Navratri Akhand Jyoti: ನವರಾತ್ರಿಯಂದು ಬೆಳಗಿಸುವ ಅಖಂಡ ಜ್ಯೋತಿಯ ನಿಯಮಗಳೇನು?

ನವರಾತ್ರಿ ಹಬ್ಬದ ಸಮಯದಲ್ಲೂ ಅಖಂಡ ಜ್ಯೋತಿ ಬೆಳಗಿಸುವ ಪದ್ಧತಿ ಇದೆ. ಹಾಗಾಗಿ, ದುರ್ಗಾ ಮಾತೆಯನ್ನು ಗೌರವಿಸಲು ಭಕ್ತರು ನವರಾತ್ರಿಯ ಸಮಯದಲ್ಲಿ ಅಖಂಡ ಜ್ಯೋತಿಯನ್ನು (ಶಾಶ್ವತ ದೀಪ) ಬೆಳಗಿಸುತ್ತಾರೆ.

Navratri Akhand Jyoti: ನವರಾತ್ರಿಯಂದು ಬೆಳಗಿಸುವ ಅಖಂಡ ಜ್ಯೋತಿಯ ನಿಯಮಗಳೇನು?
ಸಂಗ್ರಹ ಚಿತ್ರ
Edited By:

Updated on: Oct 06, 2021 | 7:16 AM

ಭಾರತದಲ್ಲಿ ದೇವಸ್ಥಾನ ಮತ್ತು ಮನೆಗಳಲ್ಲಿ ಎಣ್ಣೆ ದೀಪಗಳನ್ನು ಹಚ್ಚುವ ಸಂಪ್ರದಾಯವು ಶತಮಾನಗಳಿಂದ ನಡೆದುಬಂದಿದೆ. ಸಾಮಾನ್ಯವಾಗಿ, ಜನರು ದಿನಕ್ಕೆ ಎರಡು ಬಾರಿ ಎಣ್ಣೆ ದೀಪವನ್ನು ಬೆಳಗುತ್ತಾರೆ. ಬೆಳಿಗ್ಗೆ ಸ್ನಾನದ ನಂತರ ದೀಪ ಹಚ್ಚಿ ದೇವರ ಸ್ಮರಣೆಯ ಮೂಲಕ ದಿನ ಆರಂಭಿಸುತ್ತಾರೆ ಮತ್ತು ಸಂಜೆ ಸಮಯದಲ್ಲಿ ದೀಪವನ್ನು ಬೆಳಗಿಸುತ್ತಾರೆ.

ದೀಪ ಅಥವಾ ಜ್ಯೋತಿ ಜ್ಞಾನ, ಶುದ್ಧತೆ, ಅದೃಷ್ಟ, ಸಮೃದ್ಧಿಯನ್ನು ಸಂಕೇತಿಸುತ್ತದೆ ಮತ್ತು ಕತ್ತಲೆ/ಅಜ್ಞಾನದ ಅನುಪಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಮತ್ತು ಹಲವು ದಿನಗಳವರೆಗೆ ಉರಿಯುವ ದೀಪವನ್ನು ಅಖಂಡ ಜ್ಯೋತಿ ಎಂದು ಕರೆಯಲಾಗುತ್ತದೆ. ನವರಾತ್ರಿ ಹಬ್ಬದ ಸಮಯದಲ್ಲೂ ಅಖಂಡ ಜ್ಯೋತಿ ಬೆಳಗಿಸುವ ಪದ್ಧತಿ ಇದೆ. ಹಾಗಾಗಿ, ದುರ್ಗಾ ಮಾತೆಯನ್ನು ಗೌರವಿಸಲು ಭಕ್ತರು ನವರಾತ್ರಿಯ ಸಮಯದಲ್ಲಿ ಅಖಂಡ ಜ್ಯೋತಿಯನ್ನು (ಶಾಶ್ವತ ದೀಪ) ಬೆಳಗಿಸುತ್ತಾರೆ. ಒಂಬತ್ತು ದಿನಗಳವರೆಗೆ ಅಖಂಡ ಜ್ಯೋತಿ ಉರಿಯುತ್ತದೆ, ಮತ್ತು ಅದನ್ನೇ ಒಂದು ಅನನ್ಯ ಆಚರಣೆಯನ್ನಾಗಿ ಮಾಡುತ್ತಾರೆ. ಅಖಂಡ ಜ್ಯೋತಿ ಬೆಳಗಿಸುವ ನಿಯಮಗಳನ್ನು ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ. ಈ ರೀತಿ 9 ದಿನ ಹಗಲು-ರಾತ್ರಿ ನಿರಂತರ ದೀಪ ಬೇಳಗಿಸಿದರೆ ತಾಯಿ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ ಎಂಬ ನಂಬಿಕೆ ಇದೆ.

ನವರಾತ್ರಿಯಂದು ಬೆಳಗಿಸುವ ಅಖಂಡ ಜ್ಯೋತಿ ನಿಯಮಗಳು
-ಹಿತ್ತಾಳೆ, ಬೆಳ್ಳಿ ಅಥವಾ ಮಣ್ಣಿನ ದೀಪವನ್ನು ಬಳಸಿ. ನೀವು ಮಣ್ಣಿನ ದೀಪವನ್ನು ಆರಿಸಿದರೆ, ರಾತ್ರಿಯಿಡೀ ನೀರಿನಲ್ಲಿ ನೆನೆಸಿರುವಂತೆ ನೋಡಿಕೊಳ್ಳಿ ಅದು ಉರಿಯುವಾಗ ಎಲ್ಲಾ ಎಣ್ಣೆಯನ್ನು ಹೀರಿಕೊಳ್ಳದಂತೆ ತಡೆಯಿರಿ.
-ಅಖಂಡ ಜ್ಯೋತಿಯನ್ನು ನೆಲದ ಮೇಲೆ ಬೆಳಗಬಾರದು. ಹೀಗಾಗಿ ಮರದ ಟೇಬಲ್ ಬಳಸಿ ಅದರ ಮೇಲೆ ಶುದ್ಧ ಬಟ್ಟೆ ಹಾಕಿ ಗುಲಾಬಿ ಅಥವಾ ಹಸಿ ಅನ್ನದೊಂದಿಗೆ ಅಷ್ಟದಳವನ್ನು (ಎಂಟು ದಳಗಳ ಕಮಲದ ಮಾದರಿ) ಇರಿಸಿ ದೀಪ ಬೆಳಗಬಹುದು.
– ಅಖಂಡ ಜ್ಯೋತಿ ಬೆಳಗುವ ಮುನ್ನ ಸಂಕಲ್ಪ ಮಾಡಿಕೊಳ್ಳಬೇಕು. ಜ್ಯೋತಿಯನ್ನು ಬಲಿಪೀಠದ ಮೇಲೆ ದೇವಿಯ ಬಲಕ್ಕೆ ಇಡಬೇಕು.
-ಅಖಂಡ ಜ್ಯೋತಿ ನವರಾತ್ರಿಯ 9 ದಿನಗಳ ಕಾಲ 24 ಗಂಟೆಯೂ ಹಚ್ಚಬೇಕು. ದೀಪ ನಂದಿ ಹೋದರೆ ಅದು ಅಶುಭ.
-ಅಖಂಡ ಜ್ಯೋತಿಗೆ ಶುದ್ಧ ಎಳ್ಳೆಣ್ಣೆ, ಸಾಸಿವೆ ಎಣ್ಣೆ ಅಥವಾ ತುಪ್ಪವನ್ನು ಬಳಸಬಹುದು.
-ದೀಪದಲ್ಲಿನ ಎಣ್ಣೆಯ ಪ್ರಮಾಣವನ್ನು ಆಗಾಗ ನೋಡುತ್ತಿರಬೇಕು. ಕಿಟಕಿ, ಬಾಗಿಲು, ಗಾಳಿ ಸೋಕದಂತೆ ನೋಡಿ ಕೊಳ್ಳಬೇಕು.
-ಅಖಂಡ ಜ್ಯೋತಿ ಉರಿಯುವ 9 ದಿನ ಮನೆಯಲ್ಲಿ ಯಾರಾದರೂ ಇರಲೇ ಬೇಕು. ಜ್ಯೋತಿಯನ್ನು ಬಿಟ್ಟು ಮನೆಯನ್ನು ಬೀಗ ಹಾಕುವಂತಿಲ್ಲ.
-ಮನೆಯಲ್ಲಿ ಜ್ಯೋತಿ ಬೆಳಗಿಸಲು ಸಾಧ್ಯವಾಗದಿದ್ದರೆ ದೇವಸ್ಥಾನಕ್ಕೆ ಹೋಗಿ ಜ್ಯೋತಿಗೆ ತುಪ್ಪವನ್ನು ದಾನ ಮಾಡಿ ಮಂತ್ರವನ್ನು ಪಠಿಸಬಹುದು.
-ನವರಾತ್ರಿಯ ಕೊನೆಯ ದಿನದ ನಂತರವೂ ದೀಪ ಉರಿಯುತ್ತಿದ್ದರೆ ಅದು ತಾನಾಗಿಯೇ ಆರಬೇಕು. ನೀವು ಅದನ್ನು ನಂದಿಸುವ ತಪ್ಪನ್ನು ಮಾಡಬೇಡಿ.

ಇದನ್ನೂ ಓದಿ: ನವರಾತ್ರಿ ಹಬ್ಬಕ್ಕೆ ಗರ್ಭಿಣಿಯರು ಉಪವಾಸ ಮಾಡಬಹುದೇ? ಸರಿಯಾದ ಮಾರ್ಗ ಯಾವುದು?