AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesha Chaturthi 2021: ಸ್ವಾತಂತ್ರ ಹೋರಾಟದ ಸಮಯದಲ್ಲಿ ಗಣೇಶನ ಹಬ್ಬಕ್ಕೆ ಇತ್ತು ವಿಶೇಷ ಮಹತ್ವ; ಐಕ್ಯತೆಯ ಸಂಕೇತ

ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವಜನಿಕರನ್ನು ಒಟ್ಟುಗೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಮುಂದಾಳತ್ವ ವಹಿಸಿಕೊಂಡು ಗಣೇಶ ಹಬ್ಬವನ್ನು ಆಚರಣೆಗೆ ತಂದರು. ಅವರ ಸ್ವಾತಂತ್ರ ಹೋರಾಟದ ಕರೆಗೆ ಚದುರಿ ಹೋಗಿದ್ದ ಜನರು ಜಾತಿ-ಮತ, ಭೇದ-ಭಾವವಿಲ್ಲದೆ ಬಹುಬೇಗನೆ ಸ್ಪಂದಿಸಿದರು.

Ganesha Chaturthi 2021: ಸ್ವಾತಂತ್ರ ಹೋರಾಟದ ಸಮಯದಲ್ಲಿ ಗಣೇಶನ ಹಬ್ಬಕ್ಕೆ ಇತ್ತು ವಿಶೇಷ ಮಹತ್ವ; ಐಕ್ಯತೆಯ ಸಂಕೇತ
ಗಣೇಶ
TV9 Web
| Edited By: |

Updated on:Sep 08, 2021 | 7:36 AM

Share

ಶ್ರಾವಣ ಮಾಸ ಮುಗಿದು ಈಗ ಭಾದ್ರಪದ ಮಾಸ ಶುರುವಾಗಿದೆ. ಸೆಪ್ಟೆಂಬರ್ 9 ಮತ್ತು 10 ರಂದು ದೇಶಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಲಿದೆ. ಗಣೇಶ ಹಬ್ಬವನ್ನು ಜಾತಿ, ಭೇದ ಭಾವ ಮರೆತು ಭಾವೈಕ್ಯದಿಂದ ಎಲ್ಲಾ ಒಟ್ಟಾಗಿ ಸೇರಿ ಆನಂದ, ಸಂತೋಷದಿಂದ ಆಚರಿಸುವ ಹಬ್ಬ. ತಿಂಗಳು ಪೂರ್ತಿ ಈ ಹಬ್ಬವನ್ನ ಆಚರಿಸಲಾಗುತ್ತೆ. ಮಣ್ಣಿನಿಂದ ಗಣೇಶನನ್ನು ಮಾಡಿ ಮನೆ ಮುಂದೆ ಒಂದು ಟೆನ್ಟ್ ಹಾಕಿ ಅದರಲ್ಲಿ ಗಣೇಶನನ್ನು ಕೂರಿಸಿ ಹಾಡು, ಪೂಜೆ, ನೈವೇದ್ಯ, ಜನರಿಗೆ ಪ್ರಸಾದ ಹಂಚಿ ಕೊನೆಗೆ ಒಂದು ದಿನ ನೀರಲ್ಲಿ ವಿಸರ್ಜನೆ ಮಾಡಲಾಗುತ್ತೆ. ಈ ಹಬ್ಬದ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳಿವೆ ಜೊತೆಗೆ ಈ ಗಣೇಶ ಹಬ್ಬ ಉತ್ಸವದ ಆಚರಣೆಯಾಗಲು ಮುಖ್ಯ ಉದ್ದೇಶ, ಇದರಿಂದಾದ ಉಪಯೋಗ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಗಣೇಶ ಯಾವ ರೀತಿ ಸಹಾಯ ಮಾಡಿದ ಎಂಬ ಬಗ್ಗೆ ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಈಶ್ವರ ಸುತ, ಗೌರಿ ಪುತ್ರ, ವಿಷ್ನ ನಿವಾರಕ, ಸಂಕಷ್ಟ ಹರ, ಪ್ರಥಮ ಪೂಜಿತ ಹೀಗೆ ನೂರಾರು ಹೆಸರುಗಳಿಂದ ಕರೆಸಿಕೊಳ್ಳುವ ಗಣೇಶನ ಹುಟ್ಟು ಹಬ್ಬವಾಗಿ ಆಚರಿಸುವ ಗಣೇಶ ಚತುರ್ಥಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಬ್ರಹ್ಮವೈವರ್ತ, ವಾಮನ, ಅಗ್ನಿ ಪುರಾಣಗಳಲ್ಲಿ ಅನೇಕ ಪ್ರಸ್ತಾವನೆಗಳನ್ನು ನೋಡಬಹುದು. ಆದರೆ ಗಣೇಶ ಹಬ್ಬದ ಉತ್ಸವಗಳು ಆರಂಭವಾಗಿದ್ದೇಗೆ ಎಂದರೆ ಭಾರತಕ್ಕೆ ಸ್ವಾತಂತ್ರ ಬರುವ ಮುನ್ನ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತೀಯರು ಬಹಿರಂಗವಾಗಿ ಅಥವಾ ರಹಾಸ್ಯವಾಗಿ ಸಭೆ ಮಾಡುವುದು, ಚರ್ಚೆ ಮಾಡುವುದಕೆಲ್ಲ ಅವಕಾಶವಿರಲಿಲ್ಲ. ಅಂತಹ ಸಮಯದಲ್ಲಿ ಭಾರತೀಯರು ಕಾಳಿ, ಗಣಪತಿ, ನವರಾತ್ರಿ ಉತ್ಸವಗಳನ್ನು ಆಯೋಜಿಸಿ ಅವುಗಳ ನೆಪದಲ್ಲಿ ಬಹಿರಂಗಸ್ಥಳದಲ್ಲೇ ಚಪ್ಪರ ಹಾಕಿಸಿ ಸಾವಿರಾರು ಮಂದಿ ಒಂದುಗೂಡಿ ಸ್ವಾತಂತ್ರ್ಯ ಸಮಸ್ಯೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಚರ್ಚೆ ಮಾಡುತ್ತಿದ್ದರು.

ಗಣೇಶ ಹಬ್ಬದ ದಿನ ಬಾಲಗಂಗಾಧರ ತಿಲಕರನ್ನು ನೆನೆಯಲೇ ಬೇಕು ಇನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವಜನಿಕರನ್ನು ಒಟ್ಟುಗೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಮುಂದಾಳತ್ವ ವಹಿಸಿಕೊಂಡು ಗಣೇಶ ಹಬ್ಬವನ್ನು ಆಚರಣೆಗೆ ತಂದರು. ಅವರ ಸ್ವಾತಂತ್ರ ಹೋರಾಟದ ಕರೆಗೆ ಚದುರಿ ಹೋಗಿದ್ದ ಜನರು ಜಾತಿ-ಮತ, ಭೇದ-ಭಾವವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ಗಣೇಶ ಹಬ್ಬದ ಮೂಲಕ ಭಕ್ತಿಯ ಪ್ರವಾಹ ಹರಿದು ಸ್ವಾತಂತ್ರಯದ ಕಿಚ್ಚು ಉರಿದು ಬ್ರಿಟಿಷರಿಗೆ ಏಕತೆಯ ಬಿಸಿ ಮುಟ್ಟಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಮನೆ-ಮನೆಗಳಲ್ಲಿ ಮಾತ್ರ ಗಣೇಶ ಹಬ್ಬವನ್ನು ಮಾಡಲಾಗುತ್ತಿತ್ತು. ಆದ್ರೆ ಬಾಲಗಂಗಾಧರ ತಿಲಕರು ಈ ಹಬ್ಬವನ್ನು ಉತ್ಸವವನ್ನಾಗಿ ಮಾಡಿ ಇಂದು ದೇಶದಾದ್ಯಂತ ಏಕತೆಯಿಂದ ಆಚರಿಸುವಂತೆ ಮಾಡಿದ್ದಾರೆ. ತಿಲಕರು ಗಣೇಶೋತ್ಸವವನ್ನು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸುವ ಸಾಧನವಾಗಿ ಬಳಸಿಕೊಂಡರು.

1892 ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೇಬ್ ಲಕ್ಷ್ಮಣ್ ಜಾವೇಲ್ ಅವರು ಪ್ರಪ್ರಥಮವಾಗಿ ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರು. 1893 ರಲ್ಲಿ ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪವನ್ನು ನೀಡಿ ತಮ್ಮ ಕೇಸರಿ ಪತ್ರಿಕೆಯಲ್ಲಿ ಹೊಗಳಿ ಬರೆದರು. ಈ ಗಣೇಶ ಉತ್ಸವ ಸಂಚಲನ ಮೂಡಿಸಿತ್ತು. 1894 ರಲ್ಲಿ ಪುಣೆಯ ಕೇಸರಿ ವಾಡಿನಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಲಾಯಿತು.

ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ತಿಲಕರು ಬ್ರಾಹ್ಮಣರು ಮತ್ತು ಅನ್ಯ ಜಾತಿಯರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ ಐಕ್ಯತೆ ಮೂಡಿಸುವುದಕ್ಕೆ ಸೂಕ್ತವಾದ ಸಂದರ್ಭ ಎಂದು ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಬಳಸಿಕೊಂಡರು. ಹಾಗೂ ಆ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದರಿಂದ ಬ್ರಿಟಿಷರು ಅದನ್ನು ಹತ್ತಿಕ್ಕಲು ಸಾಕಷ್ಟು ಕಾನೂನುಗಳನ್ನು ಜಾರಿಗೊಳಿಸಿದ್ದರು ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಸಭೆ ಗುಂಪು ಸೇರುವುದನ್ನು ನಿಷೇಧಿಸಿದ್ದರು. ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಇದು ಅನ್ವಯವಾಗುತ್ತಿರಲಿಲ್ಲ. ಹೀಗಾಗಿ ಈ ಉತ್ಸವಕ್ಕೆ ಮುಂದಾದರು. ಮುಂಬಯಿನಲ್ಲಿ ಪ್ರಪ್ರಥಮ ಬಾರಿಗೆ ಬೀದಿಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜನರ ಮನಸ್ಸಿನಲ್ಲಿ ಗಣೇಶನನ್ನು ಉಳಿಸುವಲ್ಲಿ ಯಶಸ್ವಿಯಾದರು.

ಮಹಾರಾಷ್ಟ್ರದ ಮುಖ್ಯ ಹಬ್ಬ ಮಹಾರಾಷ್ಟ್ರದಲ್ಲಿ ಪೇಶ್ವೆ ಆಡಳಿತದಲ್ಲಿ ಮುಖ್ಯ ಹಬ್ಬವಾಗಿದ್ದ ಗಣೇಶೋತ್ಸವ, ಸ್ವರ ಆಂದೋಲನದ ಸಂದರ್ಭದಲ್ಲಿ ಸಂಘಟಿತ ಸ್ವರೂಪ ಪಡೆಯಿತು. ಗಣೇಶನ ಬೃಹತ್ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10 ನೇ ದಿನ ಎಲ್ಲ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ತಿಲಕರು ಆರಂಭಿಸಿದರು. ನೃತ್ಯ, ನಾಟಕಗಳು, ಕವಿತೆ ವಾಚನ, ಸಂಗೀತ ಗೋಷ್ಠಿಗಳು, ಚರ್ಚಾಗೋಷ್ಠಿಗಳು ಮುಂತಾದವುಗಳಿಂದ ಗಣೇಶೋತ್ಸವದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ನೆರವಾಯಿತು.

ಈ ರೀತಿ ಅಂದಿನ ಹೋರಾಟಕ್ಕೆ ಗಣೇಶೋತ್ಸವಗಳು ಆರಂಭವಾದವು. ಗುಂಪುಗಳನ್ನು ಸೇರಿಸಲು ಜಾತಿ-ಮತವನ್ನು ಮರೆಸಿದ್ದ ಈ ಹಬ್ಬ ಈಗ ಬದಲಾಗಿ ಸ್ವ ಪ್ರತಿಷ್ಠೆ, ತೋರಿಕೆಯ ಹಬ್ಬವಾಗಿದೆ. ಏರಿಯಾ, ಏರಿಯಾಗಳ ಜನ ಪ್ರತಿಷ್ಠೆ ತೋರಿಸಲು ಲಕ್ಷ, ಲಕ್ಷ ಹಣ ಖರ್ಚು ಮಾಡಿ ನೀರಲ್ಲಿ ವಿಲಿನವಾಗದ ದೊಡ್ಡ ಗಣೇಶಗಳನ್ನು ತಂದು ಕೂರಿಸುತ್ತಾರೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶ ಕೂರಿಸಿ ಗುಂಪು ಗುಂಪುಗಳ ನಡುವೆ ಘರ್ಷಣೆ ತಂದು ಹಿಡುತ್ತಾರೆ. ತಿಲಕರ ಮೂಲ ಉದ್ದೇವನ್ನರಿತು ಈಗಲಾದರೂ ಜನ ಬದಲಾಗಬೇಕಿದೆ. ಹುತ್ತದ ಮಣ್ಣಿನಿಂದ ಮಾಡಿದ ಗಣೇಶನನ್ನೇ ಬಳಸಬೇಕು.

ಇನ್ನು ಗಣೇಶ ಹಬ್ಬದ ದಿನ ಹುತ್ತದ ಮಣ್ಣಿನಿಂದ ಮಾಡಿದ ಗಣೇಶನನ್ನೇ ಕೂರಿಸಬೇಕು. ಏಕೆಂದರೆ ಸಾಮಾನ್ಯವಾಗಿ ಗಣೇಶ ಹಬ್ಬಕ್ಕೆ ಪ್ರತಿಷ್ಠಾಪನೆ ಮಾಡಿದ ಗಣೇಶನನ್ನು ನೀರಲ್ಲಿ ವಿರ್ಸಜನೆ ಮಾಡಲೇ ಬೇಕು. ಅದಕ್ಕೆ ಪ್ರಾಣಪ್ರತಿಷ್ಠಾ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಹೀಗಾಗಿ ಮಣ್ಣಿನ ಗಣೇಶ ಕೂರಿಸಿದರೆ ಅದನ್ನು ನೀರಿನಲ್ಲಿ ವಿಸರ್ಜನೆ ಮಾಡುತ್ತಿದ್ದಂತೆ ನೀರಲ್ಲಿ ಬೆರೆತು ಹೋಗುತ್ತೆ. ಯಾವುದೇ ಹಾನಿಯಾಗುವುದಿಲ್ಲ. ಮಲಿನವೂ ಇರುವುದಿಲ್ಲ. ಹಾಗೂ ಅಶಾಶ್ವತವಾದ ಜಗತ್ತಿನಲ್ಲಿ ಯಾವುದೂ ಯಾರಿಗೂ ಶಾಶ್ವತವಲ್ಲ ಎಂಬ ಗಣೇಶ ವಿಸರ್ಜನೆಯ ಕಾರ್ಯಕ್ರಮದ ಉದ್ದೇಶ ಸಂಪೂರ್ಣವಾಗುತ್ತದೆ.

ಇದನ್ನೂ ಓದಿ: Lord Ganesha: ಪ್ರಥಮ ಪೂಜಿತ ಗಣೇಶನ ದೇಹದ ಅಂಗಾಂಗಗಳ ಮಹತ್ವ ನಿಮಗೆ ಗೊತ್ತೇ?

Published On - 7:31 am, Wed, 8 September 21

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಇಂದು ಈ ರಾಶಿಯವರಿಗೆ ಮೂರು ಗ್ರಹಗಳ ಶುಭಫಲ
ಇಂದು ಈ ರಾಶಿಯವರಿಗೆ ಮೂರು ಗ್ರಹಗಳ ಶುಭಫಲ