Ganesh Chaturthi 2022: ಲೋಕ ಸುತ್ತು ಎಂದರೆ ಹೆತ್ತವರೇ ನನ್ನ ಜಗತ್ತು ಎಂದ ಗಣಪ

Ganesh Chaturthi 2022: ಗಣಪತಿಯ ಕಲ್ಪನೆಯಲ್ಲಿ ಹಲವು ಸ್ವಾರಸ್ಯ ಕಥೆಗಳು ಸೇರಿಕೊಂಡಿವೆ. ಗಣಪತಿಗೆ  ಸಿದ್ಧಿ ಬುದ್ಧಿ ಎಂಬ  ಇಬ್ಪಬರು ಮಡದಿಯರು,  ನಮ್ಮ ಎಲ್ಲಾ ಜ್ಞಾನಕ್ಕೂ ಅವನೇ  ಯಜಮಾನ .ಅವನದ್ದು ಆನೆಯ ಮುಖ. ಇದು ಓಂಕಾರವನ್ನು ಸೂಚಿಸುತ್ತದೆ ಅವನು ಪ್ರಾಣವಸ್ವರೂಪಿ .

Ganesh Chaturthi 2022: ಲೋಕ ಸುತ್ತು ಎಂದರೆ ಹೆತ್ತವರೇ ನನ್ನ ಜಗತ್ತು ಎಂದ ಗಣಪ
Ganesh Chaturthi 2022
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 31, 2022 | 7:41 AM

ಹಿಂದೂ ಧರ್ಮದಲ್ಲಿ ಎಲ್ಲಾ ದೇವತೆಗಳಲ್ಲಿ ಗಣಪ ಮೊದಲ ಪ್ರಾಶಸ್ತ್ಯ ಅಥವಾ ಅಗ್ರಗಣ್ಯ ಎಂದು ಪರಿಗಣಿಸಲ್ಪಡುತ್ತದೆ. ಏಕೆಂದರೆ ಗಣಪ ವಿಘ್ನವಿನಾಶಕ ಯಾವುದೇ ಕಾರ್ಯ ಪ್ರಾರಂಭಿಸುವಾಗ ವಿಘ್ನ ಬರದಂತೆ ಗಣಪನ ಪೂಜಿಸುವ ವಾಡಿಕೆ.‌ ನಾವೆಲ್ಲ ಚಿಕ್ಕದಿಂದಲೇ ವಿದ್ಯೆ ಪ್ರಾರಂಭಿಸುವಾಗ ಸರಸ್ವತಿಯನ್ನು ಪೂಜಿಸುವುದರ ಜೊತೆಗೆ ಗಣಪತಿಯನ್ನು ಪೂಜಿಸುವುದು ಕೂಡಾ ಒಂದು ಪದ್ಧತಿಯಾಗಿತ್ತು. ಅದಕ್ಕೆ ಅಷ್ಟೇ ಮಹತ್ವವು ಇತ್ತು .ಗಣಪತಿ ಅಂದರೆ ಹಲವು ಗಣಗಳ ಅಧಿಪತಿ.

ನಮ್ಮ ಜೀವನದಲ್ಲಿ ಕೆಲವೊಮ್ಮೆ ಹೆಜ್ಜೆ ಹೆಜ್ಜೆಗೂ ವಿಘ್ನ ಆತಂಕಗಳು ಎದುರಾಗುತ್ತಲೇ ಇರುತ್ತವೆ. ಈ ತೊಂದರೆಗಳನ್ನು ನಿರ್ವಹಿಸಬಲ್ಲ ದೇವರಾಗಿ ನಿಂತವನು  ಗಣಪತಿ. ಅವನಿಗೆ ಹಲವಾರು  ಹೆಸರುಗಳಿವೆ ಗಣೇಶ, ಸುಮುಖ, ವಿನಾಯಕ, ವಿಘ್ನನಾಯಕ, ಗೌರಿ ಪುತ್ರ, ಗಜಾನನ, ಲಂಬೋದರ, ಏಕದಂತ, ಶಿವಸುತ, ಹೀಗೆ ಹಲವಾರು ಹೆಸರುಗಳಿವೆ.

ಗಣಪತಿಯ ಕಲ್ಪನೆಯಲ್ಲಿ ಹಲವು ಸ್ವಾರಸ್ಯ ಕಥೆಗಳು ಸೇರಿಕೊಂಡಿವೆ. ಗಣಪತಿಗೆ  ಸಿದ್ಧಿ ಬುದ್ಧಿ ಎಂಬ  ಇಬ್ಪಬರು ಮಡದಿಯರು,  ನಮ್ಮ ಎಲ್ಲಾ ಜ್ಞಾನಕ್ಕೂ ಅವನೇ  ಯಜಮಾನ .ಅವನದ್ದು ಆನೆಯ ಮುಖ. ಇದು ಓಂಕಾರವನ್ನು ಸೂಚಿಸುತ್ತದೆ ಅವನು ಪ್ರಾಣವಸ್ವರೂಪಿ .ಅವನ ಕಿವಿಗಳು ವಿಶಾಲವಾಗಿದೆ.ಅವನ ದೊಡ್ಡದಾದ ಹೊಟ್ಟೆಯು ಇಡೀ ಬ್ರಹ್ಮಾಂಡವನ್ನೇ ಸೂಚಿಸುತ್ತದೆ.ಒಟ್ಟಿನಲ್ಲಿ ಗಣಪತಿಯ ಒಂದೊಂದು ವಿವರವೂ ಒಂದೊಂದು ಮಹತ್ವವನ್ನು ಸೂಚಿಸುತ್ತದೆ.

ಗಣಪತಿಗೆ ಆನೆಯ ಮುಖವಿದೆ. ಅವನ ಒಂದು ದಂತ ಮುರಿದಿದೆ .ಹಾಗೆ ಮುರಿದದ್ದು ಏಕೆ ಎಂದು ಕಥೆಯಿದೆ. ಮಹಾಭಾರತದ ಮಹಾ ಕಾವ್ಯವನ್ನು ಬರೆಯುವಾಗ ಅವನ ಲೇಖನಿ ಬರೆಯುಲು ತುಂಬಾ ಕಷ್ಟವಾಗಿತ್ತು,  ಹಾಗೆ ಮಹಾಭಾರತ ಬರೆಯುವುದನ್ನು ಮುಂದುವರೆಸುವುದಕ್ಕಾಗಿ ತನ್ನ ದಂತರವನ್ನೇ ಮುರಿದು ಲೇಖನಿಯಾನ್ನಾಗಿ ಮಾಡಿಕೊಂಡನು. ಹೀಗೆ ಒಳ್ಳೆಯದಕ್ಕಾಗಿ ಗಣಪ‌ ದಂತ ತ್ಯಾಗ ಮಾಡಿ ಮುಂದೆ ಒಳ್ಳೇ ಸಂದೇಶ ರವಾನೆ ಮಾಡಿದ ಅಂತ ಕಥೆ ಹೇಳುತ್ತದೆ.

ಗಣಪತಿಯ ತಾಯಿ ಪಾರ್ವತಿ ಮೈಯಿಂದ ಹುಟ್ಟಿದವನು ಸ್ವರ್ಣ ಗೌರಿಯ ಮಾನಸ ಪುತ್ರ ಈತ. ಗೌರಿ ಸ್ನಾನ ಕ್ಕೆ ಹೋಗುವಾಗ ಗಣಪತಿ ಜೊತೆ ಮನೆಯಬಾಗಿಲು ಕಾಯಲು ಹೇಳುತ್ತಾಳೆ . ತಾಯಿಯ ಮಾತಿನಂತೆ ಗಣಪತಿ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪತಿ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ . ಇದರಿಂದ ಕೋಪ ಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ. ಸ್ನಾನ ಮುಗಿಸಿ ಬಂದ ಗೌರಿ ಮಗನನ್ನು ಕಂಡು ರೋದಿಸುತ್ತಾಳೆ . ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದಾರೆ ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆದೇಶಿಸುತ್ತಾನೆ. ಗಣಗಳು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಆನೆಯ ತಲೆಯನ್ನು ಕತ್ತರಿಸಿ ತರುತ್ತಾರೆ, ನಂತರ ಅದನ್ನು ಗಣಪನ ಶರೀರಕ್ಕೆ ಜೋಡಿಸುತ್ತಾರೆ  ಹೀಗಾಗಿ ಗಣಪ ಗಜಮುಖನಾಗಿ ಗಣಗಳು ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ.

ಗಣಪ ತನ್ನ ಹಿರಿಯರಿಗೆ ಗೌರವ ಕೊಡುವ ಒಂದು ದಂತ ಕಥೆಯಿದೆ ಶಿವ ಪಾರ್ವತಿ ಒಮ್ಮೆ ತನ್ನ ಮಕ್ಕಳಾದ ಸುಬ್ರಮಣ್ಯ ಹಾಗೂ ಗಣಪತಿ ಇವರಿಬ್ಬರಿಗೆ ಒಂದು ಸ್ಪರ್ಧೆ ಏರ್ಪಡಿಸಿದ್ದರು. ಗೆದ್ದವರಿಗೆ ಒಂದು ವಿಶೇಷವಾದ ಹಣ್ಣನ್ನು ಕೊಡುವುದೆಂದು ಮಾತು ಹೇಳಿದರು. ಸ್ಪರ್ಧೆ ಇಡೀ ಭೂಮಿಗೆ ಮೂರು ಸುತ್ತು ಬೇಗನೆ ಯಾರು ಬರುತ್ತಾರೆ ಅವರಿಗೆ ಎಂದು .ಸುಬ್ರಹ್ಮಣ್ಯ ತನ್ನ ವಾಹನ ನವಿಲು ಏರಿ ಹೋರಾಟ. ಆದರೆ ಗಣಪತಿ ವಾಹನ ಇಲಿ ಆಗ ಗಣಪ ತನ್ನ ತಂದೆ- ತಾಯಿಗೆ ಮೂರು ಸುತ್ತು ಹಾಕಿ ತನ್ನ ಇವರೇ ತನ್ನ ಲೋಕ ಎಂದು  ಗೌರವ ಕೊಟ್ಟು ಸ್ಪರ್ಧೆಯಲ್ಲಿ ವಿಜಯಶಾಲಿಯಾದ.

ಹೀಗೆ ಗಣಪತಿ ಅನೇಕ ದಂತ ಕಥೆ ಗಳನ್ನು ನಮ್ಮ ಪುರಾಣದಲ್ಲಿ ನಮ್ಮ ಹಿರಿಯರು ನಮ್ಮ ಜೀವನದಲ್ಲಿ ನಂಬಿಕೆಯಾಗಿ ಮತ್ತು ಅವುಗಳನ್ನು ನಮ್ಮ ಬದುಕಿನಲ್ಲಿ ಪಾಲಿಸುವಂತೆ ಸಾಕ್ಷಿಯಾಗಿರಿಸಿದ್ದಾರೆ.   ಗಣಪತಿಯ ಒಂದೊಂದು ಕಥೆಯು ಬಹಳ ಅರ್ಥಪೂರ್ಣವಾಗಿದೆ. ಹಾಗಾಗಿ ಇಂದಿಗೂ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ .

ಜಯಶ್ರೀ.ಸಂಪ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ