ಸ್ಮಶಾನವಾಸಿ ಶಿವನಿಗೇಕೆ ಮದ್ಯ, ಮಾಂಸ ನೈವೇದ್ಯ? ಪುರಾಣಗಳು ಹೇಳೋದೇನು?
ಕರ್ನಾಟಕವು ವೈವಿಧ್ಯಮಯ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ರಾಜ್ಯ. ಹಿಂದೂ ಧರ್ಮ ಮತ್ತು ನಮ್ಮ ಸಂಪ್ರದಾಯವು ಸಸ್ಯಾಹಾರದೊಂದಿಗೆ ಸಂಬಂಧ ಹೊಂದಿದೆ. ದೇಶದ ಬಹುತೇಕ ಹಿಂದೂ ದೇವಾಲಯಗಳಲ್ಲಿ ಸಸ್ಯಹಾರಿ ನೈವೇದ್ಯವನ್ನೇ ವಿತರಿಸಲಾಗುತ್ತದೆ. ಆದರೆ ಮುಕ್ಕೋಟಿ ದೇವರುಗಳ ಪೈಕಿ ಶಿವ ಮತ್ತು ಪಾರ್ವತಿಯ ಕೆಲ ದೇವಾಲಯಗಳಲ್ಲಿ ಮಾತ್ರ ಮಾಂಸಾಹಾರ ಪ್ರಸಾದವನ್ನು ವಿತರಿಸಲಾಗುತ್ತೆ. ಇದರ ಹಿಂದಿರುವ ಕಾರಣವೇನು? ಶಿವ ಮಾಂಸಹಾರವನ್ನೂ ಸ್ವೀಕರಿಸುವುದೇಕೆ?

ಹಿಂದೂ ಧರ್ಮದ ಪ್ರಕಾರ ಮುಕ್ಕೋಟಿ ದೇವರುಗಳ ಪೈಕಿ ಬ್ರಹ್ಮ, ವಿಷ್ಣು, ಮಹೇಶ್ವರನನ್ನು ಪ್ರಮುಖ ದೇವರುಗಳಾಗಿ ಕಾಣುತ್ತಾರೆ. ಬ್ರಹ್ಮ ಸೃಷ್ಟಿಕರ್ತನಾದರೆ, ವಿಷ್ಣು ಜಗದ ನಿರ್ವಾಹಕ ಮತ್ತು ಮಹೇಶ್ವರ ವಿನಾಶಕ ಎನ್ನಲಾಗುತ್ತೆ. ಇಲ್ಲಿ ವಿಶೇಷವೆಂದರೆ ಎಲ್ಲಾ ದೇವರುಗಳ ಪೈಕಿ ದೇವರುಗಳ ಒಡೆಯ, ಭಗವಾನ್ ಶಿವನಿಗೆ ಹಲವೆಡೆ ಮಾಂಸ, ಮದ್ಯ ನೈವೇದ್ಯ ಮಾಡುವ ಪದ್ಧತಿ ಇದೆ. ಪ್ರಾಣಿ ಹಿಂಸೆ ಮಹಾಪಾಪ, ಪ್ರಾಣಿ ಹಿಂಸೆ ನಿಷೇಧವಿರುವ ಸಮಾಜದಲ್ಲೇ ಈಗಲೂ ದೇವರಿಗೆ ಮಾಂಸ, ಮದಿರೆ ಅರ್ಪಿಸುವ ಪದ್ಧತಿಯನ್ನು ಭಕ್ತರು ರೂಢಿಸಿಕೊಂಡು ಬಂದಿದ್ದಾರೆ. ಭೋಲೆನಾಥ, ಸ್ಮಶಾನವಾಸಿ, ಗಜಚರ್ಮಾಂಬರ, ಅರ್ಧನಾರೀಶ್ವರ, ಅಭಿಷೇಕಪ್ರಿಯನೂ ಆಗಿರುವ ಶಿವನಿಗೆ ಭಕ್ತಿ, ಪ್ರೀತಿಯಿಂದ ಏನನ್ನು ಅರ್ಪಿಸಿದರೂ ಅದನ್ನು ಶಿವ ಸ್ವೀಕರಿಸುತ್ತಾರೆ ಎಂಬ ಮಾತಿದೆ. ಮೊದಲನೆಯದಾಗಿ, ಹಿಂದೂ ಸಂಸ್ಕೃತಿಯಲ್ಲಿ “ದೇವರಿಗೆ ಪ್ರಸಾದವನ್ನು ಅರ್ಪಿಸುವುದಿಲ್ಲ” ನೈವೇದ್ಯವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಅರ್ಪಿಸಿದ ನಂತರವೇ ಅದು ದೇವರ ಕೃಪೆಯಿಂದ ಪ್ರಸಾದವಾಗುತ್ತದೆ. ಆ ಪ್ರಸಾದವನ್ನೇ ಭಕ್ತರಿಗೆ ವಿತರಿಸಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಹೆಚ್ಚಿನ ದೇವರುಗಳಿಗೆ ಸಸ್ಯಾಹಾರ ನೈವೇದ್ಯವನ್ನೇ ನೀಡಲಾಗುತ್ತೆ. ಬಹುತೇಕ ದೇವಾಲಯಗಳಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಪ್ರಾಚೀನ ಗ್ರಂಥಗಳಲ್ಲಿ, ಮುಖ್ಯವಾಗಿ ವೇದಗಳಲ್ಲಿ, ಆಗಮ ಮತ್ತು ಪುರಾಣಗಳಲ್ಲಿ ಕೆಲವು ಸಂಪ್ರದಾಯಗಳನ್ನು ಅನುಸರಿಸುವಾಗ ಕೆಲವು ದೇವರುಗಳಿಗೆ ಮಾಂಸಾಹಾರಿ ನೈವೇದ್ಯವನ್ನು ಅರ್ಪಿಸುವ ಬಗ್ಗೆ ತಿಳಿಸಲಾಗಿದೆ. ವಾಮಾಚಾರ ಮತ್ತು ಕೆಲವೊಮ್ಮೆ ತಂತ್ರ ಸಾಧನ ಮತ್ತು ಶಾಕ್ತ ಸಂಪ್ರದಾಯಗಳಲ್ಲಿ ಮಾಂಸಹಾರ, ನರ ಬಲಿ ಕೊಡುವುದು, ರಕ್ತದ ಬಗ್ಗೆ ತಿಳಿಸಲಾಗಿದೆ. ಇಂತಹ ತಾಂತ್ರಿಕ ಆಗಮಗಳನ್ನು ಅನುಸರಿಸುವ ದೇವಾಲಯಗಳಲ್ಲಿ ಮಾಂಸವನ್ನು ನೀಡುವ ಆಚರಣೆ ಇದೆ. ವೇದಗಳು, ಶಿವನ ರೂಪ ರುದ್ರನನ್ನು ಮಾಂಸ ತಿನ್ನುವ ಬೇಟೆಗಾರ ದೇವರು ಎಂದು ಸ್ಪಷ್ಟವಾಗಿ ವಿವರಿಸುತ್ತವೆ. ಪ್ರಾಣಿಗಳ...
Published On - 12:17 pm, Mon, 8 April 24




