Mohini Ekadashi 2024: ಮೋಹಿನಿ ಏಕಾದಶಿಯ ಪೂಜಾ ವಿಧಾನ, ಶುಭ ಸಮಯ, ಪ್ರಾಮುಖ್ಯತೆ ಕುರಿತು ಇಲ್ಲಿದೆ ಮಾಹಿತಿ
ಮೋಹಿನಿ ಏಕಾದಶಿ ಉಪವಾಸವನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ದಿನ ಯಾರು ಉಪವಾಸ ಮಾಡುತ್ತಾರೋ ಅವರು ಮೋಹವನ್ನು ತೊರೆದು ಜೀವನದಲ್ಲಿ ಯಶಸ್ಸನ್ನುಗಳಿಸುತ್ತಾರೆ ಎಂದು ನಂಬಲಾಗಿದೆ. ಈ ಏಕಾದಶಿಯಂದು, ವಿಷ್ಣು ಭಕ್ತರು ಉಪವಾಸವನ್ನು ಆಚರಿಸಿ ಭಕ್ತಿಯಿಂದ ಶ್ರೀಹರಿಯ ಆಶೀರ್ವಾದವನ್ನು ಬೇಡುತ್ತಾರೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಿಷ್ಣು ಧರ್ಮವನ್ನು ರಕ್ಷಿಸಲು ಅನೇಕ ಅವತಾರಗಳನ್ನು ತಾಳಿದ್ದನು ಎಂಬುದು ತಿಳಿದಿರುವ ವಿಚಾರ. ಅದರಲ್ಲಿ ಪ್ರಪಂಚದ ಕಲ್ಯಾಣಕ್ಕಾಗಿ ಮೋಹಿನಿ ಅವತಾರ ತಾಳಿದ್ದು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮೋಹಿನಿ ಏಕಾದಶಿ ಉಪವಾಸವನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ದಿನ ಯಾರು ಉಪವಾಸ ಮಾಡುತ್ತಾರೋ ಅವರು ಮೋಹವನ್ನು ತೊರೆದು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಎಂದು ನಂಬಲಾಗಿದೆ. ಈ ಏಕಾದಶಿಯಂದು, ವಿಷ್ಣು ಭಕ್ತರು ಉಪವಾಸವನ್ನು ಆಚರಿಸಿ ಭಕ್ತಿಯಿಂದ ಶ್ರೀಹರಿಯ ಆಶೀರ್ವಾದವನ್ನು ಬೇಡುತ್ತಾರೆ.
ಮೋಹಿನಿ ಏಕಾದಶಿ ದಿನಾಂಕ, ಮುಹೂರ್ತ;
ಈ ವರ್ಷ ಮೋಹಿನಿ ಏಕಾದಶಿ ಉಪವಾಸವನ್ನು ಮೇ 19 ರ ಭಾನುವಾರ ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯು ಮೇ 18 ರಂದು ಬೆಳಿಗ್ಗೆ 11:22 ರಿಂದ ಪ್ರಾರಂಭವಾಗುತ್ತದೆ ಬಳಿಕ ಮರುದಿನ ಮೇ 19 ರಂದು ಮಧ್ಯಾಹ್ನ 01:50 ಕ್ಕೆ ಕೊನೆಗೊಳ್ಳುತ್ತದೆ. ಮೋಹಿನಿ ಏಕಾದಶಿಯಂದು ಪೂಜಾ ಮುಹೂರ್ತವು ಬೆಳಿಗ್ಗೆ 07:10 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12:18ಕ್ಕೆ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ವಟ ಸಾವಿತ್ರಿ ವ್ರತ 2024 ರ ಶುಭ ಸಮಯ, ಪೂಜೆ ವಿಧಾನ, ಮಹತ್ವ
ಮೋಹಿನಿ ಏಕಾದಶಿ ಪೂಜಾ ವಿಧಾನ;
-ಏಕಾದಶಿಯಂದು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ.
-ಮನೆಯನ್ನು ಮತ್ತು ವಿಶೇಷವಾಗಿ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ.
-ವಿಷ್ಣುವಿನ ವಿಗ್ರಹ ಇಟ್ಟು ಅಭಿಷೇಕ ಮಾಡಿ, ಬಳಿಕ ದೇವರಿಗೆ ತುಪ್ಪದ ದೀಪ ಹಚ್ಚಿ.
-ಏಕಾದಶಿ ಉಪವಾಸವನ್ನು ಪೂರ್ಣ ಭಕ್ತಿಯಿಂದ ಆಚರಿಸಿ.
-‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ಮಂತ್ರವನ್ನು 108 ಬಾರಿ ಪಠಿಸಿ, ಜೊತೆಗೆ ವಿಷ್ಣು ಸಹಸ್ರನಾಮವನ್ನು ಕೂಡ ಪಠಿಸಿ.
-ನಂತರ ಶ್ರೀ ಹರಿಗೆ ಪಂಚಾಮೃತ ಮತ್ತು ತುಳಸಿ ಎಲೆಗಳನ್ನು ಅರ್ಪಿಸಿ.
-ಆರತಿ ಮಾಡಿ ಪೂಜೆಯನ್ನು ಸಮಾಪ್ತಿ ಮಾಡಿ.
-ಮರುದಿನ ದ್ವಾದಶಿ ತಿಥಿಯಂದು ಪೂಜೆ ಮಾಡಿ ಉಪವಾಸವನ್ನು ಕೊನೆಗೊಳಿಸಿ.
ಮೋಹಿನಿ ಏಕಾದಶಿಯ ಧಾರ್ಮಿಕ ಮಹತ್ವ;
ಈ ಏಕಾದಶಿ ಉಪವಾಸದ ಮಹತ್ವವನ್ನು ಪದ್ಮ ಪುರಾಣ ಮತ್ತು ವಿಷ್ಣು ಪುರಾಣದಲ್ಲಿ ವಿವರಿಸಲಾಗಿದೆ. ಮೋಹಿನಿ ಏಕಾದಶಿ ಉಪವಾಸವನ್ನು ಆಚರಿಸುವ ಮೂಲಕ, ವಿಷ್ಣು ಪರಮಾತ್ಮ ಸಂತುಷ್ಟನಾಗುತ್ತಾನೆ. ಜೊತೆಗೆ ಆತನ ಎಲ್ಲಾ ಆಸೆಗಳು ಈಡೇರುತ್ತವೆ. ಈ ದಿನದಂದು ವಿಷ್ಣುವಿನ ಆರಾಧನೆಗೆ ವಿಶೇಷ ಮಹತ್ವವಿದೆ ಜೊತೆಗೆ ಶ್ರೀ ಹರಿಯನ್ನು ವೈಶಾಖ ಮಾಸದ ಕೃಷ್ಣ ಪಕ್ಷದ ಮೋಹಿನಿ ಏಕಾದಶಿಯಿಂದ ಹುಣ್ಣಿಮೆಯ ದಿನದವರೆಗೆ ಪೂಜಿಸಬೇಕು ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ