Mahashivratri 2024: ಶಿವ ಪುರಾಣ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ?
ಶಿವನ ಅನುಗ್ರಹ ಪಡೆದವರು ಜೀವನದಲ್ಲಿ ಇರುವಂತಹ ದುಃಖ ಮತ್ತು ಭಯದಿಂದ ಪರಿಹಾರ ಕಂಡುಕೊಳ್ಳುತ್ತಾರೆ. ಹಾಗಾಗಿ ಶಿವನನ್ನು ಮುಖ್ಯವಾಗಿ ಆರಾಧನೆ ಮಾಡುವ ದಿನಗಳಲ್ಲಿ ತಪ್ಪದೆಯೇ ಶಿವ ಪುರಾಣವನ್ನು ಪಠಿಸಿ. ಹಾಗಾದರೆ ಇದರ ಪ್ರಾಮುಖ್ಯತೆ ಏನು? ಶಿವನ ಪುರಾಣವನ್ನು ಪಠಿಸುವುದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಹಿಂದೂ ಧರ್ಮದಲ್ಲಿ, ಶಿವನು ತನ್ನ ಭಕ್ತರಿಗೆ ಬಹು ಬೇಗ ಒಲಿಯುತ್ತಾನೆ ಎನ್ನುವ ನಂಬಿಕೆ ಇದೆ. ಅವನನ್ನು ಮೆಚ್ಚಿಸುವುದು ಸುಲಭ ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಭಕ್ತಿಯಿಂದ ಪೂಜಿಸುವವರಿಗೆ ಅವನು, ಬೇಡಿದ ಎಲ್ಲಾ ವರಗಳನ್ನು ನೀಡುತ್ತಾನೆ. ಇನ್ನು ಶಿವನ ಅನುಗ್ರಹ ಪಡೆದವರು ಜೀವನದಲ್ಲಿ ಇರುವಂತಹ ದುಃಖ ಮತ್ತು ಭಯದಿಂದ ಪರಿಹಾರ ಕಂಡುಕೊಳ್ಳುತ್ತಾರೆ. ಹಾಗಾಗಿ ಶಿವನನ್ನು ಮುಖ್ಯವಾಗಿ ಆರಾಧನೆ ಮಾಡುವ ದಿನಗಳಲ್ಲಿ ತಪ್ಪದೆಯೇ ಶಿವ ಪುರಾಣವನ್ನು ಪಠಿಸಿ. ಹಾಗಾದರೆ ಇದರ ಪ್ರಾಮುಖ್ಯತೆ ಏನು? ಶಿವನ ಪುರಾಣವನ್ನು ಪಠಿಸುವುದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಶಿವ ಪುರಾಣ ಓದುವುದರಿಂದ ಸಿಗುವ ಪ್ರಯೋಜನಗಳು!
18 ಪುರಾಣಗಳಲ್ಲಿ ಒಂದಾದ ಶಿವ ಪುರಾಣವು ಭಗವಾನ್ ಶಿವ ಮತ್ತು ಅವನ ಅವತಾರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಶಿವಪುರಾಣವನ್ನು ಮಹರ್ಷಿ ವೇದವ್ಯಾಸರ ಶಿಷ್ಯ ರೋಮಾಶರಣರು ರಚಿಸಿದ್ದಾರೆಂದು ಹೇಳಲಾಗುತ್ತದೆ. ಇದನ್ನು ಪಠಿಸುವುದರಿಂದ ವ್ಯಕ್ತಿಯು ಜೀವನದ ಎಲ್ಲಾ ತೊಂದರೆಗಳಿಂದ ಮುಕ್ತನಾಗುತ್ತಾನೆ. ಅದಕ್ಕಾಗಿಯೇ ಶಿವನನ್ನು ಸ್ವಯಂಭು ಎಂದೂ ಕರೆಯುತ್ತಾರೆ. ಏಕೆಂದರೆ ಅವನು ಶಾಶ್ವತ. ಶಿವನ ಅಸ್ತಿತ್ವವು ಆರಂಭದಿಂದ ಅಂತ್ಯದವರೆಗೆ ಇದೆ ಎಂದು ನಂಬಲಾಗಿದೆ. ಯಾರು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಶಿವ ಪುರಾಣ ಮತ್ತು ಸಹಸ್ರನಾಮವನ್ನು ಭಕ್ತಿಯಿಂದ ಪಠಿಸುತ್ತಾರೋ, ಅವರು ಜೀವನದಲ್ಲಿ ಎಲ್ಲಾ ರೀತಿಯ ಸಿದ್ಧಿಗಳನ್ನು ಹಾಗೂ ಶಿವನ ಲೀಲೆಯನ್ನು ಓದುವ ಮೂಲಕ, ಸಂತೋಷ, ಸಮೃದ್ಧಿ ಮಾನಸಿಕ ಶಾಂತಿಯನ್ನು ಪಡೆದುಕೊಳ್ಳುತ್ತಾರೆ.
ಶಿವ ಪುರಾಣವನ್ನು ಪಠಿಸುವುದರಿಂದ ಜೀವನದ ಎಲ್ಲಾ ರೀತಿಯ ಇಷ್ಟಾರ್ಥಗಳು ನೆರವೇರುತ್ತವೆ. ಸಂತಾನ ಭಾಗ್ಯವನ್ನು ಪಡೆಯುವುದಕ್ಕೂ ಈ ಪುರಾಣವನ್ನು ಓದಲಾಗುತ್ತದೆ. ಜೊತೆಗೆ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಇದನ್ನು ಪಠಿಸುವುದರಿಂದ ಎಲ್ಲಾ ರೀತಿಯ ಯಾತನೆಗಳು ಮತ್ತು ಜೀವನದಲ್ಲಿ ಮಾಡಿದ ಪಾಪಗಳು ನಾಶವಾಗುತ್ತವೆ. ಇನ್ನು, ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹಲವಾರು ರೀತಿಯ ಪರಿಹಾರಗಳನ್ನು ಸಹ ಇದರಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮಾರ್ಚ್ ತಿಂಗಳಿನಲ್ಲಿ ಬರುವ ಏಕಾದಶಿಯನ್ನು ಯಾವ ದಿನ, ಹೇಗೆ ಆಚರಿಸಬೇಕು ತಿಳಿಯಿರಿ
ಶಿವ ಪುರಾಣದಲ್ಲಿ ಏನಿದೆ?
ಶಿವನ ಮಹಿಮೆಯನ್ನು ವಿವರಿಸುವ ಪುರಾಣವೇ ಶಿವ ಪುರಾಣ. ಇದನ್ನು ಮಹಾಪುರಾಣ ಎಂದೂ ಕರೆಯುತ್ತಾರೆ. ಶಿವ ಪುರಾಣದಲ್ಲಿ ಶಿವನ ರೂಪ, ಅವತಾರಗಳ ಮಹಿಮೆಯ ವಿವರಣೆಯ ಜೊತೆಗೆ ಬ್ರಹ್ಮಾಂಡದ ಬಗ್ಗೆಯೂ ಹೇಳಲಾಗಿದೆ. ಶಿವನು ತ್ಯಾಗಿ ಮತ್ತು ಯೋಗಿ. ಮಹಾದೇವನನ್ನು ಕೇಂದ್ರದಲ್ಲಿಟ್ಟುಕೊಂಡು ಸೃಷ್ಟಿ, ನಿರ್ವಹಣೆ ಮತ್ತು ವಿನಾಶದ ಜ್ಞಾನದ ಜೊತೆಗೆ ಮನುಷ್ಯನ ಧಾರ್ಮಿಕ ಕಾರ್ಯಗಳನ್ನು ವಿವರಿಸಲಾಗಿದೆ. ಶಿವ ಪುರಾಣದ ಪ್ರಕಾರ, ಯಾವ ವ್ಯಕ್ತಿ ಕಟುವಾದ ಮಾತುಗಳನ್ನು ಆಡುವುದು, ಜಗಳವಾಡುವುದು, ಮತ್ತೊಬ್ಬರನ್ನು ನಿಂದಿಸುವುದು, ಇನ್ನಿತರ ಪಾಪದ ಕೆಲಸಗಳನ್ನು ಮಾಡಿದರೆ ಅವನಿಗೆ ಶಿವನ ಆಶೀರ್ವಾದ ಎಂದಿಗೂ ಸಿಗುವುದಿಲ್ಲ ಅದರಲ್ಲಿಯೂ ಸೂರ್ಯಾಸ್ತದ ಸಮಯದಲ್ಲಿ ಮನೆಯಲ್ಲಿ ಕಲಹ, ಅನಾಚಾರ ಮಾಡಿದಲ್ಲಿ ಭಗವಾನ್ ಶಿವನು ಕುಪಿತಗೊಳ್ಳುತ್ತಾನೆ ಎನ್ನಲಾಗುತ್ತದೆ. ಹಾಗಾಗಿ ಶ್ರದ್ದೆ, ಭಕ್ತಿಯಿಂದ ಮಾತ್ರ ಶಿವನು ಒಲಿಯುತ್ತಾನೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:31 am, Fri, 1 March 24