಷ ಮಾಘ ನವರಾತ್ರಿ ಫೆಬ್ರವರಿ 2 ರಂದು ಪ್ರಾರಂಭವಾಗುತ್ತವೆ.

ಗಣೇಶ ಜಯಂತಿ ಮತ್ತು ವಿನಾಯಕ ಚತುರ್ಥಿ -ಫೆಬ್ರವರಿ 4
ಗಣೇಶನಿಗೆ ಸಮರ್ಪಿತವಾಗಿರುವ ವಿನಾಯಕ ಚತುರ್ಥಿ ವ್ರತವನ್ನು ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಈ ಬಾರಿ ವಿನಾಯಕ ಚತುರ್ಥಿಯನ್ನು ಫೆಬ್ರವರಿ 4 ರಂದು ಆಚರಿಸಲಾಗುತ್ತದೆ. ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಜನರು ಮಾಘ, ಚತುರ್ಥಿ ಶುಕ್ಲ ಪಕ್ಷದಂದು ಗಣೇಶ ಜಯಂತಿಯನ್ನು ಆಚರಿಸುತ್ತಾರೆ. ಕೆಲ ಕಡೆ ಈ ವರ್ಷ ಫೆಬ್ರವರಿ 4 ರಂದು ಗಣೇಶ ಜಯಂತಿಯನ್ನು ಆಚರಿಸಲಾಗುವುದು.

ವಸಂತ ಪಂಚಮಿ -ಫೆಬ್ರವರಿ 5
ವಸಂತ ಪಂಚಮಿಯು ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ. ಇದಲ್ಲದೆ, ಇದು ಕಲಿಕೆ, ಕಲೆ ಮತ್ತು ಸಂಗೀತದ ದೇವತೆಯಾದ ದೇವಿ ಸರಸ್ವತಿಗೆ ಸಮರ್ಪಿಸಲಾಗಿದೆ. ಆದ್ದರಿಂದ, ಜನರು ಮಾತೃ ದೇವತೆಗೆ ನಮನ ಸಲ್ಲಿಸಲು ಸರಸ್ವತಿ ಪೂಜೆಯನ್ನು ಮಾಡುತ್ತಾರೆ. ಈ ವರ್ಷ ವಸಂತ ಪಂಚಮಿಯನ್ನು ಫೆಬ್ರವರಿ 5 ರಂದು ಆಚರಿಸಲಾಗುತ್ತದೆ.

ಸ್ಕಂದ ಷಷ್ಟಿ ವ್ರತ -ಫೆಬ್ರವರಿ 6
ಸುಬ್ರಹ್ಮಣ್ಯನಿಗೆ ಈ ದಿನವನ್ನು ಸಮರ್ಪಿಸಲಾಗಿದೆ. ಶುಕ್ಲ ಪಕ್ಷದ ಷಷ್ಠಿ ತಿಥಿಯಂದು ಸ್ಕಂದ ಷಷ್ಟಿ ವ್ರತವನ್ನು ಆಚರಿಸಲಾಗುತ್ತದೆ. ಈ ವ್ರತವನ್ನು ತಮಿಳುನಾಡಿನ ಭಕ್ತರು ವ್ಯಾಪಕವಾಗಿ ಆಚರಿಸುತ್ತಾರೆ. ಈ ತಿಂಗಳು, ಫೆಬ್ರವರಿ 6 ರಂದು ಸ್ಕಂದ ಷಷ್ಠಿ ವ್ರತವನ್ನು ಆಚರಿಸಲಾಗುತ್ತದೆ.

ರಥ ಸಪ್ತಮಿ -ಫೆಬ್ರವರಿ 7
ರಥ ಸಪ್ತಮಿಯನ್ನು ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಆಚರಿಸಲಾಗುತ್ತದೆ. ಆರೋಗ್ಯ ಸಪ್ತಮಿ ಅಥವಾ ಅಚಲ ಸಪ್ತಮಿ ಎಂದೂ ಕರೆಯಲ್ಪಡುವ ಈ ಹಬ್ಬವು ಸೂರ್ಯ ದೇವನ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಈ ವರ್ಷ ರಥ ಸಪ್ತಮಿಯನ್ನು ಫೆಬ್ರವರಿ 7 ರಂದು ಆಚರಿಸಲಾಗುವುದು.

ಭೀಷ್ಮ ಅಷ್ಟಮಿ -ಫೆಬ್ರವರಿ 8
ಭೀಷ್ಮ ಅಷ್ಟಮಿಯು ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಭೀಷ್ಮನ ಮರಣ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಈ ವರ್ಷ ಫೆಬ್ರವರಿ 8 ರಂದು ಭೀಷ್ಮ ಅಷ್ಟಮಿ ಆಚರಿಸಲಾಗುವುದು.

ಜಯ ಏಕಾದಶಿ ಮತ್ತು ವಿಜಯ ಏಕಾದಶಿ -ಫೆಬ್ರವರಿ 12 ಮತ್ತು ಫೆಬ್ರವರಿ 26
ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಜಯ ಏಕಾದಶಿ. ಮತ್ತು ಫಾಲ್ಗುಣದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ವಿಜಯ ಏಕಾದಶಿಯನ್ನು ಆಚರಿಸಲಾಗುತ್ತೆ. ಈ ದಿನದಂದು, ಭಗವಾನ್ ವಿಷ್ಣುವಿನ ಭಕ್ತರು ಉಪವಾಸವನ್ನು ಆಚರಿಸುತ್ತಾರೆ. ದ್ವಾದಶಿಯಂದು ಆಹಾರ ಸೇವಿಸುತ್ತಾರೆ. ಈ ವರ್ಷ, ಜಯ ಮತ್ತು ವಿಜಯ ಏಕಾದಶಿಗಳು ಫೆಬ್ರವರಿ 12 ಮತ್ತು 26 ರಂದು ಆಚರಿಸಲಾಗುತ್ತದೆ.

ಕುಂಭ ಸಂಕ್ರಾಂತಿ -ಫೆಬ್ರವರಿ 13
ಸೂರ್ಯನು ವಾರ್ಷಿಕವಾಗಿ ಮಕರದಿಂದ ಕುಂಭಕ್ಕೆ ಪ್ರವೇಶಿಸುವ ಸಮಯವೇ ಕುಂಭ ಸಂಕ್ರಾಂತಿ. ಈ ಬಾರಿ ಕುಂಭ ಸಂಕ್ರಾಂತಿ ಫೆಬ್ರವರಿ 13ರಂದು ಬಂದಿದೆ.

ಪ್ರದೋಷ ವ್ರತ -ಫೆಬ್ರವರಿ 14 ಮತ್ತು ಫೆಬ್ರವರಿ 28
ಭಕ್ತರು ಚಂದ್ರನ ಹದಿನೈದು ದಿನಗಳ ತ್ರಯೋದಶಿ ತಿಥಿಯಂದು ಭಗವಾನ್ ಶಿವನಿಗೆ ಸಮರ್ಪಿತವಾದ ಪ್ರದೋಷ ವ್ರತವನ್ನು ಆಚರಿಸುತ್ತಾರೆ. ಆದ್ದರಿಂದ ವರ್ಷಕ್ಕೆ 32 ಪ್ರದೋಷ ವ್ರತಗಳನ್ನು ಆಚರಿಸಲಾಗುತ್ತದೆ. ಈ ತಿಂಗಳು ಪ್ರದೋಷವನ್ನು ಫೆಬ್ರವರಿ 14 ಮತ್ತು 28 ರಂದು ಆಚರಿಸಲಾಗುತ್ತದೆ.

ಮಾಘ ಪೂರ್ಣಿಮಾ -ಫೆಬ್ರವರಿ 16
ಮಾಘ ಹುಣ್ಣಿಮೆಯ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗಂಗಾ, ಯಮುನಾ ಮತ್ತು ಇತರ ಪವಿತ್ರ ನದಿಗಳ ಪವಿತ್ರ ನೀರಿನಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಕೆಲವರು ಸತ್ಯನಾರಾಯಣ ಪೂಜೆಯನ್ನು ಸಹ ಆಯೋಜಿಸುತ್ತಾರೆ. ಇತರರು ಸೂರ್ಯೋದಯದಿಂದ ಚಂದ್ರೋದಯದವರೆಗೆ ಉಪವಾಸವನ್ನು ಆಚರಿಸುತ್ತಾರೆ. ಈ ವರ್ಷ ಮಾಘ ಪೂರ್ಣಿಮೆ ಫೆಬ್ರವರಿ 16 ರಂದು ಬರುತ್ತದೆ.

ದ್ವಿಜಪ್ರಿಯ ಸಂಕಷ್ಟ ಚತುರ್ಥಿ -ಫೆಬ್ರವರಿ 20
ಸಂಕಷ್ಟಿ ಚತುರ್ಥಿ ವ್ರತವನ್ನು ಕೃಷ್ಣ ಪಕ್ಷ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಈ ವ್ರತವು ಗಣೇಶನಿಗೆ ಸಮರ್ಪಿತವಾಗಿದೆ. ತೊಂದರೆ ಅಥವಾ ಅಡೆತಡೆಗಳನ್ನು ನಿವಾರಿಸುವ ಗಣೇಶನಿಗೆ ವಿಶೇಷ ದಿನವಾಗಿದೆ. ಫಾಲ್ಗುಣ ಅಥವಾ ಮಾಘ ಮಾಸದಲ್ಲಿ ಬರುವ ಸಂಕಷ್ಟವನ್ನು ದ್ವಿಜಪ್ರಿಯ ಸಂಕಷ್ಟ ಗಣೇಶ ಚತುರ್ಥಿ ಎಂದು ಕರೆಯಲಾಗುತ್ತದೆ.

ಯಶೋದಾ ಜಯಂತಿ -ಫೆಬ್ರವರಿ 22
ಭಕ್ತರು ಯಶೋದಾ ಜಯಂತಿಯನ್ನು ಕೃಷ್ಣ ಪಕ್ಷ ಷಷ್ಠಿ ತಿಥಿಯಂದು ಆಚರಿಸುತ್ತಾರೆ. ಭಗವಾನ್ ವಿಷ್ಣುವಿನ ಒಂಬತ್ತನೇ ಅವತಾರವಾದ ಶ್ರೀ ಕೃಷ್ಣನು ದೇವಕಿ ಮತ್ತು ವಸುದೇವನಿಗೆ ಜನಿಸಿದನು ಆದರೆ ಯಶೋದೆ ಮತ್ತು ನಂದರಿಂದ ಬೆಳೆದನು. ಆದ್ದರಿಂದ, ಯಶೋದೆಯನ್ನು ಶ್ರೀ ಕೃಷ್ಣನ ತಾಯಿ ಎಂದು ಪರಿಗಣಿಸಲಾಗಿದೆ. ಈ ವರ್ಷ ಫೆಬ್ರವರಿ 22 ರಂದು ಯಶೋದಾ ಜಯಂತಿಯನ್ನು ಆಚರಿಸಲಾಗುವುದು.

ಶಬರಿ ಜಯಂತಿ -ಫೆಬ್ರವರಿ 23
ಶಬರಿ ಜಯಂತಿಯು ಶ್ರೀರಾಮನ ಶ್ರೇಷ್ಠ ಭಕ್ತರಲ್ಲಿ ಒಬ್ಬರಾದ ಶಬರಿ ಎಂಬ ತಪಸ್ವಿ ಮಹಿಳೆಯ ಜನ್ಮದಿನವನ್ನು ಸ್ಮರಿಸುತ್ತದೆ. ಈ ವರ್ಷ ಶಬರಿ ಜಯಂತಿಯನ್ನು ಫೆಬ್ರವರಿ 23 ರಂದು ಆಚರಿಸಲಾಗುವುದು.

ಜಾನಕಿ ಜಯಂತಿ -ಫೆಬ್ರವರಿ 24
ಫಾಲ್ಗುಣ ಮಾಸದ ಕೃಷ್ಣ ಪಕ್ಷ ಅಥವಾ ಮಾಘ, ಕೃಷ್ಣ ಪಕ್ಷ ಅಷ್ಟಮಿ ತಿಥಿಯು ಶ್ರೀ ರಾಮನ ಪತ್ನಿಯಾದ ಸೀತಾ ಮಾತೆಯ ಭಕ್ತರಿಗೆ ಬಹಳ ಮಹತ್ವದ್ದಾಗಿದೆ. ಈ ದಿನ ಅವಳ ಜನ್ಮ ವಾರ್ಷಿಕೋತ್ಸವವನ್ನು ನೆನಪಿಸುತ್ತದೆ.

ಇದನ್ನೂ ಓದಿ: Mauni amavasya 2022: ಮೌನಿ ಅಮಾವಾಸ್ಯೆಯ ದಾನಕ್ಕಿದೆ ವಿಶೇಷ ಮಹತ್ವ, ಪಿತೃ ದೋಷದಿಂದಲೂ ಮುಕ್ತರಾಗಬಹುದು

Published On - 6:30 am, Tue, 1 February 22