Mahalaya Amavasya 2024: ಅ. 2ಕ್ಕೆ ಮಹಾಲಯ ಅಮಾವಾಸ್ಯೆ, ಸೂರ್ಯ ಗ್ರಹಣ, ನಿಮಗೆ ಗೊತ್ತಿರಲೇಬೇಕಾದ 10 ಅಂಶಗಳಿವು

Surya Grahan 2024: ಈ ಬಾರಿ ಅಕ್ಟೋಬರ್ 2ನೇ ತಾರೀಕು ಮಹಾಲಯ ಅಮಾವಾಸ್ಯೆ ಇದೆ. ಅದೇ ದಿನ ಕೇತುಗ್ರಸ್ತ ಸೂರ್ಯ ಗ್ರಹಣವೂ ಇದೆ. ಆದರೆ ಅದು ಭಾರತದಲ್ಲಿ ಗೋಚರವಾಗುತ್ತಿಲ್ಲ. ಆ ಕಾರಣಕ್ಕೆ ಯಾವುದೇ ಗ್ರಹಣಾಚರಣೆಗಳೂ ಇಲ್ಲ. ಆದರೆ ಮಹಾಲಯ ಅಮಾವಾಸ್ಯೆ ಅಂದಾಕ್ಷಣ ಕರಾಳ, ಭಯಾನಕ ಇಂಥ ಪದಗಳನ್ನು ಯಥೇಚ್ಛವಾಗಿ ಬಳಸುತ್ತಾ ಬರಲಾಗುತ್ತಿದೆ. ಈ ಬಗ್ಗೆ ಹಲವು ಸಂಗತಿಗಳನ್ನು ಓದುಗರ ಮುಂದಿಡಬೇಕಿದೆ. ಸಾವಧಾನವಾಗಿ ಓದಿಕೊಳ್ಳಿ.

Mahalaya Amavasya 2024: ಅ. 2ಕ್ಕೆ ಮಹಾಲಯ ಅಮಾವಾಸ್ಯೆ, ಸೂರ್ಯ ಗ್ರಹಣ, ನಿಮಗೆ ಗೊತ್ತಿರಲೇಬೇಕಾದ 10 ಅಂಶಗಳಿವು
ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಹಾಗೂ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ
Follow us
ಸ್ವಾತಿ ಎನ್​ಕೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 25, 2024 | 11:58 AM

ಅಕ್ಟೋಬರ್ 2ನೇ ತಾರೀಕು ಮಹಾಲಯ ಅಮಾವಾಸ್ಯೆ ಇದೆ. ಅದೇ ದಿನ ಕೇತುಗ್ರಸ್ತ ಸೂರ್ಯ ಗ್ರಹಣವೂ ಇದೆ. ಆದರೆ ಅದು ಭಾರತದಲ್ಲಿ ಗೋಚರವಾಗುತ್ತಿಲ್ಲ. ಆ ಕಾರಣಕ್ಕೆ ಯಾವುದೇ ಗ್ರಹಣಾಚರಣೆಗಳೂ ಇಲ್ಲ. ಆದರೆ ಮಹಾಲಯ ಅಮಾವಾಸ್ಯೆ ಅಂದಾಕ್ಷಣ ಕರಾಳ, ಭಯಾನಕ ಇಂಥ ಪದಗಳನ್ನು ಯಥೇಚ್ಛವಾಗಿ ಬಳಸುತ್ತಾ ಬರಲಾಗುತ್ತಿದೆ. ಈ ಬಗ್ಗೆ ಹತ್ತು ಅಂಶಗಳಲ್ಲಿ ವಿವರಿಸಲಾಗಿದೆ.

  1. ಚಂದ್ರ ಗ್ರಹಣವು ಯಾವಾಗಲೂ ಪೌರ್ಣಮಿಯಂದು ಹಾಗೂ ಸೂರ್ಯ ಗ್ರಹಣ ಅಮಾವಾಸ್ಯೆಯಂದು ಸಂಭವಿಸುತ್ತದೆ. ಆದ್ದರಿಂದ ಯಾರಾದರೂ ಈ ಬಾರಿ ಸೂರ್ಯ ಗ್ರಹಣ ವಿಶೇಷವಾಗಿ ಅಮಾವಾಸ್ಯೆಯಂದು ಬಂದಿದೆ, ಆದ್ದರಿಂದ ಬಹಳ ಅಪಾಯಕಾರಿ ಎಂದೇನಾದರೂ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದರೆ ನಕ್ಕು ಸುಮ್ಮನಾಗಬಹುದು.
  2. ಇನ್ನು ರಾಹು ಹಾಗೂ ಕೇತು ಗ್ರಹಗಳು ಚಲಿಸುವುದೇ ಅಪ್ರದಕ್ಷಿಣೆಯಾಗಿ. ಅವು ಹಿಮ್ಮುಖವಾಗಿಯೇ ಚಲಿಸುತ್ತವೆ. ಆದ್ದರಿಂದ ವಕ್ರಿ ರಾಹು ಅಥವಾ ವಕ್ರಿ ಕೇತುವಾಗಿರುವುದು ವಿಶೇಷ ಅಂತ ಜೋರು ಧ್ವನಿಯಲ್ಲಿ ಎಚ್ಚರಿಸುತ್ತಿದ್ದರೆ ಅದಕ್ಕೂ ನಕ್ಕು ಸುಮ್ಮನಾಗಬಹುದು. ಪ್ರತಿ ತಿಂಗಳೂ ಚಂದ್ರ ಒಮ್ಮೆ ರಾಹು ಹಾಗೂ ಕೇತು ಇರುವಂಥ ರಾಶಿಯನ್ನು ಹಾದು ಹೋಗಿಯೇ ಹೋಗುತ್ತದೆ. ಆದ್ದರಿಂದ ರಾಹು ಅಥವಾ ಕೇತುವಿನ ರಾಶಿಯಲ್ಲಿ ಚಂದ್ರ ಸಹ ಇದೆ. ಆದ್ದರಿಂದ ಈ ಗ್ರಹಣ ವಿಶೇಷ ಅಂತೇನಾದರೂ ಹೇಳಿದಲ್ಲಿ ಅದು ಸಹ ಯಾವ ರೀತಿಯಲ್ಲೂ ವಿಶೇಷವಲ್ಲ.
  3. ಆ ದಿನ ಅಮಾವಾಸ್ಯೆ ಎಂಬ ಕಾರಣಕ್ಕೆ, ಅದರಲ್ಲೂ ಸರ್ವಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆ ಎಂಬ ಕಾರಣಕ್ಕೆ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಒಂದು ವೇಳೆ ಆ ದಿನ ಮಕ್ಕಳು ಜನನವಾದರೆ ಜನನ ಕಾಲದ ಕೆಲವು ಶಾಂತಿಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ ಅಷ್ಟೇ. ಆದರೆ ಅದು ಮಹಾನ್ ಕೆಡುಕು ಎಂಬಂತೆ ಬಿಂಬಿಸಬೇಕಿಲ್ಲ. ಗ್ರಹ ಸ್ಥಿತಿಯ ಬಗ್ಗೆ ಹೇಳಬೇಕು ಅಂದರೆ, ವೃಷಭದಲ್ಲಿ ಗುರು, ಮಿಥುನದಲ್ಲಿ ಮಂಗಳ, ಕನ್ಯಾದಲ್ಲಿ ರವಿ, ಕೇತು, ಚಂದ್ರ ಮತ್ತು ಬುಧ. ತುಲಾದಲ್ಲಿ ಶುಕ್ರ, ಕುಂಭದಲ್ಲಿ ಶನಿ ಮತ್ತು ಮೀನದಲ್ಲಿ ರಾಹು ಇದೆ. ಇದು ಗ್ರಹಸ್ಥಿತಿಯಿಂದ ಉತ್ತಮವಾದದ್ದೇ. ಸ್ವಕ್ಷೇತ್ರದಲ್ಲಿ ಶನಿ ಮತ್ತು ಶುಕ್ರ ಇದ್ದಾರೆ. ಕನ್ಯಾ ರಾಶಿಯಲ್ಲಿ ಬುಧನಿಗೆ ಉಚ್ಚ ಸ್ಥಿತಿ, ಗುರು ಗ್ರಹವೂ ಸೇರಿದಂತೆ ಮುಖ್ಯ ಗ್ರಹಗಳು ಯಾವುವೂ ಕೆಟ್ಟದ್ದು ಅಂತ ಆ ದಿನ ಇಲ್ಲ.
  4. ಇನ್ನು ರವಿಯು ಉಚ್ಚ ಸ್ಥಿತಿಯ ಬುಧನೊಂದಿಗೆ ಇರುವಾಗ ಪರಸ್ಪರ ಸೈದ್ಧಾಂತಿಕ ವಿರೋಧಿಗಳಾದ ರಾಜಕೀಯ ಪಕ್ಷಗಳ ಮುಖಂಡರು ಒಬ್ಬರನ್ನೊಬ್ಬರು ಹೊಗಳಿಕೊಳ್ಳುವುದು, ಅದೇ ರೀತಿ ಬುದ್ಧಿವಂತಿಕೆಯಿಂದ ಮತ್ತೊಂದು ಪಕ್ಷದವರನ್ನು ಪೇಚಿಗೆ ಸಿಲುಕಿಸುವುದು, ಮಹತ್ತರವಾದ ಹಾಗೂ ಅಷ್ಟೇ ನಿರ್ಣಾಯಕವಾದ ರಾಜಕೀಯ ಬೆಳವಣಿಗೆಗಳನ್ನು ಖಂಡಿತಾ ಕಾಣಬಹುದು.
  5. ಮಹಾಲಯ ಅಮಾವಾಸ್ಯೆಯ ಹಿಂದಿನ ದಿನ ಘಾತಚತುರ್ದಶಿ ಅಂತ ಬರುತ್ತದೆ. ಅಪಮೃತ್ಯುವಿಗೆ ಈಡಾದವರು, ಅದರಲ್ಲೂ ಅಪಘಾತ, ಪ್ರಾಣಿಗಳ ದಾಳಿ, ಪ್ರಾಣಿಗಳ ಕಡಿತ- ದಾಳಿಯಿಂದ ಸಾವು, ಆತ್ಮಹತ್ಯೆ ಮಾಡಿಕೊಂಡವರು ಇಂಥವರ ಪಕ್ಷವನ್ನು ಆ ದಿನ ಮಾಡಲಾಗುತ್ತದೆ. ಈ ಘಾತ ಚತುರ್ದಶಿಯ ದಿನ ಅಪಾಯಕಾರಿ ಆಗಿರುತ್ತದೆ. ನೀವು ಗಮನಿಸಬಹುದು, ಆ ದಿನ ದೊಡ್ಡ ಅಪಘಾತಗಳು, ಅವಘಡಗಳು, ಅನಾಹುತಗಳು ಸಂಭವಿಸಿದ ವರ್ತಮಾನಗಳು ಕೇಳಿಬರುತ್ತವೆ. ಇದಕ್ಕೆ ಈ ಹಿಂದಿನ ವರ್ಷಗಳ ಘಟನೆಗಳನ್ನು ಆಧಾರವಾಗಿ ತೆಗೆದುಕೊಳ್ಳಬಹುದು ಹಾಗೂ ಪರಿಶೀಲಿಸಬಹುದು.
  6. ಇನ್ನು ಕೇತುಗ್ರಸ್ತ ಸೂರ್ಯ ಗ್ರಹಣವು ಕನ್ಯಾ ರಾಶಿಯಲ್ಲಿ ಸಂಭವಿಸುತ್ತಿದೆ. ಗೋಚರ ಇಲ್ಲದಿದ್ದರೂ ಕರ್ಕಾಟಕ, ವೃಶ್ಚಿಕ ಹಾಗೂ ಮೇಷ ರಾಶಿಯವರನ್ನು ಹೊರತುಪಡಿಸಿದಂತೆ ಉಳಿದ ಒಂಬತ್ತು ರಾಶಿಗಳವರು ಸಹ ಎಚ್ಚರಿಕೆ ತೆಗೆದುಕೊಳ್ಳುವುದು ಕ್ಷೇಮ. ವೃಷಭ, ಮಿಥುನ, ಸಿಂಹ, ಕನ್ಯಾ, ತುಲಾ, ಧನುಸ್ಸು, ಮಕರ, ಕುಂಭ, ಮೀನ ಹೀಗೆ ಒಂಬತ್ತು ರಾಶಿಯವರು ಸಹ ಸೂರ್ಯ ಮತ್ತು ಕೇತುವಿನ ಆರಾಧನೆ ಮಾಡುವುದು ಕ್ಷೇಮ.
  7. ಗ್ರಹಣವು ಪರ್ವ ಕಾಲ. ಜೊತೆಗೆ ಮಹಾಲಯ ಅಮಾವಾಸ್ಯೆಯಂದು ಪಿತೃಗಳಿಗೆ ತರ್ಪಣ ಹಾಗೂ ಆಯಾ ಸಮುದಾಯದವರ ನಂಬಿಕೆಯಂತೆ ತೀರಿಕೊಂಡ ಪಿತೃಗಳ ಸ್ಮರಣೆ, ಗೌರವ, ಆರಾಧನೆ ಮಾಡಲಾಗುತ್ತದೆ ಹಾಗೂ ಇದನ್ನು ಮಾಡಲೇಬೇಕು. ಇದರಲ್ಲಿ ಭಾವನಾತ್ಮಕ ಕಾರಣವೂ ಇದೆ, ಜೊತೆಗೆ ಅಧ್ಯಾತ್ಮ ಕಾರಣಗಳೂ ಇವೆ.
  8. ಅಮಾವಾಸ್ಯೆ ತಿಥಿಯಂದು ಕೆಲವು ಕಾರ್ಯಗಳನ್ನು ಮಾಡಲೇಬಾರದು ಎಂಬ ನಿಷಿದ್ಧವಿದೆ. ಅದಕ್ಕೆ ಕಾರಣಗಳೂ ಇವೆ. ಅದರಲ್ಲೂ ಈ ಬಾರಿ ರವಿಯು ಗ್ರಸ್ತನಾಗಿ ನಿರ್ದಿಷ್ಟ ಸಮಯದಲ್ಲಿ ತನ್ನ ಬಲವನ್ನು (ಜ್ಯೋತಿಷ್ಯ ಅಥವಾ ಧಾರ್ಮಿಕ ನಂಬಿಕೆ ರೀತಿಯಲ್ಲಿ) ಕಳೆದುಕೊಳ್ಳುವುದರಿಂದ ರವಿಯ ಕಾರಕತ್ವ ಎಂದು ಗುರುತಿಸುವ ಸರ್ಕಾರ (ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಎರಡೂ), ಮನುಷ್ಯನ ಹೃದಯ, ಕಣ್ಣು, ತಂದೆ ಅಥವಾ ತಂದೆ ಸಮಾನರು ಇವುಗಳಿಗೆಲ್ಲ ತೊಂದರೆಯನ್ನು ಸೂಚಿಸುತ್ತದೆ.
  9. ಯಾವುದೇ ಗ್ರಹಣವು ಎಲ್ಲ ರಾಶಿಯವರಿಗೂ, ಮೇಷಾದಿ ಮೀನ ರಾಶಿಯವರಿಗೆ ಸಂಪೂರ್ಣ ಶುಭ ಎಂದು ಹೇಳುವುದಕ್ಕೆ ಬರುವುದಿಲ್ಲ. ಅದಕ್ಕೆ ಕಾರಣ ಏನೆಂದರೆ, ಯಾವುದೇ ವ್ಯಕ್ತಿಗೆ ತಾನು ಇಷ್ಟಪಡುವ, ಪ್ರೀತಿಯಿಂದ, ಗೌರವಿಸುವ, ಸಂಬಂಧಪಡುವ ಮತ್ತೊಬ್ಬ ವ್ಯಕ್ತಿಗೆ ಆಗುವ ತೊಂದರೆ ಖಂಡಿತಾ ದುಃಖವನ್ನು ನೀಡಿಯೇ ನೀಡುತ್ತದೆ. ಆದ್ದರಿಂದ ಗ್ರಹಣ ಕಾಲದಲ್ಲಿ ದೇವರ ಆರಾಧನೆ, ಆಯಾ ಗ್ರಹಣ ಸಂಭವಿಸುವ ಗ್ರಹಣಗಳ ಶಾಂತಿ ಇವುಗಳಿಂದ ಎಲ್ಲ ಜೀವರಾಶಿಗೂ ಒಳಿತನ್ನು ಪ್ರಾರ್ಥಿಸಬೇಕು. ಇನ್ನು ಗ್ರಹಣದ ಪರಿಣಾಮಗಳು ಪ್ರಕೃತಿಯ ಮೇಲೂ ಆಗುತ್ತದೆ. ಆದ್ದರಿಂದ ಪ್ರಕೃತಿಯ ಒಳಿತನ್ನೂ ಪ್ರಾರ್ಥಿಸಬೇಕು. ಮತ್ತೊಮ್ಮೆ ಹೇಳಬೇಕು ಅಂದರೆ, ಪ್ರಾರ್ಥಿಸುವುದು ಎಂಬುದರ ಅರ್ ಆಯಾ ಗ್ರಹಗಳು ಹಾಗೂ ಭಗವಂತನನ್ನು ಆಗಿರುತ್ತದೆ.
  10. ಗ್ರಹಗಳ ದೃಷ್ಟಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿಸಬೇಕು. ರವಿ, ಚಂದ್ರ, ಶುಕ್ರ ಈ ಎರಡೂ ಗ್ರಹಗಳಿಗೆ ಸಪ್ತಮ ದೃಷ್ಟಿ. ಅಂದರೆ ತಾವು ಇರುವ ರಾಶಿಯಿಂದ ಏಳನೇ ಮನೆಯನ್ನು ವೀಕ್ಷಣೆ ಮಾಡುತ್ತಾರೆ. ಗುರು ಗ್ರಹ ತಾನಿರುವ ರಾಶಿಯಿಂದ ಐದು, ಏಳು ಹಾಗೂ ಒಂಬತ್ತನೆ ಮನೆ ವೀಕ್ಷಿಸುತ್ತದೆ. ಕುಜ ಗ್ರಹ ತಾನಿರುವ ರಾಶಿಯಿಂದ ನಾಲ್ಕು, ಏಳು ಹಾಗೂ ಎಂಟನೆ ಮನೆ, ಇನ್ನು ಶನಿ ಗ್ರಹವು ತಾನಿರುವ ರಾಶಿಯಿಂದ ಮೂರು, ಏಳು ಹಾಗೂ ಹತ್ತನೇ ಮನೆಯನ್ನು ವೀಕ್ಷಣೆ ಮಾಡುತ್ತದೆ. ರಾಹು ಐದು ಮತ್ತು ಒಂಬತ್ತನೇ ಮನೆ ವೀಕ್ಷಣೆ ಮಾಡುತ್ತದೆ. ಇದರ ಆಧಾರದಲ್ಲಿಯೂ ಆಯಾ ಗ್ರಹಗಳು ಇರುವ ಸ್ಥಾನ ಮತ್ತು ಬೀರುವ ದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಫಲಾಫಲಗಳನ್ನು ಹೇಳಲಾಗುತ್ತದೆ.

ಪಠತೋ ನಾಸ್ತಿ ಮೂರ್ಖತ್ವಂ, ಜಪತೋ ನಾಸ್ತಿ ಪಾತಕಂ, ಮೌನಿನಃ ಕಲಹೋ ನಾಸ್ತಿ, ನ ಭಯಂ ಚಾಸ್ತಿ ಜಾಗ್ರತಃ ಎಂಬ ಸಂಸ್ಕೃತ ಸುಭಾಷಿತವಿದೆ. ಇದರ ಅರ್ಥ: ಓದುವವನಿಗೆ ದಡ್ಡತನ ಇರುವುದಿಲ್ಲ, ಜಪ ಮಾಡುವವನಿಗೆ ಪಾಪ ಇರುವುದಿಲ್ಲ, ಮೌನವಾಗಿ ಇರುವವನಿಗೆ ಜಗಳದ ಭಯ ಇರುವುದಿಲ್ಲ, ಸದಾ ಎಚ್ಚರದಿಂದ ಇರುವವನಿಗೆ ಯಾವುದರಿಂದಲೂ ಭಯ ಇರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು, ಜೀವನದಲ್ಲೂ ಅಳವಡಿಸಿಕೊಂಡರೆ ಒಳ್ಳೆಯದು.

(ಮಾಹಿತಿ: ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಹಾಗೂ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ)

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು