ವಿಜಯಪುರ: ಹನುಮಂತನ ಭಕ್ತ ಈ ಮುಸ್ಲಿಂ ವ್ಯಕ್ತಿ! ರಾಮ ಮಂದಿರ ಉದ್ಘಾಟನೆ ನಂತರ ಅಯೋಧ್ಯೆಗೂ ಭೇಟಿ ನೀಡಲಿದ್ದಾರೆ ಮೈಬೂಸಾಬ್
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇದ್ದು, ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ವಿಜಯಪುರದಲ್ಲಿ ಭಾವೈಕ್ಯತೆಯನ್ನು ಸಾರುತ್ತಿರುವ ಮುಸ್ಲಿಂ ವ್ಯಕ್ತಿಯೊಬ್ಬರು ಗಮನಸೆಳೆಯುತ್ತಿದ್ದಾರೆ. ಹೌದು, ರಾಮನ ಭಕ್ತ ಹನುಮಂತ ಎಂಬುದು ಗೊತ್ತೇ ಇದೆ. ಆದರೆ, ಈ ಹನುಮಂತನ ಭಕ್ತ ಈ ಮುಸ್ಲಿಂ ವ್ಯಕ್ತಿ. ಅಷ್ಟೇ ಅಲ್ಲದೆ, ಕಳೆದ 40 ವರ್ಷಗಳಿಂದ ಆಂಜನೇಯನನ್ನು ಪೂಜಿಸುತ್ತಾ ಬರುತ್ತಿದ್ದಾರೆ.
ವಿಜಯಪುರ, ಜ.15: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ayodhya Ram Mandir) ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇದ್ದು, ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ವಿಜಯಪುರದಲ್ಲಿ (Vijayapura) ಭಾವೈಕ್ಯತೆಯನ್ನು ಸಾರುತ್ತಿರುವ ಮುಸ್ಲಿಂ ವ್ಯಕ್ತಿಯೊಬ್ಬರು ಗಮನಸೆಳೆಯುತ್ತಿದ್ದಾರೆ. ರಾಮನ ಭಕ್ತ ಹನುಮಂತ ಎಂಬುದು ಗೊತ್ತೇ ಇದೆ. ಆದರೆ, ಈ ಹನುಮಂತನ ಭಕ್ತ ಈ ಮುಸ್ಲಿಂ ವ್ಯಕ್ತಿ. ಅಷ್ಟೇ ಅಲ್ಲದೆ, ಕಳೆದ 40 ವರ್ಷಗಳಿಂದ ಆಂಜನೇಯನನ್ನು ಪೂಜಿಸುತ್ತಾ ಬರುತ್ತಿದ್ದಾರೆ.
ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದ ನಿವಾಸಿಯಾಗಿರುವ ಮೈಬೂಸಾಬ್ ನದಾಫ್ ಅವರು ಗ್ರಾಮದ ಹನುಮಂತ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಮೈಬೂಸಾಬ್ ಅವರು ತಮ್ಮ ಮನೆಯಲ್ಲಿ ಜಾತಿ ಬೇಧ ಭಾವವಿಲ್ಲದೇ ನಿತ್ಯ ಎಲ್ಲ ಸಮುದಾಯಗಳ ದೇವರ ಪೂಜೆಯೂ ಮಾಡುತ್ತಾರೆ.
ಇದನ್ನೂ ಓದಿ: ಎಲ್ಲ ಧರ್ಮಗಳ ಹಬ್ಬ ತನ್ನ ಗ್ರಂಥಾಲಯದಲ್ಲಿ ಆಚರಿಸುವ ಮೈಸೂರಿನ ಸಯ್ಯದ್ ಇಶಾಕ್ ಭಾವೈಕ್ಯತೆಯ ಪ್ರತೀಕ!
ಗ್ರಾಮದಲ್ಲಿ ಕೋಮು ಸೌಹಾರ್ಧತೆಗೆ ವೇದಿಕೆಯಾಗಿರೋ ಮೈಬೂಸಾಬ್ ನದಾಫ್ 40 ವರ್ಷಗಳಿಂದ ನಿತ್ಯ ತಪ್ಪದೇ ರಾಮನ ಬಂಟ ಹನುಮಂತನ ಪೂಜೆ ಮಾಡುತ್ತಿದ್ದಾರೆ. ಹನುಮಂತನ ಸೇವೆಯಿಂದ ತನಗೆ ಹಾಗೂ ಕುಟುಂಬಕ್ಕೆ ಒಳ್ಳೆಯದೇ ಆಗಿದೆ ಎಂದು ಅವರು ಹೇಳಿದ್ದಾರೆ. ನನಗೆ ನಮ್ಮ ಸಮುದಾಯದಿಂದ ವಿರೋಧ ವ್ಯಕ್ತವಾಗಿಲ್ಲ. ಇಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ ಎಂದಿದ್ದಾರೆ.
ಹನುಮಂನತ ಪೂಜೆ ನಂತರವೇ ಆಹಾರ ಸೇವನೆ
ಮೈಬೂಸಾಬ್ ನದಾಫ್ ಅವರಿಗೆ ಹನುಮಂನತ ಮೇಲೆ ಎಷ್ಟು ಭಕ್ತಿ ಇಟ್ಟುಕೊಂಡಿದ್ದಾರೆ ಎಂದರೆ, ದೇವರಿಗೆ ಪೂಜೆ ಮಾಡಿದ ನಂತರವೇ ನೀರು ಆಹಾರ ಸೇವನೆ ಮಾಡುತ್ತಾರೆ. ಹೊತ್ತು ಮುಳುಗಿದರೂ ಏನನ್ನೂ ಸೇವಿಸಲ್ಲ. ಹೀಗೇ ಇರುತ್ತೇನೆ ಎಂದು ಮೈಬೂಸಾಬ್ ಹೇಳುತ್ತಾರೆ.
ಸದ್ಯ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕುರಿತು ಅತೀವ ಸಂತಸ ವ್ಯಕ್ತಪಡಿಸಿರುವ ಮೈಬೂಸಾಬ್, ಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆಗೆ ತೆರಳಿ ರಾಮಮಂದಿರ ದರ್ಶನ ಪಡೆಯುವುದಾಗಿ ಹೇಳಿದ್ದಾರೆ. ಮೈಬೂಸಾಬ್ಗೆ ಡೋಮನಾಳ ಗ್ರಾಮದ ಜನರು ಸಾಥ್ ನೀಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ