Daily Devotional: ಪೂಜೆ ಸಮಯದಲ್ಲಿ ಈ ಬಣ್ಣದ ಬಟ್ಟೆ ಧರಿಸಲೇಬೇಡಿ!

ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಿದರೆ ಶುಭ ಮತ್ತು ಯಾವುದು ಅಶುಭ ಎಂಬುದರ ಕುರಿತು ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ. ಬಿಳಿ ಮತ್ತು ಹಳದಿ ಬಣ್ಣಗಳು ಶುಭ. ಆದರೆ ಯಾವುದೇ ಬಣ್ಣದ ಬಟ್ಟೆಯನ್ನು ಧರಿಸಿದರೂ ಅದು ಶುಚಿಯಾಗಿರಬೇಕು. ಕೊಳಕು ಅಥವಾ ಹರಿದ ಬಟ್ಟೆ ಧರಿಸಬಾರದು. ಪೂಜಾ ವಿಧಿಗಳನ್ನು ಸರಿಯಾಗಿ ಪಾಲಿಸುವುದು ಮುಖ್ಯ.

Daily Devotional: ಪೂಜೆ ಸಮಯದಲ್ಲಿ ಈ ಬಣ್ಣದ ಬಟ್ಟೆ ಧರಿಸಲೇಬೇಡಿ!
Hindu Puja

Updated on: May 05, 2025 | 8:37 AM

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಅದರಂತೆ ಪ್ರತೀ ಮನೆಯಲ್ಲಿ ಮುಂಜಾನೆ ಮತ್ತು ಸಂಜೆ ದೇವರಿಗೆ ದೀಪ ಬೆಳಗಿಸಲಾಗುತ್ತದೆ. ಇದಲ್ಲದೇ ಏನೇ ಶುಭ ಕಾರ್ಯಕ್ಕೂ ಮುನ್ನ ಗಣೇಶ ಅಥವಾ ತಮ್ಮ ಕುಲ ದೇವರಿಗೆ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡ ಪದ್ಧತಿ. ಇದಲ್ಲದೇ ಪೂಜೆಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸುವುದು ತುಂಬಾನೇ ಮುಖ್ಯ. ಇಂದು ಪೂಜೆಯ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು ಮತ್ತು ಯಾವ ಬಣ್ಣದ ಬಟ್ಟೆ ಧರಿಸಲೇ ಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಿದರೆ ಶುಭ ಮತ್ತು ಯಾವುದು ಅಶುಭ ಎಂಬುದರ ಕುರಿತು ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ. ವಿಡಿಯೋದಲ್ಲಿ ಗುರೂಜಿಯವರು ಪೂಜೆ ಸಮಯದಲ್ಲಿ ಧರಿಸಬೇಕಾದ ಬಟ್ಟೆಯ ಬಣ್ಣಗಳ ಕುರಿತು ವಿವರಿಸಿರುವುದನ್ನು ಕಾಣಬಹುದು.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
ಜುಲೈ 3 ರಿಂದ ಅಮರನಾಥ ಯಾತ್ರೆ ಆರಂಭ; ನೋಂದಣಿ ಸೇರಿದಂತೆ ಸಂಪೂರ್ಣ ವಿವರ
ಐದು ವರ್ಷಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ
ದೇವಾಲಯ ನಿರ್ಮಾಣವಾಗುತ್ತಿದ್ದಾಗಲೇ ಕೊಳಕ್ಕೆ ಹಾರಿದ ಶಿಲ್ಪಿ,ಇಂದಿಗೂ ಅಪೂರ್ಣ!
ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕರಿಗೆ ಸಿಗುವ ಸಂಬಳ, ಸೌಲಭ್ಯ ಏನೇನು?

ಇದನ್ನೂ ಓದಿ: ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೇ, ಹಾಗಿದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತು ಇಡಿ

ಡಾ. ಬಸವರಾಜ ಗುರೂಜಿಯವರು ಹೇಳುವಂತೆ ” ಬಿಳಿ ಮತ್ತು ಹಳದಿ ಬಣ್ಣಗಳು ಪೂಜೆಗೆ ಅತ್ಯಂತ ಶ್ರೇಷ್ಠ. ಈ ಬಣ್ಣಗಳು ಮಾನಸಿಕ ಶಾಂತಿಯನ್ನು ನೀಡುತ್ತವೆ. ಆದರೆ ಎಂದಿಗೂ ಕಪ್ಪು ಬಣ್ಣವನ್ನು ಪ್ರತಿದಿನದ ಪೂಜೆಗೆ ಬಳಸಬಾರದು. ಇದರಿಂದ ಶುಭ ಫಲಕ್ಕಿಂತ ಅಶುಭ ಫಲಗಳೇ ಹೆಚ್ಚು. ಇದಲ್ಲದೇ ದೇವಿಯ ಪೂಜೆಯ ವೇಳೆ ಕೆಂಪು ಬಣ್ಣದ ಬಟ್ಟೆ ಧರಿಸುವುದು ಸೂಕ್ತ. ಆದರೆ ಯಾವುದೇ ಬಟ್ಟೆಯನ್ನು ಧರಿಸಿದರೂ ಅದು ಶುಚಿಯಾಗಿರಬೇಕು. ಪೂಜೆಯ ಸಮಯದಲ್ಲಿ ಕೊಳಕು ಹಾಗೂ ಹರಿದ ಬಟ್ಟೆಯನ್ನು ಧರಿಸಬೇಡಿ” ಎಂದು ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ