AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ 6 ದಲಾಯಿ ಲಾಮಾ ಹುಟ್ಟುಹಬ್ಬ: ಟಿಬೆಟನ್ ಬೌದ್ಧ ಧರ್ಮಗುರುವಿನ ಬಗ್ಗೆ ನಿಮಗೆ ಗೊತ್ತಿರದ ಕೆಲ ಸಂಗತಿಗಳು

ದಲಾಯಿ ಲಾಮಾ ಅವರಿಗೆ ಬಾಲ್ಯದಿಂದಲೂ ವಿಜ್ಞಾನದಲ್ಲಿ ಬಹಳ ಅಭಿರುಚಿ. ತಾನು ಬೌದ್ಧಗುರು ಆಗಿರದೆ ಹೋಗಿದ್ದರೆ ಒಬ್ಬ ಎಂಜಿನೀಯರ್​ ಆಗಿರುತ್ತಿದ್ದೆ ಎಂದು ಅವರು ಅನೇಕ ಸಾರಿ ಹೇಳಿದ್ದಾರೆ.

ಜುಲೈ 6 ದಲಾಯಿ ಲಾಮಾ ಹುಟ್ಟುಹಬ್ಬ: ಟಿಬೆಟನ್ ಬೌದ್ಧ ಧರ್ಮಗುರುವಿನ ಬಗ್ಗೆ ನಿಮಗೆ ಗೊತ್ತಿರದ ಕೆಲ ಸಂಗತಿಗಳು
14 ನೇ ದಲಾಯಿ ಲಾಮಾ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jul 06, 2021 | 10:43 PM

Share

ತೆನ್ಜಿನ್ ಗ್ಯಾಟ್ಸೋ ಅಂದರೆ ಅಂದರೆ ಯಾರು ಅಂತ ಕೆಲವರಿಗಷ್ಟೇ ಗೊತ್ತಿರಬಹುದು, ಅಸಲಿಗೆ ಅದು 14 ನೇ ದಲಾಯಿ ಲಾಮಾ ಅವರ ಮೂಲ ಹೆಸರು. ಆಧ್ಯಾತ್ಮಿಕತೆ ವಿಷಯ ಚರ್ಚೆಗೆ ಬಂದರೆ ಅದು ದಲಾಯಿ ಲಾಮಾ ಹೆಸರು ಉಲ್ಲೇಖವಾಗದೆ ಪೂರ್ಣಗೊಳ್ಳದು. ತಮ್ಮ ಹಿಂದಿನ ಲಾಮಾಗಳಂತೆ ಅವರು ತಮ್ಮನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಿಕೊಳ್ಳದೆ ಮಾಹಿತಿ ತಂತ್ರಜ್ಞಾನದ ಸಂಪೂರ್ಣ ಪ್ರಯೋಜನ ಪಡೆದು ಶಾಂತಿ ಸಂದೇಶವನನ್ನು ವಿಶ್ವದೆಲ್ಲೆಡೆ ಸಾರಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿರುವ ಅವರು, ಜಗತ್ತಿನಾದ್ಯಂತ ಸಂಚರಿಸಿ ಪ್ರವಚನಗಳನ್ನು ನೀಡಿದ್ದಾರೆ. ಅಹಿಂಸೆ ಬಗ್ಗೆ ಅವರು ನೀಡುವ ಸಂದೇಶಗಳನ್ನು ಜನರು ಬಹಳ ಉತ್ಸುಕತೆಯಿಂದ ಕೇಳಿಸಿಕೊಳ್ಳುತ್ತಾರೆ. ವಿಶ್ವದ ಎಲ್ಲಾ ಜನರಿಗೆ, ಟಿಬೆಟಿಯನ್ ಬೌದ್ಧ ಧರ್ಮದ ಮುಖ್ಯಸ್ಥರಾಗಿರುವ ಅವರು ಶಾಂತಿದೂತನಾಗಿ ಗೋಚರವಾಗುತ್ತಾರೆ.

ಮಂಗಳವಾರ 14 ನೇ ದಲಾಯಿ ಲಾಮಾ ಅವರ ಹುಟ್ಟುಹಬ್ಬದ ದಿನವಾದ್ದರಿಂದ ಅವರ ಬಗ್ಗೆ ಗೊತ್ತಿರದ ಕೆಲ ಸಂಗತಿಗಳ ಬಗ್ಗೆ ಚರ್ಚಿಸುವುದು ಪ್ರಸ್ತುತವೆನಿಸುತ್ತದೆ.

ಹಿಂದಿನ ಎಲ್ಲ ದಲಾಯಿ ಲಾಮಾಗಳಿಗಿಂತ 14 ನೇ ದಲಾಯಿ ಲಾಮಾ ಅವರು ದೀರ್ಘಾವಧಿವರೆಗೆ ಧರ್ಮದ ಮುಖ್ಯಸ್ಥರಾಗಿದ್ದಾರೆ ಮತ್ತು ಅವರೆಲ್ಲಗಿಂತ ಹೆಚ್ಚಿನ ಆಯಷ್ಯವಂತರಾಗಿದ್ದಾರೆ. ಯಾವುದಾದರೂ ಮಹತ್ತರ ಬದಲಾವಣೆ ನಡೆಯದೆ ಹೋದರೆ ತಾವೇ ಕೊನೆಯ ದಲಾಯಿ ಲಾಮಾ ಆಗಬಹುದು ಎಂದು ಅವರು ಅನೇಕ ಬಾರಿ ಹೇಳಿದ್ದಾರೆ. 2011 ರಲ್ಲಿ ಅವರು ತಮ್ಮ 90 ನೇ ವಯಸ್ಸಿಗೆ ನಿವೃತ್ತರಾಗುವ ಬಗ್ಗೆ ಹೇಳಿದ್ದರು.

14 ನೇ ದಲಾಯಿ ಲಾಮಾ ಅವರ ಕುಟುಂಬಕ್ಕೆ ಟಿಬೆಟಿಯನ್ ಭಾಷೆ ಗೊತ್ತಿರಲಿಲ್ಲ. ಅವರು ಚೀನಾ ಪಶ್ಚಿಮ ಪ್ರಾಂತ್ಯಗಳ ಭಾಷೆಯೊಂದರ ಸುಧಾರಿತ ರೂಪವನ್ನುಮಾತಾಡುತ್ತಿದ್ದರು.

1989 ರಲ್ಲಿ ದಲಾಯಿ ಲಾಮಾ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರದಿಂದ ಸನ್ಮಾನಿಸಲಾಗಿತ್ತು. 2007 ರಲ್ಲಿ ಅವರಿಗೆ ಅಮೇರಿಕ ತನ್ನ ದೇಶದ ಅತ್ಯುನ್ನದ ನಾಗರಿಕ ಪುರಸ್ಕಾರ, ಕಾಂಗ್ರೆಶನಲ್ ಗೋಲ್ಡ್​ ಮೆಡಲ್ ನೀಡಿ ಗೌರವಿಸಿತ್ತು. ದಲಾಯಿ ಲಾಮಾ ಅವರು ನ್ಯೂಕ್ಲಿಯರ್ ಆಯುಧಗಳನ್ನು ವಿರೋಧಿಸುತ್ತಾರೆ ಮತ್ತು ನ್ಯೂಕ್ಲಿಯರ್ ಏಜ್ ಶಾಂತಿ ಪ್ರತಿಷ್ಠಾಪನೆಯ ಸಲಹೆಗಾರರಾಗಿ ಸೇವೆ ಒದಗಿಸುತ್ತಿದ್ದಾರೆ.

ದಲಾಯಿ ಲಾಮಾ ಅವರಿಗೆ ಬಾಲ್ಯದಿಂದಲೂ ವಿಜ್ಞಾನದಲ್ಲಿ ಬಹಳ ಅಭಿರುಚಿ. ತಾನು ಬೌದ್ಧಗುರು ಆಗಿರದೆ ಹೋಗಿದ್ದರೆ ಒಬ್ಬ ಎಂಜಿನೀಯರ್​ ಆಗಿರುತ್ತಿದ್ದೆ ಎಂದು ಅವರು ಅನೇಕ ಸಾರಿ ಹೇಳಿದ್ದಾರೆ. ಯೌನವದ ದಿನಗಳಲ್ಲಿ ಗಡಿಯಾರಗಳನ್ನು ರಿಪೇರಿ ಮಾಡುವುದರಲ್ಲಿ ಮತ್ತು ಕಾರುಗಳನ್ನು ರಿಪೇರಿ ಮಾಡುತ್ತಾ ತಮ್ಮ ಬಿಡುವಿನ ಸಮಯ ಕಳೆಯುತ್ತಿದ್ದರು.

2009 ರಲ್ಲಿ ಟೆನ್ನಿಸ್ಸೀಯಲ್ಲಿ ಮಾತಾಡುವಾಗ ತಮ್ಮನ್ನು ಮಹಿಳಾವಾದಿ ಎಂದು ಹೇಳಿಕೊಂಡ ಲಾಮಾ ಅವರು ಮಹಿಳೆಯರ ಹಕ್ಕುಗಳಿಗಾಗಿ ತಾವು ಹೋರಾಡುತ್ತಿರುವುದಾಗಿ ಹೇಳಿದ್ದರು. ಬೌದ್ಧ ಧರ್ಮದ ನಂಬಿಕೆಯ ಪ್ರಕಾರ ಹುಟ್ಟಲಿರುವ ಶಿಶುವಿಗೆ ಇಲ್ಲವೇ ಗರ್ಭಧರಿಸಿರುವ ಮಹಿಳೆಗೆ ಅಪಾಯವಿದೆ ಎಂಬ ಸಂದರ್ಭಗಳಲ್ಲಿ ಮಾತ್ರ ಗರ್ಭಪಾತ ಸರಿ ಅದಿಲ್ಲದೆ ಹೋದರೆ ಅದಕ್ಕೆ ಪ್ರಯತ್ನಿಸುವುದು ಪಾಪವೆನಿಸಿಕೊಳ್ಳುತ್ತದೆ. ಅದೇ ಭಾಷಣದಲ್ಲಿ ಅವರು, ಪ್ರತಿ ಪ್ರಕರಣದ ಆಧಾರದ ಮೇಲೆ ನೈತಿಕ ಪರಿಗಣನೆಗಳ ಕುರಿತು ಯೋಚಿಸಬೇಕು ಅಂತ ಹೇಳಿದ್ದರು.

ಇದನ್ನೂ ಓದಿ: Explainer | ಟಿಬೆಟ್​ನ ದೇಶಭ್ರಷ್ಟ ಸಂಸತ್​ಗೆ ಚುನಾವಣೆ: ಹೇಗಿರುತ್ತೆ ಪ್ರತಿನಿಧಿಗಳ ಆಯ್ಕೆ? ಮತದಾನ ಪ್ರಕ್ರಿಯೆ?

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್