Jaya Ekadashi Parana 2024: ಉಪವಾಸ ಅಂತ್ಯಗೊಳಿಸುವಾಗ ನೀವು ಅನುಸರಿಸಲೇಬೇಕಾದ ನಿಯಮಗಳಿವು

ಉಪವಾಸ ಮಾಡುವುದರ ಪೂರ್ಣ ಫಲ ಉಪವಾಸವನ್ನು ಸರಿಯಾದ ರೀತಿಯಲ್ಲಿ ಮುಗಿಸುವುದರಿಂದಲೇ ಸಾಧ್ಯವಾಗುತ್ತದೆ. ಹಾಗಾಗಿ ಈ ಉಪವಾಸವನ್ನು ಆಚರಿಸುವವರಿಗೆ ಎಲ್ಲಾ ಆಚರಣೆಗಳು ಮತ್ತು ವಿಧಾನಗಳ ಬಗ್ಗೆ ತಿಳಿದಿರಬೇಕು. ಹಾಗಾದರೆ ನಿಮ್ಮ ಏಕಾದಶಿ ಉಪವಾಸವನ್ನು ಮುರಿಯುವುದು ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Jaya Ekadashi Parana 2024: ಉಪವಾಸ ಅಂತ್ಯಗೊಳಿಸುವಾಗ ನೀವು ಅನುಸರಿಸಲೇಬೇಕಾದ ನಿಯಮಗಳಿವು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 21, 2024 | 9:22 AM

ಜಯ ಏಕಾದಶಿ ಹಿಂದೂಗಳಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ಸಂಪೂರ್ಣವಾಗಿ ವಿಷ್ಣುವನ್ನು ಪೂಜಿಸಲು ಮೀಸಲಿಡಲಾಗಿದೆ. ಜನರು ಉಪವಾಸವನ್ನು ಆಚರಿಸುವ ಮೂಲಕ ಮತ್ತು ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ವಿಷ್ಣುವನ್ನು ಭಕ್ತಿಯಿಂದ ಪೂಜಿಸುತ್ತಾರೆ. ಆದರೆ ಇಂದು ಜಯ ಏಕಾದಶಿ ವ್ರತಾಚರಣೆ ಮಾಡುವವರು ದ್ವಾದಶಿ ತಿಥಿಯಂದು ಅಂದರೆ ನಾಳೆ ಫೆ. 21 ರ ಮುಂಜಾನೆ ತಮ್ಮ ಉಪವಾಸವನ್ನು ಮುರಿಯಬೇಕು. ಏಕಾದಶಿ ಉಪವಾಸವನ್ನು ಆಚರಿಸುವುದು ಸುಲಭವಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ವ್ರತಾಚರಣೆ ಅನೇಕ ನಿಯಮ ಮತ್ತು ನಿಬಂಧನೆಗಳನ್ನು ಹೊಂದಿದೆ. ಅಂತೆಯೇ, ಪರಣ ಅಂದರೆ ಉಪವಾಸ ಮುರಿಯುವ ಸಮಯವು ಒಂದು ಪ್ರಮುಖ ವಿಷಯಗಳಲ್ಲಿ ಒಂದಾಗಿದೆ, ಏಕೆಂದರೆ ಇದು ನಿರ್ದಿಷ್ಟ ಸಮಯದ ಮಿತಿಯಲ್ಲಿ ಉಪವಾಸವನ್ನು ಮುರಿಯುವ ಆಚರಣೆಯಾಗಿದೆ. ಯಾವಾಗಲೂ ದ್ವಾದಶಿ ತಿಥಿಯಂದು ಏಕಾದಶಿ ಉಪವಾಸವನ್ನು ಮುರಿಯಲಾಗುತ್ತದೆ.

ಉಪವಾಸವನ್ನು ಮುರಿಯಲು ನೀವು ಮುಂಜಾನೆಯ ಸಮಯವನ್ನು ಎಂದಿಗೂ ಕಳೆದುಕೊಳ್ಳಬಾರದು. ಏಕೆಂದರೆ ಉಪವಾಸ ಮಾಡುವುದರ ಪೂರ್ಣ ಫಲ ಆ ವ್ರತವನ್ನು ಸರಿಯಾದ ರೀತಿಯಲ್ಲಿ ಮುಗಿಸುವುದರಿಂದಲೇ ಸಾಧ್ಯವಾಗುತ್ತದೆ. ಹಾಗಾಗಿ ಈ ಉಪವಾಸವನ್ನು ಆಚರಿಸುವವರಿಗೆ ಎಲ್ಲಾ ಆಚರಣೆಗಳು ಮತ್ತು ಅದರ ವಿಧಾನಗಳ ಬಗ್ಗೆ ತಿಳಿದಿರಬೇಕು. ಹಾಗಾದರೆ ನಿಮ್ಮ ಏಕಾದಶಿ ಉಪವಾಸವನ್ನು ಮುರಿಯುವುದು ಹೇಗೆ? ಹಣ್ಣುಗಳು, ಹಾಲಿನ ಉತ್ಪನ್ನಗಳು ಮತ್ತು ತರಕಾರಿಗಳಂತಹ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುವ ಮೂಲಕ ನೀವು ನಿಮ್ಮ ಉಪವಾಸವನ್ನು ಮುರಿಯಬೇಕು. ಜೊತೆಗೆ ಎಲ್ಲಾ ತಾಮಸಿಕ ಆಹಾರಗಳಿಂದ ದೂರವಿರುವುದು ಅತ್ಯಗತ್ಯ.

ಇದನ್ನೂ ಓದಿ: ಜೀವನದಲ್ಲಿ ಯಶಸ್ಸನ್ನು ಪಡೆಯಲು ಜಯ ಏಕಾದಶಿಯಂದು ಈ ರೀತಿ ಮಾಡಿ

ನಿಮ್ಮ ಉಪವಾಸವನ್ನು ಮುರಿಯುವಾಗ ನೀವು ಅನುಸರಿಸಬೇಕಾದ ಆಚರಣೆಗಳೇನು?

ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ. ನೀವು ಪೂಜಿಸುವ ಜಾಗವನ್ನು ಸ್ವಚ್ಛಗೊಳಿಸಿ. ಭಗವಂತನ ವಿಗ್ರಹವನ್ನು ಇರಿಸಿ, ದೀಪವನ್ನು ಬೆಳಗಿಸಿ. ವಿಗ್ರಹ ಅಥವಾ ದೇವರ ಫೋಟೋವನ್ನು ಹೂಮಾಲೆಯಿಂದ ಅಲಂಕರಿಸಿ ಮತ್ತು ಹಳದಿ ಚಂದನ ತಿಲಕವನ್ನು ಇಟ್ಟು. ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಗಳನ್ನು ದೇವರ ನೈವೇದ್ಯಕ್ಕೆ ಇಡಿ, ಜೊತೆಗೆ ತುಳಸಿ ಮತ್ತು 5 ಕಾಲೋಚಿತ ಹಣ್ಣುಗಳನ್ನು ದೇವರಿಗೆ ಅರ್ಪಿಸಿ. ಮಂತ್ರಗಳು ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸಿ. ಮೇಲೆ ತಿಳಿಸಿದ ಕೆಲಸಗಳನ್ನು ಮಾಡಿದ ನಂತರ, ನೀವು ನಿಮ್ಮ ಉಪವಾಸವನ್ನು ಮುರಿಯಬಹುದು.

ಯಾವ ಮಂತ್ರ ಪಠಣ ಮಾಡಬೇಕು?

1. ಓಂ ನಮೋ ಭಗವತೇ ವಾಸುದೇವಾಯ

2. ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ, ಹೇ ನಾಥ್ ನಾರಾಯಣನ್ ವಾಸುದೇವ

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:59 am, Tue, 20 February 24