Holi 2024: ಹೋಳಿ ಹಬ್ಬದಂದು ಈ ದೇವರನ್ನು ಪೂಜಿಸಿ; ಜೀವನದಲ್ಲಿ ಸದಾ ಸಂತೋಷ ನೆಲೆಸಿರುತ್ತದೆ

ಈ ವರ್ಷ ಮಾರ್ಚ್​​​​ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಧಾ-ಕೃಷ್ಣನ ಆರಾಧನೆ ಇಲ್ಲದೆ ಹೋಳಿ ಹಬ್ಬವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ರಾಧಾ-ಕೃಷ್ಣನ ಜೊತೆಗೆ ಯಾವೆಲ್ಲಾ ದೇವರುಗಳನ್ನು ಪೂಜಿಸುವುದರಿಂದ ನಿಮ್ಮ ಜೀವನದಲ್ಲಿ ಸದಾ ಸಂತೋಷ ನೆಲೆಸಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

Holi 2024: ಹೋಳಿ ಹಬ್ಬದಂದು ಈ ದೇವರನ್ನು ಪೂಜಿಸಿ; ಜೀವನದಲ್ಲಿ ಸದಾ ಸಂತೋಷ ನೆಲೆಸಿರುತ್ತದೆ
Holi 2024
Image Credit source: Pinterest

Updated on: Mar 12, 2024 | 1:00 PM

ಹೋಳಿ ಹಬ್ಬ ಸಮೀಪಿಸುತ್ತಿದೆ. ಈ ಬಣ್ಣಗಳ ಹಬ್ಬವನ್ನು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಇತರ ಹಬ್ಬಗಳಂತೆಯೇ ಹೋಳಿಯೂ ಸಹ ದೇವತೆಗಳಿಗೆ ಸಮರ್ಪಿತವಾಗಿದೆ.ಹೋಳಿ ಹಬ್ಬದಂದು ಈ ದೇವತೆಗಳನ್ನು ಪೂಜಿಸುವುದರಿಂದ ವಿಶೇಷ ಫಲ ನಿಮ್ಮದಾಗುತ್ತದೆ ಎಂಬ ನಂಬಿಕೆಯಿದೆ. ಈ ವರ್ಷ ಮಾರ್ಚ್​​​​ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದ್ದರಿಂದ ಈ ವಿಶೇಷ ದಿನದಲ್ಲಿ ಈ ದೇವರುಗಳನ್ನು ಪೂಜಿಸುವುದರಿಂದ ನಿಮ್ಮ ಜೀವನದಲ್ಲಿ ಸದಾ ಸಂತೋಷ ನೆಲೆಸಿರುತ್ತದೆ.

ಶಿವನ ಆರಾಧನೆ:

ಹೋಳಿ ಹಬ್ಬದ ಪ್ರಯುಕ್ತ ಕಾಶಿಯ ಪುರಾತನ ದೇಗುಲದಲ್ಲಿ ಭಕ್ತರು ಬಣ್ಣ ಮತ್ತು ಭಸ್ಮದೊಂದಿಗೆ ಹೋಳಿ ಆಚರಿಸುತ್ತಾರೆ. ಈ ಸಂಪ್ರದಾಯವನ್ನು ‘ಮಸಣ ಹೋಳಿ’ ಎಂದೂ ಕರೆಯುತ್ತಾರೆ. ಶಿವನೇ ಇಲ್ಲಿ ಹೋಳಿ ಆಡಲು ಬರುತ್ತಾನೆ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಹೋಳಿಯಂದು ಶಿವನನ್ನು ಪೂಜಿಸುವುದರಿಂದ ಮನೆಯಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗಿ ಸಂತೋಷ, ಸಂಪತ್ತು ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಹನುಮಂತನನ್ನು ಪೂಜಿಸಿ:

ಹೋಳಿ ಹಬ್ಬದಂದು ಹನುಮಂತನನ್ನು ಪೂಜಿಸುವುದು ವಿಶೇಷ ಎಂದು ನಂಬಲಾಗಿದೆ. ಹೋಳಿ ಹಬ್ಬದಂದು ಹನುಮಂತನನ್ನು ಪೂಜಿಸುವುದು ಭಕ್ತರ ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.

ವಿಷ್ಣು ಪೂಜೆ:

ಹೋಳಿ ಹಬ್ಬವು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ. ಹೋಳಿಗೆ ಒಂದು ದಿನ ಮೊದಲು ಹೋಲಿಕಾವನ್ನು ಸುಡಲಾಗುತ್ತದೆ. ಪುರಾಣಗಳ ಪ್ರಕಾರ, ಹೋಳಿ ಹಬ್ಬವು ವಿಷ್ಣುವಿನ ನರಸಿಂಹ ಅವತಾರದೊಂದಿಗೆ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಹೋಳಿಯಂದು ವಿಷ್ಣುವನ್ನು ಪೂಜಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಹೋಳಿ ಹಬ್ಬದಂದು ಈ 5 ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವೇ ಬದಲಾಗುತ್ತೆ!

ಲಕ್ಷ್ಮಿ ದೇವಿ:

ಹೋಳಿ ಹಬ್ಬದಂದು ಲಕ್ಷ್ಮಿ ದೇವಿಯ ಆರಾಧನೆಗೂ ವಿಶೇಷ ಮಹತ್ವವಿದೆ. ಹೋಳಿ ಹಬ್ಬದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ನೆಲೆಸಿ, ಆರ್ಥಿಕ ಸ್ಥಿತಿಯೂ ಸುಧಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.

ರಾಧಾ-ಕೃಷ್ಣ:

ರಾಧಾ-ಕೃಷ್ಣನ ಆರಾಧನೆ ಇಲ್ಲದೆ ಹೋಳಿ ಹಬ್ಬವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಹೋಳಿ ಸಂದರ್ಭದಲ್ಲಿ, ಮಥುರಾ-ಬೃಂದಾವನದಲ್ಲಿ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇಲ್ಲಿ ಹೋಳಿಯನ್ನು ಕಣ್ತುಂಬಿಕೊಳ್ಳಲು ಹೊರದೇಶಗಳಿಂದಲೂ ಜನರು ಮಥುರಾ ತಲುಪುತ್ತಾರೆ. ಹೋಳಿಯಂದು ರಾಧಾ-ಕೃಷ್ಣರನ್ನು ಪೂಜಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲೂ ಸುಖವಿದೆ. ಇಂತಹ ಪರಿಸ್ಥಿತಿಯಲ್ಲಿ ಹೋಳಿಯಂದು ಶ್ರೀ ರಾಧಾ ಕೃಷ್ಣನನ್ನು ಖಂಡಿತ ಪೂಜಿಸಿ. ಇದು ಜೀವನದಲ್ಲಿ ಪ್ರೀತಿಯನ್ನು ತರುವುದು ಮಾತ್ರವಲ್ಲದೆ ಪ್ರೀತಿಯ ಸಂಬಂಧವನ್ನು ಗಟ್ಟಿಯಾಗಿ ಇಡುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us