- Kannada News Photo gallery Veeranjaneya Swamy temple Special pooje by dr nirmalanandanath Swamiji in chikkaballapur
ವೀರಾಂಜನೇಯನಿಗೆ ಡಾ.ನಿರ್ಮಲಾನಂದನಾಥ ಸ್ವಾಮೀಜಿಯಿಂದ ವಿಶೇಷ ಪೂಜೆ; ಬೆನಕನ ಅಮಾವಾಸ್ಯೆಯ ವಿಶೇಷ ದರ್ಶನ
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Updated on: Sep 07, 2021 | 2:33 PM

Veeranjaneya Swamy temple Special pooje by dr nirmalanandanath Swamiji in chikkaballapur

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪೂಜೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸೇರಿ ಅನೇಕ ಭಕ್ತರು ಭಾಗಿಯಾಗಿದ್ದರು.

ಡಾ. ನಿರ್ಮಲಾನಂದನಾಥರಿಗೂ ಚಿಕ್ಕಬಳ್ಳಾಪುರದ ವೀರಾಂಜನೇಯನಿಗೂ ಅವಿನಾಭಾವ ಸಂಬಂಧವಿದೆ. ಇದಕ್ಕೂ ಮೊದಲು ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖ ಮಠದ ಪೀಠಾಧ್ಯಕ್ಷರಾಗಿದ್ದರು.

ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದರೂ ಕೂಡ ವೀರಾಂಜನೇಯನನ್ನು ಸ್ವಾಮೀಜಿ ಮರೆತಿಲ್ಲ. ಹೀಗಾಗಿ ಇಂದು ಹುಣ್ಣಿಮೆ ಅಮಾವಾಸ್ಯೆಗೆ ವಿಶೇಷ ಪೂಜೆ ನೆರವೇರಿಸಿ ಧನ್ಯರಾಗಿದ್ದಾರೆ.

ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ ಮಾಡಿ ಡಾ. ನಿರ್ಮಲಾನಂದನಾಥ ಸ್ವಾಮಿಜಿ ಪೂಜಿಸಿದರು. ಚುಂಚಶ್ರೀಗಳು ಮಂಗಳಾರತಿ ಮಾಡುವುದನ್ನು ನೋಡುವುದೆ ಚೆಂದ ಎನ್ನುವುದು ಇಲ್ಲಿನ ಭಕ್ತರ ಮಾತು.




