ಭಗವಾನ್ ಕೃಷ್ಣ
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಕೂಡ ಒಂದು. ಇದನ್ನು ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀಜಯಂತಿ ಎಂದೂ ಕರೆಯಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯು ಕೃಷ್ಣನ ಜನ್ಮದಿನವನ್ನು ಸೂಚಿಸುತ್ತದೆ. ಈ ದಿನ ಕೃಷ್ಣನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗುತ್ತೆ. ಬನ್ನಿ ಕೃಷ್ಣ ಜನ್ಮಾಷ್ಟಮಿಯ ಈ ಶುಭ ದಿನದಂದು ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿಯನ್ನು ತಿಳಿದುಕೊಳ್ಳಿ.
- ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ
- ಜನ್ಮ ದಿನಾಂಕ ಜುಲೈ 19 ಕ್ರಿಪೂ 3228
- ತಿಂಗಳು: ಶ್ರಾವಣ
- ದಿನ: ಅಷ್ಟಮಿ
- ನಕ್ಷತ್ರ: ರೋಹಿಣಿ
- ದಿನ: ಬುಧವಾರ
- ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ
- ಮರಣ ದಿನ 18 ಫೆಬ್ರವರಿ ಕ್ರಿಪೂ 3102
- ಕೃಷ್ಣ 89 ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆಯಿತು
- ಕುರುಕ್ಷೇತ್ರ ಯುದ್ಧ ನಡೆದು 36 ವರ್ಷಗಳ ಬಳಿಕ ಕೃಷ್ಣನ ಮರಣವಾಯಿತು
- ಕುರುಕ್ಷೇತ್ರ ಯುದ್ಧವು ಮೃಗಾಶಿರ ಶುಕ್ಲ ಏಕಾದಶಿ ಕ್ರಿಪೂ 3139ರಲ್ಲಿ ಆರಂಭವಾಯಿತು( 8 ಡಿಸೆಂಬರ್). ಡಿಸೆಂಬರ್ 25 ಕ್ರಿಪೂ 3139ರಂದು ಯುದ್ಧ ಕೊನೆಗೊಡಿತು
- ಜಯದ್ರಥನ ಸಾವಿನ ಕಾರಣದಿಂದಾಗಿ ಕ್ರಿಪೂ 3139 ಡಿಸೆಂಬರ್ 21ರ ಸಂಜೆ 3ಗಂಟೆಯಿಂದ 5 ರವರೆಗೆ ಸೂರ್ಯಗ್ರಹಣವಾಯಿತು
- ಭೀಷ್ಮರು ಕ್ರಿಪೂ 3138ರ ಫೆಬ್ರವರಿ 2 ರಂದು ತೀರಿಕೊಂಡರು( ಉತ್ತರಾಯಣದ ಮೊದಲ ಏಕಾದಶಿ)
- ಶ್ರೀ ಕೃಷ್ಣನನ್ನು: ಮಥುರಾದಲ್ಲಿ ಕನ್ನಯ್ಯಾ, ಓಡಿಸ್ಸಾದಲ್ಲಿ ಜಗನ್ನಾಥ, ಮಹಾರಾಷ್ಟ್ರದಲ್ಲಿ ವಿಠಲ, ರಾಜಸ್ತಾನದಲ್ಲಿ ಶ್ರೀನಾಥ, ಗುಜರಾತಲ್ಲಿ ದ್ವಾರಕಾಧಿಶ್, ಉಡುಪಿಯಲ್ಲಿ ಕೃಷ್ಣ, ಕೇರಳದಲ್ಲಿ ಗುರುವಾಯುರಪ್ಪ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ.
- ಕೃಷ್ಣ ನ ತಂದೆ : ವಸುದೇವ
- ತಾಯಿ : ದೇವಕಿ
- ಸಾಕು ತಂದೆ :ನಂದ
- ಸಾಕುತಾಯಿ : ಯಶೋದೆ
- ಹಿರಿಯಣ್ಣ: ಬಲರಾಮ
- ತಂಗಿ : ಸುಭದ್ರೆ
- ಜನ್ಮ ಸ್ಥಳ :ಮಥುರಾ
- ಪತ್ನಿಯರು :ರುಕ್ಮಿಣೀ, ಸತ್ಯಭಾಮ
- ಕೃಷ್ಣ ತನ್ನ ಜೀವಿತಾವಧಿಯಲ್ಲಿ 4 ಜನರನ್ನು ಮಾತ್ರ ಕೊಂದಿದ್ದ. ಅವರು, ಚನೋರ, ಕಂಸ, ಶಿಶುಪಾಲ, ದಂಟವಕ್ರ.
- ಇವನ ತಾಯಿ ಉಗ್ರ ಕುಲದವಳಾದರೆ, ತಂದೆ ಯಾದವ ಕುಲದನಾಗಿದ್ದ.
- ಕಪ್ಪಾಗಿ ಹುಟ್ಟಿದ್ದ ಕೃಷ್ಣನನ್ನು ಅವನ ಗೋಕುಲ ಹಳ್ಳಿಯವರು ಕನ್ನಾ ಎಂದು ಕರೆಯುತ್ತಿದ್ದರು
- ಕಾಡು ಮೃಗಗಳ ಹಾವಳಿಯಿಂದ ತನ್ನ 9ನೇ ವರ್ಷದಲ್ಲಿ ಕೃಷ್ಣ ಗೋಕುಲದಿಂದ ವೃಂದಾವನಕ್ಕೆ ಬಂದ
- ವೃಂದಾವನದಲ್ಲಿ ತನ್ನ 10ವರ್ಷ 8 ತಿಂಗಳವರೆಗೆ ಕಳೆದಿದ್ದ ಕೃಷ್ಣ ತನ್ನ ತನ್ನ 10ನೇ ವರ್ಷ ಪ್ರಾಯದಲ್ಲಿ ತನ್ನ ಮಾವನಾದ ಕಂಸನನ್ನು ಮಥುರಾದಲ್ಲಿ ಕೊಂದಿದ್ದ. ಮುಂದಿನದಿನದಲ್ಲಿ ಮತ್ತು ತಂದೆ ತಾಯಿಯನ್ನು ಬಿಟ್ಟು ಮಥುರಾಗೆ ಬಂದಿದ್ದ
- ಅಲ್ಲಿಂದ ಆತ ಮತ್ತೆ ವೃಂದಾವನಕ್ಕೆ ಯಾವತ್ತಿಗೂ ಹಿಂತಿರುಗಲಿಲ್ಲ
- ಮುಂದಿನ ದಿನದಲ್ಲಿ ಸಿಂಧೂ ರಾಜ ಕಲಯಾವನನ ಬೆದರಿಕೆಗೆ ಈತ ಮಥುರಾವನ್ನು ಬಿಟ್ಟು ದ್ವಾರಕೆಗೆ ಬಂದ
- ವೈನಾತೆಯ ಎಂಬ ಗಿರಿಜನರ(ಈಗಿನ ಗೋವಾ) ಸಹಾಯದಿಂದ ಈತ ಜಾರಾಸಂಧಾನನ್ನು ಸೋಲಿಸಿದ್ದ
- ಅಳಿದು ಹೋಗಿದ್ದ ದ್ವಾರಕಾ ನಗರವನ್ನು ಶ್ರೀಕೃಷ್ಣ ಮತ್ತೆ ಕಟ್ಟಿದ
- ಅಲ್ಲಿಂದ ಸಾಂದೀಪನಿ ಆಶ್ರಮಕ್ಕೆ ಬಂದ ಈತ ತನ್ನ 18ನೇ ವರ್ಷದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾನೆ
- ವಿದ್ಯಾಭ್ಯಾಸದ ಬಳಿಕ ಪಾಂಡವರ ದುರಂತದ ಬಗ್ಗೆ ಈತನಿಗೆ ತಿಳಿಯುತ್ತದೆ.ದ್ರೌಪದಿಯನ್ನು ಪಾಂಡವರಿಗೆ ಮದುವೆ ಮಾಡಿಸುತ್ತಾನೆ
- ಇಂದ್ರಪ್ರಸ್ಥ ರಾಜಧಾನಿಯನ್ನು ಕಟ್ಟಲು ಪಾಂಡವರಿಗೆ ಸಹಾಯ ಮಾಡುತ್ತಾನೆ
- ದ್ರೌಪದಿಯ ಮಾನವನ್ನು ಕಾಪಾಡುತ್ತಾನೆ
- ಪಾಂಡವರ ಗಡಿಪಾರಿನ ಸಮದಲ್ಲಿ ಪಾಂಡವರ ಪರವಾಗಿ ನಿಲ್ಲುತ್ತಾನೆ
- ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಜಯಗಳಿಸುವಂತೆ ಮಾಡುತ್ತಾನೆ
- ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ಕೆಲಸ ಮಾಡಿ, ಧರ್ಮದ ರಕ್ಷಣೆ ಮಾಡುತ್ತಾನೆ
- ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭೋದಿಸಿದ ಮಹಾನ್ ಸಾಲುಗಳೇ “ಭಗವದ್ಗೀತೆ”
- ಮುಂದಿನ ದಿನದಲ್ಲಿ ತಾನು ಕಟ್ಟಿದ ನಗರ ದ್ವಾರಕೆ ಮುಳುಗುದನ್ನು ಆತ ನೋಡಬೇಕಾಯಿತು
- ಜಾರಾ ಎನ್ನುವ ಬೇಟೆಗಾರನಿಂದ ಕೊನೆಗೆ ಶ್ರೀ ಕೃಷ್ಣನ ಹತ್ಯೆಯಾಯಿತು
- ಜೀವನದಲ್ಲಿ ಏನೂ ಜಾದೂ ಮಾಡದ ಸಾಮಾನ್ಯ ವ್ಯಕ್ತಿತ್ವ ಈತನದ್ದು. ಆತನ ಜೀವನ ಅತ್ಯಂತ ಕಠಿಣವಾಗಿತ್ತು ಮತ್ತು ಪ್ರತಿಕ್ಷಣವೂ ಹೊಸ ಸವಾಲುಗಳಿಂದ ಕೂಡಿತ್ತು. ಯಾವತ್ತಿಗೂ ತನ್ನ ನೋವನ್ನು ಹೊರಹಾಕದೆ ಸದಾ ತಾಳ್ಮೆಯಿಂದ ಮುಗಳ್ನಗುತ್ತಿದ್ದ ವ್ಯಕ್ತಿತ್ವ ಕೃಷ್ಣನದ್ದು
- ಸವಾಲುಗಳನ್ನು ತನ್ನ ಚತುರ ಬುದ್ಧಿವಂತಿಕೆಯಿಂದ ಕೃಷ್ಣ ಎದುರಿಸುತ್ತಾ ಮುಂದುವರೆಯುತ್ತಾನೆ
- ಭೂತಕಾಲ ಮತ್ತು ಭವಿಷ್ಯದ ಬಗ್ಗೆ ಕೃಷ್ಣನಿಗೆ ಚೆನ್ನಾಗಿ ತಿಳಿದಿತ್ತು. ಆತನಿಗೆ ಭವಿಷ್ಯವನ್ನುಅರಿಯುವ ವಿಶೇಷವಾದ ದೈವಿಶಕ್ತಿಯಿತ್ತು
- ಇನ್ನೊಬ್ಬರ ಮನಸ್ಸನ್ನು ಮುಖ ನೋಡಿ ಅರ್ಥಮಾಡಿಕೊಳ್ಳಬಲ್ಲ ವಿಶೇಷವಾದ ಮನೋಶಾಸ್ತ್ರಜ್ಞ ಕೂಡ ಈತನಾಗಿದ್ದ
- ಈತನ ಜೀವನ ಈತನ ಸಂದೇಶ ನಿಜಕ್ಕೂ ನಮಗೆಲ್ಲಾ ದಾರಿದೀಪ.