AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesh Chaturthi 2022: ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡುವುದೇಕೆ ? ಅಮ್ಮ ಹೇಳಿದ ಕಥೆ

ಗಣೇಶನನ್ನು ವಿಸರ್ಜನೆ ಮಾಡಿಲ್ಲ ಅಂದ್ರೆ, ಮೂರ್ತಿಗೆ ಜೀವ ಬಂದು ತುಂಬಾ ಮೋದಕ,ಲಡ್ಡು ಎಲ್ಲ ತಿಂದ್ರೆ, ಮತ್ತೆ ನಮ್ಮತ್ರ ಕೊಡೋದಕ್ಕೆ ಏನು ಇರಲ್ಲ, ಆಗ ಗಣೇಶನಿಗೆ ಸಿಟ್ಟು ಬರುತ್ತೆ, ಅದಕ್ಕೆ ವಿಸರ್ಜನೆ ಮಾಡುತ್ತಾರೆ ಎಂಬ ಅಮ್ಮನ ಈ ಉತ್ತರ ಮುಖದಲ್ಲಿ ಇವಾಗ ನಗು ಮೂಡಿಸಿದರೂ ಕೂಡ, ಬಾಲ್ಯದಲ್ಲಿ ಇದನ್ನೇ ನಿಜ ಎಂದು ನಂಬಿದ್ದೆ.

Ganesh Chaturthi 2022: ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡುವುದೇಕೆ ? ಅಮ್ಮ ಹೇಳಿದ ಕಥೆ
Ganesh Chaturthi 2022
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 31, 2022 | 7:13 AM

Share

ಮನೆಯ ಹತ್ತಿರದ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಮ್ಮ ಗಣಪನನ್ನು ಹೂವಿನ ಸಿಂಗಾರ ಹಾಗೂ ಆಭರಣಗಳಲ್ಲಿ ದೀಪಾಲಂಕಾರದ ಬೆಳಕಿಗೆ, ಹೊಳೆಯುತ್ತಿರುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಗಣಪನ ಆರಾಧನೆ ಖುಷಿ ಒಂದೆಡೆಯಾದರೆ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅದರಲ್ಲಿ ಬಹುಮಾನ ಸಿಗಲೇಬೇಕೆಂದು ಅಲ್ಲೇ ಗಣಪನಲ್ಲಿ ಕೇಳುವುದು ಇನ್ನೊಂದು ಖುಷಿ. ವಿದ್ಯಾರ್ಥಿಗಳಿಗಾಗಿ ಏರ್ಪಡಿಸುತ್ತಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಸೇರುವ ತವಕದಲ್ಲಿ ಶಾಲೆಗೆ ಹೋಗದೆ 3-4 ದಿನ ರಜೆ ಮಾಡಿದ ದಿನಗಳಷ್ಟೋ ಇದೆ. ಮೂರು ದಿನಗಳ ವರೆಗೆ ವಿಜ್ರಂಭಣೆಯಿಂದ ನಡೆಯುವ ಗಣೇಶೋತ್ಸವ ಕೊನೆಯ ದಿನ ಪ್ರತಿ ವರ್ಷ ವಿಸರ್ಜನಾ ಮೆರವಣಿಗೆಯಲ್ಲಿ ಅಮ್ಮನ ಬೆರಳ ಹಿಡಿದು ನಡೆಯುವಾಗ ಕೇಳುವ ಒಂದೇ ಪ್ರಶ್ನೆ ಇನ್ನೂ ಮರೆತಿಲ್ಲ  “ಯಾಕಮ್ಮ ನಮ್ಮ ಗಣಪನ ನೀರಿಗೆ ಹಾಕ್ತಾರೆ”?

ಗಣೇಶನನ್ನು ವಿಸರ್ಜನೆ ಮಾಡಿಲ್ಲ ಅಂದ್ರೆ, ಮೂರ್ತಿಗೆ ಜೀವ ಬಂದು ತುಂಬಾ ಮೋದಕ,ಲಡ್ಡು ಎಲ್ಲ ತಿಂದ್ರೆ, ಮತ್ತೆ ನಮ್ಮತ್ರ ಕೊಡೋದಕ್ಕೆ ಏನು ಇರಲ್ಲ, ಆಗ ಗಣೇಶನಿಗೆ ಸಿಟ್ಟು ಬರುತ್ತೆ, ಅದಕ್ಕೆ ವಿಸರ್ಜನೆ ಮಾಡುತ್ತಾರೆ ಎಂಬ ಅಮ್ಮನ ಈ ಉತ್ತರ ಮುಖದಲ್ಲಿ ಇವಾಗ ನಗು ಮೂಡಿಸಿದರೂ ಕೂಡ, ಬಾಲ್ಯದಲ್ಲಿ ಇದನ್ನೇ ನಿಜ ಎಂದು ನಂಬಿದ್ದೆ.

ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು ಎಂಬ ಮನೆಯವರ ಮಾತಿಗೆ ತಪ್ಪಿ ,ಕದ್ದು ಮುಚ್ಚಿ, ಒಂದು ಕಣ್ಣಿನಲ್ಲಿ ಚಂದ್ರನನ್ನು ನೋಡಿದ ಬಾಲ್ಯದ ತುಂಟಾಟ ಮರೆಯಲಾಗದ ಅನುಭವ. ಗಣೇಶ ಚತುರ್ಥಿ ದಿನ ಚಂದ್ರನನ್ನು ಏಕೆ ನೋಡಬಾರದು ಎಂಬುದರ ಬಗ್ಗೆ ಪುರಾಣದಲ್ಲಿ ಅನೇಕ ಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ ತಾಯಿ ಪಾರ್ವತಿಯ ಆದೇಶದಂತೆ ಗಣೇಶ ದ್ವಾರಪಾಲಕನಾಗಿದ್ದು ತನ್ನ ತಂದೆ ಶಿವನಿಗೆ ತಾಯಿ ಪಾರ್ವತಿಯನ್ನು ಭೇಟಿ ಮಾಡಲು ನಿರಾಕರಿಸಿದ್ದ. ಇದರಿಂದ ಮಹಾದೇವನ ಕೋಪಕ್ಕೆ ತುತ್ತಾದ ಗಣಪತಿಯ ಶಿರವನ್ನು ಕತ್ತರಿಸಲಾಯಿತು. ನಂತರ ಚತುರ್ಥಿ ದಿನದಂದು ಗಣೇಶನಿಗೆ ಆನೆಯ ತಲೆಯನ್ನು ಇರಿಸಲಾಯಿತು ಮತ್ತು ಅದರ ನಂತರ ಎಲ್ಲಾ ದೇವಾನುದೇವತೆಗಳು ಗಣೇಶನಿಗೆ ಮೊದಲ ಪೂಜೆ ಮಾಡುವಂತೆ ನಿಶ್ಚಯಿಸಲಾಯಿತು. ಆದರೆ ಚಂದ್ರದೇವ ಮಾತ್ರ ಗಜಮುಖನನ್ನು ಕಂಡು ಹಾಸ್ಯವಾಗಿ ನಗತೊಡಗಿದನು. ಇದರಿಂದ ಕೋಪಗೊಂಡ ಗಣೇಶ ಇಂದಿನಿಂದ ಚಂದ್ರನನ್ನು ಯಾರೂ ನೋಡದಂತಾಗಲಿ ಎಂದು ಶಪಿಸಿದನು. ಇದರಿಂದ ಹೆದರಿದ ಚಂದ್ರದೇವ ಗಣೇಶನಲ್ಲಿ ಕ್ಷಮೆ ಯಾಚಿಸಿದ ನಂತರ ಗಣೇಶ ತನ್ನ ಶಾಪವನ್ನು ಪೂರ್ತಿಯಾಗಿ ಹಿಂಪಡೆಯದೆ ಗಣೇಶ ಚತುರ್ಥಿ ದಿನ ಚಂದ್ರ ದರ್ಶನವನ್ನು ಯಾರು ಮಾಡಬಾರದು. ಅದಾಗಿಯೂ ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅಂತಹ ವ್ಯಕ್ತಿ ಪಾಪವನ್ನು ಅನುಭವಿಸುತ್ತಾನೆ ಎಂಬುದು ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ.

ಈ ವರ್ಷದ ಗೌರಿ ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಕೈ ಜೋಡಿಸೋಣ. ಪ್ರತಿ ವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಯ ಗುಂಗಿನಲ್ಲಿ ಜನರು ತಾವು ತಿಂದ ಐಸ್ ಕ್ರೀಮ್ ಹಾಗೂ ಇದರ ತಿಂಡಿ ತಿನಸು ಪ್ಲಾಸ್ಟಿಕ್ ಪ್ಯಾಕೆಟ್​ಗಳನ್ನು ಅಲ್ಲೇ ಬಿಸಾಕಿ ಹೋಗುತ್ತಾರೆ. ಅದರಿಂದ ಈ ವರ್ಷವಾದರೂ ಸಂಭ್ರಮದ ಜೊತೆಗೆ ಪರಿಸರವನ್ನು ಸ್ವಚ್ಛವಾಗಿರುವುದರ ಬಗ್ಗೆ ಗಮನಹರಿಸಬೇಕಿದೆ ಜೊತೆಗೆ ಸ್ಮಾರ್ಟ್ ಫೋನ್ ಮೂಲಕ ಬ್ರಾಡ್ ಕಾಸ್ಟ್ ನಲ್ಲಿ ಗಣೇಶ ಚತುರ್ಥಿಯ ಫೋಟೋಗಳನ್ನು ಕಳುಹಿಸಿ ಸಂಭ್ರಮಿಸುವ ಬದಲಾಗಿ, ಆದಷ್ಟು ಕುಟುಂಬದವರೊಂದಿಗೆ ಒಟ್ಟಾಗಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಒಂದು ಸುಂದರ ಕ್ಷಣಕ್ಕೆ ಸಾಕ್ಷಿಯಾಗೋಣ.

ಅಕ್ಷತಾ ವರ್ಕಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?