AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mauni amavasya 2022: ಮೌನಿ ಅಮಾವಾಸ್ಯೆಯ ದಾನಕ್ಕಿದೆ ವಿಶೇಷ ಮಹತ್ವ, ಪಿತೃ ದೋಷದಿಂದಲೂ ಮುಕ್ತರಾಗಬಹುದು

ಸೋಮಾವತಿ ಅಮಾವಾಸ್ಯೆ: ಮೌನಿ ಅಮಾವಾಸ್ಯೆಯ ದಿನ ಸ್ನಾನದ ನಂತರ ದಾನವನ್ನು ಮಾಡಿ ಶಿವನ ದರ್ಶನ ಮಾಡಬೇಕು. ಬಳಿಕ ಪಿತೃ ದೋಷದಿಂದ ಮುಕ್ತಿ ಮತ್ತು ಜೀವನದಲ್ಲಿ ಶಾಂತಿ, ನೆಮ್ಮದಿ, ಸಂತೋಷಕ್ಕಾಗಿ ಶಿವನನ್ನು ಪೂಜಿಸಬೇಕು. ಶಿವನ ಕೃಪೆಯಿಂದ ಪಿತೃ ದೋಷದಿಂದ ಮುಕ್ತರಾಗಬಹುದು.

Mauni amavasya 2022: ಮೌನಿ ಅಮಾವಾಸ್ಯೆಯ ದಾನಕ್ಕಿದೆ ವಿಶೇಷ ಮಹತ್ವ, ಪಿತೃ ದೋಷದಿಂದಲೂ ಮುಕ್ತರಾಗಬಹುದು
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Jan 31, 2022 | 2:53 PM

Share

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಘ ಕೃಷ್ಣ ಅಮವಾಸ್ಯೆಯನ್ನು ಮೌನಿ ಅಮಾವಾಸ್ಯೆ (Mauni Amavasya) ಎಂದು ಆಚರಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಮೌನಿ ಅಮಾವಾಸ್ಯೆಯ ದಿನದಂದು ನದಿ ಸ್ನಾನ ಮತ್ತು ದಾನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ದಿನದಂದು ನೀಡಿದ ದಾನಕ್ಕೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರತಿ ವರ್ಷ ಪ್ರಯಾಗರಾಜ್‌ನಲ್ಲಿ ನಡೆಯುವ ಮಾಘಮೇಳದಲ್ಲಿ, ಮೌನಿ ಅಮಾವಾಸ್ಯೆಯಂದು ಲಕ್ಷಾಂತರ ಭಕ್ತರು ಸ್ನಾನ ಮಾಡಲು ತ್ರಿವೇಣಿ ಸಂಗಮವನ್ನು ತಲುಪುತ್ತಾರೆ. ಆದರೆ ಈ ಬಾರಿಯ ಮಾಘ ಅಮಾವಾಸ್ಯೆ 2022ರ ಮೊದಲ ಸೋಮಾವತಿ ಅಮಾವಾಸ್ಯೆಯಾಗಿದೆ. ಹಾಗಾಗಿ ಈ ಅಮಾವಾಸ್ಯೆಯ ಮಹತ್ವ ಹೆಚ್ಚಿದೆ. ಈ ದಿನ ಗಂಗಾನದಿಯಲ್ಲಿ ಬೆಲ್ಲ, ತುಪ್ಪ, ಎಳ್ಳು ಸೇರಿಸಿ ಜೇನು ತುಪ್ಪದ ಪಾಯಸವನ್ನು ಪೂರ್ವಜರಿಗೆ ಭಕ್ತಿಪೂರ್ವಕವಾಗಿ ಅರ್ಪಿಸುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ.

ಮೌನಿ ಅಮಾವಾಸ್ಯೆ 2022 ರ ಮುಹೂರ್ತ ಮೌನಿ ಅಮಾವಾಸ್ಯೆಯನ್ನು 2022 ರ ಜನವರಿ 31 ರಂದು ಸೋಮವಾರ ಆಚರಿಸಲಾಗುವುದು. ಮೌನಿ ಅಥವಾ ಸೋಮಾವತಿ ಅಮಾವಾಸ್ಯೆ ದಿನಾಂಕ- ಜನವರಿ 31 ರ ಮಧ್ಯಾಹ್ನ 2.20 ರಿಂದ ಆರಂಭವಾಗುತ್ತದೆ. ಮೌನಿ ಅಥವಾ ಸೋಮಾವತಿ ಅಮಾವಾಸ್ಯೆ ಜನವರಿ 1 ರಂದು ಮಂಗಳವಾರ 11.18 ಕ್ಕೆ ಮುಕ್ತಾಯವಾಗಲಿದೆ.

ಮೌನಿ ಅಮಾವಾಸ್ಯೆ ಪೂಜೆ ಮೌನಿ ಅಮಾವಾಸ್ಯೆಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛಗೊಳಿಸಿ. ಮೌನವಾಗಿ ಉಪವಾಸ ಮಾಡಬೇಕು. ಗಂಗಾಜಲ ಹಾಕಿದ ನೀರಿನಲ್ಲಿ ಸ್ನಾನ ಮಾಡಿ, ಶುಭ್ರವಾದ ಬಟ್ಟೆಗಳನ್ನು ಧರಿಸಿ ಕಪ್ಪು ಎಳ್ಳನ್ನು ಸುರಿಯುವ ಮೂಲಕ ಸೂರ್ಯ ದೇವರಿಗೆ ನೀರನ್ನು ಅರ್ಪಿಸ ಬೇಕು. ಈ ದಿನದಂದು ಪೂರ್ವಜರನ್ನು ಪೂಜಿಸುವ ಪದ್ಧತಿಯಿದೆ. ಇದರಿಂದಾಗಿ ಪೂರ್ವಜರು ಸಂತುಷ್ಟರಾಗಿ ವರ ಮತ್ತು ಆಶೀರ್ವಾದಗಳನ್ನು ನೀಡುತ್ತಾರೆ. ನದಿ ಅಥವಾ ಸರೋವರದ ದಡದಲ್ಲಿ ಸ್ನಾನ ಮಾಡುತ್ತಿದ್ದರೆ, ಎಳ್ಳು ಮಿಶ್ರಿತ ನೀರನ್ನು ನದಿಯಲ್ಲಿ ಹರಿಯಲು ಬಿಡಬೇಕು. ಹಣ್ಣು, ಹೂವು, ಧೂಪ, ದೀಪ ಇತ್ಯಾದಿಗಳಿಂದ ವಿಷ್ಣುವನ್ನು ಪೂಜಿಸಬೇಕು. ಪೂಜೆಯ ನಂತರ, ಬಡವರಿಗೆ ಅಥವಾ ಬ್ರಾಹ್ಮಣರಿಗೆ ಆಹಾರವನ್ನು ನೀಡಬೇಕು.

ಮೌನಿ ಅಮಾವಾಸ್ಯೆಯ ದಿನ ಸ್ನಾನದ ನಂತರ ದಾನವನ್ನು ಮಾಡಿ ಶಿವನ ದರ್ಶನ ಮಾಡಬೇಕು. ಬಳಿಕ ಪಿತೃ ದೋಷದಿಂದ ಮುಕ್ತಿ ಮತ್ತು ಜೀವನದಲ್ಲಿ ಶಾಂತಿ, ನೆಮ್ಮದಿ, ಸಂತೋಷಕ್ಕಾಗಿ ಶಿವನನ್ನು ಪೂಜಿಸಬೇಕು. ಶಿವನ ಕೃಪೆಯಿಂದ ಪಿತೃ ದೋಷದಿಂದ ಮುಕ್ತರಾಗಬಹುದು.

ಇದನ್ನೂ ಓದಿ: ಸೂರ್ಯಗ್ರಹಣ ಸಂಭವಿಸುವ ದಿನವೇ ಶನಿ ಅಮಾವಾಸ್ಯೆ; ಈ ದಿನದ ಮಹತ್ವವೇನು? ಶನಿ ದೋಷದಿಂದ ಮುಕ್ತಿ ಪಡೆಯಲು ಇಲ್ಲಿದೆ ಸೂತ್ರ

Published On - 2:50 pm, Mon, 31 January 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ