ಮುಂಜಾನೆ ಈ ವಸ್ತುಗಳನ್ನು ನೋಡುವುದು ತುಂಬಾ ಶುಭ
ಮುಂಜಾನೆ ಉತ್ತಮವಾಗಿ ಪ್ರಾರಂಭವಾದರೆ ಇಡೀ ದಿನವು ಉತ್ತಮವಾಗಿ ಸಾಗುತ್ತದೆ ಎಂಬ ನಂಬಿಕೆ ಇರುವುದು ಸುಳ್ಳಲ್ಲ. ಅಂತೆಯೇ, ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಬೆಳಿಗ್ಗೆ ನೋಡುವ ವಸ್ತುಗಳು ನಿಮ್ಮ ದಿನವನ್ನು ಉತ್ತಮವಾಗಿಸುವುದಲ್ಲದೆ ನಿಮ್ಮ ಜೀವನದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಹಾಗಾದರೆ ಮುಂಜಾನೆ ಯಾವ ವಸ್ತುಗಳನ್ನು ನೋಡುವುದು ಶುಭ ಸೂಚಕವಾಗಿದೆ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅನೇಕ ವಿಷಯಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಬೆಳಿಗ್ಗೆ ಪ್ರಮುಖ ಕೆಲಸಕ್ಕೆ ಮನೆಯಿಂದ ಹೊರಡುವಾಗ ನೀವು ಕೆಲವು ವಿಶೇಷ ವಸ್ತುಗಳನ್ನು ನೋಡಿದರೆ, ಅದನ್ನು ಬಹಳ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಮನೆಯನ್ನು ತೊರೆಯುವಾಗ ಅಂದುಕೊಂಡ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಸಾಮಾನ್ಯವಾಗಿ ಮುಂಜಾನೆ ಉತ್ತಮವಾಗಿ ಪ್ರಾರಂಭವಾದರೆ ಇಡೀ ದಿನವು ಉತ್ತಮವಾಗಿ ಸಾಗುತ್ತದೆ ಎಂಬ ನಂಬಿಕೆ ಇರುವುದು ಸುಳ್ಳಲ್ಲ. ಅಂತೆಯೇ, ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಬೆಳಿಗ್ಗೆ ನೋಡುವ ವಸ್ತುಗಳು ನಿಮ್ಮ ದಿನವನ್ನು ಉತ್ತಮವಾಗಿಸುವುದಲ್ಲದೆ ನಿಮ್ಮ ಜೀವನದ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಹಾಗಾದರೆ ಮುಂಜಾನೆ ಯಾವ ವಸ್ತುಗಳನ್ನು ನೋಡುವುದು ಶುಭ ಸೂಚಕವಾಗಿದೆ?
ಮುಂಜಾನೆ ಈ ವಸ್ತುಗಳನ್ನು ನೋಡುವುದು ಶುಭ ಸೂಚಕ;
ಸೂರ್ಯೋದಯ
ಉದಯಿಸುವ ಸೂರ್ಯನನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಕತ್ತಲೆ ಕಳೆದು ಹೊಸ ದಿನವನ್ನು ಆರಂಭ ಮಾಡುವ ಮತ್ತು ಬೆಳಕಿನಿಂದ ಆವರಿಸಿಕೊಳ್ಳುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಉದಯಿಸುತ್ತಿರುವ ಸೂರ್ಯನನ್ನು ನೋಡುವುದು ತುಂಬಾ ಶುಭ ಎನ್ನಲಾಗುತ್ತದೆ. ಇದು ನಿಮಗೆ ಇಡೀ ದಿನಕ್ಕೆ ಬೇಕಾದಷ್ಟು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.
ಹಕ್ಕಿ
ಬೆಳಿಗ್ಗೆ ಆಕಾಶದಲ್ಲಿ ಪಕ್ಷಿಗಳು ಹಾರುವುದು ಅಥವಾ ಅದರ ಚಿಲಿಪಿಲಿ ಸದ್ದನ್ನು ಕೇಳುವುದು ಜೀವನದಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬುತ್ತದೆ. ಹಾರುವ ಪಕ್ಷಿಗಳನ್ನು ನೋಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ದಿನಕ್ಕೆ ಹೊಸ ಆಶಾಕಿರಣವಾಗುವುದರಲ್ಲಿ ಸಂಶಯವಿಲ್ಲ.
ಅರಳಿದ ಹೂವುಗಳು
ಮುಂಜಾನೆ ಅರಳುವ ಹೂವುಗಳನ್ನು ನೋಡುವುದು ಸಹ ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಅರಳಿದ ಹೂವುಗಳು ಜೀವನದಲ್ಲಿ ನಡೆಯಲಿರುವ ಶುಭ ಘಟನೆಗಳ ಸೂಚಕವಾಗಿದೆ. ಹೂವುಗಳನ್ನು ಹೆಚ್ಚಾಗಿ ಅವುಗಳ ಸೌಂದರ್ಯ, ಬಣ್ಣ ಮತ್ತು ಅವುಗಳ ಸುಗಂಧದಿಂದ ಇಷ್ಟಪಡಲಾಗುತ್ತದೆ ಹಾಗಾಗಿ ಇವೆಲ್ಲವೂ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಮನಸ್ಸನ್ನು ಹಗುರ ಮಾಡುತ್ತದೆ.
ಆಕಾಶ
ದೂರದೂರದಿಂದ ಹರಡಿರುವ ಸ್ಪಷ್ಟ ನೀಲಿ ಆಕಾಶವನ್ನು ನೋಡುವುದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಇದರ ಮಿತಿಯಿಲ್ಲದ ವಿಸ್ತಾರ, ಜೀವನದ ಅಪರಿಮಿತ ಸಾಧ್ಯತೆಗಳನ್ನು ನಿಮ್ಮ ಮುಂದಿಡುತ್ತದೆ.
ಕಾಮನಬಿಲ್ಲು
ಕಾಮನಬಿಲ್ಲನ್ನು ನೋಡುವುದನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದು ಅದೃಷ್ಟ ತರುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಮುಂಜಾನೆ ಸಮಯದಲ್ಲಿ ಕಂಡರೆ ನಿಮ್ಮ ದಿನ ಒಳ್ಳೆಯದಾಗಿರಲಿದೆ.
ಚಿಟ್ಟೆಗಳು
ಚಿಟ್ಟೆಗಳು ಹೆಚ್ಚಾಗಿ ಬದಲಾವಣೆ, ಸೌಂದರ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಸಂಬಂಧಿಸಿವೆ. ಇದನ್ನು ಶುಭ ಶಕುನದ ಸಂಕೇತವೆಂದು ಹೇಳಲಾಗುತ್ತದೆ. ಜೊತೆಗೆ ಮುಂಜಾನೆ ಚಿಟ್ಟೆಯನ್ನು ನೋಡುವುದು ಬದಲಾವಣೆಯ ಸೂಚಕ ಎನ್ನಲಾಗುತ್ತದೆ.
ಇದನ್ನೂ ಓದಿ: ಅಕ್ಷಯ ತೃತೀಯದಂದು ಲಕ್ಷ್ಮೀ ದೇವಿಗೆ ಈ ವಸ್ತುಗಳನ್ನು ಅರ್ಪಿಸಿ
ನಾಣ್ಯ
ನಾಣ್ಯವು ನೆಲದ ಮೇಲೆ ಬಿದ್ದಿರುವುದನ್ನು ನೋಡುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದನ್ನು ನೋಡುವುದು ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಬರಲಿದೆ ಎಂಬುದನ್ನು ಸೂಚಿಸುತ್ತದೆ.
ಮಕ್ಕಳು ನಗುತ್ತಿರುವುದು
ವಾಸ್ತು ಶಾಸ್ತ್ರದ ಪ್ರಕಾರ, ಮಕ್ಕಳು ನಗುವುದನ್ನು, ಆಟವಾಡುವುದನ್ನು ನೋಡುವುದು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅವರನ್ನು ನೋಡುವುದರಿಂದ ನಿಮ್ಮಲ್ಲಿಯೂ ಸಂತೋಷ ಭಾವನೆ ಹುಟ್ಟುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ




