AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elephant Tomb: ಆ ಗ್ರಾಮದಲ್ಲಿ ಆನೆ ಸಮಾಧಿಗೆ 120 ವರ್ಷಗಳಿಂದ ಪೂಜೆ ಮಾಡುತ್ತಿದ್ದಾರೆ!

ಅಹೋಬಿಲಂ ಮಠಾಧೀಶರು ತಮ್ಮ ಪ್ರಯಾಣದಲ್ಲಿ ಆನೆ, ಕುದುರೆ, ಛತ್ರ, ಚಾಮರಗಳೊಂದಿಗೆ ಪ್ರಯಾಣಿಸುತ್ತಿದ್ದರು. 1902ರಲ್ಲಿ ಕುಂಭಕೋಣಂನಿಂದ ಬರುತ್ತಿದ್ದಾಗ ಮಠಾಧೀಶರ ಆನೆಗೆ ಕಾಯಿಲೆ ಬಂತು. ಸುಮಾರು 500 ಕಿ ಮೀ ಪ್ರಯಾಣಿಸಿ ಗುಡಿಪಾಡು ತಲುಪಿದ ನಂತರ ಆನೆ ನಿಂತುಬಿಟ್ಟಿತು. ಮುಂದೆ ಸಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿಂದ ಕದಲದೆ ಪ್ರಾಣ ಬಿಟ್ಟಿತು.

Elephant Tomb: ಆ ಗ್ರಾಮದಲ್ಲಿ ಆನೆ ಸಮಾಧಿಗೆ 120 ವರ್ಷಗಳಿಂದ ಪೂಜೆ ಮಾಡುತ್ತಿದ್ದಾರೆ!
ಆನೆ ಸಮಾಧಿಗೆ 120 ವರ್ಷಗಳಿಂದ ಪೂಜೆ
ಸಾಧು ಶ್ರೀನಾಥ್​
|

Updated on:Sep 06, 2023 | 6:17 PM

Share

ಕಡಪ, ಸೆಪ್ಟೆಂಬರ್ 6: ಪ್ರಸಿದ್ಧ ಮೈಸೂರು ದಸರಾ (Mysore Dasara 2023) ಮಹೋತ್ಸವದ ಜಂಬೂ ಸವಾರಿಯಲ್ಲಿ (Jamboo Savari) ಪಾಲ್ಗೊಳ್ಳಲು 14 ಆನೆಗಳಿಗೆ ತಾಲೀಮು ನಡೆಯುತ್ತಿದೆ. ಪ್ರತಿವರ್ಷ ಮಹಾರಾಜರ ಕಾಲದಿಂದಲೂ ಇದಕ್ಕೆ ಮಹತ್ವವಿದೆ. ಹೀಗಿರುವ ಆಗ ನೆರೆಯ ಆಂಧ್ರದಲ್ಲೂ ಆನೆಗೆ ಸಂಬಂಧಿಸಿದಂತೆ ನೂರಾರು ವರ್ಷದ ಒಂದು ಇತಿಹಾಸದ ಕುರಿತು ತಿಳಿಯೋಣ. ಕಡಪ ಜಿಲ್ಲೆಯ ದುವ್ವೂರು ಮಂಡಲದ ಗುಡಿಪಾಡು (Gudipadu village, Duvvur mandal, Kadapa) ಎಂಬಲ್ಲಿ ಆನೆ ಸಮಾಧಿಯಿದ್ದು, ಸಮಾಧಿಗೆ ವಿಶಿಷ್ಟವಾದ ಆಧ್ಯಾತ್ಮಿಕ (Spiritual) ಇತಿಹಾಸವಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಗುಡಿಪಾಡು ಬಳಿ ಹಳೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಈ ಆನೆ ಸಮಾಧಿ (Elephant Tomb) ಇದೆ. ಈ ಆನೆ ಸಮಾಧಿಗೆ 120 ವರ್ಷಗಳ ಆಸಕ್ತಿದಾಯಕ ಇತಿಹಾಸವಿದೆ.

ಅಹೋಬಿಲಂ ಮಠವು ದೇಶದ ಹಲವು ಭಾಗಗಳಲ್ಲಿ ದೇವಾಲಯಗಳನ್ನು ಹೊಂದಿದೆ. ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಲ್ಲಿ ಅಹೋಬಿಲ ಮಠ ಮತ್ತು ದೇವಸ್ಥಾನವೂ ಇದೆ. ಕುಂಭಕೋಣಂನಿಂದ ಮಠಾಧೀಶರು ಅಹೋಬಿಲಕ್ಕೆ ಭೇಟಿ ನೀಡುತ್ತಿದ್ದರು. ಕುಂಭಕೋಣಂ ಮತ್ತು ಅಹೋಬಿಲಂ ಕ್ಷೇತ್ರಗಳ ನಡುವಿನ ಅಂತರ 546 ಕಿಲೋ ಮೀಟರ್. ಕಾಶಿ ಮತ್ತು ರಾಮೇಶ್ವರಂ ರಸ್ತೆ ಎಂದು ಕರೆಯಲಾಗುವ ಈಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದೆ ಯಾತ್ರಾರ್ಥಿಗಳು ಆನೆ, ಕುದುರೆ ಹಾಗೂ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು.

ಮಠಾಧೀಶರು ತಮ್ಮ ಪ್ರಯಾಣದಲ್ಲಿ ಆನೆ, ಕುದುರೆ, ಛತ್ರ ಮತ್ತು ಚಾಮರಗಳೊಂದಿಗೆ ಪ್ರಯಾಣಿಸುತ್ತಿದ್ದರು. ಇದೇ ರೀತಿಯಲ್ಲಿ 1902ರಲ್ಲಿ ಅಹೋಬಲಂ ಕುಂಭಕೋಣಂನಿಂದ ಬರುತ್ತಿದ್ದಾಗ ಮಠಾಧೀಶರ ಆನೆಗೆ ಕಾಯಿಲೆ ಬಂತು. ಕುಂಭಕೋಣಂನಿಂದ ಸುಮಾರು 500 ಕಿಲೋ ಮೀಟರ್ ಪ್ರಯಾಣಿಸಿ ಗುಡಿಪಾಡು ತಲುಪಿದ ನಂತರ ಆನೆಯು ಗುಡಿಪಾಡಿನಲ್ಲಿ ನಿಂತುಬಿಟ್ಟಿತು. ಮುಂದೆ ಸಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿಂದ ಕದಲಲಾರದೆ ಪ್ರಾಣ ಬಿಟ್ಟಿತು.

ಇದನ್ನೂ ಓದಿ: ಬಿಕಾನೇರ್‌ನ ರಾಜ ಕುಟುಂಬದ ಕುಲದೇವರಾದ ಇಲಿಗಳಿಗೆ ಈ ದೇಗುಲದಲ್ಲಿ ಮೊದಲ ನೈವೇದ್ಯ… ಅವು ತಿಂದ ನಂತರ, ಉಳಿದಿದ್ದು ಭಕ್ತರಿಗೆ ಪ್ರಸಾದ!

ಅಹೋಬಿಲಂ ಮಠದ ಆಡಳಿತಾಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಆನೆಯನ್ನು ಅಲ್ಲೇ ರಸ್ತೆಬದಿಯಲ್ಲಿ ಹೂಳಿದ್ದಾರೆ. ಮುಂದೆ ಅಲ್ಲಿ ಸಮಾಧಿಯನ್ನು ನಿರ್ಮಿಸಲಾಯಿತು. ಸಮಾಧಿ ಮುಂದೆ ಆನೆಯ ಕಲ್ಲಿನ ಮೂರ್ತಿಯನ್ನೂ ಸ್ಥಾಪಿಸಲಾಗಿದೆ. ಪ್ರತಿ ವರ್ಷ ಅಹೋಬಿಲಕ್ಕೆ ಹೋದಾಗ ಈ ಆನೆಯ ಸಮಾಧಿ/ಗುಡಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಅಹೋಬಿಲಂ ಮಠ ಕಾಲಕ್ರಮೇಣ ಇಲ್ಲಿಗೆ ಬರುವುದನ್ನು ನಿಲ್ಲಿಸಿತು. ಆದರೂ ಇದಕ್ಕೆ 120 ವರ್ಷಗಳ ಇತಿಹಾಸವಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇಲ್ಲಿ ಏನಾದರೂ ಸಂಕಲ್ಪ ಮಾಡಿಕೊಂಡು ಕೋರಿಕೊಂಡರೆ ಯಶಸ್ಸು ಸಿಗುತ್ತದೆ ಎಂಬುದು ಗ್ರಾಮಸ್ಥರ ಬಲವಾದ ನಂಬಿಕೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Wed, 6 September 23

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು