Mauni Amavasya 2024: ಮೌನಿ ಅಮಾವಾಸ್ಯೆಯಂದು ಏನು ಮಾಡಬೇಕು, ಏನು ಮಾಡಬಾರದು?

ಈ ವರ್ಷ ಮೌನಿ ಅಮಾವಾಸ್ಯೆಯನ್ನು ಫೆ. 9 ರಂದು ಶುಕ್ರವಾರ ಆಚರಿಸಲಾಗುತ್ತದೆ. ಈ ದಿನ, ನದಿ ಸ್ನಾನ, ದಾನ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದಲ್ಲದೆ ಈ ದಿನ ಪೂಜೆ ಮತ್ತು ದಾನ ಧರ್ಮಗಳನ್ನು ಮಾಡುವುದರಿಂದ ಪೂರ್ವಜರ ಆಶೀರ್ವಾದ ಪಡೆಯಬಹುದು ಎಂದು ನಂಬಲಾಗಿದೆ, ಆದರೆ ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.

Mauni Amavasya 2024: ಮೌನಿ ಅಮಾವಾಸ್ಯೆಯಂದು ಏನು ಮಾಡಬೇಕು, ಏನು ಮಾಡಬಾರದು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 08, 2024 | 7:25 PM

ಹಿಂದೂ ಧರ್ಮದಲ್ಲಿ, ಪ್ರತಿ ವರ್ಷ ಮಾಘ ಮಾಸದ ಅಮಾವಾಸ್ಯೆಯನ್ನು ಪುಷ್ಯ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ವರ್ಷ ಮೌನಿ ಅಮಾವಾಸ್ಯೆಯನ್ನು ಫೆ. 9 ರಂದು ಶುಕ್ರವಾರ ಆಚರಿಸಲಾಗುತ್ತದೆ. ಈ ದಿನ, ನದಿ ಸ್ನಾನ, ದಾನ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದಲ್ಲದೆ ಈ ದಿನ ಪೂಜೆ ಮತ್ತು ದಾನ ಧರ್ಮಗಳನ್ನು ಮಾಡುವುದರಿಂದ ಪೂರ್ವಜರ ಆಶೀರ್ವಾದ ಪಡೆಯಬಹುದು ಎಂದು ನಂಬಲಾಗಿದೆ, ಆದರೆ ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ಮೌನಿ ಅಮಾವಾಸ್ಯೆಯಂದು ಏನು ಮಾಡಬೇಕು?

-ಈ ದಿನ ವಿಶೇಷವಾಗಿ, ಮೌನದ ಉಪವಾಸವನ್ನು ಜನರು ಆಚರಿಸುತ್ತಾರೆ. ಹಾಗಾಗಿ ಏಕಾಂತದಲ್ಲಿ ಇದ್ದು ಅವರು ತಮ್ಮ ಮನಸ್ಸನ್ನು ಶಾಂತ ಮತ್ತು ಧ್ಯಾನದ ಸ್ಥಿತಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ.

-ಉಪವಾಸ ಮಾಡುವವರು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸಬೇಕು. ಜೊತೆಗೆ ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿ, ರುದ್ರಾಭಿಷೇಕ ಮಾಡಬೇಕು.

-ಮೌನಿ ಅಮಾವಾಸ್ಯೆಯಂದು ದಾನ ಮಾಡುವುದು ಸಹ ಒಳ್ಳೆಯದು. ಇನ್ನು ಬ್ರಾಹ್ಮಣರಿಗೆ, ಗುರುಜನರಿಗೆ, ಯತಿಗಳಿಗೆ ಮತ್ತು ಬಡವರಿಗೆ ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ.

-ಕೆಲವರು ಈ ದಿನ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ.

-ಸಾಧ್ಯವಾದರೆ ಶಿವ ಮತ್ತು ವಿಷ್ಣು ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಮಾಡಿಸಿ.

-ಮೌನಿ ಅಮಾವಾಸ್ಯೆಯ ದಿನದಂದು ನದಿಯಲ್ಲಿ ಸ್ನಾನ ಮಾಡಿದ ನಂತರ, ಕೆಲವು ಧಾನ್ಯಗಳನ್ನು ಬ್ರಾಹ್ಮಣರಿಗೆ ದಾನ ಮಾಡುವುದು ಒಳ್ಳೆಯದು.

-ಈ ದಿನ ನೀವು ಹಸುವಿನ ಹಾಲನ್ನು ದಾನ ಮಾಡಿದರೆ, ಪೂರ್ವಜರು ತೃಪ್ತರಾಗುತ್ತಾರೆ ಎಂಬ ನಂಬಿಕೆ ಇದೆ.

-ಈ ದಿನ ಅಗತ್ಯವಿರುವವರಿಗೆ ಸಾಸಿವೆ ಎಣ್ಣೆಯನ್ನು ದಾನ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ. ಅದಲ್ಲದೆ ಈ ದಿನದಂದು ಎಳ್ಳೆಣ್ಣೆ, ಅಕ್ಕಿ ಮತ್ತು ನೆಲ್ಲಿಕಾಯಿಯನ್ನು ದಾನ ಮಾಡುವುದು ಸಹ ಶುಭವೆಂದು ಪರಿಗಣಿಸಲಾಗಿದೆ.

-ಈ ದಿನ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬಡವರಿಗೆ ಹಣವನ್ನು ನೀಡಿ. ಇದರಿಂದ ನಿಮ್ಮ ಜಾತಕದ ದೋಷ ನಿವಾರಣೆಯಾಗುತ್ತದೆ. ಪುಣ್ಯ ಫಲವೂ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ: ದರ್ಶ ಅಮಾವಾಸ್ಯೆಯಂದು ಪಿತೃ ದೋಷ ನಿವಾರಣೆಗೆ ಈ ವಿಧಾನಗಳನ್ನು ಅನುಸರಿಸಿ

ಮೌನಿ ಅಮಾವಾಸ್ಯೆಯಂದು ಏನು ಮಾಡಬಾರದು?

-ಮೌನಿ ಅಮಾವಾಸ್ಯೆಯ ದಿನದಂದು ಉಪವಾಸ ಮಾಡುವವರು ಹೆಚ್ಚು ಮಾತನಾಡಬಾರದು.

-ಉಪವಾಸ ಮಾಡುವವರು ಮಾಂಸಾಹಾರ ಸೇವನೆ ಮಾಡಬಾರದು.

-ಈ ದಿನವನ್ನು ಆಚರಣೆ ಮಾಡುವವರು ಕೆಟ್ಟ ಮಾತುಗಳನ್ನು ಆಡಬಾರದು, ಮತ್ತೊಬ್ಬರಿಗೆ ನೋವು ಉಂಟುಮಾಡುವ ಕೆಲಸ ಮಾಡಬಾರದು.

-ಉಪವಾಸ ಆಚರಣೆ ಮಾಡಿ ಅರ್ಧಕ್ಕೆ ಮೊಟಕುಗೊಳಿಸಬಾರದು.

-ಅಕ್ಕಿಯಿಂದ ಮಾಡಿದ ಯಾವುದೇ ಆಹಾರಗಳನ್ನು ಕೂಡ ಸೇವನೆ ಮಾಡಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ