ವೃಂದಾವನದ ನಿಧಿವನಕ್ಕೆ ಸಂಜೆಯ ನಂತರ ಪ್ರವೇಶ ನಿಷೇಧಿಸಿರುವುದೇಕೆ? ಇಲ್ಲಿದೆ ರಹಸ್ಯ ಮಾಹಿತಿ
ಸಂಜೆಯ ನಂತರ ವೃಂದಾವನದ ನಿಧಿ ವನಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ. ಇಲ್ಲಿರುವ ದೇವಾಲಯದ ಬಾಗಿಲುಗಳನ್ನು ಸೂರ್ಯಾಸ್ತದ ನಂತರ ಮುಚ್ಚಲಾಗುತ್ತದೆ. ಹಾಗಾದರೆ ಈ ನಿಧಿವನದ ರಹಸ್ಯವೇನು? ಈ ಕಾಡು ಏಕೆ ಪ್ರಸಿದ್ಧವಾಗಿದೆ? ಈ ನಿಧಿವನಕ್ಕೆ ಸಂಬಂಧಿಸಿದ ನಿಗೂಢ ನಂಬಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ವೃಂದಾವನ ಧಾಮವು ಕೃಷ್ಣನ ನಗರವಾಗಿರುವುದರಿಂದ ಇದು ಅತ್ಯಂತ ಜನಪ್ರಿಯವಾಗಿದೆ. ರಾಧಾ- ಕೃಷ್ಣರ ಅನೇಕ ದೇವಾಲಯಗಳು ಕೂಡ ಇಲ್ಲಿವೆ, ಹಾಗಾಗಿ ಇಲ್ಲಿ ಪತ್ರಿನಿತ್ಯವೂ ಭಕ್ತರು ಪೂಜೆಗಾಗಿ ಬರುತ್ತಾರೆ. ಇನ್ನು ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಭಕ್ತರು ಮಥುರಾ ಮತ್ತು ವೃಂದಾವನಕ್ಕೆ ಬರುತ್ತಾರೆ. ಕೃಷ್ಣ ನಗರದಲ್ಲಿ ಇಂತಹ ಅನೇಕ ದೇವಾಲಯಗಳಿವೆ, ಅವುಗಳ ಬಗ್ಗೆ ಅನೇಕ ವಿಶಿಷ್ಟ ನಂಬಿಕೆಗಳು ಕೂಡ ಪ್ರಚಲಿತದಲ್ಲಿವೆ. ಈ ದೇವಾಲಯಗಳಲ್ಲಿ ವೃಂದಾವನದ ನಿಧಿವನವೂ ಒಂದು. ಈ ಪವಿತ್ರ ಸ್ಥಳದ ಬಗ್ಗೆ ನೂರಾರು ಕಥೆಗಳಿವೆ. ಕೆಲವೊಂದು ನಂಬಿಕೆಯ ಪ್ರಕಾರ ಭಗವಾನ್ ಶ್ರೀ ಕೃಷ್ಣನು ಪ್ರತಿದಿನ ರಾತ್ರಿ ರಾಧಾ ಮತ್ತು ಅವನ ಗೋಪಿಯರೊಂದಿಗೆ ಇಲ್ಲಿಗೆ ಬರುತ್ತಾನೆ ಎಂದು ಹೇಳಲಾಗುತ್ತದೆ. ಇಂತಹ ಹಲವಾರು ಕಾರಣಗಳಿಂದ ಸೂರ್ಯಾಸ್ತದ ನಂತರ ನಿಧಿವನಕ್ಕೆ ಜನರ ಪ್ರವೇಶವನ್ನು ನಿಷೇಧಿಸಲಾಗುತ್ತದೆ. ಈ ನಿಧಿವನಕ್ಕೆ ಸಂಬಂಧಿಸಿದ ನಿಗೂಢ ನಂಬಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕೃಷ್ಣನ ಭೂಮಿಯಾದ ವೃಂದಾವನ ಧಾಮದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಇಂದಿಗೂ ವೃಂದಾವನದಲ್ಲಿ ಶ್ರೀ ಕೃಷ್ಣನ ಕಥೆಗಳನ್ನು ಚಿತ್ರಗಳ ಮೂಲಕ ಕಾಣಬಹುದು ಎಂದು ಹೇಳಲಾಗುತ್ತದೆ. ರಾಧೆ ಮತ್ತು ಗೋಪಿಯರೊಂದಿಗೆ ಶ್ರೀ ಕೃಷ್ಣನು ರಾತ್ರಿ ನಿಧಿವನಕ್ಕೆ ಬರುತ್ತಾನೆ ಎಂಬುದು ಜನಪ್ರೀಯ ನಂಬಿಕೆ. ಇನ್ನು ಇಲ್ಲಿನ ದೇವಾಲಯದ ಬಾಗಿಲುಗಳನ್ನು ಮುಚ್ಚಿದ ನಂತರ, ಒಳಗಿನಿಂದ ನೃತ್ಯ ಮತ್ತು ಹಾಡುವ ಶಬ್ದ ಸಹ ಕೇಳಿಬರುತ್ತದೆ ಎಂದು ಜನರು ಹೇಳುತ್ತಾರೆ.
ನೀವು ರಾತ್ರಿಯಲ್ಲಿ ನಿಧಿವನದ ಒಳಗೆ ಹೋಗಲು ಏಕೆ ಸಾಧ್ಯವಿಲ್ಲ?
ದಟ್ಟವಾದ ಮರಗಳು ಮತ್ತು ಸಸ್ಯಗಳಿಂದ ಸುತ್ತುವರೆದಿರುವ ವೃಂದಾವನದ ನಿಧಿವನವು ಇತರ ಕಾಡುಗಳಂತೆಯೇ ಇದೆ. ಆದರೆ ಕೃಷ್ಣನ ಆಗಮನದಿಂದಾಗಿ, ಈ ಸ್ಥಳವನ್ನು ವಿಶೇಷ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿ ಮರಗಳ ನಡುವೆ ಒಂದು ಸಣ್ಣ ಅರಮನೆ ಇದೆ, ಇದನ್ನು ರಂಗ್ ಮಹಲ್ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರತಿ ರಾತ್ರಿ ಶ್ರೀ ಕೃಷ್ಣನು ತನ್ನ ಗೋಪಿಯರೊಂದಿಗೆ ಈ ನಿಧಿವನದ ರಂಗ್ ಮಹಲ್ ಗೆ ಬರುತ್ತಾನೆ ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ಸಂಜೆ ನಿಧಿವನಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ನಿಧಿವನದ ರಂಗ್ ಮಹಲ್ ನಲ್ಲಿ ಸೂರ್ಯಾಸ್ತದ ನಂತರ, ಪುಟ್ಟ ಕೃಷ್ಣನಿಗೆ ಬೆಣ್ಣೆ ಮತ್ತು ಸಕ್ಕರೆಯನ್ನು ನೀರಿನ ಜೊತೆಯಲ್ಲಿ ಅರ್ಪಿಸಲಾಗುತ್ತದೆ. ಇದಲ್ಲದೆ, ಬೆಳಿಗ್ಗೆ ದೇವಾಲಯದ ಬಾಗಿಲು ತೆರೆದಾಗ, ನೀರಿನ ಪಾತ್ರೆ ಖಾಲಿಯಾಗಿರುತ್ತದೆ. ಹಾಗಾಗಿ ಕೃಷ್ಣನು ಪ್ರತಿದಿನ ಇಲ್ಲಿಗೆ ಬಂದು ಇವೆಲ್ಲವನ್ನೂ ಸ್ವೀಕರಿಸುತ್ತಾನೆ ಎಂದು ಜನರು ಹೇಳುತ್ತಾರೆ.
ಇದನ್ನೂ ಓದಿ: ಜಯ ಏಕಾದಶಿಯ ಆಚರಣೆ ಹಿಂದಿರುವ ಸ್ವಾರಸ್ಯಕರ ಕಥೆ ಇಲ್ಲಿದೆ
ಈ ದೇವಾಲಯವು ಹಗಲಿನಲ್ಲಿ ತೆರೆದಿರುತ್ತದೆ;
ಸೂರ್ಯ ಮುಳುಗಿದ ತಕ್ಷಣ, ನಿಧಿವನಕ್ಕೆ 7 ಬೀಗಗಳನ್ನು ಹಾಕುವ ಮೂಲಕ ಮುಚ್ಚಲಾಗುತ್ತದೆ. ಭಕ್ತರು ರಾತ್ರಿ ಸಮಯದ ಹೊರತಾಗಿ ದಿನದ ಯಾವುದೇ ಸಮಯದಲ್ಲಿಯೂ ನಿಧಿವನವನ್ನು ಪ್ರವೇಶಿಸಬಹುದು. ಈ ಕಾಡಿನಲ್ಲಿ ವಿಶೇಷವಾಗಿ ತುಳಸಿ, ಮೆಹಂದಿ ಮತ್ತು ಕದಂಬ ಮರಗಳಿವೆ. ನಿಧಿ ವನದಲ್ಲಿರುವ ತುಳಸಿ ಗಿಡಗಳು ರಾತ್ರಿಯಲ್ಲಿ ಗೋಪಿಕೆಯ ರೂಪದಲ್ಲಿ ಬರುತ್ತವೆ ಎಂದು ಹೇಳಲಾಗುತ್ತದೆ. ರಂಗ್ ಮಹಲ್ ಹೊರತುಪಡಿಸಿ, ರಾಧಾ ರಾಣಿಯ ಪ್ರಸಿದ್ಧ ದೇವಾಲಯವೂ ಈ ನಿಧಿವನದಲ್ಲಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ