Magh Pradosh Vrat : ಕೊನೆಯ ಮಾಘ ಪ್ರದೋಷ ವ್ರತದ ಶುಭ ಸಮಯ, ಆಚರಣೆ ವಿಧಾನಗಳ ಮಾಹಿತಿ ಇಲ್ಲಿದೆ

ಹಿಂದೂ ಧರ್ಮದಲ್ಲಿ ಮಾಘ ಪ್ರದೋಷ ವ್ರತವನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಈ ದಿನದಂದು ಕೆಲವು ವಿಶೇಷ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಆದ್ದರಿಂದ ಈ ಉಪವಾಸದ ದಿನದಂದು ಏನು ಮಾಡಬೇಕು? ಮಾಡಬಾರದು ಎಂಬುದನ್ನು ಅರಿತು, ಒಂದಿಷ್ಟು ನಿಯಮಗಳನ್ನು ತಿಳಿದು ಅದನ್ನು ಪಾಲನೆ ಮಾಡಬೇಕು. ಈ ದಿನದ ಸಂಪೂರ್ಣ ಮಾಹಿತಿ ಇಲ್ಲಿದೆ.

Magh Pradosh Vrat : ಕೊನೆಯ ಮಾಘ ಪ್ರದೋಷ ವ್ರತದ ಶುಭ ಸಮಯ, ಆಚರಣೆ ವಿಧಾನಗಳ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 21, 2024 | 12:20 PM

ಮಾಘ ಪ್ರದೋಷ ವ್ರತವು ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಉಪವಾಸವಾಗಿದ್ದು, ಇದನ್ನು ಮಾಘ ಮಾಸದ ಕೃಷ್ಣ ಪಕ್ಷದ ಪ್ರದೋಷ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಭಕ್ತರು ಶಿವನನ್ನು ವಿಶೇಷವಾಗಿ ಪೂಜಿಸುತ್ತಾರೆ ತಮ್ಮ ಬಯಕೆಗಳ ಈಡೇರಿಕೆಗಾಗಿ ಪ್ರಾರ್ಥಿಸುತ್ತಾರೆ. ಈ ಉಪವಾಸವು ಶಿವನಿಗೆ ನಿಮ್ಮ ಭಕ್ತಿಯನ್ನು ವ್ಯಕ್ತಪಡಿಸಲು ಇರುವ ಉತ್ತಮ ಅವಕಾಶವಾಗಿದೆ. ಮಾಘ ಪ್ರದೋಷ ಉಪವಾಸವು ತಿಂಗಳಲ್ಲಿ ಎರಡು ಬಾರಿ ಬರುತ್ತದೆ. ಪ್ರದೋಷ ಎಂದರೆ ಕತ್ತಲೆಯನ್ನು ಹೋಗಲಾಡಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಶುಭ ದಿನದಂದು ಸಾಧಕರು ಉಪವಾಸ ಮಾಡುತ್ತಾರೆ ಮತ್ತು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುತ್ತಾರೆ. ಶಿವನಿಗೆ ಪೂಜೆ- ಅರ್ಚನೆ ಮಾಡುವ ಮೂಲಕ, ವ್ರತಾಚರಣೆ ಮಾಡಿದ ವ್ಯಕ್ತಿಯು ಸಂತೋಷ, ಆರೋಗ್ಯ, ಯಶಸ್ಸನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ.

ಪ್ರದೋಷ ವ್ರತದ ಶುಭ ಸಮಯ

ಹಿಂದೂ ಪಂಚಾಂಗದ ಪ್ರಕಾರ, ಮಾಘ ಮಾಸದ ಕೊನೆಯ ಪ್ರದೋಷವನ್ನು ಫೆ. 21ರಂದು ಬುಧವಾರ ಆಚರಿಸಲಾಗುವುದು.ಈ ದಿನದ ಪೂಜೆಗೆ ಶುಭ ಸಮಯ ಸಂಜೆ 6:15 ರಿಂದ ರಾತ್ರಿ 8:47 ರ ವರೆಗೆ. ಬ್ರಹ್ಮ ಮುಹೂರ್ತ ಬೆಳಿಗ್ಗೆ 5:13 ರಿಂದ 6:04 ರ ವರೆಗೆ ಇರುತ್ತದೆ. ಈ ವ್ರತವು ಬುಧವಾರ ಬಂದಿರುವುದರಿಂದ ಈ ದಿನವನ್ನು ಬುದ್ಧ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಈ ದಿನದಲ್ಲಿ ಪೂಜೆ ಮಾಡುವ ಮೂಲಕ ಜನರು ತಮ್ಮ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ.

ಬುದ್ಧ ಪ್ರದೋಷ ವ್ರತದ ಪೂಜಾ ವಿಧಾನ!

ಭಗವಾನ್ ಶಿವ ಮತ್ತು ತಾಯಿ ಪಾರ್ವತಿ ದೇವಿಯ ಆಶೀರ್ವಾದ ಪಡೆಯಲು ಬುದ್ಧ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ, ಉಪವಾಸ ಮಾಡುವ ಮಹಿಳೆಯರು ಮುಂಜಾನೆ ಬೇಗ ಎದ್ದು ದಿನನಿತ್ಯದ ಕೈಂಕರ್ಯಗಳನ್ನು ಮುಗಿಸಿ, ದೇವಸ್ಥಾನಗಳಿಗೆ ತೆರಳಿ ಭಗವಾನ್ ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿಸುತ್ತಾರೆ. ಶಿವನಿಗೆ ಶ್ರೀಗಂಧ ಮತ್ತು ಪಾರ್ವತಿ ತಾಯಿಗೆ ಕುಂಕುಮ ತಿಲಕವನ್ನಿಟ್ಟು, ಹಣ್ಣು ಮತ್ತು ಸಿಹಿ ತಿಂಡಿಗಳನ್ನು ದೇವರಿಗೆ ಅರ್ಪಿಸಿ, ಶಿವ ಚಾಲೀಸಾವನ್ನು ಪಠಿಸುತ್ತಾರೆ. ದೇವರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಿ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಠಿಣ ಉಪವಾಸವನ್ನು ಆಚರಿಸಲಾಗುತ್ತದೆ.

ಮಾಘ ಪ್ರದೋಷ ಉಪವಾಸದಂದು ಈ ಕೆಲಸವನ್ನು ಮಾಡಬೇಡಿ;

-ಮಾಘ ಪ್ರದೋಷ ವ್ರತದ ದಿನದಂದು ಜನರು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಮಾಂಸಾಹಾರ ಸೇವನೆ ಮಾಡಬೇಡಿ.

-ಈ ದಿನ ಜನರು ಮನೆ ಸ್ವಚ್ಛಗೊಳಿಸುವುದು ಮುಂತಾದ ಅಶುಚಿ ಕೆಲಸಗಳನ್ನು ಮಾಡಬಾರದು.

-ಪ್ರದೋಷ ವ್ರತದ ದಿನದಂದು ಯಾವುದೇ ನಕಾರಾತ್ಮಕ ಆಲೋಚನೆಗಳಿಗೆ ಅವಕಾಶ ನೀಡಬಾರದು.

-ಈ ದಿನ ಶಿವನನ್ನು ವಿಶೇಷವಾಗಿ ಪೂಜಿಸಬೇಕು, ಪ್ರಾರ್ಥಿಸಬೇಕು.

ಇದನ್ನೂ ಓದಿ: ಉಪವಾಸವನ್ನು ಮುರಿಯುವಾಗ ನೀವು ಅನುಸರಿಸಲೇಬೇಕಾದ ನಿಯಮಗಳಿವು

ಮಾಘ ಪ್ರದೋಷ ವ್ರತದಂದು ಈ ನಿಯಮಗಳನ್ನು ಅನುಸರಿಸುವ ಭಕ್ತರು ವ್ರತವನ್ನು ಆಚರಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ವ್ರತಾಚರಣೆ ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಯೋಚನೆಗಳಿಗೆ ಸಹಾಯ ಮಾಡುವುದಲ್ಲದೆ, ಆಗದೆಯೇ ಉಳಿದಂತಹ ಕೆಲಸಗಳನ್ನು ಪೂರ್ಣಗೊಳಿಸಲು ನೆರವಾಗುತ್ತದೆ. ಅಲ್ಲದೆ ಶಿವ ಮತ್ತು ತಾಯಿ ಪಾರ್ವತಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:16 pm, Tue, 20 February 24

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?