Hanuman Jayanti 2021: ಹನುಮ ಜಯಂತಿಯ ವಿಶೇಷತೆ, ಪೂಜೆಯ ಸಮಯ, ಪಠಿಸುವ ಮಂತ್ರ ಇಲ್ಲಿದೆ ಮಾಹಿತಿ

Hanuman Jayanti Celebration 2021: ಈ ವರ್ಷ ಏಪ್ರಿಲ್​ 27ರಂದು ಅಂದರೆ ಮಂಗಳವಾರ ಹನುಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಹನುಮನಿಗೆ ವಿಶೇಷ ವಿಧಿ-ವಿಧಾನಗಳ ಮೂಲಕ ಪೂಜಾ ಕೈಗೊಳ್ಳಲಾಗುತ್ತದೆ.

Hanuman Jayanti 2021: ಹನುಮ ಜಯಂತಿಯ ವಿಶೇಷತೆ, ಪೂಜೆಯ ಸಮಯ, ಪಠಿಸುವ ಮಂತ್ರ ಇಲ್ಲಿದೆ ಮಾಹಿತಿ
ಹನುಮ ಜಯಂತಿ
Follow us
shruti hegde
|

Updated on:Apr 26, 2021 | 6:00 PM

ಹಿಂದೂ ದೇವಾನು ದೇವತೆಗಳಲ್ಲಿ ಹನುಮನನ್ನು ಅತ್ಯಂತ ಶಕ್ತಿಸಾಲಿ ಎಂದು ಪೂಜಿಸುತ್ತಾರೆ. ಈ ವರ್ಷ ಏಪ್ರಿಲ್​ 27ರಂದು ಅಂದರೆ ಮಂಗಳವಾರ ಹನುಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಹನುಮನಿಗೆ ವಿಶೇಷ ವಿಧಿ -ವಿಧಾನಗಳ ಮೂಲಕ ಆಂಜನೇಯ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯನ್ನೂ ಸಲ್ಲಿಸುತ್ತಾರೆ. ಋತು, ಮಾಸಗಳಿಗೆ ಅನುಗುಣವಾಗಿ ಹನುಮ ಜಯಂತಿ ಆಚರಿಸಲಾಗುತ್ತದೆ.

ಹನುಮನಿಗೆ ವಾಯುಪುತ್ರ, ಕಪಿವೀರ, ಅಂಜನೇಯ, ಅಂಜನಿ ಪುತ್ರ, ಭಜರಂಗಬಲಿ ಎಂಬೆಲ್ಲಾ ಹೆಸುರುಗಳಿಂದ ಕರೆಯುತ್ತಾರೆ. ಜಾತಿ, ಮತ, ಪಂಥಗಳ ಬೇಧವಿಲ್ಲದ ಆಂಜನೇಯನಿಗೆ ತುಳಸಿ ಮಾಲೆ ಬಲು ಪ್ರಿಯ. ಹಾಗಾಗಿ ಹನುಮ ಜಯಂತಿಯ ಪ್ರಯುಕ್ತ ಭಕ್ತರು ತುಳಸಿ ಮಾಲೆ ಮಾಡಿ ಪೂಜೆ ಕೈಗೊಳ್ಳುತ್ತಾರೆ. ಈ ವರ್ಷ ಎಲ್ಲಡೆ ಕೊವಿಡ್ ಸಾಂಕ್ರಾಮಿಕ ಆವರಿಸಿರುವುದರಿಂದ ದೇವಸ್ಥಾನಗಳಿಗೆ ಭೇಟಿ ನೀಡಲಾಗುತ್ತಿಲ್ಲ ಎಂಬುದು ಆಂಜನೇಯನ ಭಕ್ತರಿಗುಂಟಾದ ನಿರಾಸೆಯ ಸಂಗತಿ. ಹಾಗಾಗಿ ಮನೆಯಲ್ಲಿಯೇ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತರು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

ಕೆಂಪು, ಹಳದಿ ಹೂವುಗಳ ಮೂಲಕ ವಿಶೇಷ ಪೂಜೆ ಹನುಮನಿಗೆ ಕೆಂಪು ಬುಂದಿಯನ್ನು ನೈವೇದ್ಯವಾಗಿ ಅರ್ಪಿಸಿತ್ತಾರೆ. ಈ ಮೂಲಕ ಭಕ್ತಿಯಿಂದ ಬೇಡಿಕೊಂಡು ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ಕೆಂಪು ಮತ್ತು ಹಳದಿ ಬಣ್ಣವೆಂದರೆ ಆಂಜನೇಯನಿಗೆ ಇಷ್ಟ ಎಂದು ಹೇಳಲಾಗಿದೆ. ಹಾಗಾಗಿ ಈ ಬಣ್ಣದ ಹೂಗಳನ್ನು ಹೆಚ್ಚು ಸಮರ್ಪಿಸುವ ಮೂಲಕ ಭಕ್ತರು ಆಂಜನೇಯನ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಾರೆ.

ಹನುಮನಿಗೆ ತುಳಸಿ ಮಾಲೆ ವಿಶೇಷ ಹನುಮನಿಗೆ ತುಳಸಿ ಮಾಲೆ ಅತ್ಯಂತ ಪ್ರಿಯ ಎಂದು ಹೇಳಲಾಗಿದೆ. ಪೂಜಾ ವಿಶೇಷದಲ್ಲಿ ಮಹಾವೀರ ಆಂಜನೇಯನಿಗೆ ತುಳಸಿ ಮಾಲೆ ಸಮರ್ಪಿಸಿ ಪೂಜೆ ಕೈಗೊಳ್ಳಲಾಗುತ್ತದೆ. ಇದರಿಂದ ಸುಖ ಸಮೃದ್ಧಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ವಿಶೇಷವಾಗಿ ತುಪ್ಪದಲ್ಲಿ ಅಥವಾ ಸಾಸಿವೆ ಎಣ್ಣೆಯ ದೀಪ ಬೆಳಗುವ ಮೂಲಕ ಪೂಜೆ ನೆರವೇರುತ್ತದೆ.

ಹನುಮ ಜಯಂತಿ ಆಚರಣೆಯ ದಿನಾಂಕ ಮತ್ತು ಸಮಯ ಈ ವರ್ಷ ಏಪ್ರಿಲ್​ 27ರಂದು ಹನುಮಜಯಂತಿಯನ್ನು ಆಚರಿಸಲಾಗುತ್ತದೆ. ಹಿಂದಿನ ದಿನ ಅಂದರೆ ಇಂದು ಏಪ್ರಿಲ್​ 26ನೇ ತಾರೀಕು ಪೂರ್ಣಿಮಾ ತಿಥಿ 12:44 ರಿಂದ ಪ್ರಾರಂಭಗೊಂಡ ಆಚರಣೆಯನ್ನು ಏಪ್ರಿಲ್​ 27ನೇ ತಾರೀಕು 9 ಗಂಟೆಯವರೆಗೆ ಆಚರಿಸಲಾಗುತ್ತದೆ.

ಆಂಜನೇಯನ ಭಕ್ತರೆಲ್ಲಾ ಹನುಮಾನ್​ ಚಾಲೀಸ್​ ಪದ್ಯವನ್ನು ಓದುತ್ತಾರೆ. ಹನುಮನಿಗಾಗಿಯೇ ರಚಿಸಲಾದ ತುಳಸಿ ದಾಸರ ಪದ್ಯವನ್ನು ಪೂಜೆ ಸಮಯದಲ್ಲಿ ಪಠಿಸುತ್ತಾರೆ. ಕೇವಲ ಹನುಮಜನಂತಿಯೊಂದೇ ಅಲ್ಲದೇ ಕಷ್ಟದ ಕಾಲದಲ್ಲಿ ಧೈರ್ಯ, ಸಾಮರ್ಥ್ಯಕ್ಕೆ ಹೆಸರಾದ ಹನುಮಂತನನ್ನು ನೆನೆದರೆ ಧೈರ್ಯದಿಂದ ಮುನ್ನುಗ್ಗಬಹುದು ಎಂಬ ನಂಬಿಕೆಯಿಂದ ಹನುಮಾನ್ ಚಾಲೀಸ್​ ಪದ್ಯ ಪಠಿಸುವ ಮೂಲಕ ಹನುಮನನ್ನು ನೆನೆಯುತ್ತಾರೆ. ಹನುಮ ಜಯಂತಿಯ ದಿನದಂದು ಶ್ರೀರಾಮ ಮತ್ತು ಮಾತೆ ಸೀತೆಗೂ ಪೂಜೆ ಸಲ್ಲಿಸಲಾಗುತ್ತದೆ. ಶ್ರೀರಾಮ ರಕ್ಷಾ ಮಂತ್ರವನ್ನೂ ಪಠಿಸಲಾಗುತ್ತದೆ. ಬ್ರಹ್ಮಚರ್ಯ ವ್ರತವನ್ನು ಪಾಲಿಸಲಾಗುತ್ತದೆ.

ಇದನ್ನೂ ಓದಿ: ಲಕ್ಷ ಲಕ್ಷ ಜನ ಧರಿಸುವ ಹನುಮ ಮಾಲೆಯ ರೋಚಕ ಇತಿಹಾಸ!

Published On - 5:57 pm, Mon, 26 April 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್