64 ಕೊಠಡಿ-64 ಶಿವಲಿಂಗ-64 ಯೋಗಿನಿಯರು: ಆ ನಿಗೂಢ ಚೌಸಟ್ ಯೋಗಿನಿ ದೇವಾಲಯದಲ್ಲಿ ರಾತ್ರಿ ಯಾರೂ ತಂಗುವುದಿಲ್ಲ ಯಾಕೆ ಗೊತ್ತಾ!?

|

Updated on: Jul 18, 2024 | 6:06 AM

Chausath Yogini Temple : ಚೌಸಟ್ ಯೋಗಿನಿ ದೇವಾಲಯವನ್ನು ಕ್ರಿ. ಶ. 1323 ರಲ್ಲಿ ರಜಪೂತ ರಾಜರು ನಿರ್ಮಿಸಿದರು ಎನ್ನುತ್ತದೆ ಇಲ್ಲಿನ ಭವ್ಯ ಇತಿಹಾಸ. ಈ ದೇವಾಲಯದಲ್ಲಿ 64 ಕೋಣೆಗಳಿವೆ ಆ ಕೋಣೆಗಳಲ್ಲಿ ಶಿವನ ಭವ್ಯವಾದ ಶಿವಲಿಂಗಗಳನ್ನು ಸ್ಥಾಪಿಸಲಾಗಿದೆ. ಈ ದೇವಾಲಯದ ರಚನೆಯು ದೆಹಲಿಯ ಹಳೆಯ ಸಂಸತ್ ಭವನವನ್ನು ಹೋಲುತ್ತದೆ!

64 ಕೊಠಡಿ-64 ಶಿವಲಿಂಗ-64 ಯೋಗಿನಿಯರು: ಆ ನಿಗೂಢ ಚೌಸಟ್ ಯೋಗಿನಿ ದೇವಾಲಯದಲ್ಲಿ ರಾತ್ರಿ ಯಾರೂ ತಂಗುವುದಿಲ್ಲ ಯಾಕೆ ಗೊತ್ತಾ!?
64 ಕೊಠಡಿಗಳಲ್ಲಿ 64 ಶಿವಲಿಂಗಗಳು 64 ಯೋಗಿನಿಯರು
Follow us on

ಅರವತ್ತನಾಲ್ಕು ಯೋಗಿನಿ ದೇವಾಲಯವು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮಿಟವಾಲಿ ಗ್ರಾಮದಲ್ಲಿದೆ. ಈ ಪ್ರಾಚೀನ ದೇವಾಲಯ ನಿಜಕ್ಕೂ ನಿಗೂಢವಾಗಿದೆ. ಈ ದೇವಾಲಯವನ್ನು ತಂತ್ರ ಸಾಧನೆ ಮತ್ತು ಯೋಗಿನಿ ಆರಾಧನೆಯ ಕೇಂದ್ರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಒಟ್ಟು ನಾಲ್ಕು ಅರವತ್ನಾಲ್ಕು ಯೋಗಿನಿ ದೇವಾಲಯಗಳಿವೆ. ಅವುಗಳಲ್ಲಿ ಎರಡು ಒಡಿಶಾದಲ್ಲಿ ಮತ್ತು ಎರಡು ಮಧ್ಯಪ್ರದೇಶದಲ್ಲಿ ಇವೆ. ಈ ನಾಲ್ಕು ದೇವಾಲಯಗಳಲ್ಲಿ, ಮೊರೆನಾ ಜಿಲ್ಲೆಯ ಮಿಟವಾಲಿ ಗ್ರಾಮದಲ್ಲಿರುವ ದೇವಾಲಯವು (Chausath Yogini Temple Morena district Mitaoli village in Madhya Pradesh) ಅತ್ಯಂತ ಪ್ರಮುಖ ಮತ್ತು ಪ್ರಾಚೀನ ದೇವಾಲಯವಾಗಿದೆ. ಈ ದೇವಾಲಯವು ವಿಶೇಷವಾಗಿ ತಂತ್ರ-ಮಂತ್ರದ ಜ್ಞಾನಕ್ಕೆ ಹೆಸರುವಾಸಿಯಾಗಿದೆ.

ಸಂಸತ್ ಭವನದಂತಿರುವ ಈ ದೇವಾಲಯವನ್ನು ತಾಂತ್ರಿಕ ವಿಶ್ವವಿದ್ಯಾಲಯ ಎಂದು ಕರೆಯುತ್ತಾರೆ:

ಚೌಸಟ್​ ಯೋಗಿನಿ ದೇವಾಲಯವನ್ನು ಭಾರತದ ಪ್ರಮುಖ ತಾಂತ್ರಿಕ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಚೌಸತ್ ಯೋಗಿನಿ ದೇವಾಲಯವನ್ನು ತಾಂತ್ರಿಕ ಸಾಧನಾ ಮತ್ತು ಯೋಗಿನಿ ಆರಾಧನೆಯ ಪ್ರಮುಖ ಕೇಂದ್ರವೆಂದು ಪರಿಗಣಿಸಲಾಗಿದೆ. ಇಲ್ಲಿ ಭಕ್ತರು ತಂತ್ರ ವಿದ್ಯೆಯ ಆಳವಾದ ಧ್ಯಾನವನ್ನು ಮಾಡುತ್ತಾರೆ. ಯೋಗಿನಿಯರ ಆರಾಧನೆಯ ಮೂಲಕ ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುತ್ತಾರೆ. ತಂತ್ರ ಸಾಧನದಲ್ಲಿ ಈ ದೇವಾಲಯವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದೇವಾಲಯವನ್ನು ತಾಂತ್ರಿಕ ವಿಶ್ವವಿದ್ಯಾಲಯ ಎಂದೂ ಕರೆಯುತ್ತಾರೆ. ಹಿಂದೆ ದೂರದ ಊರುಗಳಿಂದ ತಂತ್ರ-ಮಂತ್ರ ಕಲಿಯಲು ಇಲ್ಲಿಗೆ ಬರುತ್ತಿದ್ದರು.

ದೇವಾಲಯದ 64 ಕೋಣೆಗಳಲ್ಲಿ 64 ಶಿವಲಿಂಗಗಳು ಮತ್ತು 64 ಯೋಗಿನಿಯರಿದ್ದಾರೆ:

ಚೌಸಟ್ ಯೋಗಿನಿ ದೇವಾಲಯವನ್ನು ಕ್ರಿ. ಶ. 1323 ರಲ್ಲಿ ನಿರ್ಮಿಸಲಾಯಿತು ಮತ್ತು ರಜಪೂತ ರಾಜರು ಇದನ್ನು ನಿರ್ಮಿಸಿದರು ಎನ್ನುತ್ತದೆ ಇತಿಹಾಸ. ಈ ದೇವಾಲಯದಲ್ಲಿ 64 ಕೋಣೆಗಳಿವೆ ಮತ್ತು ಈ ಎಲ್ಲಾ 64 ಕೋಣೆಗಳಲ್ಲಿ ಪರಮಾತ್ಮ ಶಿವನ ಭವ್ಯವಾದ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಈ ದೇವಾಲಯವು ವೃತ್ತಾಕಾರದ ರಚನೆಯನ್ನು ಹೊಂದಿದೆ. ಈ ದೇವಾಲಯದ ರಚನೆಯು ದೆಹಲಿಯ ಹಳೆಯ ಸಂಸತ್ ಭವನವನ್ನು ಹೋಲುತ್ತದೆ!

Also Read:  No Entry for Men Devotees – ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ದೇವಾಲಯದ ಮಧ್ಯದಲ್ಲಿ ತೆರೆದ ಮಂಟಪವಿದೆ. ಈ ಮಂಟಪದಲ್ಲಿ ಭಗವಾನ್ ಶಿವನ ಭವ್ಯವಾದ ಶಿವಲಿಂಗವನ್ನು ಸಹ ಸ್ಥಾಪಿಸಲಾಗಿದೆ. ಈ ಮಂಟಪದ ಸುತ್ತಲೂ 64 ಕೊಠಡಿಗಳನ್ನು ನಿರ್ಮಿಸಲಾಗಿದೆ. ಇಲ್ಲಿನ ಪ್ರತಿ ಕೋಣೆಯಲ್ಲಿ ಶಿವಲಿಂಗದ ಜೊತೆಗೆ ಯೋಗಿನಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಅಂದರೆ ಇಲ್ಲಿ 64 ಶಿವಲಿಂಗಗಳ ಜೊತೆಗೆ 64 ಯೋಗಿನಿಯರ ವಿಗ್ರಹಗಳನ್ನೂ ಸ್ಥಾಪಿಸಲಾಗಿದೆ. ಈ ಪೈಕಿ ಕೆಲವು ಮೂರ್ತಿಗಳು ಈಗ ಕಳವಾಗಿವೆ. ತಂತ್ರ ಸಾಧನೆಗಾಗಿ 64 ಯೋಗಿನಿಯರ ವಿಗ್ರಹಗಳನ್ನು ಪ್ರಮುಖವಾಗಿರುತ್ತದೆ.

ಇಲ್ಲಿ ಸಾಧನೆ ಮಾಡುವುದರಿಂದ ಅದ್ಭುತವಾದ ಶಕ್ತಿಗಳನ್ನು ಪಡೆಯಬಹುದು:

ಚೌಸಟ್​ ಯೋಗಿನಿ ದೇವಸ್ಥಾನದಲ್ಲಿ ವಿಶೇಷ ರೀತಿಯ ಆಧ್ಯಾತ್ಮಿಕ ಶಕ್ತಿ ಇದೆ. ಈ ಆಧ್ಯಾತ್ಮಿಕ ಶಕ್ತಿಯು ಸಾಧಕರಿಗೆ ಧ್ಯಾನ ಮತ್ತು ಸಾಧನೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ. ಸ್ಥಳೀಯ ಜನರ ಪ್ರಕಾರ ಈ ದೇವಾಲಯವು ಈಗಲೂ ಶಿವನ ತಂತ್ರ ಸಾಧನೆಯ ರಕ್ಷಾಕವಚದಿಂದ ಮುಚ್ಚಲ್ಪಟ್ಟಿದೆ. ರಾತ್ರಿ ವೇಳೆ ಈ ದೇವಸ್ಥಾನದಲ್ಲಿ ಅಥವಾ ಸಮೀಪದಲ್ಲಿ ತಂಗಲು ಅವಕಾಶವಿಲ್ಲ. ಈ ದೇವಾಲಯದಲ್ಲಿ ಶಿವನ ಯೋಗಿನಿಯರು ಜಾಗೃತಗೊಂಡಿರುತ್ತಾರೆ ಎಂಬ ನಂಬಿಕೆಯಿದೆ.

ಇಲ್ಲಿ ವಿಶೇಷ ತಾಂತ್ರಿಕ ವಿಧಿವಿಧಾನಗಳಲ್ಲಿ ಮಂತ್ರ ಪಠಣ, ಯಂತ್ರ ಸ್ಥಾಪನೆ, ಹೋಮ ಹವನ ನೆರವೇರಿಸಲಾಗುತ್ತದೆ. ಯೋಗಿನಿಯರನ್ನು ವಿಶೇಷ ರೀತಿಯ ಮಂತ್ರಗಳು ಮತ್ತು ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ. ಈ ಸಾಧನಗಳ ಮೂಲಕ ಭಕ್ತರು ಅದ್ಭುತ ಶಕ್ತಿಗಳನ್ನು ಗಳಿಸುತ್ತಾರೆ ಎಂಬ ನಂಬಿಕೆಯಿದೆ.

ಈ ದೇವಾಲಯವು ಕಾಳಿ ದೇವಿಗೆ ಸಂಬಂಧಿಸಿದೆ:

ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದೇವಾಲಯವು ಕಾಳಿ ದೇವಿಗೆ ಸಂಬಂಧಿಸಿದೆ. ಇಲ್ಲಿ ಸ್ಥಾಪಿತವಾದ ಚೌಸಟ್​ ಯೋಗಿನಿ ಮಾತೆಯರು ಕಾಳಿಯ ಅವತಾರವಾಗಿದ್ದಾರೆ. ಧಾರ್ಮಿಕ ಗ್ರಂಥಗಳ ಪ್ರಕಾರ ಕಾಳಿ ಮಾತೆ ಘೋರ್ ಎಂಬ ರಾಕ್ಷಸನನ್ನು ಕೊಲ್ಲಲು ಈ ಅವತಾರಗಳಲ್ಲಿ ಕಾಣಿಸಿಕೊಂಡಳು ಎಂಬುದು ಇಲ್ಲಿನ ಪ್ರತೀತಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)