Mesh Sankranti 2024: ವರ್ಷ ಪೂರ್ತಿ ಒಳ್ಳೆಯ ಫಲ ಪಡೆಯಲು ಮೇಷ ಸಂಕ್ರಾಂತಿಯಂದು ಈ ವಸ್ತುಗಳನ್ನು ದಾನ ಮಾಡಿ!

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 12, 2024 | 9:45 AM

ಮೇಷ ಸಂಕ್ರಾಂತಿಯಂದು ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನವನ್ನು ಎ. 13 ರಂದು ಆಚರಣೆ ಮಾಡಲಾಗುತ್ತದೆ. ಅಂದು ರಾತ್ರಿ 9:15 ಕ್ಕೆ, ಸೂರ್ಯನು ಮೇಷ ರಾಶಿಗೆ ಚಲಿಸುತ್ತಾನೆ. ಮೇಷ ಸಂಕ್ರಾಂತಿಯನ್ನು ಮಹಾ ವಿಷು ಸಂಕ್ರಾಂತಿ ಎಂದೂ ಕೂಡ ಕರೆಯುತ್ತಾರೆ.

Mesh Sankranti 2024: ವರ್ಷ ಪೂರ್ತಿ ಒಳ್ಳೆಯ ಫಲ ಪಡೆಯಲು ಮೇಷ ಸಂಕ್ರಾಂತಿಯಂದು ಈ ವಸ್ತುಗಳನ್ನು ದಾನ ಮಾಡಿ!
ಸಾಂದರ್ಭಿಕ ಚಿತ್ರ
Follow us on

ಹಿಂದೂ ಪಂಚಾಗದ ಪ್ರಕಾರ ಮೇಷ ಸಂಕ್ರಾಂತಿಯನ್ನು ಬಹಳ ಮುಖ್ಯ ದಿನವೆಂದು ಪರಿಗಣಿಸಲಾಗಿದೆ. ಒಂದು ವರ್ಷದಲ್ಲಿ ಒಟ್ಟು 12 ಸಂಕ್ರಾಂತಿಗಳಿವೆ. ಅವುಗಳಲ್ಲಿ ಮೇಷ ಸಂಕ್ರಾಂತಿಯೂ ಒಂದು. ಈ ದಿನ, ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನವನ್ನು ಎ. 13 ರಂದು ಆಚರಣೆ ಮಾಡಲಾಗುತ್ತದೆ. ಅಂದು ರಾತ್ರಿ 9:15 ಕ್ಕೆ, ಸೂರ್ಯನು ಮೇಷ ರಾಶಿಗೆ ಚಲಿಸುತ್ತಾನೆ. ಮೇಷ ಸಂಕ್ರಾಂತಿಯನ್ನು ಮಹಾ ವಿಷು ಸಂಕ್ರಾಂತಿ ಎಂದೂ ಕೂಡ ಕರೆಯುತ್ತಾರೆ. ಅನೇಕ ಹಿಂದೂ ಸೌರ ಕ್ಯಾಲೆಂಡರ್ ಗಳಲ್ಲಿ, ಹೊಸ ವರ್ಷವು ಮೇಷ ಸಂಕ್ರಾಂತಿಯ ದಿನದಂದು ಪ್ರಾರಂಭವಾಗುತ್ತದೆ. ಹಾಗಾದರೆ ಈ ದಿನ ಪುಣ್ಯ ಫಲಗಳನ್ನು ಪಡೆಯಲು ಯಾವ ವಸ್ತುಗಳನ್ನು ದಾನ ಮಾಡಬೇಕು? ಇಲ್ಲಿದೆ ಮಾಹಿತಿ.

ಮೇಷ ಸಂಕ್ರಾಂತಿಯಂದು, ನೀವು ಗೋಧಿ, ಕೆಂಪು ಬಟ್ಟೆಗಳು, ಕೆಂಪು ಶ್ರೀಗಂಧ, ಕಪ್ಪು ಎಳ್ಳು, ಕೆಂಪು ಹೂವುಗಳು, ತಾಮ್ರದ ಪಾತ್ರೆಗಳು ಇತ್ಯಾದಿಗಳನ್ನು ದಾನ ಮಾಡಬಹುದು. ಇದು ಸೌರಯುಗಾದಿಯ ಆರಂಭವಾಗಿರುವುದರಿಂದ ವರ್ಷ ಪೂರ್ತಿ ಒಳ್ಳೆಯ ಫಲಗಳನ್ನು ಪಡೆಯಲು ದಾನ- ಧರ್ಮಗಳನ್ನು ಮಾಡಬಹುದು.

ಮೇಷ ಸಂಕ್ರಾಂತಿಯನ್ನು ದಾನಕ್ಕೆ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಮೇಷ ಸಂಕ್ರಾಂತಿಯ ದಿನದಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ, ನೀವು ಸೂರ್ಯ ದೇವರನ್ನು ಪೂಜಿಸಬೇಕು. ಅದರ ನಂತರ ಸೂರ್ಯ ದೇವರಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಚೈತ್ರ ಮಾಸದ ವಿನಾಯಕ ಚತುರ್ಥಿಯನ್ನು ಈ ರೀತಿ ಆಚರಣೆ ಮಾಡಿ!

ಈ ದಿನ ಮನೆಯಲ್ಲಿ ದೇವರಿಗೆ ಬಗೆ ಬಗೆಯ ನೈವೇದ್ಯಗಳನ್ನು ಇಟ್ಟು ಪೂಜೆ ಮಾಡಿದ ಬಳಿಕ ಅದನ್ನು ಎಲ್ಲರಿಗೂ ಹಂಚಿ. ಇದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ