Ramakrishna Paramahansa Birth Anniversary: ರಾಮಕೃಷ್ಣ ಪರಮಹಂಸರ ಜಯಂತಿ: ಆಧ್ಯಾತ್ಮ ಗುರುವಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ಅಂಶಗಳು ಇಲ್ಲಿವೆ

ಇಂದು (ಫೆ.18) ಭಾರತ ಕಂಡ ಶ್ರೇಷ್ಠ ಸಂತ, ಸ್ವಾಮಿ ವಿವೇಕಂದರ ಗುರು ರಾಮಕೃಷ್ಣ ಪರಮ ಹಂಸರ 186ನೇ ಜನ್ಮ ವಾರ್ಷಿಕೋತ್ಸವ. 

Ramakrishna Paramahansa Birth Anniversary: ರಾಮಕೃಷ್ಣ ಪರಮಹಂಸರ ಜಯಂತಿ: ಆಧ್ಯಾತ್ಮ ಗುರುವಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ಅಂಶಗಳು ಇಲ್ಲಿವೆ
ರಾಮಕೃಷ್ಣ ಪರಮಹಂಸ
Follow us
TV9 Web
| Updated By: Pavitra Bhat Jigalemane

Updated on:Feb 18, 2022 | 11:37 AM

19 ನೇ ಶತಮಾನದಲ್ಲಿ ಭಾರತ ಕಂಡ ಆದ್ಯಾತ್ಮಿಕ ನಾಯಕರಲ್ಲಿ ರಾಮಕೃಷ್ಣ ಪರಮಹಂಸರು (Ramakrishna Paramahamsa) ಮುಂಚೂಣಿಯಲ್ಲಿ ಸಿಗುತ್ತಾರೆ.   1836 ಫೆ. 18ರಂದು ಪಶ್ವಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಕಮರ್ಪುಕುರ್ ಗ್ರಾಮದಲ್ಲಿ ರಾಮಕೃಷ್ಣರು ಜನಿಸಿದ್ದರು.  ಕುದಿರಾಮ್​ ಚಟ್ಟೋಪಾಧ್ಯಾಯ( Khudiram Chattopadhyay) ಮತ್ತು ಚಂದ್ರಮಣಿನ ದೇವಿಯ(Chandramani Devi )ಮಗನಾಗಿ ಜನಿಸಿದ ಇವರ ಮೂಲ ಹೆಸರು ಗಧಾದರ್​ ಚಟ್ಟೋಪಾಧ್ಯಾಯ ಎಂದಾಗಿತ್ತು.  ರಾಮಕೃಷ್ಣ ಅವರ ಆದ್ಯಾತ್ಮಿಕ ಆಳವನ್ನು ಗಮನಿಸಿದ ಅವರ ಗುರು ಪಂಜಾಬಿನ ತೋತಾಪುರಿ ಎನ್ನುವವರು ಪರಮಹಂಸ ಎನ್ನುವ ಬಿರುದನ್ನು ನೀಡಿದ್ದರು. ಈ ಮೂಲಕ ಗಧಾದರ ಚಟ್ಟೋಪಾಧ್ಯ ರಾಮಕೃಷ್ಣ ಪರಮಹಂಸ ಎಂದು ಜನಜನಿತರಾದರು.

ಇಂದು (ಫೆ.18) ಭಾರತ ಕಂಡ ಶ್ರೇಷ್ಠ ಸಂತ, ಸ್ವಾಮಿ ವಿವೇಕಂದರ ಗುರು ರಾಮಕೃಷ್ಣ ಪರಮ ಹಂಸರ 186ನೇ ಜನ್ಮ ವಾರ್ಷಿಕೋತ್ಸವ.  19ನೇ ಶತಮಾನದಲ್ಲಿ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದವರಲ್ಲಿ ರಾಮಕೃಷ್ಣ ಪರಮಹಂಸರೂ ಒಬ್ಬರು. ಕಾಳಿಯ ಆರಾಧಕರಾಗಿರುವ ಪರಮ ಹಂಸರು  ಅಧ್ವೈತ ಸಿದ್ಧಾಂತವನ್ನು ಬೋದಿಸಿ  ಎಲ್ಲಾ ಧರ್ಮಗಳು ಒಂದೇ ಗುರಿಯತ್ತ ಒಯ್ಯುತ್ತದೆ ಎಂದು ಪ್ರತಿಪಾದಿಸಿದ್ದರು.

ಪಶ್ಚಿಮ ಬಂಗಾಳದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಇವರು ಆಧ್ಯಾತ್ಮದಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದರು.  ಮಹಿಳೆ ಮತ್ತು ಪುರುಷರಲ್ಲಿ ಭೇದವಿಲ್ಲ. ದೇವರು ಎಲ್ಲರ ಹೃದಯದಲ್ಲಿಯೂ ನೆಲೆಸಿರುತ್ತಾನೆ ಎನ್ನುವ ನಂಬಿಕೆಯನ್ನು ಹೊಂದಿದ್ದರು. ಕಾಳಿ ದೇವಿಯ ಪರಮ ಭಕ್ತರಾಗಿದ್ದ ಅವರು ಸ್ವಾಮಿ ವಿವೇಕಾನಂದರ ಆದರ್ಶ ಗುರುಗಳಾಗಿದ್ದರು. ಏಕಾಗ್ರತೆ , ಶ್ರದ್ಧೆ ಯಶಸ್ಸಿನ ಮೂಲ ಮಂತ್ರ ಎಂದು ನಂಬಿದ್ದರು. ರಾಮಕೃಷ್ಣರು ಸರದಾಮೋನಿ ಮೂಕೋಪಾಧ್ಯಾಯ ಎನ್ನುವ ಮಹಿಳೆಯನ್ನು ವಿವಾಹವಾದರು ಅವರೇ ಮುಂದೆ ಶಾರದಾ ದೇವಿ ಎಂದು ಪರಿಚಿತರಾದರು.

ರಾಮಕೃಷ್ಣ ಪರಮಹಂಸರ ತತ್ವಗಳು:

ಜ್ಞಾನವು ಏಕಾಗ್ರತೆಯೆಡೆಗೆ ಕರೆದೊಯ್ಯುತ್ತದೆ. ಅಜ್ಞಾನವು ಚಂಚಲ ಮನಸ್ಥಿತಿಯನ್ನು ಹುಟ್ಟು ಹಾಕುತ್ತದೆ. ಪ್ರತೀ ಮಹಿಳೆಯೂ ಒಂದು ಶಕ್ತಿಯ ಪ್ರತೀಕ. ದೇವರನ್ನು ಪ್ರೀತಿಸುವವರು ಜಾತಿಯನ್ನು ಹುಡುಕುವುದಿಲ್ಲ. ಸದಾ ಸಂತೋಷವಾಗಿರುವ ಮನಸ್ಸು ಹೊಂದಿದ್ದರೇ ಅದೇ ನಿಜವಾದ ಸ್ವರ್ಗ. ಧರ್ಮದ ಬಗ್ಗೆ ಮಾತನಾಡುವುದು ಸುಲಭ, ಆದರೆ ಅದನ್ನು ಆಚರಿಸುವುದು ಕಷ್ಟ.

ಇದನ್ನೂ ಓದಿ:

Bad Omen: ಶಕುನಗಳ ಬೆನ್ನೇರಿ, ಲೋಕದಲ್ಲಿ ಅಪವಿತ್ರ ಅಶುದ್ಧ ಎಂಬುದು ನಮ್ಮ ಮನಸ್ಸು ಮಾತ್ರ! ಮುಂದೆ ಓದಿ

Published On - 11:35 am, Fri, 18 February 22

ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್