Gaj Kesari Yog: ಗಜಕೇಸರೀ ಯೋಗ ಯಾರಿಗೆ ಇರತ್ತೆ? ಅವರಿಗೆ ಯಾವಾಗಲೂ ಇರತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2023 | 6:30 AM

ಮುಖ್ಯ ಯೋಗಗಳಲ್ಲಿ ಗಜಕೇಸರೀ ಯೋಗವೂ ಒಂದು. ಆದರೆ ಈ ಯೋಗವು ಮಾತ್ರ ಎಲ್ಲಿಲ್ಲದ ಪ್ರಚಾರವನ್ನು ಪಡೆದುಕೊಂಡು ಪ್ರಸಿದ್ಧವಾದುದಾಗಿದೆ. ಏಕೆಂದರೆ ಇದರಿಂದ ಲಾಭವು ಬಹಳಷ್ಟು ಇರುವ ಕಾರಣ ಈ ಯೋಗವನ್ನು ಹೆಚ್ಚು ಜನ ನಿರೀಕ್ಷಿಸುತ್ತಾರೆ.

Gaj Kesari Yog: ಗಜಕೇಸರೀ ಯೋಗ ಯಾರಿಗೆ ಇರತ್ತೆ? ಅವರಿಗೆ ಯಾವಾಗಲೂ ಇರತ್ತಾ?
ಪ್ರಾತಿನಿಧಿಕ ಚಿತ್ರ
Follow us on

ಜ್ಯೋತಿಷ್ಯದಲ್ಲಿ ಇರುವ ಹಲವಾರು ಮುಖ್ಯ ಯೋಗಗಳಲ್ಲಿ ಗಜಕೇಸರೀ ಯೋಗವೂ (Gaj Kesari Yog)  ಒಂದು. ಆದರೆ ಈ ಯೋಗವು ಮಾತ್ರ ಎಲ್ಲಿಲ್ಲದ ಪ್ರಚಾರವನ್ನು ಪಡೆದುಕೊಂಡು ಪ್ರಸಿದ್ಧವಾದುದಾಗಿದೆ. ಏಕೆಂದರೆ ಇದರಿಂದ ಲಾಭವು ಬಹಳಷ್ಟು ಇರುವ ಕಾರಣ ಈ ಯೋಗವನ್ನು ಹೆಚ್ಚು ಜನ ನಿರೀಕ್ಷಿಸುತ್ತಾರೆ. ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯ.

ಹೇಗೆ ಆಗುತ್ತದೆ ಈ ಯೋಗ?

ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಒಂದು, ನಾಲ್ಕು, ಏಳು ಮತ್ತು ಹತ್ತರಲ್ಲಿ ಚಂದ್ರ ಮತ್ತು ಗುರು ಇವರಿಬ್ಬರೂ ಒಟ್ಟಿಗೇ ಇದ್ದರೆ ಗಜಕೇಸರೀ ಯೋಗ ಸಂಭವಿಸುತ್ತದೆ. ಅಷ್ಟೇ ಅಲ್ಲದೇ ಲಗ್ನದಿಂದ ಒಂದು, ನಾಲ್ಕು, ಏಳು‌ ಮತ್ತು ಹತ್ತರಲ್ಲಿ ಚಂದ್ರ ಹಾಗೂ ಗುರುವು ಇದ್ದರೂ ಗಜಕೇಸರೀ ಯೋಗವು ಆಗುತ್ತದೆ. ಹಾಗಯೇ ಚಂದ್ರನಿಂದಲೂ ಈ ಯೋಗವನ್ನು ಹೇಳುತ್ತಾರೆ. ಚಂದ್ರನಿಂದ ಒಂದು, ನಾಲ್ಕು, ಏಳು, ಹತ್ತರಲ್ಲಿ ಗುರುವಿದ್ದರೆ ಅಥವಾ ಚಂದ್ರನ‌ ದೃಷ್ಟಿಯು ಗುರುವಿನ ಮೇಲೆ ಬಿದ್ದರೆ ಗಜಕೇಸರೀ ಯೋಗವು ಆಗುವುದು.

ಇದನ್ನೂ ಓದಿ: Naivedya: ದೇವರಿಗೆ ನೈವೇದ್ಯವು ಏಕೆ? ಮತ್ತು ಹೇಗಿರಬೇಕು?

ಇನ್ನೂ ಕೆಲವು ಕಡೆಗಳಲ್ಲಿ ಚಂದ್ರ ಮತ್ತು ಗುರುವು ದ್ವಾದಶ ಭಾವದಲ್ಲಿ ಎಲ್ಲಿಯೇ ಇದ್ದರೂ ಗಜಕೇಸರೀ ಯೋಗವಾಗಿ, ಆಯಾ ಭಾವದ ಫಲವನ್ನು ಕೊಡುತ್ತಾರೆ ಎಂಬುದನ್ನೂ ಹೇಳುವುದುಂಟು. ಇದು ಪೂರ್ಣಪ್ರಮಾಣದ ಗಜಕೇಸರೀ ಯೋಗವು ಆಗದು. ಮುಖ್ಯವಾಗಿ ಕೇಂದ್ರಸ್ಥಾನವು ಗಜಕೇಸರಿ ಯೋಗಕ್ಕೆ ಸೂಕ್ತವಾದುದ್ದು ಆಗಿದೆ.

ಚಂದ್ರ ಅಥವಾ ಗುರುವು ನೀಚಸ್ಥಾನದಲ್ಲಿ ಇದ್ದರೆ, ಅಂದರೆ ಚಂದ್ರನು ವೃಶ್ಚಿಕದಲ್ಲಿಯೂ ಗುರುವು ಮಕರದಲ್ಲಿಯೂ ಇದ್ದರೆ, ಶತ್ರುವಿನ ಕ್ಷೇತ್ರದಲ್ಲಿ ಇದ್ದರೆ ಈ ಯೋಗವು ಫಲಿಸದು.

ಇದನ್ನೂ ಓದಿ: ಚಾಣಕ್ಯ ನೀತಿ: ಮಹಿಳೆಯಲ್ಲಿ ಈ ಐದು ಗುಣಗಳಿದ್ದರೆ ಪತಿಯ ಯಶಸ್ಸು ಕಟ್ಟಿಟ್ಟ ಬುತ್ತಿ!

ಯಾವಾಗಲೂ ಈ ಯೋಗವಿರತ್ತಾ?

ಹುಟ್ಟುವಾಗ ಇರುವ ಗ್ರಹಸ್ಥಿತಿಯ ಆಧಾರದ‌ ಮೇಲೆ ಈ ಯೋಗವು ಮರಣಪರ್ಯಂತ ಇದ್ದೇ ಇರುತ್ತದೆ. ಆದರೆ ಇದು ಎಲ್ಲ ಸಮಯದಲ್ಲಿಯೂ ಫಲಿಸುವುದಿಲ್ಲ. ಗುರು ದಶೆ ಅಥವಾ ಚಂದ್ರ ದಶೆ ಬಂದಾಗ ಇವರ ಮಹತ್ತ್ವವು ಗೊತ್ತಾಗುತ್ತದೆ. ಅದಿಲ್ಲದೇ ಹೋದರೆ ಸಾಮಾನ್ಯವಾಗಿಯೇ ಇದು ಇರುವಂಥದ್ದು.

ಈ ಯೋಗ ಬಂದಾಗ ಏನಾಗುತ್ತದೆ?

ರೂಪವಂತರಾಗುತ್ತಾರೆ, ಧನವಂತರಾಗುವರು, ಬುದ್ಧಿಯ ಪ್ರಖರತೆ ಹೆಚ್ಚಾಗುವುದು, ಗುಣವಂತರಾಗುವರು, ರಾಜರಿಗೆ ಪ್ರಿಯರಾದವರು ಆಗುವರು, ಮಾತಿನಲ್ಲಿ ಪ್ರೌಢಿಮೆ ಇರಲಿದೆ. ಸಭೆಯಲ್ಲಿ ಗಾಂಭೀರ್ಯ ಬರುವುದು, ದೀರ್ಘಾಯುಸ್ಸನ್ನು ಹೊಂದಿದವನು ಆಗುತ್ತಾನೆ. ಸಾಮಾಜಿಕ ಮನ್ನಣೆ, ಸಂಪತ್ತು, ಅಧಿಕಾರ ಎಲ್ಲವೂ ಅವನ ಯೋಗ್ಯತೆ ಅನುಸಾರವಾಗಿ ಸಿಗುತ್ತಾ ಹೋಗುತ್ತದೆ.

ಮತ್ತಷ್ಟು ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.