AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hanuman Blessings: ಸರಳವಾಗಿ ಹನುಮಂತನ ಅನುಗ್ರಹ ಪಡೆಯುವುದು ಹೇಗೆ? ಈ ಕ್ರಮ ಅನುಸರಿಸಿ

ಶುದ್ಧ ಮನಸ್ಸಿನಿಂದ ಪೂಜಿಸಿದರೆ ಹನುಮಂತನ ಅನುಗ್ರಹ ಪಡೆಯಬಹುದು. ಹನುಮಾನ್ ಚಾಲೀಸಾ, ಸುಂದರಕಾಂಡ ಪಠಣ, ರಾಮನಾಮ ಜಪ, ಸಿಂಧೂರ-ಮಲ್ಲಿಗೆ ಎಣ್ಣೆ, ತುಳಸಿ-ಅರಳಿ ಎಲೆ, ಲಡ್ಡು ಅರ್ಪಣೆ ಹಾಗೂ ವಿಶೇಷ ಮಂತ್ರಗಳ ಪಠಣದಂತಹ ಸರಳ ಉಪಾಯಗಳಿಂದ ಹನುಮನನ್ನು ಸಂತೋಷಪಡಿಸಬಹುದು. ಈ ಆಚರಣೆಗಳು ನಕಾರಾತ್ಮಕತೆ, ಭಯ ದೂರ ಮಾಡಿ ಸದಾ ಆಶೀರ್ವಾದವನ್ನು ನೀಡುತ್ತವೆ.

Hanuman Blessings: ಸರಳವಾಗಿ ಹನುಮಂತನ ಅನುಗ್ರಹ ಪಡೆಯುವುದು ಹೇಗೆ? ಈ ಕ್ರಮ ಅನುಸರಿಸಿ
ಹನುಮಂತನ ಅನುಗ್ರಹ
ಅಕ್ಷತಾ ವರ್ಕಾಡಿ
|

Updated on: Oct 04, 2025 | 2:24 PM

Share

ಹನುಮಂತನ ಅನುಗ್ರಹ ಪಡೆಯುವುದು ತುಂಬಾ ಕಠಿಣ. ಶುದ್ಧ ಮನಸ್ಸಿನಿಂದ ಪೂಜಿಸಿದರೆ ಮಾತ್ರ ಹನುಮಂತನ ಕೃಪೆಗೆ ಪಾತ್ರರಾಗಬಹುದು. ಆದರೆ ಈ ಸರಳ ಉಪಾಯಗಳು ನಿಮಗೆ ಬಹುಬೇಗ ಹನುಮನ ಆಶೀರ್ವಾದವನ್ನು ನೀಡುತ್ತದೆ. ಸರಳವಾಗಿ ಹನುಮಂತನ ಅನುಗ್ರಹ ಪಡೆಯುವುದು ಹಾಗೂ ಹನುಮಂತನನ್ನು ಸಂತೋಷಪಡಿಸುವುದು ಹೇಗೆ.? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡವನ್ನು ಪಠಿಸುವುದು:

ಹನುಮಂತನನ್ನು ಮೆಚ್ಚಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಪ್ರತಿದಿನ, ವಿಶೇಷವಾಗಿ ಮಂಗಳವಾರ ಮತ್ತು ಶನಿವಾರದಂದು ಭಕ್ತಿ ಮತ್ತು ನಂಬಿಕೆಯಿಂದ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ, ಆತನ ಆಶೀರ್ವಾದ ಬೇಗನೆ ದೊರೆಯುತ್ತದೆ. ಹೆಚ್ಚುವರಿಯಾಗಿ, ನೀವು ಮಂಗಳವಾರ ಮತ್ತು ಶನಿವಾರದಂದು ಸಹ ಸುಂದರಕಾಂಡವನ್ನು ಪಠಿಸಬಹುದು. ಈ ಪಠಣವು ಎಲ್ಲಾ ನಕಾರಾತ್ಮಕತೆ, ಭಯ ಮತ್ತು ದುರದೃಷ್ಟವನ್ನು ಹೋಗಲಾಡಿಸುತ್ತದೆ.

ನಿಯಮಿತವಾಗಿ ರಾಮನಾಮ ಜಪಿಸುವುದು:

ಹನುಮಂತನಿಗೆ ರಾಮನೆಂದರೆ ಬಲು ಪ್ರೀತಿ. ಹನುಮನ ಆಶೀರ್ವಾದ ಬೇಕಾದರೆ “ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್” ಎಂಬ ಮಂತ್ರವನ್ನು ಜಪಿಸಿ. ಈ ಮಂತ್ರವು ಮನಸ್ಸಿಗೆ ಶಾಂತಿಯನ್ನು ತರುವುದಲ್ಲದೆ, ಹನುಮಂತನನ್ನು ಸಂತೋಷಪಡಿಸುತ್ತದೆ. ಹಾಗೆ ಮಾಡುವುದರಿಂದ ಹನುಮನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ ಎಂದು ನಂಬಲಾಗಿದೆ.

ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ಅರ್ಪಿಸಿ:

ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಅಥವಾ ತೊಂದರೆಯನ್ನು ಎದುರಿಸುತ್ತಿದ್ದರೆ, ನೀವು ಮಂಗಳವಾರದಂದು ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ದಾನ ಮಾಡಬಹುದು. ಹೀಗೆ ಮಾಡುವುದರಿಂದ ಹನುಮಂತ ದೇವರ ವಿಶೇಷ ಆಶೀರ್ವಾದ ದೊರೆಯುತ್ತದೆ ಮತ್ತು ತೊಂದರೆಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ: ತುಳಸಿ ಮಾಲೆ ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ತುಳಸಿ ಮತ್ತು ಅರಳಿ ಎಲೆಗಳನ್ನು ಅರ್ಪಿಸಿ:

ಮಂಗಳವಾರ ಮತ್ತು ಶನಿವಾರದಂದು ಪೂಜೆಯ ಸಮಯದಲ್ಲಿ ನೀವು ತುಳಸಿ ಮತ್ತು ಅರಳಿ ಎಲೆಗಳನ್ನು ಸಹ ಅರ್ಪಿಸಬಹುದು. ಹೀಗೆ ಮಾಡುವುದರಿಂದ ಹನುಮಂತನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ.

ಹನುಮಂತನಿಗೆ ಲಡ್ಡು ಅರ್ಪಿಸಿ:

ಹನುಮಂತನಿಗೆ ಬೆಲ್ಲ, ಕಡಲೆ ಮತ್ತು ಬೂಂದಿ ಲಡ್ಡುಗಳು ತುಂಬಾ ಇಷ್ಟ. ಮಂಗಳವಾರ ಮತ್ತು ಶನಿವಾರದಂದು ದೇವಸ್ಥಾನಕ್ಕೆ ಹೋಗಿ ಈ ಕಾಣಿಕೆಗಳನ್ನು ಅರ್ಪಿಸಿ. ಇದಲ್ಲದೇ ಕೆಂಪು ಹೂವು, ಕುಂಕುಮವನ್ನು ಕೂಡ ನೀವು ಅರ್ಪಿಸಬಹುದು.

ಹನುಮಾನ್ ಮಂತ್ರವನ್ನು ಪಠಿಸಿ:

ಹನುಂತನ ಕೆಲವು ವಿಶೇಷ ಮಂತ್ರಗಳನ್ನು ಪಠಿಸುವುದು ಕೂಡ ಶುಭ. “ಓಂ ಹ್ರಾಮ್ ಹನುಮತೇ ನಮಃ.” “ಓಂ ಶ್ರೀರಾಮ ದೂತಾಯ ನಮಃ” “ಓಂ ಆಂ ಅಂಗಾರಕಾಯ ನಮಃ” ಎಂಬ ಮಂತ್ರವನ್ನು ತಪ್ಪದೇ ಮಂಗಳವಾರ, ಶನಿವಾರ ಪಠಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ