Krishna Janmashtami 2026: ದಶಕಗಳ ನಂತರ ಅಪರೂಪದ 5 ಗ್ರಹಗಳ ಸಂಯೋಗ; ಈ 4 ರಾಶಿಯವರಿಗೆ ಅನಿರೀಕ್ಷಿತ ಅದೃಷ್ಟ

ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಜ್ಯೋತಿಷ್ಯದ ಪ್ರಕಾರ ಅತ್ಯಂತ ವಿಶೇಷ. ಸೆಪ್ಟೆಂಬರ್ 4 ರಂದು, ದಶಕಗಳ ನಂತರ ಐದು ಪ್ರಮುಖ ಗ್ರಹಗಳು ಒಂದೇ ನೇರ ರೇಖೆಯಲ್ಲಿ ಸಂಯೋಜನೆಗೊಳ್ಳಲಿವೆ. ಈ ಅಪರೂಪದ ಖಗೋಳ ವಿದ್ಯಮಾನವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ, ತುಲಾ, ಸಿಂಹ, ವೃಷಭ ಮತ್ತು ಕರ್ಕಾಟಕ ರಾಶಿಗಳಿಗೆ ಅನಿರೀಕ್ಷಿತ ಧನಲಾಭ, ಯಶಸ್ಸು ಮತ್ತು ಅದೃಷ್ಟ ತರಲಿದೆ.

Krishna Janmashtami 2026: ದಶಕಗಳ ನಂತರ ಅಪರೂಪದ 5 ಗ್ರಹಗಳ ಸಂಯೋಗ; ಈ 4 ರಾಶಿಯವರಿಗೆ ಅನಿರೀಕ್ಷಿತ ಅದೃಷ್ಟ
ಶ್ರೀ ಕೃಷ್ಣ ಜನ್ಮಾಷ್ಟಮಿ

Updated on: Sep 01, 2026 | 1:22 PM

ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ವಿಶೇಷ ಹಾಗೂ ಅಪರೂಪದ ಮಹತ್ವವನ್ನು ಪಡೆದುಕೊಂಡಿದೆ. ಸೆಪ್ಟೆಂಬರ್ 4 ರ ಶುಕ್ರವಾರದಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಈ ಶುಭ ದಿನದಂದು ದಶಕಗಳ ನಂತರ ಪ್ರಮುಖ ಐದು ಗ್ರಹಗಳು ಒಂದೇ ನೇರ ರೇಖೆಯಲ್ಲಿ ಬರುವ ಅಪರೂಪದ ಖಗೋಳ ಹಾಗೂ ಜ್ಯೋತಿಷ್ಯ ವಿದ್ಯಮಾನ ಸಂಭವಿಸಲಿದೆ. ಈ ಗ್ರಹಗಳ ಸಂಯೋಗವು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಿದರೂ, ಪ್ರಮುಖವಾಗಿ ನಾಲ್ಕು ರಾಶಿಗಳ ಜಾತಕದವರಿಗೆ ಅನಿರೀಕ್ಷಿತ ಧನಲಾಭ ಹಾಗೂ ಅದೃಷ್ಟವನ್ನು ತರಲಿದೆ.

ತುಲಾ ರಾಶಿ:

ತುಲಾ ರಾಶಿಯ ಅಧಿಪತಿ ಶುಕ್ರ. ಈ ಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಶುಕ್ರನು ಆರ್ಥಿಕವಾಗಿ ಅತ್ಯಂತ ಅನುಕೂಲಕರ ಸ್ಥಾನದಲ್ಲಿರಲಿದ್ದು, ‘ನವಪಂಚಮ ರಾಜಯೋಗ’ ಸೃಷ್ಟಿಯಾಗಲಿದೆ. ಇದರ ಪರಿಣಾಮವಾಗಿ ತುಲಾ ರಾಶಿಯವರು ಎಲ್ಲಾ ರಂಗಗಳಲ್ಲೂ ಅದ್ಭುತ ಯಶಸ್ಸನ್ನು ಕಾಣಲಿದ್ದಾರೆ. ವೃತ್ತಿ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರಲಿದ್ದು, ಸಮಾಜದಲ್ಲಿ ಗೌರವ ಹಾಗೂ ಉತ್ತಮ ಮನ್ನಣೆ ಲಭಿಸಲಿದೆ.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಈ ಬಾರಿಯ ಜನ್ಮಾಷ್ಟಮಿಯು ಅತ್ಯಂತ ಶುಭಫಲಗಳನ್ನು ನೀಡಲಿದೆ. ಹಬ್ಬದ ಸಮಯದಲ್ಲಿ ರಾಶ್ಯಾಧಿಪತಿಯಾದ ಸೂರ್ಯನು ತನ್ನ ಸ್ವಂತ ರಾಶಿಯಾದ ಸಿಂಹದಲ್ಲೇ ಸ್ಥಿತನಾಗಿರುವುದರಿಂದ ಅಪಾರ ಪ್ರಯೋಜನಗಳು ಸಿಗಲಿವೆ. ಕೈಗೆತ್ತಿಕೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲಿದ್ದು, ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಿ, ಸಂತಸದ ವಾತಾವರಣವಿರುತ್ತದೆ.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2026: ಒಂದೇ ದಿನದಲ್ಲಿ ಬೆಂಗಳೂರಿನ 4 ಪ್ರಸಿದ್ಧ ಕೃಷ್ಣ ದೇವಾಲಯಗಳ ದರ್ಶನ ಪಡೆಯಿರಿ

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ದಿನ ಚಂದ್ರನು ಅತ್ಯಂತ ಬಲವಾದ ಮತ್ತು ಅನುಕೂಲಕರ ಸ್ಥಾನದಲ್ಲಿರಲಿದ್ದಾನೆ. ಇದರಿಂದಾಗಿ ಈ ರಾಶಿಯವರ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಸರ್ವ ದಿಕ್ಕುಗಳಿಂದಲೂ ಬೆಂಬಲ ಸಿಗಲಿದ್ದು, ಹಣಕಾಸಿನ ಸ್ಥಿತಿಯಲ್ಲಿ ಅಗಾಧವಾದ ಚೇತರಿಕೆ ಮತ್ತು ಆದಾಯ ವೃದ್ಧಿಯಾಗಲಿದೆ.

ಕರ್ಕಾಟಕ ರಾಶಿ:

ಶ್ರೀ ಕೃಷ್ಣ ಜನ್ಮಾಷ್ಟಮಿಯ ಗ್ರಹಗಳ ಶುಭ ಸಂಯೋಗವು ಕರ್ಕಾಟಕ ರಾಶಿಯವರಿಗೆ ಗರಿಷ್ಠ ಮಟ್ಟದ ಲಾಭಗಳನ್ನು ತಂದುಕೊಡಲಿದೆ. ಈ ಸಮಯದಲ್ಲಿ ಗುರು ಮತ್ತು ಚಂದ್ರರು ಉಚ್ಚ ಸ್ಥಾನದಲ್ಲಿರುವುದರಿಂದ ಈ ರಾಶಿಯವರಿಗೆ ರಾಜಯೋಗದಂತಹ ಫಲಗಳು ದೊರೆಯಲಿವೆ. ಆರ್ಥಿಕ ಸಂಕಷ್ಟಗಳು ದೂರವಾಗಿ ಧನಲಾಭವಾಗಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದ್ದು, ವಿಶೇಷ ಗೌರವಕ್ಕೆ ಪಾತ್ರರಾಗುವಿರಿ.

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us