Hanuman: ಹನುಮಂತನನ್ನು ಮೆಚ್ಚಿಸಲು 6 ಪ್ರಬಲ ಮಾರ್ಗಗಳು ಇಲ್ಲಿವೆ

ಹನುಮಂತನನ್ನು ಮೆಚ್ಚಿಸಲು ಪೂಜೆ ಮತ್ತು ಮಂತ್ರಗಳ ಪಠಣ, ಮಂಗಳವಾರ ಕೆಂಪು ಬಟ್ಟೆ ಧರಿಸುವುದು, ಪೂಜೆಯ ಸಮಯದಲ್ಲಿ ಸಿಹಿ ತಿಂಡಿಗಳನ್ನು ಅರ್ಪಿಸುವುದು, ಹನುಮಾನ್ ದೇವಾಲಯಗಳಿಗೆ ಭೇಟಿ ನೀಡುವುದು, ಯೋಗ ಅಥವಾ ಧ್ಯಾನದ ಸಮಯದಲ್ಲಿ 'ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್' ಎಂದು ಜಪಿಸುವುದು ಮತ್ತು ಶಾಂತಿ, ಸಮೃದ್ಧಿ ಮತ್ತು ಸಂತೋಷಕ್ಕಾಗಿ ಹನುಮಾನ್ ಚಾಲೀಸಾವನ್ನು ಪಠಿಸುವುದು. ಹೀಗೆ ಹನುಮಂತನ ಅನುಗ್ರಹ ಪಡೆಯಲು ಅನೇಕ ಮಾರ್ಗಗಳಿದ್ದು, ಇವುಗಳನ್ನು ಅಳವಡಿಸಿಕೊಂಡಲ್ಲಿ ದೇವರ ಆಶೀರ್ವಾದ ಪಡೆಯಬಹುದು.

Hanuman: ಹನುಮಂತನನ್ನು ಮೆಚ್ಚಿಸಲು 6 ಪ್ರಬಲ ಮಾರ್ಗಗಳು ಇಲ್ಲಿವೆ
ಹನುಮಂತನನ್ನು ಮೆಚ್ಚಿಸುವ ಆರು ಪ್ರಬಲ ಮಾರ್ಗಗಳುImage Credit source: /wallpapers.com
Follow us
ಪ್ರೀತಿ ಭಟ್​, ಗುಣವಂತೆ
| Updated By: Rakesh Nayak Manchi

Updated on: Jan 15, 2024 | 6:35 PM

ಭಗವಾನ್ ಹನುಮಂತನನ್ನು (Hanuman) ವಿಶ್ವದಾದ್ಯಂತ ಲಕ್ಷಾಂತರ ಜನರು ಪೂಜಿಸುತ್ತಾರೆ. ಹನುಮಂತನ ಅಸಾಧಾರಣ ಶಕ್ತಿ ಮತ್ತು ಭಗವಾನ್ ರಾಮನ ಮೇಲಿನ ಭಕ್ತಿ ಎರಡರಿಂದಲೂ ಪ್ರಸಿದ್ದಿ ಪಡೆದ ಅಗ್ರಗಣ್ಯರಲ್ಲಿ ಒಬ್ಬನು. ಹನುಮಂತನನ್ನು ಮೆಚ್ಚಿಸುವುದು ಸುಲಭವಲ್ಲ. ಹಾಗೆಂದು ಒಲಿಸಿಕೊಳ್ಳುವುದು ಕಷ್ಟವೂ ಅಲ್ಲ. ಆದರೆ ಕೆಲವು ನಿಯಮ, ನಿಷ್ಠೆಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದ್ದರಿಂದ ಹನುಮಂತನನ್ನು ಮೆಚ್ಚಿಸಲು, ಅವನ ಆಶೀರ್ವಾದ ಪಡೆಯಲು ಕೆಲವು ಶಕ್ತಿಯುತ ಮಾರ್ಗಗಳನ್ನು ಇಲ್ಲಿ ತಿಳಿಸಲಾಗಿದ್ದು, ಇವುಗಳನ್ನು ಅನುಸರಿಸುವುದರಿಂದ ನಿಮಗೆ ಹನುಮಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಹನುಮಂತನನ್ನು ಮೆಚ್ಚಿಸಲು ಪೂಜೆ ಮತ್ತು ಮಂತ್ರಗಳ ಪಠಣ, ಮಂಗಳವಾರ ಕೆಂಪು ಬಟ್ಟೆ ಧರಿಸುವುದು, ಪೂಜೆಯ ಸಮಯದಲ್ಲಿ ಸಿಹಿ ತಿಂಡಿಗಳನ್ನು ಅರ್ಪಿಸುವುದು, ಹನುಮಾನ್ ದೇವಾಲಯಗಳಿಗೆ ಭೇಟಿ ನೀಡುವುದು, ಯೋಗ ಅಥವಾ ಧ್ಯಾನದ ಸಮಯದಲ್ಲಿ ‘ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್’ ಎಂದು ಜಪಿಸುವುದು ಮತ್ತು ಶಾಂತಿ, ಸಮೃದ್ಧಿ ಮತ್ತು ಸಂತೋಷಕ್ಕಾಗಿ ಹನುಮಾನ್ ಚಾಲೀಸಾವನ್ನು ಪಠಿಸುವುದು. ಹೀಗೆ ಹನುಮಂತನ ಅನುಗ್ರಹ ಪಡೆಯಲು ಅನೇಕ ಮಾರ್ಗಗಳಿದ್ದು, ಇವುಗಳನ್ನು ಅಳವಡಿಸಿಕೊಂಡಲ್ಲಿ ದೇವರ ಆಶೀರ್ವಾದ ಪಡೆಯಬಹುದು.

ಇದನ್ನೂ ಓದಿ: ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನಕ್ಕೂ ರಾಮಾಯಣಕ್ಕೂ ಇದೆ ನಂಟು: ಹನುಮಂತ ದರ್ಶನ ನೀಡಿದ ಸ್ಥಳ !

  1. ಮೊದಲನೆಯದಾಗಿ, ಹನುಮಂತನನ್ನು ಮೆಚ್ಚಿಸುವ ಅತ್ಯುತ್ತಮ ಮಾರ್ಗವೆಂದರೆ ಭಕ್ತಿ ಮತ್ತು ಆರಾಧನೆ. ನಿಯಮಿತವಾಗಿ ಅವನ ಮಂತ್ರಗಳನ್ನು ಪಠಿಸುವ ಮೂಲಕ ಮತ್ತು ಸಮರ್ಪಣಾ ಭಾವದಿಂದ ಪೂಜೆ ಮಾಡುವ ಮೂಲಕ ಹನುಮಂತನ ಆಶೀರ್ವಾದ ಪಡೆಯಬಹುದು. ಇದೆಲ್ಲಕ್ಕಿಂತ ಮಿಗಿಲಾಗಿ ರಾಮ ಜಪ ಅಥವಾ ಅವನ ಸ್ಮರಣೆ ಮಾಡುವುದರಿಂದ ಹನುಮಂತನ ಅನುಗ್ರಹ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ.
  2. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರದಂದು ಕೆಂಪು ಬಟ್ಟೆಗಳನ್ನು ಧರಿಸುವುದರಿಂದ ನಿಮ್ಮ ಪಾಲಿಗೆ ಉತ್ತಮ ದಿನವಾಗುತ್ತದೆ. ಈ ಆಕರ್ಷಕ ಬಣ್ಣವು ಶಕ್ತಿ, ಧೈರ್ಯ ಮತ್ತು ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಈ ಎಲ್ಲಾ ಗುಣಲಕ್ಷಣಗಳು ಹನುಮಂತನಿಗೆ ಸಂಬಂಧಿಸಿರುವುದರಿಂದ ಕೆಂಪು ಬಟ್ಟೆಯನ್ನು ಮಂಗಳವಾರ ಧರಿಸುವುದು ಉತ್ತಮ. ಇದರಿಂದ ಹನುಮಂತನ ಅನುಗ್ರಹ ಪಡೆಯಬಹುದು.
  3. ಹನುಮಂತನಿಗೆ ಪೂಜೆ ಮಾಡುವ ಸಮಯದಲ್ಲಿ ನೈವೇದ್ಯದ ರೂಪದಲ್ಲಿ ಲಡ್ಡು ಅಥವಾ ಕಡಲೆ ಬರ್ಫಿಯಂತಹ ಸಿಹಿ ತಿಂಡಿಗಳನ್ನು ಅರ್ಪಿಸುವುದು ಶುಭವೆಂದು ಪರಿಗಣಿಸಲಾಗಿದೆ. ಸಿಹಿ ಪದಾರ್ಥಗಳು ಹನುಮಂತನಿಗೆ ಪ್ರೀಯ ಎನ್ನಲಾಗುತ್ತದೆ. ಅವನಿಗೆ ಇಷ್ಟವಾದ ತಿಂಡಿಯನ್ನು ಪೂಜೆಗೆ ಇಡುವುದರಿಂದ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ.
  4. ಹನುಮಂತನ ದೇವಾಲಯಗಳಿಗೆ ಪ್ರತಿ ವಾರ ಅಥವಾ ದಿನಂಪ್ರತಿ ಭೇಟಿ ನೀಡುವುದರಿಂದ ಅವನ ಅನುಗ್ರಹ ಪಡೆಯಬಹುದಾಗಿದೆ. ಇದು ಅವನ ಮೆಚ್ಚುಗೆ ಗಳಿಸುವ ಮತ್ತೊಂದು ಮಾರ್ಗವಾಗಿದೆ. ಭಾರತದಾದ್ಯಂತ ಹಲವಾರು ಹನುಮಂತನ ದೇವಾಲಯಗಳಿವೆ, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ದೆಹಲಿಯ ಕೊನಾಟ್ ಪ್ಲೇಸ್ನಲ್ಲಿರುವ ಶ್ರೀ ಪ್ರಚೀನ್ ಹನುಮಾನ್ ಮಂದಿರ. ಈ ರೀತಿಯ ಅನೇಕ ದೇವಾಲಯ ನಮ್ಮ ಸುತ್ತಮುತ್ತಲಿನಲ್ಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ. ಜೊತೆಗೆ ಸಮಯವಿದ್ದಾಗ ಎಲ್ಲೇ ಇದ್ದರೂ ಕೂಡ ಅವನ ನಾಮ ಸ್ಮರಣೆ ಮಾಡುವುದನ್ನು ಮರೆಯಬೇಡಿ.
  5. ನೀವು ಯೋಗ ಅಥವಾ ಧ್ಯಾನ ಮಾಡುವಾಗ “ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್” ಎಂದು ಜಪಿಸುವುದರಿಂದ ಹನುಮಂತನ ಆಶೀರ್ವಾದ ಪಡೆಯಬಹುದು. ಇದು ನಿಮಗೆ ಭಗವಂತನೊಂದಿಗೆ ಆಧ್ಯಾತ್ಮಿಕ ಸಂಪರ್ಕ ಬೆಳೆಸಲು ಸುಗಮವಾಗುತ್ತದೆ.
  6. ಹನುಮಂತನನ್ನು ಸಮಾಧಾನಪಡಿಸುವ ಅತ್ಯುತ್ತಮ ಮಾರ್ಗವೆಂದರೆ ಹನುಮಾನ್ ಚಾಲೀಸಾವನ್ನು ಪಠಿಸುವುದು. ಹನುಮಾನ್ ಚಾಲೀಸಾ ನಲವತ್ತು ಶ್ಲೋಕಗಳ ಸ್ತೋತ್ರವಾಗಿದ್ದು, ಇದು ಭಗವಂತನನ್ನು ಗೌರವಿಸಲು ಮತ್ತು ಅವನ ಶೌರ್ಯ, ಶಕ್ತಿ ಮತ್ತು ಭಕ್ತಿಯ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತದೆ. ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ನೀಮ್ಮ ಜೀವನದಲ್ಲಿ ಶಾಂತಿ, ಸಮೃದ್ದಿ ಮತ್ತು ಸಂತೋಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ